ಇನ್ನೊಂದು ವಾರ ಬೆಂಗಳೂರಿನಲ್ಲಿ ಸಿಗೋದಿಲ್ಲ ತಿಮ್ಮಪ್ಪನ ಲಡ್ಡು ಪ್ರಸಾದ!

ಕಲಿಯುಗ ವೈಕುಂಠ ದೈವ ಶ್ರೀ ವೆಂಕಟೇಶ್ವರ ಸ್ವಾಮಿ ಆಲಯದಲ್ಲಿ ಸಾಲಕಟ್ಲ ಬ್ರಹ್ಮೋತ್ಸವಗಳು ನಡೆಯುತ್ತಿವೆ.

Oct 7, 2024 - 08:56
Oct 7, 2024 - 11:50
ಇನ್ನೊಂದು ವಾರ ಬೆಂಗಳೂರಿನಲ್ಲಿ ಸಿಗೋದಿಲ್ಲ ತಿಮ್ಮಪ್ಪನ  ಲಡ್ಡು ಪ್ರಸಾದ!

ಬೆಂಗಳೂರು: ಕಲಿಯುಗ ವೈಕುಂಠ ದೈವ ಶ್ರೀ ವೆಂಕಟೇಶ್ವರ ಸ್ವಾಮಿ ಆಲಯದಲ್ಲಿ ಸಾಲಕಟ್ಲ ಬ್ರಹ್ಮೋತ್ಸವಗಳು ನಡೆಯುತ್ತಿವೆ. ಇದರ ಅಂಗವಾಗಿ ಇಂದು ನಾಲ್ಕನೇ ದಿನ ಸಂಜೆ ಉಭಯದೇವರ ಸಮೇತ ತಿರುಮಲ ಶ್ರೀಮಲಯಪ್ಪ ಸ್ವಾಮಿ, ಸರ್ವಭೂಪಾಲ ವಾಹನದಲ್ಲಿ ಬಕಾಸುರ ವಧ ಅಲಂಕಾರದಲ್ಲಿ ತಿರುಮದ ಕರ್ತವ್ಯಗಳಲ್ಲಿ ಮೆರವಣಿಗೆ ನಡೆಯಲಿದೆ.ಇದರ ನಡುವೆಯೇ ಬೆಂಗಳೂರಿನ ತಿಮ್ಮಪ್ಪನ ಭಕ್ತರಿಗೆ ಬ್ಯಾಡ್​ ನ್ಯೂಸ್ ಸಿಕ್ಕಿದ್ದು, ಬೆಂಗಳೂರಿನಲ್ಲಿ ತಿರುಪತಿ ಲಡ್ಡು ಇನ್ನೊಂದು ವಾರ ಸಿಗಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಟಿಟಿಡಿ ದೇವಸ್ಥಾನಕ್ಕೆ ಲಡ್ಡು ರವಾನೆ ಕಳೆದ ಶುಕ್ರವಾರದಿಂದಲೇ ಸ್ಥಗಿತವಾಗಿದ್ದು, ಅಕ್ಟೋಬರ್ 13ರವರೆಗೆ ತಿರುಪತಿ ಲಡ್ಡು ಸಿಗಲ್ಲ ಎಂದು ನಗರದ ಟಿಟಿಡಿ ದೇವಸ್ಥಾನ ಸೂಪರಿಂಟೆಂಡೆಂಟ್ ಜಯಂತಿ ಮಾಹಿತಿ ನೀಡಿದ್ದಾರೆ.ತಿರುಪತಿ ಬ್ರಹ್ಮತ್ಸೋಹ ಹಿನ್ನೆಲೆಯಲ್ಲಿ ಬೆಂಗಳೂರು ವಯ್ಯಾಲಿ ಕಾವಲ್ ಟಿಟಿಡಿ ದೇವಾಲಯಕ್ಕೆ ಲಡ್ಡು ಪ್ರಸಾದ ಲಭ್ಯವಿಲ್ಲ. ಪ್ರತಿ ವರುಷ ಬ್ರಹ್ಮೋತ್ಸವದ ವೇಳೆ ಲಡ್ಡು ಬೇರೆಡೆ ಕೊಡಲ್ಲ, ಈ ವರುಷವೂ ಬ್ರಹ್ಮೋತ್ಸವ ಕಾರಣಕ್ಕೆ ಲಡ್ಡು ಪ್ರಸಾದ ರವಾನೆ ಸ್ಥಗಿತ ಎನ್ನಲಾಗಿದೆ.ಪ್ರತಿ ಸೋಮವಾರ 4 ಸಾವಿರ ತಿರುಪತಿ ಲಡ್ಡು, ಪ್ರತಿ ಶುಕ್ರವಾರ 10 ಸಾವಿರ ಲಡ್ಡು ತಿರುಪತಿಯಿಂದ ಬೆಂಗಳೂರು ಟಿಟಿಡಿ ದೇವಾಲಯಕ್ಕೆ ಕಳುಜಿಸಲಾಗುತ್ತಿತ್ತು ಎಂದು ಟಿಟಿಡಿ ದೇವಸ್ಥಾನ ಸೂಪರಿಂಟೆಂಡೆಂಟ್ ಜಯಂತಿ ಮಾಹಿತಿ ನೀಡಿದ್ದಾರೆ.ಪ್ರತಿ ಸೋಮವಾರ 4 ಸಾವಿರ ತಿರುಪತಿ ಲಡ್ಡು, ಪ್ರತಿ ಶುಕ್ರವಾರ 10 ಸಾವಿರ ಲಡ್ಡು ತಿರುಪತಿಯಿಂದ ಬೆಂಗಳೂರು ಟಿಟಿಡಿ ದೇವಾಲಯಕ್ಕೆ ಕಳುಜಿಸಲಾಗುತ್ತಿತ್ತು ಎಂದು ಟಿಟಿಡಿ ದೇವಸ್ಥಾನ ಸೂಪರಿಂಟೆಂಡೆಂಟ್ ಜಯಂತಿ ಮಾಹಿತಿ ನೀಡಿದ್ದಾರೆ.