Commonwealth Games-2026: ಕಾಮನ್‌ವೆಲ್ತ್ ಕ್ರೀಡಾಕೂಟ-2026ಕ್ಕೆ ತೆರೆ.. ಭಾರತಕ್ಕೆ ಧ್ವಜ & ಬ್ಯಾಟನ್ ಹಸ್ತಾಂತರ

Commonwealth Games-2026: ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆದ 23ನೇ ಕಾಮನ್‌ವೆಲ್ತ್ ಕ್ರೀಡಾಕೂಟ-2026ಕ್ಕೆ ಭಾನುವಾರ ಅದ್ದೂರಿಯಾಗಿ ತೆರೆ ಬಿದ್ದಿದೆ.

Aug 3, 2026 - 12:47
Commonwealth Games-2026: ಕಾಮನ್‌ವೆಲ್ತ್ ಕ್ರೀಡಾಕೂಟ-2026ಕ್ಕೆ ತೆರೆ.. ಭಾರತಕ್ಕೆ ಧ್ವಜ & ಬ್ಯಾಟನ್ ಹಸ್ತಾಂತರ

ಗ್ಲ್ಯಾಸ್ಗೋ: ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆದ 23ನೇ ಕಾಮನ್‌ವೆಲ್ತ್ ಕ್ರೀಡಾಕೂಟ-2026ಕ್ಕೆ ಭಾನುವಾರ ಅದ್ದೂರಿಯಾಗಿ ತೆರೆ ಬಿದ್ದಿದೆ.

ಈ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ 2030ರ ಮುಂದಿನ 'ಕಾಮನ್‌ವೆಲ್ತ್ ಕ್ರೀಡಾಕೂಟ'ಕ್ಕೆ ಆತಿಥ್ಯ ವಹಿಸಿರುವ ಭಾರತಕ್ಕೆ ಧ್ವಜ ಹಾಗೂ ಬ್ಯಾಟನ್ ಹಸ್ತಾಂತರಿಸಲಾಗಿದೆ.

ಭಾರತದ ಪರವಾಗಿ ಒಲಿಂಪಿಕ್ ಚಿನ್ನದ ಪದಕ ನೀರಜ್ ಚೋಪ್ರಾ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ.ಉಷಾ ಮತ್ತು ಗುಜರಾತ್ ಡಿಸಿಎಂ ಹರ್ಷ್ ಸಂಘವಿ ಅವರು ಸ್ವೀಕರಿಸಿದ್ದಾರೆ. 

ಇದೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 74 ದೇಶಗಳ 3000 ಅಥ್ಲೀಟ್‌ಗಳು ಭಾಗವಹಿಸಿದ್ದರು. ಭಾರತ ಪರವಾಗಿ 126 ಕ್ರೀಡಾಪಟುಗಳು ಕಣಕ್ಕೆ ಇಳಿದಿದ್ದರು. ದೇಶಕ್ಕಾಗಿ 13 ಚಿನ್ನ, 17 ಬೆಳ್ಳಿ ಮತ್ತು 9 ಕಂಚು ಸೇರಿ ಒಟ್ಟು 39 ಪದಕಗಳನ್ನು ಜಯಿಸಿದ್ದಾರೆ. 

ಇತಿಹಾಸ ನಿರ್ಮಿಸಿದ ಭಾರತೀಯ ಬಾಕ್ಸರ್‌ಗಳು: 

ಈ ಕ್ರೀಡಾಕೂಟದಲ್ಲಿ ಭಾರತೀಯ ಬಾಕ್ಸರ್‌ಗಳು ಅಬ್ಬರಿಸಿದ್ದಾರೆ. 7 ಚಿನ್ನ ಹಾಗೂ 3 ಬೆಳ್ಳಿ ಪದಕ ಗೆದ್ದು, ಹೊಸ ಇತಿಹಾಸ ಬರೆದಿದ್ದಾರೆ. ಪ್ರೀತಿ (54 ಕೆಜಿ), ಜೈಸ್ಮಿನ್ (57 ಕೆಜಿ), ಸಾಕ್ಷಿ (51 ಕೆಜಿ), ಪ್ರಿಯಾ (60 ಕೆಜಿ), ಅರುಂಧತಿ (70 ಕೆಜಿ), ಸಚಿನ್ ಸಿಯಾಚ್ (60 ಕೆಜಿ) ಹಾಗೂ ಅಂಕುಶ್ ಪಂಗಲ್ (80 ಕೆಜಿ) ಚಿನ್ನ ಜಯಿಸಿದ್ದಾರೆ. 

ಲವ್ಲಿನಾ ಬೊರ್ಗೊಹೈನ್ (75 ಕೆಜಿ), ಜಾದುಮಣಿ ಸಿಂಗ್ (55 ಕೆಜಿ) ಮತ್ತು ನರೇಂದರ್ ಬೆರ್ವಾಲ್ (90 ಕೆಜಿ) ಬೆಳ್ಳಿ ಗೆದ್ದಿದ್ದಾರೆ.  ಈ ಹಿಂದೆ 2018ರಲ್ಲಿ ಭಾರತವು 9 ಪದಕಕ್ಕೆ ಭಾಜನವಾಗಿತ್ತು.

2ನೇ ಬಾರಿಗೆ ಭಾರತದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನೆ:

ಆಸ್ಟ್ರೇಲಿಯಾ ಬಳಿಕ, ಒಂದಕ್ಕಿಂತ ಹೆಚ್ಚು ಬಾರಿ (2010 - ದೆಹಲಿ), ಭಾರತವು ಈ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜಿಸುತ್ತಿದೆ. ಅದು 2030ರಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯಲಿದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.