ಬೆಂಗಳೂರಿನ ಅರಮನೆ ಮೈದಾನದಲ್ಲಿ ನ.17ರಂದು ವಾಗೀಶ್ವರಿ ಪೂಜೆ-ಲೇಖನ ಸಂಕಲ್ಪ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನರಿಗೆ ಭವ್ಯ ಸ್ವಾಗತ

ನ.17ರಂದು ಬೆಳಗ್ಗೆ 9 ಗಂಟೆಗೆ ಪ್ರಾರ್ಥನೆಯೊಂದಿಗೆ ಪೂಜಾ ಕಾರ್ಯ ಆರಂಭವಾಗಲಿದೆ. ಬೆಳಗ್ಗೆ 10.10ಕ್ಕೆ ವಾಗೀಶ್ವರಿ ಪೂಜೆ ಮತ್ತು ಲೇಖನ ಸಂಕಲ್ಪ ಆರಂಭವಾಗಲಿದ್ದು, 11.15ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಮಾರಿಗುಡಿ ದೇವಸ್ಥಾನ ಬ್ರಹ್ಮಕಲಶೋತ್ಸವ ಬೆಂಗಳೂರು ಸಮಿತಿ ಅಧ್ಯಕ್ಷರು ಹಾಗೂ ಯುನಿವರ್ಸಲ್‌ ಗ್ರೂಫ್‌ ಆಫ್‌ ಇನ್ಸ್‌ಸ್ಟಿಟ್ಯೂಟ್‌ನ ಅಧ್ಯಕ್ಷರಾದ ಉಪೇಂದ್ರ ಶೆಟ್ಟಿ ತಿಳಿಸಿದ್ದಾರೆ.

Nov 12, 2024 - 19:31
Nov 12, 2024 - 19:50
ಬೆಂಗಳೂರಿನ ಅರಮನೆ ಮೈದಾನದಲ್ಲಿ ನ.17ರಂದು ವಾಗೀಶ್ವರಿ ಪೂಜೆ-ಲೇಖನ ಸಂಕಲ್ಪ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನರಿಗೆ ಭವ್ಯ ಸ್ವಾಗತ
Upendra Shetty, Director of Universal Group of Institutions

ಮಂಗಳೂರು: ಉಡುಪಿ ಜಿಲ್ಲೆಯ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ, ನವದುರ್ಗಾ ಲೇಖನ ಯಜ್ಞ ಸಮಿತಿ ವತಿಯಿಂದ ದೇವಸ್ಥಾನದ ಪ್ರಧಾನ ತಂತ್ರಿಗಳಾದ ವಿದ್ವಾನ್‌ ಕೆಪಿ ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ನ.17ರಂದು ಬೆಂಗಳೂರಿನ(Vagishwari Pooja) ಅರಮನೆ ಮೈದಾನದ ಗೇಟ್‌ ನಂ.4ರ ಗಾಯತ್ರಿ ವಿಹಾರ್‌ನಲ್ಲಿ ವಾಗೀಶ್ವರಿ ಪೂಜೆ ಹಾಗೂ ಲೇಖನ ಸಂಕಲ್ಪ ಕಾರ್ಯಕ್ರಮ ನಡೆಯಲಿದೆ.

