POCO M8 Power: ಹೊಸ ಪೊಕೋ ಎಂ8 ಪವರ್ ಫೋನ್ ಬಿಡುಗಡೆ.. ಬೆಲೆ ಎಷ್ಟು?
POCO M8 Power: ಬಹುನಿರೀಕ್ಷಿತ 'ಪೊಕೋ ಎಂ8 ಪವರ್ 5ಜಿ' ಸ್ಮಾರ್ಟ್‌ಫೋನ್ ಇಂದು (ಮಂಗಳವಾರ) ಅದ್ದೂರಿಯಾಗಿ ಬಿಡುಗಡೆಗೊಂಡಿದೆ.
ಬಹುನಿರೀಕ್ಷಿತ ಪೊಕೋ ಎಂ8 ಪವರ್ 5ಜಿ (POCO M8 Power 5G) ಸ್ಮಾರ್ಟ್‌ಫೋನ್ ಇಂದು (ಮಂಗಳವಾರ) ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದು ಆ.7 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ಮೂಲಕ ಗ್ರಾಹಕರ ಖರೀದಿಗೆ ಲಭ್ಯವಿದೆ.
ಈ ಫೋನ್ 6GB RAM + 128GB ಹಾಗೂ 8GB RAM + 128GB ಇಂಟರ್ನಲ್ ಸ್ಟೋರೇಜ್‌ನ್ನು ಹೊಂದಿದೆ. ಕ್ರಮವಾಗಿ ರೂ.24,999 ಮತ್ತು ರೂ.27,999 ದರವನ್ನು ಪಡೆದಿದೆ. ಆರಂಭಿಕ ಕೊಡುಗೆಯಾಗಿ ರೂ.21,999 ರಿಂದ ರೂ.27,999 ಬೆಲೆಯನ್ನು ಒಳಗೊಂಡಿದೆ.
ನೂತನ 'ಪೊಕೋ ಎಂ8 ಪವರ್' ಬೃಹದಾಕಾರದ 8000mAh ಸಿಲಿಕಾನ್ ಕಾರ್ಬನ್ ಬ್ಯಾಟರಿಯನ್ನು ತನ್ನದಾಗಿಸಿಕೊಂಡಿದೆ. 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಹಾಗೂ 25W ವೈರ್ಡ್ ರಿವರ್ಸ್ ಚಾರ್ಜಿಂಗ್ ಆಯ್ಕೆಯನ್ನು ಬೆಂಬಲಿಸುತ್ತದೆ.
ಇದು 6.83-ಇಂಚಿನ AMOLED ಐ-ಕೇರ್ ಡಿಸ್‌ಪ್ಲೇಯನ್ನು ಪಡೆದಿದ್ದು, 2396 x 1080 ಪಿಕ್ಸೆಲ್ ರೆಸಲ್ಯೂಶನ್ & 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ದೈನಂದಿನ ಬಳಕೆ ಹಾಗೂ ಗೇಮ್ ಆಡುವಾಗ ಉತ್ತಮವಾದ ಅನುಭವ ನೀಡುತ್ತದೆ.
ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾವು ತುಂಬಾ ಚೆನ್ನಾಗಿದೆ. ಹಿಂಭಾಗ 50MP ಎಐ (AI) ಡ್ಯುಯಲ್ ಕ್ಯಾಮೆರಾವಿದ್ದು, f/1.8 ಅಪರ್ಚರ್ ಹಾಗೂ 5P ಲೆನ್ಸ್‌ನ್ನು ಹೊಂದಿದೆ. ಮುಂಭಾಗ ಸೆಲ್ಫಿ ವಿಡಿಯೋ ಕಾಲ್‌ಗಳಿಗೆ ನೆರವಾಗಲು 8MP ಕ್ಯಾಮೆರಾವನ್ನು ಪಡೆದಿದೆ. ಈ ಕ್ಯಾಮೆರಾ ಸಿಸ್ಟಮ್ ಆಟೋ ನೈಟ್ ಮೋಡ್, ಎಐ ಎರೇಸರ್, ಎಐ ಸ್ಕೈ ಹಾಗೂ ಎಐ ಬೊಕೆ ಪೋರ್ಟ್ರೇಟ್ ಸೇರಿದಂತೆ ವೈಶಿಷ್ಟ್ಯಗಳನ್ನು ಹೊಂದಿದೆ.
ಹೊಸ 'ಪೊಕೋ ಎಂ8 ಪವರ್' ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ 5.1ನನ್ನು ಸಪೋರ್ಟ್ ಮಾಡುತ್ತದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜೆನ್ 4 ಪ್ರೊಸೆಸರ್‌ನ್ನು ಪಡೆದಿದೆ. ಬ್ಲೇಜ್ ಆರೆಂಜ್, ಮಿಡ್‌ನೈಟ್ ಬ್ಲ್ಯಾಕ್ ಹಾಗೂ ಸ್ಟೀಲ್ ಬ್ಲೂ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.