Rao Bahadur: ರಾವ್ ಬಹದ್ದೂರ್ OTTಯಲ್ಲಿ ಸ್ಟ್ರೀಮಿಂಗ್
Rao Bahadur: ನಟ ಸತ್ಯದೇವ್ ಅಭಿನಯದ ತೆಲುಗಿನ ಸೈಕಲಾಜಿಕಲ್ ಡಾರ್ಕ್-ಕಾಮಿಡಿ ಸಿನಿಮಾ 'ರಾವ್ ಬಹದ್ದೂರ್' ಜುಲೈ 31 ರಂದು ಒಟಿಟಿಯಲ್ಲಿ ಬಿಡುಗಡೆಗೊಂಡಿದೆ.
ನಟ ಸತ್ಯದೇವ್ ಅಭಿನಯದ ತೆಲುಗಿನ ಸೈಕಲಾಜಿಕಲ್ ಡಾರ್ಕ್-ಕಾಮೆಡಿ ಸಿನಿಮಾ ರಾವ್ ಬಹದ್ದೂರ್ (Rao Bahadur), ಜುಲೈ 31 ರಂದು ಒಟಿಟಿಯಲ್ಲಿ ಬಿಡುಗಡೆಗೊಂಡಿದೆ. ನೆಟ್‌ಫ್ಲಿಕ್ಸ್ (Netflix) ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರವು ಜುಲೈ 3 ರಂದು ರಿಲೀಸ್ ಆಗಿತ್ತು. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ವೀಕ್ಷಣೆಗೆ ಸಿಗುತ್ತಿದೆ. ವೆಂಕಟೇಶ್ ಮಹಾ ಆಕ್ಷನ್ ಕಟ್ ಹೇಳಿದ್ದಾರೆ. 'ಜಿಎಂಬಿ ಎಂಟರ್‌ಟೈನ್‌ಮೆಂಟ್' ಬ್ಯಾನರ್‌ನಡಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಸ್ಮರಣ್ ಸಾಯಿ ಸಂಗೀತ ನೀಡಿದ್ದು, ಕಾರ್ತಿಕ್ ಪರ್ಮಾರ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ.
ನಾಯಕಿಯಾಗಿ ದೀಪಾ ಥಾಮಸ್ ಬಣ್ಣ ಹಚ್ಚಿದ್ದಾರೆ. ವಿಕಾಸ್ ಮುಪ್ಪಾಳ, ರಘು ಬಾಬು, ರಾಜ್‌ಕುಮಾರ್ ಕಾಸಿರೆಡ್ಡಿ, ಲಕ್ಷ್ಮಣ್ ಮೀಸಾಲ ಹಾಗೂ ಲಾವಣ್ಯ ರೆಡ್ಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.