ಆ ಪ್ರಯುಕ್ತ ಅಂದು ಬೆಳಗ್ಗೆ 9 ಗಂಟೆಗೆ ಪ್ರಾರ್ಥನೆಯೊಂದಿಗೆ ಪೂಜಾ ಕಾರ್ಯ ಆರಂಭವಾಗಲಿದೆ. ಬೆಳಗ್ಗೆ 10.10ಕ್ಕೆ ವಾಗೀಶ್ವರಿ ಪೂಜೆ ಮತ್ತು ಲೇಖನ ಸಂಕಲ್ಪ ಆರಂಭವಾಗಲಿದ್ದು, 11.15ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಮಾರಿಗುಡಿ ದೇವಸ್ಥಾನ ಬ್ರಹ್ಮಕಲಶೋತ್ಸವ ಬೆಂಗಳೂರು ಸಮಿತಿ ಅಧ್ಯಕ್ಷರು ಹಾಗೂ ಯುನಿವರ್ಸಲ್‌ ಗ್ರೂಫ್‌ ಆಫ್‌ ಇನ್ಸ್‌ಸ್ಟಿಟ್ಯೂಟ್‌ನ ಅಧ್ಯಕ್ಷರಾದ ಉಪೇಂದ್ರ ಶೆಟ್ಟಿ ತಿಳಿಸಿದ್ದಾರೆ.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು ಹಾಗೂ ಎಂಆರ್‌ಜಿ ಗ್ರೂಪ್‌ ಅಧ್ಯಕ್ಷ ಡಾ.ಕೆ. ಪ್ರಕಾಶ್‌ ಶೆಟ್ಟಿ, ಬೆಂಗಳೂರು ಸಮಿತಿ ಕಾರ್ಯದರ್ಶಿ ಹಾಗೂ ಶೀಲಾ ಎಕ್ವಿಪ್‌ಮೆಂಟ್ಸ್‌ ಪ್ರೈ.ಲಿ.ನ ವಿಜಯ್‌ ಜೆ. ಶೆಟ್ಟಿ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷರಾದ ಗುರ್ಮೆ ಸುರೇಶ್‌ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್‌ ಮುಂತಾದವರ ನೇತೃತ್ವದಲ್ಲಿ ಈ ಪೂಜಾ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬಂಧುಗಳು(Lekhna Sankalpa) ಅರಮನೆ ಮೈದಾನದಲ್ಲಿ ನ.17ರಂದು ನಡೆಯುವ ಈ ವಾಗೀಶ್ವರಿ ಪೂಜೆ ಹಾಗೂ ಲೇಖನ ಸಂಕಲ್ಪ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾರಿಗುಡಿ ಅಮ್ಮನ ಕೃಪೆಗೆ ಪಾತ್ರರಾಗಬೇಕೆಂದು ಉಪೇಂದ್ರ ಶೆಟ್ಟಿ ಅವರು ಹೇಳಿದ್ದಾರೆ.

ಕರಾವಳಿಯ ಭಾಗದವರು ಭಾಗವಹಿಸಿ:ಡಾ.ಕೆ. ಪ್ರಕಾಶ್‌ ಶೆಟ್ಟಿ

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಎಂಆರ್‌ಜಿ ‌ ಗ್ರೂಪ್‌ನ ಅಧ್ಯಕ್ಷರಾದ ಡಾ.ಕೆ. ಪ್ರಕಾಶ್‌ ಶೆಟ್ಟಿ, ಕಾಪು ಮಾರಿಯಮ್ಮನ ಜೀರ್ಣೋದ್ಧಾರದ ಬೆಂಗಳೂರು ಸಮಿತಿ ಗೌರವಾಧ್ಯಕ್ಷನಾಗಿ ಹಾಗೂ ಬ್ರಹ್ಮಕಲಶೋತ್ಸವದ ಅಧ್ಯಕ್ಷನಾಗಿದ್ದು, ನ.17ರಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ(palace ground) ನವದುರ್ಗಾ ಲೇಖನ ಯಜ್ಞ  ಪೂಜೆ ನೆರವೇರಲಿದೆ. ಕರಾವಳಿ ಭಾಗದ ಅಂದರೆ ಉಡುಪಿ ಹಾಗೂ ದಕ್ಷಿಣ ಕನ್ನಡದ ಎಲ್ಲ ಸಮಾಜದವರು ತಮ್ಮ ಕುಟುಂಬ ಪರಿವಾರದೊಂದಿಗೆ 17ರಂದು ಬಂದು ಈ ಪೂಜೆಯಲ್ಲಿ ಭಾಗವಹಿಸಬೇಕಾಗಿ ನಮ್ಮ ಸಮಿತಿಯ ಪರವಾಗಿ ವಿನಂತಿಸುತ್ತಿರುವುದಾಗಿ ಹೇಳಿದ್ದಾರೆ.

ಈ ಪೂಜಾ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರು, ಗಣ್ಯರು, ಧಾರ್ಮಿಕ ಮುಖಂಡರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪುರುಷರು ಬಿಳಿ ಶರ್ಟ್ ಮತ್ತು ಪಂಚೆ ಧರಿಸಿದರೆ ಉತ್ತಮ, ಮಹಿಳೆಯರು ಕುಂಕುಮಾ ಬಣ್ಣದ ಸೀರೆ ಧರಿಸಿದರೆ ಉತ್ತಮ ಎಂದು  ಎಂದು ಸಮಿತಿಯವರು ತಿಳಿಸಿದ್ದಾರೆ.