ದಿನ ಭವಿಷ್ಯ
21-10-2025

ಅದೃಷ್ಟ ಸಂಖ್ಯೆ 3
೧.ಮೇಷ:
ದೀಪಾವಳಿಯ ಸಂಭ್ರಮದಲ್ಲಿ ಹೊಸ ಸಪ್ತಾಹ ಮುಂದುವರಿಕೆ. ನಾನಾಬಗೆಯ ವ್ಯವಹಾರಗಳ ಧಾವಂತ. ಮನೆಯಲ್ಲಿ ಸಂಭ್ರಮದ ವಾತಾವರಣ.ಹತ್ತಿರದ ದೇವಾಲಯ, ವೃದ್ಧಾಶ್ರಮಕ್ಕೆ ಭೇಟಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಮುಗಿಯದ ಸಂಭ್ರಮ. ಗಣೇಶ ಕವಚ, ಶಿವನಾಮಾವಲ್ಯಷ್ಟಕ,ಶನಿಮಹಾತ್ಮೆ ಓದಿ.
೨. ವೃಷಭ:
ವಿಶಿಷ್ಟ ವ್ಯಕ್ತಿಗಳ ಸಂಪರ್ಕ. ಮನೆಯ ಹೊರಗೆ, ಒಳಗೆ ಹಬ್ಬದ ಸಂಭ್ರಮ. ಸಂಸ್ಥೆಯ ಹೊಸ ಕಾರ್ಯಾಲಯದಲ್ಲಿ ಸಂಭ್ರಮಾಚರಣೆ. ಅನಾಥಾಶ್ರಮ, ಆಸ್ಪತ್ರೆಗಳಿಗೆ ಭೇಟಿ. ಮಕ್ಕಳು, ಹಿರಿಯರು, ಗೃಹಿಣಿಯರಿಗೆ ಆನಂದ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೩.ಮಿಥುನ:
ಮನದಲ್ಲಿ,ಮನೆಯಲ್ಲಿ ವಿರಾಮದ ಭಾವ. ಇನ್ನೂ ಮೂರು ದಿನಗಳು ಆಲಸ್ಯದ ವೈಭವ. ವ್ಯವಹಾರಸ್ಥರಿಗೆ ನಿರಾಳ ಭಾವ. ಉದ್ಯೋಗ ಹುಡುಕುವವರಿಗೆ ಶುಭಸೂಚನೆ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಮಾಧಾನದ ವಾತಾವರಣ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ದೇವೀಸ್ತೋತ್ರ ಓದಿ.
೪.ಕರ್ಕಾಟಕ:
ದೇವತಾರಾಧನೆಯಿಂದ ಮನೆಯಲ್ಲಿ ಶಾಂತಿ. ಸಹೋದ್ಯೋಗಿಗಳ ಸೌಹಾರ್ದ ಭೇಟಿ. ವ್ಯವಹಾರ ಕ್ಷೇತ್ರದ ಮಿತ್ರರ ಸಂದರ್ಶನ. ಉದ್ಯೋಗ ಅರಸುತ್ತಿರುವ ಶಿಕ್ಷಿತರಿಗೆ ಅವಕಾಶಗಳು ಗೋಚರ. ವ್ಯವಹಾರ ಸಂಬಂಧ ಪ್ರವಾಸ ಮುಂದಕ್ಕೆ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
೫.ಸಿಂಹ:
ಬೆಳಕಿನ ಹಬ್ಬದಲ್ಲೂ ವ್ಯವಹಾರದ ಚಿಂತೆ. ನೂತನ ಗೃಹ ನಿರ್ಮಾಣ ಪ್ರಗತಿಯಲ್ಲಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಲಾಭ. ಕೆಲವೆಡೆ ಕೆಲಸದ ಒತ್ತಡವಿದ್ದರೂ ನೌಕರರ ಅಭಾವ. ಸ್ವೋದ್ಯೋಗಿ ಗೃಹಿಣಿಯರಿಗೂ ನೌಕರರ ಸಮಸ್ಯೆ. ಗಣಪತಿ ಅಥರ್ವಶೀರ್ಷ, ದುರ್ಗಾಸ್ತೋತ್ರ, ಹನುಮಾನ ಚಾಲೀಸಾ ಓದಿ.
