ದಿನ ಭವಿಷ್ಯ

17-10-2025

Oct 17, 2025 - 16:19
ದಿನ ಭವಿಷ್ಯ


ಅದೃಷ್ಟ ಸಂಖ್ಯೆ 7

೧.ಮೇಷ:
  ಗುರುವಿನ ಅನುಗ್ರಹದಿಂದ ಎಲ್ಲ ಶುಭ. ಅವಶ್ಯವುಳ್ಳವರಿಗೆ ಸಹಾಯ ಮಾಡಿಕೊಟ್ಟ ತೃಪ್ತಿ. ಸೋದರ ಸಂಬಂಧಿಗೆ ವಿವಾಹ ಯೋಗ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಹುರುಪು. ಹೊಸ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ‌ ಜಯ. ಗಣೇಶ ಕವಚ, ವಿಷ್ಣು ಸಹಸ್ರನಾಮ,ಶನಿಮಹಾತ್ನೆ ಓದಿ.

೨. ವೃಷಭ:

ಸದುದ್ದೇಶಕ್ಕಾಗಿ ಜನಸಂಘಟನೆಯಲ್ಲಿ ಆಸಕ್ತಿ. ಬೌದ್ಧಿಕ ಕೆಲಸಕ್ಕೆ ಯೋಗ್ಯ ಗೌರವ..ಹಿರಿಯರ ಆರೋಗ್ಯದತ್ತ ಗಮನವಿರಲಿ. ಸಂಪಾದನೆಯ. ಹೊಸ ಮಾರ್ಗ  ಅನ್ವೇಷಣೆ. ಮಕ್ಕಳಿಗೆ ಯೋಗ್ಯ ಮಾರ್ಗದರ್ಶನದ ವ್ಯವಸ್ಥೆ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ಆದಿತ್ಯ ಹೃದಯ ಓದಿ.

೩.ಮಿಥುನ:

ಪರಹಿತ ಚಿಂತನೆಯಿಂದ ಆನಂದ ಪ್ರಾಪ್ತಿ. ತಾವಾಗಿ ಒಲಿದು ಬಂದ ಅವಕಾಶಗಳ ಸದುಪಯೋಗ. ಉದ್ಯೋಗಾನ್ವೇಷಿಗಳಿಗೆ ಉನ್ನತರ ಸಹಾಯ. ಗೃಹಾಲಂಕಾರ ವಸ್ತುಗಳ ಖರೀದಿಗೆ ಧನವ್ಯಯ. ಸತ್ಕಾರ್ಯಕ್ಕೆ ಕೈಜೋಡಿಸಿ  ಸಾರ್ಥಕ ಭಾವ ಹೊಂದುವಿರಿ‌. ಸಂಕಷ್ಟನಾಶನ ಗಣೇಶ ಸ್ತೋತ್ರ, ಸುಬ್ರಹ್ಮಣ್ಯ ತ್ರಿಶತಿ ಸ್ತೋತ್ರ, ರಾಜರಾಜೇಶ್ವರೀ ಅಷ್ಡಕ ಓದಿ.


೪.ಕರ್ಕಾಟಕ:

ಪಾಲಿಗೆ ಬಂದ ಹೊಣೆಗಾರಿಕೆ ಕೀರ್ತಿ ತರಲಿದೆ. ಕಠಿನ ಪರಿಶ್ರಮಕ್ಕೆ ಯೋಗ್ಯ ಪ್ರತಿಫಲ. ನೊಂದವರಲ್ಲಿ ಹೊಸ ಭರವಸೆ ತುಂಬುವ ಕ್ರಮಗಳು. ಕೃಷಿಕರಿಗೆ ನೆಮ್ಮದಿ, ಸಮಾಧಾನದ ಸನ್ನಿವೇಶ. ಸಂಸಾರದಲ್ಲಿ  ಸಾಮರಸ್ಯ, ಪ್ರೀತಿ ವೃದ್ಧಿ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ ನವಗ್ರಹ ಮಂಗಲಾಷ್ಟಕ ಓದಿ, 


೫.ಸಿಂಹ:
ಎಲ್ಲ ಬಗೆಯ ಅಡಚಣೆಗಳಿಂದ ಬಿಡುಗಡೆ. ಉದ್ಯೋಗಸ್ಥರಿಗೆ, ಉದ್ಯಮಿಗಳಿಗೆ ಕಾರ್ಯದ ಒತ್ತಡ. ಹಿರಿಯರ, ಗೃಹಿಣಿಯರ ಆರೋಗ್ಯ ತೃಪ್ತಿಕರ. ಮನೆಯಲ್ಲಿ ನೆಮ್ಮದಿಯ ವಾತಾವರಣ. ನೆಂಟಸ್ತಿಕೆ ಕುದುರಿಸಲು ಪ್ರಯಾಣದ ಸಾಧ್ಯತೆ. ಗಣೇಶ ಕವಚ, ನರಸಿಂಹ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

೬. ಕನ್ಯಾ:

ದೈಹಿಕ ಆಪತ್ತು ನಿವಾರಣೆಯಾಗಿ ನೆಮ್ಮದಿ. ವೃತ್ತಿಪರ ಉದ್ಯೋಗಸ್ಥರಿಗೆ ಸಮಯದೊಂದಿಗೆ ಸೆಣಸಾಟ. ಬಂಧುವರ್ಗದವರಿಗೆ ಸಹಾಯ ಮಾಡುವ ಸಂದರ್ಭ. ದಂಪತಿಗಳ ನಡುವೆ   ಅನುರಾಗ ವೃದ್ಧಿ. ತೀರ್ಥಯಾತ್ರೆ ಮುಗಿಸಿದ ಬಂಧುಗಳ ಆಗಮನ. ಗಣಪತಿ ಅಥರ್ವಶೀರ್ಷ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.

