ಗುರುಪುರ ಅಡ್ಡೂರು ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ
ಅಡ್ಡೂರು ಸೇತುವೆ ಅಪಾಯದಲ್ಲಿ
ಮಂಗಳೂರು: ಮಂಗಳೂರು ತಾಲೂಕಿನ ಸುರತ್ಕಲ್- ಕಬಕ ರಾಜ್ಯ ಹೆದ್ದಾರಿ 101ರಲ್ಲಿ ಬರುವ ಅಡ್ಡೂರು ಸೇತುವೆ ದುಸ್ಥಿತಿಯಲ್ಲಿದ್ದು ವಾಹನ ಸಂಚಾರಕ್ಕೆ ಅಪಾಯಕಾರಿ ಯಾಗಿರುವುದರಿಂದ ಮುಂದಿನ ಆದೇಶದವರೆಗೆ ಈ ಸೇತುವೆಯಲ್ಲಿ ಘನ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಹಾಗೂ ಸಂಚಾರ ಮಾರ್ಗ ಬದಲಾವಣೆ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಆದೇಶಿಸಿದ್ದಾರೆ.
ಅಡ್ಡೂರು ಸೇತುವೆಯ ಮೂಲಕ ಸುರತ್ಕಲ್ - ಕಬಕ ರಾಜ್ಯ ಹೆದ್ದಾರಿ 101 ರ ರಸ್ತೆಯಲ್ಲಿ ಬಿಸಿ.ರೋಡ್-ಪೆÇಳಲಿ- ಬೆಂಗಳೂರಿಗೆ ಸಂಚರಿಸುವ ಘನ ವಾಹನಗಳು ಬದಲಿ ರಸ್ತೆಯನ್ನು ಬಳಸಿಕೊಂಡು ಸಂಚರಿಸಬಹುದಾಗಿದೆ.
ಮಂಗಳೂರು- ಗುರುಪುರ ಕೈಕಂಬ ಕಡೆಯಿಂದ ಪೊಳಲಿ ಕಡೆಗೆ ಸಂಚರಿಸುವ ವಾಹನಗಳು :- ಮಂಗಳೂರು- ಸೋಲಾಪುರ್ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಬೈತುರ್ಲಿ ಬಸ್ ಸ್ಟಾಪ್ ನಿಂದ ಬೈತುರ್ಲಿ - ನೀರು ಮಾರ್ಗ - ಕಲ್ಪನೆ - ಜಿಲ್ಲಾ ಮುಖ್ಯ ರಸ್ತೆಯ ಮೂಲಕ ಕಲ್ಪನೆ ಜಂಕ್ಷನ್‍ಗೆ ಬಂದು ಸುರತ್ಕಲ್ - ಕಬಕ ರಾಜ್ಯ ಹೆದ್ದಾರಿ 101 ನ್ನು ಸಂಪರ್ಕಿಸಿ, ಪೆÇಳಲಿ ಹಾಗೂ ಬಿಸಿ.ರೋಡ್ ನ ಎನ್‍ಎಚ್ ಗೆ ಸಂಚರಿಸಬೇಕು.
ಬಿಸಿ.ರೋಡ್-ಪೊಳಲಿ ಕಡೆಯಿಂದ ಮಂಗಳೂರು-ಗುರುಪುರ ಕೈಕಂಬ ಕಡೆಗೆ ಸಂಚರಿಸುವ ವಾಹನಗಳು ಸುರತ್ಕಲ್ – ಕಬಕ ರಾಜ್ಯ ಹೆದ್ದಾರಿ 101 ರ ಕಲ್ಪನೆ-ನೀರುಮಾರ್ಗ- ಬೈತುರ್ಲಿ ಜಿಲ್ಲಾ ಮುಖ್ಯ ರಸ್ತೆಯ ಕಲ್ಪನೆ ರಸ್ತೆಯ ಮೂಲಕ ಬೈತುರ್ಲಿ ಬಸ್‍ಸ್ಟಾಪ್ ಎಂಬಲ್ಲಿ ಮಂಗಳೂರು- ಸೋಲಾಪುರ್- ರಾಷ್ಟ್ರೀಯ ಹೆದ್ದಾರಿ 169 ನ್ನು ಸಂಪರ್ಕಿಸಿ ಮಂಗಳೂರು ಗುರುಪುರ ಕೈಕಂಬ ಕಡೆಗೆ ಸಂಚರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.