ಪುತ್ತೂರು: ರಥ ಬೀದಿಯ ಪ್ರಾವಿತ್ಯತೆಗಾಗಿ ನೂತನ ರಸ್ತೆ ನಿರ್ಮಾಣ.. ಈಶ್ವರ ಭಟ್ ಪಂಜಿಗುಡ್ಡೆ
Puttur: 'ಮಹಾಲಿಂಗೇಶ್ವರ ದೇವಸ್ಥಾನ' ರಥ ಬೀದಿಯ ಪ್ರಾವಿತ್ಯತೆ ಕಾಪಾಡಲು ನೂತನ ರಸ್ತೆ ನಿರ್ಮಿಸಲಾಗುವುದು ಎಂದು ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹೇಳಿದರು. ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪುತ್ತೂರು: 'ಮಹಾಲಿಂಗೇಶ್ವರ ದೇವಸ್ಥಾನ' ರಥ ಬೀದಿಯ ಪ್ರಾವಿತ್ಯತೆ ಕಾಪಾಡಲು ನೂತನ ರಸ್ತೆ ನಿರ್ಮಿಸಲಾಗುವುದು ಎಂದು ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹೇಳಿದರು.
ಇಂದು (ಸೋಮವಾರ) ದೇವಸ್ಥಾನ ಆಡಳಿತ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
'ಸ್ಥಳೀಯ ಶಾಸಕರ ಮಾರ್ಗದರ್ಶನದಲ್ಲಿ ಕೈಗೊಂಡಿರುವ ತೀರ್ಮಾನದಂತೆ, ರೂ.4 ಕೋಟಿ ವೆಚ್ಚದಲ್ಲಿ 30 ಅಡಿ ಅಗಲದ ರಸ್ತೆ ನಿರ್ಮಾಣವಾಗಲಿದೆ. ರಥ ಬೀದಿಯು ಶುದ್ಧತೆಯಿಂದ ಇರಬೇಕೆಂದು ಉದ್ದೇಶಿಸಲಾಗಿದ್ದು, ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
'ಈ ರಸ್ತೆ ದೇಗುಲದ ಸೊತ್ತು ಹೊರತು, ಸಾರ್ವಜನಿಕ ರಸ್ತೆಯಾಗುವುದಿಲ್ಲ. ರಸ್ತೆ ವಿಚಾರದಲ್ಲಿ ಗೊಂದಲ ಸೃಷ್ಟಿಸುವವರೂ, ಭಕ್ತರ ಸಭೆಯಲ್ಲಿಯೇ ಆಕ್ಷೇಪ ವ್ಯಕ್ತಪಡಿಸಬಹುದಿತ್ತು' ಎಂದರು.

ರಸ್ತೆ ನಿರ್ಮಾಣ ಏಕೆ:
ದೇವಸ್ಥಾನದ ವರಾಂಡದಲ್ಲಿ ಗೋವುಗಳ ಕಳವು, ರಾತ್ರಿ ವಾಹನ ಓಡಾಟ, ಕಸ ಹಾಕುವುದು ಹಾಗೂ ರಥ ಬೀದಿಯಲ್ಲಿ ಅಂಬುಲೆನ್ಸ್‌ಗಳು ಸಂಚಾರ ಮಾಡುತ್ತಿವೆ. ಹೀಗಾಗಿ, ಹೊಸ ರಸ್ತೆ ನಿರ್ಮಿಸುವಂತೆ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿದ್ದವು. ಅದರಂತೆ ರಸ್ತೆ ಮಾಡಲಾಗುತ್ತಿದೆ.
ಪಾರದರ್ಶಕವಾಗಿ ಕಾಮಗಾರಿ ನಡೆಸಿ: ವಿಶ್ವ ಹಿಂದೂ ಪರಿಷದ್:
ಇದೇ ವೇಳೆ ದೇವಸ್ಥಾನದ ಅಭಿವೃದ್ದಿ ಕಾಮಗಾರಿಗಳನ್ನು ಭಕ್ತರ ವಿಶ್ವಾಸದೊಂದಿಗೆ, ಪಾರದರ್ಶಕ ಹಾಗೂ ಸಾಮೂಹಿಕ ಅಭಿಪ್ರಾಯದ ಆಧಾರದ ಮೇಲೆ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷದ್ & ಬಜರಂಗದಳ ಕಾರ್ಯಕರ್ತರು ಮನವಿ ಮಾಡಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.