೭.ತುಲಾ

ದೈಹಿಕ‌, ಮಾನಸಿಕ ಆರೋಗ್ಯ ಸುಧಾರಣೆ. ವೃತ್ತಿರಂಗದಲ್ಲಿ ಸಮಯಸಾಧಕರ ಮೇಲುಗೈ. ವಸ್ತ್ರ, ಆಭರಣ  ಖರೀದಿಗಾಗಿ ಧನವ್ಯಯ. ಗೃಹೋದ್ಯಮಗಳಿಗೆ  ಅನುಕೂಲದ ವಾತಾವರಣ.‌ ಆತ್ಮಬಲ ವೃದ್ಧಿಗಾಗಿ ಯೋಗ, ಧ್ಯಾನ, ಜಪಾದಿಗಳಿಗೆ ಸಮಯ ನೀಡಿಕೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ , ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೮.ವೃಶ್ಚಿಕ:
 ಉದ್ಯೋಗಸ್ಥಾನದ ಹಿತಶತ್ರುಗಳಿಂದ ದೂರವಿರಿ.  ವ್ಯಾಪಾರಿಗಳಿಗೆ  ನಿರೀಕ್ಷೆ  ಮೀರಿದ ಲಾಭ. ಹಿರಿಯರ ಆರೋಗ್ಯ ಸ್ಥಿರ. ಗೃಹಿಣಿಯರಿಗೆ ಸಣ್ಣ ಉದ್ಯಮ ಬೆಳೆಸಲು  ಆಸಕ್ತಿ. ಮಕ್ಕಳ ಸಾಧನೆಯಿಂದ ಹರ್ಷ. ಗಣೇಶ ಪಂಚರತ್ನ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೯. ಧನು:

 ಅನುಭವಿಗಳ ಮಾರ್ಗದರ್ಶನದಲ್ಲಿ ಮುನ್ನಡೆ. ದೇವತಾರಾಧನೆಯತ್ತ ವಿಶೇಷ ಒಲವು. ವ್ಯವಹಾರಸ್ಥರಿಂದ ಹೊಸ ಸಾಧ್ಯತೆಗಳ ಹುಡುಕಾಟ. ಕಾರ್ಯ ಸಾಧನೆಗೆ ಹರ್ಷಾಚರಣೆ. ಕೇಟರಿಂಗ್ ವ್ಯವಹಾರಸ್ಥರಿಗೆ ವಿಶೇಷ ಲಾಭ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.


೧೦.ಮಕರ: 
 ಉಪಕಾರ ಸ್ಮರಣೆಯ ಗುಣ ಬೆಳೆಯಲಿ. ದಿನಾರಂಭದಲ್ಲಿ ಇನ್ನಷ್ಟು ಕೆಲಸಗಳು.  ಹೊಸ ಜವಾಬ್ದಾರಿಗಳು ಬರುವ ಸಂಭವ. ಮನೆಯ ಎಲ್ಲ ಸದಸ್ಯರ ನಡುವೆ ಸೌಹಾರ್ದದ ಸಂಬಂಧ‌. ಹತ್ತಿರದ  ಶಿವಾಲಯಕ್ಕೆ ಭೇಟಿ. ಗಣೇಶ ಕವಚ, ದತ್ತಾತ್ರೇಯ ಸ್ರೋತ್ರ, ಹನುಮಾನ್ ಚಾಲೀಸಾ ಓದಿ. 

೧೧. ಕುಂಭ:
ಇನ್ನಷ್ಟು ಹೊಸ ಸಾಧನೆ ಮಾಡುವ ಹುರುಪು.  ಸಹೋದ್ಯೋಗಿಗಳ ಸಹಕಾರ, ಪ್ರೋತ್ಸಾಹ ಲಭ್ಯ. ಅನಿರೀಕ್ಷಿತ ಧನಾಗಮ ಯೋಗವಿದೆ. ಕ್ರೀಡಾಳುಗಳಿಗೆ ಹುಮ್ಮಸ್ಸಿನ ವಾತಾವರಣ. ವಿದ್ಯಾರ್ಥಿಗಳ ಪ್ರತಿಭಾ ವಿಕಸನಕ್ಕೆ ಕಾರ್ಯಯೋಜನೆ. ಗಣೇಶ ಕವಚ, ಶಿವಕವಚ, ಶನಿಮಹಾತ್ಮೆ ಓದಿ.


೧೨.ಮೀನ:

 ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಯಶಸ್ಸು ತೃಪ್ತಿಕರ. ಭೂ ವ್ಯವಹಾರ, ಕಟ್ಟಡ ನಿರ್ಮಾಣ  ವ್ಯವಹಾರಸ್ಥರಿಗೆ ಅಡಚಣೆ. ಕಾರ್ಮಿಕ ವರ್ಗದವರಿಗೆ ತಾತ್ಕಾಲಿಕ ತೊಂದರೆ. ಸಂಸಾರದಲ್ಲಿ ಸಹಕಾರ, ಸಂತೃಪ್ತಿಯ ವಾತಾವರಣ. ಹೊಸ ಉದ್ಯಮಗಳಲ್ಲಿ ಸ್ಥಿರವಾದ ಪ್ರಗತಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.