Ajinkya Rahane: ಅಜಿಂಕ್ಯ ರಹಾನೆ ಸೈನಿಂಗ್ ಆಫ್.. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

Ajinkya Rahane Retirement: ಟೀಂ ಇಂಡಿಯಾದ ಹಿರಿಯ ಆಟಗಾರ ಅಜಿಂಕ್ಯ ರಹಾನೆ, ಇಂದು ಅಂತರರಾಷ್ಟ್ರೀಯ ಸೇರಿದಂತೆ ಎಲ್ಲ ಮಾದರಿ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದಾರೆ.

Jul 30, 2026 - 13:39
Jul 30, 2026 - 14:33
Ajinkya Rahane: ಅಜಿಂಕ್ಯ ರಹಾನೆ ಸೈನಿಂಗ್ ಆಫ್.. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ
ಚಿತ್ರ ಕೃಪೆ @ ಎಕ್ಸ್: IndianCricketHeroesIN

ನವದೆಹಲಿ: ಟೀಂ ಇಂಡಿಯಾದ ಹಿರಿಯ ಆಟಗಾರ ಅಜಿಂಕ್ಯ ರಹಾನೆ (Ajinkya Rahane), ಇಂದು ಅಂತರರಾಷ್ಟ್ರೀಯ ಸೇರಿದಂತೆ ಎಲ್ಲ ಮಾದರಿ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದಾರೆ.

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಅದಕ್ಕೆ 'ಕ್ಯಾಪ್ 278 ಸೈನಿಂಗ್ ಆಫ್' ಎಂಬ ಶೀರ್ಷಿಕೆ ಬರೆದಿದ್ದಾರೆ. ಅವರು, ಭಾರತ 278ನೇ ಟೆಸ್ಟ್ ಆಟಗಾರನಾಗಿ, ತಂಡವನ್ನು ಸೇರಿದ್ದರು.  

ಕೆಲ ಕಾಲ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿದ್ದರು. ಅವರ ನಾಯತ್ವದಲ್ಲಿ ಭಾರತವು 6 ಟೆಸ್ಟ್ ಪಂದ್ಯಗಳನ್ನು ಆಡಿತ್ತು. ಅದರಲ್ಲಿ 4ರಲ್ಲಿ ಗೆಲವು ಕಂಡಿತ್ತು. 2 ಪಂದ್ಯ 'ಟೈ' ಆಗಿತ್ತು. 2020 - 21ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು. 2023ರ ಜುಲೈನಲ್ಲಿ ವೆಸ್ಟ್ ಇಂಡೀಸ್ ಎದುರಿಗೆ ಕಣಕ್ಕಿಳಿದ್ದರು. ಅದು ಕೊನೆ ಟೆಸ್ಟ್ ಪಂದ್ಯವಾಗಿತ್ತು. 

ಟೀಂ ಇಂಡಿಯಾ ಪರ 85 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 5077 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ 12 ಹಾಗೂ 26 ಅರ್ಧ ಶತಕ ಸೇರಿದೆ. 90 ಏಕದಿನ ಪಂದ್ಯವಾಡಿದ್ದು, 3 ಶತಕ ಮತ್ತು 24 ಅರ್ಧ ಶತಕ ಒಳಗೊಂಡಂತೆ 2962 ರನ್‌ ಬಾರಿಸಿದ್ದಾರೆ. 20 ಟಿ20 ಪಂದ್ಯವಾಡಿದ್ದು, 1  ಅರ್ಧ ಶತಕ ಸಹಿತ 375 ರನ್ ಗಳಿಸಿದ್ದಾರೆ.  

ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಪ್ರತಿನಿಧಿಸಿದ್ದರು. ಅಜಿಂಕ್ಯ ರಹಾನೆ 1988ರಲ್ಲಿ ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಜನಿಸಿದರು. ಅವರ ಕುಟುಂಬಕ್ಕೆ ಮುಂಬೈಗೆ ವಲಸೆ ಬಂತು. ಅಲ್ಲಿ 9ನೇ ವಯಸ್ಸಿನಲ್ಲಿಯೇ ಕ್ರಿಕೆಟ್ ಕಲಿಯುವುದಕ್ಕೆ ಶುರು ಮಾಡಿದ್ದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.