ಇಂದಿನಿಂದ 'ಗಟ್ಟ ಕುಸ್ತಿ-2' ಸ್ಕ್ರಿಮಿಂಗ್

Gatta Kusthi-2: ತಮಿಳಿನ ಕಾಮಿಡಿ ಚಿತ್ರ 'ಗಟ್ಟ ಕುಸ್ತಿ-2' ಇಂದಿನಿಂದ (ಜು.31) 'ನೆಟ್‌ಫ್ಲಿಕ್ಸ್'ನಲ್ಲಿ ಸ್ಕ್ರಿಮಿಂಗ್ ಆಗುತ್ತಿದೆ.

Jul 31, 2026 - 17:37
ಇಂದಿನಿಂದ 'ಗಟ್ಟ ಕುಸ್ತಿ-2' ಸ್ಕ್ರಿಮಿಂಗ್

ತಮಿಳಿನ ಕಾಮಿಡಿ ಚಿತ್ರ 'ಗಟ್ಟ ಕುಸ್ತಿ-2' ಇಂದಿನಿಂದ (ಜು.31) 'ನೆಟ್‌ಫ್ಲಿಕ್ಸ್'ನಲ್ಲಿ ಸ್ಕ್ರಿಮಿಂಗ್ ಆಗುತ್ತಿದೆ. ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ವೀಕ್ಷಣೆಗೆ ಸಿಗುತ್ತಿದೆ. ವಿಷ್ಣು ವಿಶಾಲ್ ನಾಯಕನಾಗಿ ಕಾಣಿಸಿಕೊಂಡಿದ್ದು, ಐಶ್ವರ್ಯ ಲಕ್ಷ್ಮಿ ನಾಯಕಿಯಾಗಿದ್ದಾರೆ. 

ಜು.3 ರಂದು ರಿಲೀಸ್ ಆಗಿದ್ದ ಈ ಸಿನಿಮಾಕ್ಕೆ ಪ್ರೇಕ್ಷಕರು ಜೈ ಎಂದಿದ್ದರು. ಸರಿ ಸುಮಾರು ರೂ.55 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇದು ವಿಷ್ಣು ವಿಶಾಲ್ ವೃತ್ತಿಜೀವನದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವಾಗಿದೆ. 2022ರ ಸೂಪರ್ ಹಿಟ್ ಸಿನಿಮಾ 'ಗಟ್ಟ ಕುಸ್ತಿ'ಯ ಸೀಕ್ವೆಲ್ ಆಗಿದೆ. 

ಚೆಲ್ಲಾ ಅಯ್ಯಾವು ಆಕ್ಷನ್ ಕಟ್ ಹೇಳಿದ್ದು, ವೆಲ್ಸ್ ಫಿಲ್ಮ್ ಇಂಟರ್‌ನ್ಯಾಷನಲ್ ಹಾಗೂ ವಿಷ್ಣು ವಿಶಾಲ್ ಸ್ಟುಡಿಯೋಸ್ ಬ್ಯಾನರ್‌ನಡಿ ಜಂಟಿಯಾಗಿ ನಿರ್ಮಾಣ ಮಾಡಲಾಗಿದೆ.

ರಮ್ಯಾ ಕೃಷ್ಣನ್, ಯೋಗಿ ಬಾಬು, ಕರುಣಾಸ್, ಮುನಿಷ್ಕಾಂತ್, ಕಾಳಿ ವೆಂಕಟ್, ಕರುಣಾಕರನ್, ಮೋಕ್ಷಾ ಮತ್ತು ಜರಾ ಜಯನ್ನಾ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.