೬. ಕನ್ಯಾ:
ಸಹೋದ್ಯೋಗಿ ಮಿತ್ರರೊಂದಿಗೆ ಭೇಟಿ. ವ್ಯಾಪಾರ ಕ್ಷೇತ್ರದಲ್ಲಿ ಮಂದಗತಿಯ, ಆದರೆ ಸ್ಥಿರವಾದ ಪ್ರಗತಿ. ಉದ್ಯೋಗ ಅರಸುತ್ತಿರುವವರಿಗೆ ಶುಭ ಸಮಾಚಾರ. ಹೊಸ ರೀತಿಯ ಉದ್ಯಮದ ಕಲ್ಪನೆಗೆ ಮೂರ್ತರೂಪ. ಗೃಹಿಣಿಯರು ಮತ್ತು ಮಕ್ಕಳಿಗೆ ಸಂಭ್ರಮದ ದಿನ. ಗಣೇಶ ಅಷ್ಟಕ ರಾಜರಾಜೇಶ್ವರೀ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೭.ತುಲಾ:
ಹಿರಿಯ ಆತ್ಮೀಯರೊಂದಿಗೆ ಹಬ್ಬದ ಸಂಭ್ರಮ. ದೂರದ ಬಂಧುಗಳ ಕಡೆಯಿಂದ ಶುಭ ಸಮಾಚಾರ. ಪಾಲುದಾರಿಕೆ ವ್ಯವಹಾರದಲ್ಲಿ ಹಿನ್ನಡೆ. ಬೌದ್ಧಿಕ ಕಾರ್ಯ ಮಾಡುವವರ ಆರೋಗ್ಯದ ಬಗ್ಗೆ ಎಚ್ಚರ. ನೃತ್ಯ, ಸಂಗೀತ ಕಾರ್ಯಕ್ರಮಗಳ ವೀಕ್ಷಣೆ. ಸಂಕಷ್ಟನಾಶನ ಗಣೇಶ ಸ್ತೋತ್ರ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ,ಹನುಮಾನ್ ಚಾಲೀಸಾ ಓದಿ.
೮.ವೃಶ್ಚಿಕ:
ನೆಂಟರ ಜೊತೆಯಲ್ಲಿ ಹಬ್ಬದ ಆನಂದ. ಮಹಿಳೆಯರಿಂದ ವಸ್ತ್ರಾಭರಣ ಖರೀದಿ. ಆಸಕ್ತಿ. ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ. ಹತ್ತಿರದ ದೇವಾಲಯಕ್ಕೆ ಭೇಟಿ. ಗಣೇಶ ತ್ರಿಶತಿ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೯. ಧನು:
ಸಾಂಸಾರಿಕ ಆವಶ್ಯಕತೆಗಳ ಕಡೆಗೆ ಗಮನ. ಪಾಲುದಾರಿಕೆ ವ್ಯವಹಾರಗಳಲ್ಲಿ ಮಂದಗತಿ. ಉದ್ಯಮಿಗಳಿಗೆ ತಾತ್ಕಾಲಿಕ ವಿರಾಮ. ಸಣ್ಣ ಪ್ರವಾಸದ ಸಾಧ್ಯತೆ. ಸಮಾಜಸೇವಾ ಚಟುವಟಿಕೆಗಳೊಂದಿಗೆ ಹಬ್ಬ ಆಚರಣೆ. ಗಣಪತಿ ಅಥರ್ವಶೀರ್ಷ, ದಕ್ಷಿಣಾಮೂರ್ತಿ ಸ್ತೋತ್ರ ಮಹಾಲಕ್ಷ್ಮಿ ಅಷ್ಟಕ ಓದಿ.
೧೦.ಮಕರ:
ಕೆಲಸದಲ್ಲಿ ಮುಂದುವರಿದ ಧಾವಂತ. ನಿಗದಿತ ಕಾರ್ಯ ಪೂರ್ತಿಯಾಗಿ ಹಬ್ಬ ನಿರಾತಂಕ. ಮಕ್ಕಳ ವ್ಯಾಸಂಗದಲ್ಲಿ ಮುನ್ನಡೆ. ನಿಸರ್ಗ ಧಾಮಕ್ಕೆ ಪ್ರವಾಸ ಮುಂದಕ್ಕೆ. ಮನೆಯಲ್ಲಿ ಅತಿಥಿ ಸತ್ಕಾರದ ಸಂಭ್ರಮ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ಶಿವಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:
ಹಬ್ಬದ ನಡುವೆ ಹೊಸ ಕಾರ್ಯಕ್ಷೇತ್ರದ ಅನ್ವೇಷಣೆ. ಪರಿಸರ ನೈರ್ಮಲ್ಯ ಯೋಜನೆಗಳ ಅನುಷ್ಠಾನದಲ್ಲಿ ವಿಶೇಷ ಆಸಕ್ತಿ. ಸೇವಾಕಾರ್ಯಗಳಿಂದ ಗೌರವ ಪ್ರಾಪ್ತಿ. ಹಿರಿಯರಿಗೆ ಸ್ವಾವಲಂಬಿ ಬದುಕು.ಗೃಹಿಣಿಯರಿಗೆ ಸ್ವೋದ್ಯೋಗದಲ್ಲಿ ಮುನ್ನಡೆ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕವಚ, ಶನಿಮಹಾತ್ಮೆ ಓದಿ.
೧೨.ಮೀನ:
ಸತ್ಕಾರ್ಯಗಳಿಗೆ ದೈವಪ್ರೇರಣೆ. ಗಳಿಕೆಯ ಮಾರ್ಗಗಳು ಸುಲಭದಲ್ಲಿ ಗೋಚರ. ಸಂಸಾರ ಸಹಿತ ದೇವತಾ ದರ್ಶನ. ಸಂಗಾತಿಯಿಂದ ವ್ಯವಹಾರದಲ್ಲಿ ಸಕ್ರಿಯ ಸಹಕಾರ. ಮನೆಮಂದಿಯೊಂದಿಗೆ ಹಬ್ಬ ಆಚರಣೆ.
ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತೆ ಓದಿ.