ದಿನ ಭವಿಷ್ಯ
18-10-2025

ಅದೃಷ್ಟ ಸಂಖ್ಯೆ 9
೧. ಮೇಷ:
ನಿಯೋಜಿತ ಕಾರ್ಯಗಳು ಮುಗಿದು ಸಮಾಧಾನ. ಉದ್ಯಮಿಗಳಿಗೆ ಕೆಲವು ವಿಭಾಗಗಳಲ್ಲಿ ಅಧಿಕ ಲಾಭ. ಹೊಸ ಹೂಡಿಕೆಗಳ ಕುರಿತು ಚಿಂತನೆ. ದೇವತಾ ಕಾರ್ಯಗಳಲ್ಲಿ ಮಗ್ನತೆ. ಮನೆಯಲ್ಲಿ ಎಲ್ಲರಿಗೂ ಆರೋಗ್ಯದ ಆನಂದ. ಗಣೇಶ ಅಷ್ಟಕ, ದೇವೀಸ್ತೋತ್ರ, ಶನಿಮಹಾತ್ಮೆ ಓದಿ.
೨. ವೃಷಭ:
ಪ್ರಗತಿಯಲ್ಲಿ ಸೀಮೋಲ್ಲಂಘನಗೈದ ಹೆಗ್ಗಳಿಕೆ. ಉದ್ಯೋಗಸ್ಥರಿಗೆ ಶೀಘ್ರವಾಗಿ ಕಾರ್ಯ ಮುಗಿಸುವ ಆತುರ. ವಸ್ತ್ರ, ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆ ವ್ಯಾಪಾರಿಗಳಿಗೆ ಲಾಭ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿಗೆ ಪ್ರೋತ್ಸಾಹ. ಸಂಸಾರದಲ್ಲಿ, ಪ್ರೀತಿ, ವಿಶ್ವಾಸ ಸಾಮರಸ್ಯವೃದ್ಧಿ. ಗಣಪತಿ ಅಥರ್ವಶೀರ್ಷ, ಶಿವಸಹಸ್ರನಾಮ, ಅನ್ನಪೂರ್ಣಾ ಸ್ತೋತ್ರ ಓದಿ.
೩. ಮಿಥುನ:
ಉದ್ಯೋಗ ಕ್ಷೇತ್ರದಲ್ಲಿ ಗೌರವ ಹಾಗೂ ಆದಾಯ ವೃದ್ಧಿ. ಕೃಷಿ ಕ್ಷೇತ್ರದಲ್ಲಿ ಪ್ರಯೋಗಗಳು ಯಶಸ್ವಿ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿಯತ್ತ ಗಮನ. ಹಿರಿಯರೊಂದಿಗೆ ಸಣ್ಣ ತಿರುಗಾಟ. ಗಣೇಶ ಕವಚ ವಿಷ್ಣು ಸಹಸ್ರನಾಮ , ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೪. ಕರ್ಕಾಟಕ:
ಉದ್ಯೋಗಸ್ಥಾನದಲ್ಲಿ ವಿನೂತನ ಪ್ರಯೋಗಗಳು. ಮಾಲಿಕರು ಮತ್ತು ನೌಕರರ ನಡುವೆ ಸಾಮರಸ್ಯಕ್ಕೆ ಒತ್ತು. ವಸ್ತ್ರ, ಆಭರಣ, ಔಷಧ ವ್ಯಾಪಾರಿಗಳಿಗೆ ನಿರೀಕ್ಷೆಯಂತೆ ಲಾಭ. ವೈವಾಹಿಕ ಸಂಬಂಧ ಕುದುರಿಸಲು ಪ್ರಯಾಣ. ಗೃಹೋದ್ಯಮಗಳ ಸ್ಥಿತಿ ಸುಧಾರಣೆ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.
೫. ಸಿಂಹ:
ಸರಕಾರಿ ನೌಕರರಿಗೆ ವರ್ಗಾವಣೆಯ ಆತಂಕ. ಉದ್ಯಮಿಗಳಿಗೆ ಅನುಕೂಲ. ಸ್ವೋದ್ಯೋಗಿ ಮಹಿಳೆಯರಿಗೆ ಪೂರ್ಣ ಪ್ರಮಾಣದಲ್ಲಿ ಯಶಸ್ಸು. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು. ಹತ್ತಿರದ ದೇವಾಲಯಕ್ಕೆ ಸಂದರ್ಶನ. ಸಂಕಷ್ಟನಾಶನ ಗಣೇಶ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೬. ಕನ್ಯಾ:
ಕೆಲಸ ಮುಗಿಸುವುದರಲ್ಲಿ ಮೊದಲಿಗರಾದ ತೃಪ್ತಿ. ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸದ ಹೊರೆ. ಬಂಧುಗಳ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ. ವಿವಾಹಾಸಕ್ತರಿಗೆ ಸಂಬಂಧ ಕೂಡಿ ಬರುವ ಲಕ್ಷಣ. ಸಂಸಾರದಲ್ಲಿ ಸಾಮರಸ್ಯದ ವಾತಾವರಣ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಆಂಜನೇಯ ಸ್ತೋತ್ರ ಓದಿ.
