Commonwealth Games-2026: ಚನಂಬಮ್ ಋಷಿಕಾಂತ್ ಸಿಂಗ್‌ಗೆ ಬೆಳ್ಳಿ ಪದಕ

Commonwealth Games-2026: ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋ ನಗರದಲ್ಲಿ 23ನೇ ಕಾಮನ್‌ವೆಲ್ತ್ ಕ್ರೀಡಾಕೂಟ-2026 ಜರುಗುತ್ತಿದ್ದು, ಭಾರತದ ಪದಕ ಬೇಟೆ ಮುಂದುವರಿದೆ.

Jul 26, 2026 - 19:58
Commonwealth Games-2026: ಚನಂಬಮ್ ಋಷಿಕಾಂತ್ ಸಿಂಗ್‌ಗೆ ಬೆಳ್ಳಿ ಪದಕ

ಗ್ಲ್ಯಾಸ್ಗೋ: ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋ ನಗರದಲ್ಲಿ 23ನೇ ಕಾಮನ್‌ವೆಲ್ತ್ ಕ್ರೀಡಾಕೂಟ-2026 (Commonwealth Games-2026) ಜರುಗುತ್ತಿದ್ದು, ಭಾರತದ ಪದಕ ಬೇಟೆ ಮುಂದುವರಿದೆ.  

ಪುರುಷರ 60 ಕೆಜಿ ತೂಕದ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಚನಂಬಮ್ ಋಷಿಕಾಂತ್ ಸಿಂಗ್ (Chanambam Rishikant Singh) ಬೆಳ್ಳಿ ಪದಕ ಜಯಿಸಿದ್ದಾರೆ. ಮಣಿಪುರದ ಇಂಫಾಲ್ ಮೂಲದ ಅವರು, ಸ್ನ್ಯಾಚ್ ವಿಭಾಗದಲ್ಲಿ 121 ಕೆಜಿ ತೂಕ ಎತ್ತಿ, ಹೊಸ ಇತಿಹಾಸ ಬರೆದಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ 116 ಕೆಜಿ ತೂಕವನ್ನು ಯಶಸ್ವಿಯಾಗಿ ಎತ್ತುವುದರೊಂದಿಗೆ, ಇತರೆ ಸ್ಪರ್ಧಿಗಳಿಗಿಂತ ಮುನ್ನಡೆ ಸಾಧಿಸಿದ್ದರು.

ಅಹಮದಾಬಾದ್‌ನಲ್ಲಿ ನಡೆದ 'ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್-2025' ಸ್ಪರ್ಧೆಯಲ್ಲಿಯೂ ಋಷಿಕಾಂತ್ ಸಿಂಗ್ ಚಿನ್ನದ ಪದಕ ಗೆದ್ದು, ರಾಷ್ಟ್ರೀಯ ದಾಖಲೆ ಬರೆದಿದ್ದರು.

ಮೊದಲ ಪದಕ ಜಯಿಸಿದ್ದ ಝಂದು ಕುಮಾರ್: 

ಪುರುಷರ ಹೆವಿವೇಯ್ಟ್‌ ಪ್ಯಾರಾ ಪವರ್‌ಲಿಫ್ಟಿಂಗ್‌ ವಿಭಾಗದಲ್ಲಿ ಪೋಲಿಯೊ ಪೀಡಿತ ಝಂದು ಕುಮಾರ್ ಕಂಚಿನ ಪದಕಕ್ಕೆ ಭಾಜನರಾಗಿದ್ದರು. 28 ವರ್ಷದ ಅವರು, 181 ಕೆಜಿ ಹಾಗೂ 190 ಕೆಜಿ ಭಾರ ಎತ್ತಿ 130.9 ಅಂಕಗಳನ್ನು ಗಳಿಸಿದ್ದರು. ಆದಾಗ್ಯೂ 196 ಕೆಜಿ ಎತ್ತುವಲ್ಲಿ ವಿಫಲರಾದ್ದರು.