ಪುತ್ತೂರಿನ 'ಎಆರ್‌ಎಂ ಮೋಟಾರ್ಸ್'ನಲ್ಲಿ ಹೊಸ ಕಿಯಾ ಸೈರಸ್ ಇವಿ ಅದ್ದೂರಿಯಾಗಿ ಬಿಡುಗಡೆ.. ವಿಶೇಷತೆಗಳೇನು?
Puttur ARM Motors New Kia Syros EV Launched: ಪುತ್ತೂರಿನ 'ಎಆರ್‌ಎಂ ಮೋಟಾರ್ಸ್'ನಲ್ಲಿ ಹೊಸ 'ಕಿಯಾ ಸೈರಸ್ ಇವಿ'ಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು.
ಪುತ್ತೂರು: ಎಆರ್‌ಎಂ ಮೋಟಾರ್ಸ್‌ನಲ್ಲಿ (ARM Motors), ಇಂದು ಹೊಚ್ಚ ಹೊಸ ಕಿಯಾ ಸೈರಸ್ ಇವಿ (Kia Syros EV) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತು.
ಈ ವಿಶೇಷ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪುತ್ತೂರು ಡಯಾಗ್ನೋಸ್ಟಿಕ್ ಅಂಡ್ ರಿಸರ್ಚ್ ಸೆಂಟರ್ ಮಾಲೀಕ ಎ.ಕೆ.ಪ್ರವೀಣ್ ಹಾಗೂ ಗುರುಜ್ಯೋತಿ ಶಾಮಿಯಾನ ಮಾಲೀಕ ಪಿ.ಸುರೇಶ್ ಆಗಮಿಸಿದ್ದರು. ಅವರುಗಳು ನೂತನ ಕಾರನ್ನು ಅನಾವರಣಗಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಸರೋಶ್ ಮತ್ತು ಅಸಿಸ್ಟೆಂಟ್ ಸರ್ವಿಸ್ ಮ್ಯಾನೇಜರ್ ಮೋಹನ್ ನಿಡ್ಯಾಲ ಸ್ವಾಗತಿಸಿದರು. 'ಕಿಯಾ ಸೈರಸ್ ಇವಿ' ಬಗ್ಗೆ ಸೇಲ್ಸ್ ಕನ್ಸಲ್ಟೆಂಟ್ ವಿಶಾಲ್ ವಿವರಿಸಿದರು. ಚೇತನ್ ಕಾರ್ಯಕ್ರಮವನ್ನು ನಿರೂಪಿಸಿದರು.

ಆಸಕ್ತ ಗ್ರಾಹಕರು, ಮುಕ್ರಂಪಾಡಿಯಲ್ಲಿರುವ 'ಎಆರ್‌ಎಂ ಮೋಟಾರ್ಸ್'ಗೆ ಭೇಟಿ ನೀಡಿ, ಈ ಎಲೆಕ್ಟ್ರಿಕ್ ಎಸ್‌ಯುವಿ ಕುರಿತು ಸಂಪೂರ್ಣ ವಿವರಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ 9686013163 ಸಂಖ್ಯೆಗೆ ಸಂಪರ್ಕಿಸಿರಿ.
ಕಿಯಾ ಸೈರಸ್ ಇವಿ ವಿಶೇಷತೆಗಳೇನು:
ಇದು ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ರೂ.13.50 ಲಕ್ಷದಿಂದ ರೂ.20 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಪ್ಲಸ್ ಹಾಗೂ ಎಕ್ಸ್-ಲೈನ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.
ನೂತನ 'ಕಿಯಾ ಸೈರಸ್ ಇವಿ' ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಬಾಕ್ಸಿ ಸ್ಟೈಲ್‌ನಲ್ಲಿ ಇದ್ದು, ನವೀನವಾದ ಬಂಪರ್ ಹಾಗೂ ಗ್ರಿಲ್‌ನ್ನು ಒಳಗೊಂಡಿದೆ. 3-ಪಾಡ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಫಾಗ್ ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ 17-ಇಂಚಿನ ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಹೊಂದಿದೆ.

ಜೊತೆಗೆ ಐವರಿ ಸಿಲ್ವರ್ ಮ್ಯಾಟ್, ಫ್ರಾಸ್ಟ್ ಬ್ಲೂ, ಗ್ರಾವಿಟಿ ಗ್ರೇ, ಪ್ಯೂಟರ್ ಆಲಿವ್, ಮ್ಯಾಗ್ಮಾ ರೆಡ್, ಐವರಿ ಸಿಲ್ವರ್ ಗ್ಲೋಸ್, ಅರೋರಾ ಬ್ಲ್ಯಾಕ್ ಪರ್ಲ್, ಗ್ಲೇಸಿಯರ್ ವೈಟ್ ಪರ್ಲ್ ಮತ್ತು ಎಕ್ಸ್‌ಕ್ಲೂಸಿವ್ ಮ್ಯಾಟ್ ಗ್ರ್ಯಾಫೈಟ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.
ಈ ಕಾರು 3,995 ಎಂಎಂ ಉದ್ದ, 1,805 ಎಂಎಂ ಅಗಲ ಹಾಗೂ 1,670 ಎಂಎಂ ಎತ್ತರವಿದೆ. 197 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,550 ವೀಲ್‌ಬೇಸ್‌ನ್ನು ಹೊಂದಿದೆ. 5 ಆಸನಗಳನ್ನು ಪಡೆದಿದೆ. ಹೆಚ್ಚಿನ ಲಗೇಜ್ ಕೊಂಡೊಯ್ಯಲು 16 ಲೀಟರ್ ಫ್ರಂಟ್ ಫ್ರಂಕ್ ಹಾಗೂ 465 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಇದು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. 42 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 51.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 443 ರಿಂದ 526 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ.
ಹೊಸ 'ಕಿಯಾ ಸೈರಸ್ ಇವಿ' ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. ಟ್ರಿಪಲ್-ಸ್ಕ್ರೀನ್ ಸೆಟಪ್ (12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, 5-ಇಂಚಿನ ಟಚ್‌ಸ್ಕ್ರೀನ್ ಕ್ಲೇಮೇಟ್ ಕಂಟ್ರೋಲ್ ಪ್ಯಾನಲ್ & 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 8-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ಪುಶ್-ಬಟನ್ ಸ್ಟಾರ್ಟ್, ಕೀಲೆಸ್ ಎಂಟ್ರಿ, ಕಾಲಮ್-ಮೌಂಟೆಡ್ ಡ್ರೈವ್ ಸೆಲೆಕ್ಟರ್, ಕನೆಕ್ಟೆಡ್ ಕಾರ್ ಟೆಕ್ ಮತ್ತು 64-ಕಲರ್ ಇಂಟೀರಿಯರ್ ಲೈಟಿಂಗ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ.ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹೆಚ್‌ಹೆಚ್‌ಸಿ (ಹಿಲ್-ಹೋಲ್ಡ್ ಕಂಟ್ರೋಲ್), ಇಪಿಬಿ (ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳನ್ನು ಪಡೆದಿದೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.