೭. ತುಲಾ:
ಉದ್ಯೋಗ ಸ್ಥಾನದಲ್ಲಿ ಸಮಾಧಾನ. ಸಣ್ಣ ಉದ್ಯಮ ಘಟಕಗಳ ವಿಸ್ತರಣೆ. ಉದ್ಯೋಗ ಅನ್ವೇಷಣೆ ಫಲಪ್ರದ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ,ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೮. ವೃಶ್ಚಿಕ:
ಸಾಂಸಾರಿಕ ಜೀವನದಲ್ಲಿ ಸಂತೃಪ್ತಿಯ ಅನುಭವ. ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಅವಿವಾಹಿತ ಹುಡುಗರಿಗೆ ಶೀಘ್ರ ವಿವಾಹ ಯೋಗ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೯. ಧನು:
ಸ್ಥಿರವಾದ ವರಮಾನ ಮೂಲ ಪ್ರಾಪ್ತಿ. ಉದ್ಯೋಗ ಸ್ಥಾನದಲ್ಲಿ ಮಂದಗತಿಯ ಕಾರ್ಯ. ಕೃಷ್ಯುತ್ಪನ್ನಗಳು,ಹಣ್ಣು ತರಕಾರಿ ಮಾರಾಟದಿಂದ ಲಾಭ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಯಥೇಚ್ಛ ಆದಾಯ. ದೂರದ ಬಂಧುಗಳಿಂದ ಶುಭ ಸಮಾಚಾರ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ ಓದಿ.
೧೦. ಮಕರ:
ಅವಧಿಗೆ ಮೊದಲೇ ಕಾರ್ಯಗಳು ಮುಗಿದ ಸಮಾಧಾನ. ಕಟ್ಟಡ ನಿರ್ಮಾಪಕರಿಗೆ ಹೊಸ ಕೆಲಸ ಪ್ರಾಪ್ತಿ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಅಧಿಕ ಲಾಭ. ವಿದ್ಯುತ್ ಸಾಧನಗಳ ದುರಸ್ತಿಯವರಿಗೆ ಒಳ್ಳೆಯ ಆದಾಯ. ಬಂಧುಗಳೊಂದಿಗೆ ವೈಮನಸ್ಯ ಪರಿಹಾರ. ಗಣೇಶ ಕವಚ, ದೇವೀಸ್ತೋತ್ರ, ಶನಿಸ್ತೋತ್ರ ಓದಿ.
೧೧. ಕುಂಭ:
ಉದ್ಯಮದ ಉತ್ಪನ್ನಗಳಿಗೆ ವ್ಯಾಪಕ ಬೇಡಿಕೆ. ವಾಹನ ಬಿಡಿಭಾಗಗಳಿಂದ ಅಧಿಕ ಲಾಭ. ಗೃಹೋತ್ಪನ್ನಗಳ ಜನಪ್ರಿಯತೆ ವೃದ್ಧಿ. ಸಂಸಾರದಲ್ಲಿ ಪ್ರೀತಿ, ವಾತ್ಸಲ್ಯ, ಸಾಮರಸ್ಯ ಬೆಳವಣಿಗೆ. ಸಮಾಜ ಸೇವಾ ಕಾರ್ಯಗಳ ಮುಂದುವರಿಕೆ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವನಾಮಾವಲ್ಯಷ್ಟಕ, ಶನಿಮಹಾತ್ಮೆ ಓದಿ.
೧೨. ಮೀನ:
ಆಯೋಜಿತ ಯೋಜನೆಗಳ ತ್ವರಿತ ಜಾರಿ. ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತರಣೆ. ಸರಕಾರಿ ಕಾರ್ಯಾಲಯಗಳಲ್ಲಿ ಸಮಯಕ್ಕೆ ಸರಿಯಾದ ಸೇವೆ. ಪೂರಕ ವೃತ್ತಿಯಲ್ಲಿ ಸಾಮಾಧಾನಕರ ಲಾಭ. ಅಸಹಾಯಕ ಮಕ್ಕಳ ವುದ್ಯಾಭ್ಯಾಸಕ್ಕೆ ನೆರವು. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.