ದಿನ ಭವಿಷ್ಯ

19-10-2025

Oct 20, 2025 - 16:42
ದಿನ ಭವಿಷ್ಯ

               ಜ್ಯೋತಿರ್ಮಯ.             

ಅದೃಷ್ಟ ಸಂಖ್ಯೆ 1

೧.ಮೇಷ: 
ವಿರಾಮದ ದಿನವೂ  ಏರುತ್ತಿರುವ ಹೊರೆ. ಒಂದಿಲ್ಲಿಂದು ಬಗೆಯ ವ್ಯವಹಾರ..‌ದೀಪಾವಳಿಯ ಸ್ವಾಗತಕ್ಕೆ ಸಿದ್ಧತೆ. ಹತ್ತಿರದ ದೇವಾಲಯ, ವೃದ್ಧಾಶ್ರಮಕ್ಕೆ ಭೇಟಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಮಾಧಾನದ ದಿನ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ  ಓದಿ.


 

೨. ವೃಷಭ:

  ವ್ಯವಹಾರ ಕ್ಷೇತ್ರದಲ್ಲಿ ಹೊಸ ಯೋಜನೆ. ಗಣ್ಯ ವ್ಯಕ್ತಿಗಳ ಪರಿಚಯ. ಗೆಳೆಯರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ. ಅನಾಥಾಶ್ರಮ, ಆಸ್ಪತ್ರೆಗಳಿಗೆ  ಭೇಟಿ. ಮಕ್ಕಳು, ಹಿರಿಯರು, ಗೃಹಿಣಿಯರಿಗೆ ನೆಮ್ಮದಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.

   

೩.ಮಿಥುನ:

 ಮನೆಮಂದಿಯೊಂದಿಗೆ ಮನೋರಂಜನೆಯಲ್ಲಿ ತಲ್ಲೀನತೆ. ನಾಳೆಯಿಂದ ಹಬ್ಬ ಆಚರಣೆಯ ಸಿದ್ಧತೆ. ವ್ಯವಹಾರಸ್ಥರಿಗೆ ನಿರಾಳ‌ ಭಾವ. ಉದ್ಯೋಗ ಹುಡುಕುವವರಿಗೆ ಶುಭಸೂಚನೆ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಮಾಧಾನದ ವಾತಾವರಣ. ಗಣೇಶ ಪಂಚರತ್ನ, ಶಿವಕವಚ, ನವಗ್ರಹ ಮಂಗಲಾಷ್ಟಕ‌  ಓದಿ. 


೪.ಕರ್ಕಾಟಕ:
  ಮನೆಯಲ್ಲಿ ದೇವತಾರಾಧನೆಯ ಸಂಭ್ರಮ ಸಹೋದ್ಯೋಗಿಗಳ ಸೌಹಾರ್ದ ಭೇಟಿ. ವ್ಯವಹಾರ ಕ್ಷೇತ್ರದ ಮಿತ್ರರ ಸಂದರ್ಶನ. ವಧೂವರಾನ್ವೇಷಿಗಳಿಗೆ ಆಶಾ ಭಾವನೆ. ಗೆಳೆಯನಿಗೋಸ್ಕರ ಪ್ರಯಾಣ. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


 

೫.ಸಿಂಹ:

  ವ್ಯವಹಾರ ಸುಧಾರಣೆಗೆ ಪ್ರಯತ್ನ ಆರಂಭ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಹೇರಳ  ಲಾಭ. ವೈದ್ಯರು, ಎಂಜಿನಿಯರರು, ನ್ಯಾಯವಾದಿಗಳು  ಮೊದಲಾದವರಿಗೆ   ಕೆಲಸದ ಒತ್ತಡ. ಸ್ವೋದ್ಯೋಗಿ ಗೃಹಿಣಿಯರ ಆದಾಯ  ಹೆಚ್ಚಳ. ದೀಪಾವಳಿಯ ಮುನ್ನಾದಿನದ ಸಡಗರ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಸೂರ್ಯಮಂಡಲ ಸ್ತೋತ್ರ ಓದಿ.

೬. ಕನ್ಯಾ:

  ಸಹೋದ್ಯೋಗಿಗಳ ಸೌಹಾರ್ದ ಮಿಲನ. ವ್ಯಾಪಾರ ಕ್ಷೇತ್ರದಲ್ಲಿ ನಿಧಾನ, ಆದರೆ ಸ್ಥಿರವಾದ ಪ್ರಗತಿ. ಉದ್ಯೋಗ ಅರಸುತ್ತಿರುವವರಿಗೆ ಶುಭ ಸಮಾಚಾರ.  ಹೊಸ ರೀತಿಯ ಉದ್ಯಮದ ಕಲ್ಪನೆಗೆ ಚಾಲನೆ. ಗೃಹಿಣಿಯರು ಮತ್ತು ಮಕ್ಕಳಿಗೆ  ಸಂಭ್ರಮದ ದಿನ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೭.ತುಲಾ:

