ಶಿಲ್ಪಾ ಗಣೇಶ್ ನಿರ್ಮಾಣದ 'ಪಿಕ್ಚರ್' ಟ್ರೇಲರ್ ಬಿಡುಗಡೆ.. ಆ.7ಕ್ಕೆ ಕನ್ನಡ-ತುಳುನಲ್ಲಿ ತೆರೆಗೆ
August 7th Kannada-Tulu Picture Film Release: ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ನಿರ್ಮಾಣದ 'ಪಿಕ್ಚರ್' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ. ಇದೇ ಆಗಸ್ಟ್ 7 ರಂದು ಈ ಚಿತ್ರವು ರಾಜ್ಯಾದ್ಯಂತ ಕನ್ನಡ ಹಾಗೂ ತುಳು ಭಾಷೆಯಲ್ಲಿ ರಿಲೀಸ್ ಆಗಲಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ನಿರ್ಮಾಣದ 'ಪಿಕ್ಚರ್' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ. ಇದೇ ಆಗಸ್ಟ್ 7 ರಂದು ಈ ಚಿತ್ರವು ರಾಜ್ಯಾದ್ಯಂತ ಕನ್ನಡ & ತುಳು ಭಾಷೆಯಲ್ಲಿ ರಿಲೀಸ್ ಆಗಲಿದೆ.
ಕೌಟುಂಬಿಕ ಮತ್ತು ಕಾಮಿಡಿ ಕಥಾಹಂದರವನ್ನು ಹೊಂದಿದ್ದು, ಸಂದೀಪ್ ಬೆದ್ರ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ನಿತ್ಯಪ್ರಕಾಶ್ ಬಂಟ್ವಾಳ ನಾಯಕನಾಗಿ ಕಾಣಿಸಿಕೊಂಡಿದ್ದು, ಅಮೃತ ಸುದು ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಕರಾವಳಿಯ ಕಲಾವಿದರ ದಂಡೇ ಈ ಚಿತ್ರದಲ್ಲಿದ್ದಾರೆ. ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್ ಹಾಗೂ ಸಾಯಿಕೃಷ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮೊದಲ ಬಾರಿಗೆ ನಿರ್ಮಾಪಕಿ ಶಿಲ್ಪಾ ಗಣೇಶ್ ಇದೇ ಸಿನಿಮಾದ 'ಗೋಕುಲದ ರಾಧೆ' ಎಂಬ ಸಾಂಗ್ ಹಾಡಿದ್ದು, ಜಸ್ಕರಣ್ ಸಿಂಗ್ ಸಾಥ್ ನೀಡಿದ್ದಾರೆ. ಸ್ಯಾಮ್ಯುಯೆಲ್ ಅಭಿ ಸಂಗೀತ ಸಂಯೋಜಿಸಿದ್ದಾರೆ.