ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ
ದಿನ ಭವಿಷ್ಯ:
ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 7
1.ಮೇಷ:
ದೈವಸಂಕಲ್ಪದಂತೆ ಏರ್ಪಡುವ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವ ಪ್ರಯತ್ನ. ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ. ಉದ್ಯಮ, ವ್ಯವಹಾರದಲ್ಲಿ ಉತ್ತಮ ಲಾಭ. ದೂರದಲ್ಲಿರುವ ನೆಂಟರ ಆಗಮನ. ಅಧ್ಯಾತ್ಮದ ಕಡೆಗೆ ಒಲವು,ಆರೋಗ್ಯ ಉತ್ತಮ. ಗಣೇಶ ದ್ವಾದಶನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
2.ವೃಷಭ:
ಕೆಲವರಿಗೆ ಎಲ್ಲವೂ ಬಯಸಿದಂತೆ ನಡೆಯುತ್ತದೆ. ಅಧಿಕಾರಿಗಳಿಗೆ ಇಷ್ಟಪಟ್ಟಲ್ಲಿಗೆ ವರ್ಗಾವಣೆ. ಉದ್ಯಮದ ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಉದ್ಯೋಗಾಸಕ್ತರಿಗೆ ಅನುಕೂಲಕರ ಅವಕಾಶಗಳು. ಅವಿವಾಹಿತರಿಗೆ ಅನುರೂಪಿ ಸಂಗಾತಿ ಲಭ್ಯ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
3.ಮಿಥುನ:
ಎಲ್ಲಿ ಬೇಕಾದರೂ ಹೊಂದಿಕೊಳ್ಳುವ ಸ್ವಭಾವ. ಹೊಸ ಸಹೋದ್ಯೋಗಿಗಳಿಗೆ ಜವಾಬ್ದಾರಿ ಹಂಚಿಕೆ. ಉದ್ಯಮಕ್ಕೆ ಎದುರಾಳಿಗಳಿಂದ ಸ್ಪರ್ಧೆ. ಹಿತಶತ್ರುಗಳ ಹುನ್ನಾರದ ಕುರಿತು ಎಚ್ಚರಿಕೆ.. ದೇವತಾರ್ಚನೆ, ಧ್ಯಾನ, ಸತ್ಸಂಗದಲ್ಲಿ ಆಸಕ್ತಿ. ಗಣೇಶ ಅಷ್ಟಕ, ಶಿವಸ್ತೋತ್ರ, ನವಗ್ರಹ ಸ್ತೋತ್ರ ಓದಿ.
4.ಕರ್ಕಾಟಕ:
ಉದ್ಯೋಗ ಸ್ಥಾನದಲ್ಲಿ ಸತತ ಪರಿಶ್ರಮಕ್ಕೆ ಗೌರವ. ಉದ್ಯಮದ ನೌಕರರ ಯೋಗಕ್ಷೇಮಕ್ಕೆ ಯೋಜನೆ. ಖಾದಿ, ಗ್ರಾಮೋದ್ಯೋಗ ಬೆಳೆಸಲು ಆಸಕ್ತಿ. ಬಂಧುಗಳೊಡನೆ ವಿರಸಕ್ಕೆ ಎಡೆಗೊಡದಿರಿ. ಧ್ಯಾನ, ಭಜನೆ, ಸತ್ಸಂಗಗಳ ಕಡೆಗೆ ಒಲವು. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
5.ಸಿಂಹ:
ಉದ್ಯೋಗ ಸ್ಥಾನದಲ್ಲಿ ಹೊಸ ವ್ಯವಸ್ಥೆಗಳು ಆರಂಭ. ಉದ್ಯಮದ ಉತ್ಪನ್ನಗಳಿಗೆ ಹೊರಗಿನಿಂದ ಬೇಡಿಕೆ ಹೆಚ್ಚಳ. ಉತ್ತರದ ಕಡೆಯಿಂದ ಪ್ರೋತ್ಸಾಹಕರ ವಾರ್ತೆ. ಮಹಿಳೆಯರ ಗೃಹೋದ್ಯಮ ಯಶಸ್ಸಿನತ್ತ ಮುನ್ನಡೆ. ರಾತ್ರಿಪ್ರಯಾಣದಿಂದ ದೂರವಿರಿ. ಗಣೇಶ ಪಂಚರತ್ನ, ನರಸಿಂಹ ಕವಚ, ಲಕ್ಷ್ಮೀಸ್ತೋತ್ರ ಓದಿ.
6.ಕನ್ಯಾ:
ವಾರದ ಮಧ್ಯದಲ್ಲಿ ಹೊಸ ಅನುಭವ. ಸರಕಾರಿ ಉದ್ಯೋಗಿಗಳಿಗೆ ಕೊಂಚ ಆತಂಕ. ಇಲೆಕ್ಟ್ರಾನಿಕ್ಸ್ ಉದ್ಯಮಗಳಿಗೆ ಅಧಿಕ ಬೇಡಿಕೆ. ವೃತ್ತಿ ಪರಿಣತಿ ವೃದ್ಧಿಗೆ ಪ್ರಯತ್ನ ಆರಂಭ. ಕುಟುಂಬದ ಆರಾಧನಾ ಸ್ಥಾನಕ್ಕೆ ಸಂದರ್ಶನ. ಗಣೇಶ ಅಷ್ಟಕ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
7.ತುಲಾ:
ಅದೃಷ್ಟ ಒಲಿಯುವ ಸಮಯ ಸನ್ನಿಹಿತ. ಮನೋಬಲ ವೃದ್ಧಿಗೆ ಸಾಧನೆ ಮುಂದುವರಿಕೆ. ವೃತ್ತಿ ಪರಿಣತಿ ಹೊಂದಲು ಹಳಬರ ಮಾರ್ಗದರ್ಶನ. ಉದ್ಯೋಗ ಸ್ಥಾನಕ್ಕೆ ಗಣ್ಯ ವ್ಯಕ್ತಿಗಳ ಭೇಟಿ. ಪರಂಪರಾಗತ ಚಿಕಿತ್ಸೆಯಿಂದ ಆರೋಗ್ಯ ಪ್ರಾಪ್ತಿ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ಶನಿಸ್ತೋತ್ರ ಓದಿ.