  ವ್ಯವಹಾರದ ಕುರಿತು ಅನುಭವಿಗಳೊಡನೆ ಸಮಾಲೋಚನೆ. ದೂರದ ಬಂಧುಗಳ ಕಡೆಯಿಂದ ಶುಭ ಸಮಾಚಾರ. ಪಾಲುದಾರಿಕೆಯಲ್ಲಿ ಪಾರದರ್ಶಕತೆಗೆ ಪ್ರಾಧಾನ್ಯ. ಬೌದ್ಧಿಕ ಕಾರ್ಯ ಮಾಡುವವರ ಆರೋಗ್ಯದ ಬಗ್ಗೆ ಎಚ್ಚರ. ಮಕ್ಕಳಿಗೆ ಅಧ್ಯಯನದಲ್ಲಿ ಆಸಕ್ತಿ ಮೂಡಿಸಲು ಪ್ರಯತ್ನ. ಸಂಕಷ್ಟನಾಶನ ಗಣೇಶ ಸ್ತೋತ್ರ, ದತ್ತ ಪಂಜರ ಸ್ತೋತ್ರ, ಆಂಜನೇಯ ಸ್ತೋತ್ರ ಓದಿ.

೮.ವೃಶ್ಚಿಕ:

  ಸುಖಸಂತೋಷಗಳ ಸಂತೃಪ್ತ ಜೀವನ. ಮಹಿಳೆಯರಿಗೆ ಸುಖಜೀವನದಲ್ಲಿ ಆಸಕ್ತಿ.  ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ. ಹಿರಿಯರ ಆರೋಗ್ಯ ಚೇತರಿಕೆ. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ. ಹತ್ತಿರದ ದೇವಾಲಯಕ್ಕೆ ಭೇಟಿ. ಗಣೇಶ ಅಷ್ಟಕ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.



೯. ಧನು:

ಸಾಂಸಾರಿಕ ಆವಶ್ಯಕತೆಗಳ ಕಡೆಗೆ ಗಮನ. ಪಾಲುದಾರರ ಜೊತೆಗೆ ಸಮ್ಮಿಲನ. ಉದ್ಯಮಿಗಳಿಗೆ ತಾತ್ಕಾಲಿಕ ವಿರಾಮ. ಹಬ್ಬಕ್ಕಾಗಿ ಮನೆಗೆ ಬಂದ ಮಕ್ಕಳು  ಸಮಾಜಸೇವೆ ಹಾಗೂ ಪರಿಸರ ರಕ್ಷಣೆ ಚಟುವಟಿಕೆಗಳಲ್ಲಿ ಮಗ್ನತೆ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಓದಿ.


೧೦.ಮಕರ:

ತಾಳ್ಮೆಯ ಗುಣ ಬೆಳೆಸಿಕೊಳ್ಳುವ ಪ್ರಯತ್ನ. ನಿಗದಿತ ಸಮಯದಲ್ಲಿ ಕಾರ್ಯ ಪೂರ್ತಿಯಾಗಿ ಸಮಾಧಾನ. ಮಕ್ಕಳ ವ್ಯಾಸಂಗದಲ್ಲಿ ಮುನ್ನಡೆ. ಹಬ್ಬದ ಕಾರಣ ಪ್ರಯಾಣ ಮುಂದಕ್ಕೆ. ಹಳೆಯ ಒಡನಾಡಿಗಳ ಭೇಟಿ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧. ಕುಂಭ:

 ದಾನ, ಧರ್ಮಗಳಿಗೆ ಸದವಕಾಶ ಪ್ರಾಪ್ತಿ. ಪರಿಸರ ನೈರ್ಮಲ್ಯ ಯೋಜನೆಗಳ ಅನುಷ್ಠಾನದಲ್ಲಿ ವಿಶೇಷ ಆಸಕ್ತಿ. ಸೇವಾಕಾರ್ಯಗಳಿಂದ ಗೌರವ ಪ್ರಾಪ್ತಿ. ಹಿರಿಯರಿಗೆ ಸ್ವಾವಲಂಬಿ ಬದುಕು. ಗೃಹಿಣಿಯರಿಗೆ ಸ್ವೋದ್ಯೋಗದಲ್ಲಿ ‌ ಮುನ್ನಡೆ. ಗಣೇಶ ಕವಚ, ದಕ್ಷಿಣಾಮೂರ್ತಿ ಸ್ತೋತ್ರ, ಶನಿಮಹಾತ್ಮೆ ಓದಿ.

೧೨.ಮೀನ:

 ಭಗವಂತನಿಂದ ಸತ್ಕರ್ಮಗಳಿಗೆ ಪ್ರೇರಣೆ.  ಗಳಿಕೆಯ ಅನ್ಯಮಾರ್ಗಗಳು ಸುಲಭದಲ್ಲಿ ಗೋಚರ. ಇಷ್ಟದೇವತಾರ್ಚನೆಯಿಂದ ಸಮಸ್ಯೆಗಳು ದೂರ. ಸಂಗಾತಿಯಿಂದ ವ್ಯವಹಾರದಲ್ಲಿ ಸಕ್ರಿಯ ಸಹಕಾರ. ಮಕ್ಕಳ ಶೈಕ್ಷಣಿಕ  ಪ್ರಗತಿ ಉತ್ತಮ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.