8.ವೃಶ್ಚಿಕ:
ಕಾಲಕ್ಕೆ ಸರಿಯಾಗಿ ಹೊಂದಿಕೊಳ್ಳುವ ಅನಿವಾರ್ಯತೆ. ಉದ್ಯೋಗ ಸ್ಥಾನದಲ್ಲಿ ತಾತ್ಕಾಲಿಕ ಹಿನ್ನಡೆ. ಉದ್ಯಮ ಸ್ಥಾನದಲ್ಲಿ ನಿಧಾನ ಪ್ರಗತಿ. ಉದ್ಯೋಗ ಅರಸುವ ಶಿಕ್ಷಿತರಿಗೆ ಶುಭ ಸಮಾಚಾರ. ಪಾಲುದಾರಿಕೆ ವ್ಯವಹಾರದಿಂದ ಅನುಕೂಲ.ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
9.ಧನು:
ಸುಖ- ಸಂತೋಷಗಳ ನಡುವಿನಲ್ಲಿ ನಿತ್ಯ ಹೋರಾಟ. ಉದ್ಯೋಗದಲ್ಲಿ ಯೋಗ್ಯತೆಗೆ ಸರಿಯಾದ ಸ್ಥಾನ ಲಭ್ಯ. ಗೃಹೋದ್ಯಮದ ವ್ತವಹಾರ ಸುಧಾರಣೆ. ಹಳೆಯ ಮನೆ ದುರಸ್ತಿಗೆ ಧನವ್ಯಯ. ಸಂಸಾರದಲ್ಲಿ ಪ್ರೇಮ, ವಿಶ್ವಾಸದ ವಾತಾವರಣ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಮಹಾಲಕ್ಷ್ಮಿ ಅಷ್ಟಕ ಓದಿ.
10.ಮಕರ:
ಹಬ್ಬದ ಬಳಿಕ ಇಮ್ಮಡಿ ಉತ್ಸಾಹ. ಉದ್ಯೋಗ ಸ್ಥಾನದಲ್ಲಿ ಹೊಸ ಜವಾಬ್ದಾರಿ. ಸಹೋದ್ಯಮದ ಸಂಸ್ಥೆಯ ಉತ್ಪಾದನೆ ವೃದ್ಧಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಪೂಜೆ, ಧ್ಯಾನ, ಸ್ವಾಧ್ಯಾಯಕ್ಕೆ ಗಮನ. ಗಣೇಶ ಪಂಚರತ್ನ, ದೇವೀಸ್ತೋತ್ರ, ಶನಿಸ್ತೋತ್ರ ಓದಿ.
11.ಕುಂಭ:
ಉದ್ಯೋಗಸ್ಥಾನದಲ್ಲಿ ಹೊಸಬರಿಗೆ ಮಾರ್ಗದರ್ಶನ. ಉದ್ಯಮದ ಉತ್ಪನ್ನಗಳ ವಿತರಣೆ ಜಾಲ ವೃದ್ಧಿ. ಮುದ್ರಣ ಸಾಮಗ್ರಿಗಳು, ಸ್ಟೇಶನರಿ, ಶೋಕಿ ಸಾಮಗ್ರಿಗಳ ವಿತರಕರಿಗೆ ಬಿಡುವು ಇಲ್ಲದಷ್ಟು ಬೇಡಿಕೆ. ಬಂಧುಗಳ ಮನೆಯಲ್ಲಿ ಶುಭ ಸಮಾರಂಭ.ಉದ್ಯೋಗಾಸಕ್ತರಿಗೆ ಅವಕಾಶ ಹುಡುಕಲು ಸಹಾಯ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಸ್ತೋತ್ರ ಓದಿ.
12.ಮೀನ:
ಎಷ್ಟು ಕೆಲಸ ಬಂದರೂ ನಿರ್ವಹಿಸುವ ಸಾಮರ್ಥ್ಯ. ಸಹೋದ್ಯೋಗಿಗಳಿಂದ ಸರ್ವವಿಧ ಸಹಾಯ. ಸರಕಾರಿ ಇಲಾಖೆಗಳಲ್ಲಿ ಸಕಾರಾತ್ಮಕ ಸ್ಪಂದನ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿನೂತನ ವ್ಯವಸ್ಥೆ.ಪ್ರಾಚೀನ ಚಿಕಿತ್ಸಾ ಪದ್ಧತಿಯಿಂದ ಹಿರಿಯರಿಗೆ ಆರೋಗ್ಯ.ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.