ಪ್ರವಾಹದಂತೆ ಉಕ್ಕುತ್ತಿದೆ ಇಲಾನ್ ಮಸ್ಕ್ ಶ್ರೀಮಂತಿಕೆ

ವಿಶ್ವದ ನಂಬರ್ ಒನ್ ಶ್ರೀಮಂತ ಇಲಾನ್ ಮಸ್ಕ್ ಅವರ ಆಸ್ತಿ ಮೌಲ್ಯ ಇನ್ನೂ ಹೆಚ್ಚಾಗಿದೆ. ನಾಲ್ಕು ತಿಂಗಳಲ್ಲಿ ಅವರ ಆಸ್ತಿಮೌಲ್ಯ 400 ಬಿಲಿಯನ್ ಡಾಲರ್​ನಷ್ಟು ಏರಿದೆ. ಅವರ ಒಟ್ಟು ಆಸ್ತಿ ಮೌಲ್ಯ 841 ಬಿಲಿಯನ್ ಡಾಲರ್ ಆಗಿದೆ. 800 ಬಿಲಿಯನ್ ಡಾಲರ್ ಆಸ್ತಿಮೌಲ್ಯದ ಮೈಲಿಗಲ್ಲು ಮುಟ್ಟಿದ ಜಗತ್ತಿನ ಏಕೈಕ ವ್ಯಕ್ತಿ ಅವರಾಗಿದ್ದಾರೆ.

Feb 5, 2026 - 17:44
ಪ್ರವಾಹದಂತೆ ಉಕ್ಕುತ್ತಿದೆ ಇಲಾನ್ ಮಸ್ಕ್ ಶ್ರೀಮಂತಿಕೆ
Elon Musk

ಟೆಸ್ಲಾ, ಸ್ಪೇಸ್​ಎಕ್ಸ್, ನ್ಯೂರಾಲಿಂಕ್ ಇತ್ಯಾದಿ ಸಂಸ್ಥೆಗಳ ಒಡೆಯರಾದ ಇಲಾನ್ ಮಸ್ಕ್ (Elon Musk) ಅವರ ವಿಶ್ವದ ನಂಬರ್ ಒನ್ ಶ್ರೀಮಂತನೆಂಬ ಬಿರುದು ಅಬಾಧಿತವಾಗಿ ಮುಂದುವರಿಯುವುದು ಖಚಿತವಾಗಿದೆ. ಅವರ ಆಸ್ತಿ ಮೌಲ್ಯ 800 ಬಿಲಿಯನ್ ಡಾಲರ್ ದಾಟಿದೆ. 800 ಬಿಲಿಯನ್ ಎಂದರೆ 72 ಲಕ್ಷ ಕೋಟಿ ರೂ. ಈ 800 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ ಜಗತ್ತಿನ ಮೊದಲ ವ್ಯಕ್ತಿ ಇಲಾನ್ ಮಸ್ಕ್.

ಅವರದ್ದೇ ಮಾಲಕತ್ವದ ಸಂಸ್ಥೆಗಳಾದ ಸ್ಪೇಸ್ ಎಕ್ಸ್ ಮತ್ತು ಎಕ್ಸ್​ಎಐ ವಿಲೀನ ಆದ ನಂತರ ಮಸ್ಕ್ ಅವರ ಶ್ರೀಮಂತಿಕೆ ತಾರಕಕ್ಕೇರಿದೆ. ಎಕ್ಸ್​ಎಐ ಅನ್ನು ಖರೀದಿಸಿದ ಬಳಿಕ ಸ್ಪೇಸ್​ಎಕ್ಸ್​ನ ಮೌಲ್ಯ ಬಹಳ ಹೆಚ್ಚಾಗಿದೆ. ಈ ಡೀಲ್​ಗೆ ಮುನ್ನ ಸ್ಪೇಸ್​ಎಕ್ಸ್ ಮೌಲ್ಯ 336 ಬಿಲಿಯನ್ ಡಾಲರ್ ಇತ್ತು. ಎಕ್ಸ್​ಎಐ ಮೌಲ್ಯ 122 ಬಿಲಿಯನ್ ಡಾಲರ್ ಇತ್ತು. ಒಪ್ಪಂದದ ಬಳಿಕ ಸ್ಪೇಸ್​ಎಕ್ಸ್​ನ ಮೌಲ್ಯ 542 ಬಿಲಿಯನ್ ಡಾಲರ್​ಗೆ ಏರಿದೆ. ಇದರಲ್ಲಿ ಇಲಾನ್ ಮಸ್ಕ್ ಅವರ ಷೇರುಪಾಲು ಶೇ. 43ರಷ್ಟಿದ್ದು, ಅದರ ಮೌಲ್ಯ 542 ಬಿಲಿಯನ್ ಡಾಲರ್ ಇದೆ. ಇದರ ಜೊತೆಗೆ ಇಲಾನ್ ಮಸ್ಕ್ ಅವರು ಟೆಸ್ಲಾದಲ್ಲಿ 178 ಬಿಲಿಯನ್ ಡಾಲರ್ ಮೌಲ್ಯದ ಷೇರು ಮಾಲಕತ್ವ ಹೊಂದಿದ್ದಾರೆ.

ಇಲಾನ್ ಮಸ್ಕ್ ಅವರ ಬಹುತೇಕ ಆಸ್ತಿಗಳೆಲ್ಲವೂ ಷೇರುಗಳ ಸ್ವರೂಪದಲ್ಲೇ ಇವೆ. ಫೋರ್ಬ್ಸ್ ಬಿಲಿಯನೇರ್​ಗಳ ಪಟ್ಟಿಯ ಪ್ರಕಾರ ಅವರ ಆಸ್ತಿ ಮೌಲ್ಯ 854 ಬಿಲಿಯನ್ ಡಾಲರ್​ಗೆ ಏರಿತು. ಈ ವರದಿ ಬರೆಯುವ ಸಂದರ್ಭದಲ್ಲಿ ಅವರ ಆಸ್ತಿಮೌಲ್ಯ 841 ಬಿಲಿಯನ್ ಡಾಲರ್ ಇತ್ತು. ಟೆಸ್ಲಾದಲ್ಲಿ 178 ಬಿಲಿಯನ್ ಡಾಲರ್ ಮೌಲ್ಯದ ಷೇರುದಾರಿಕೆ ಇರುವುದರ ಜೊತೆಗೆ 124 ಬಿಲಿಯನ್ ಡಾಲರ್ ಮೌಲ್ಯದ ಸ್ಟಾಕ್ ಆಪ್ಷನ್ಸ್ ಕೂಡ ಮಸ್ಕ್ ಅವರಿಗಿದೆ. ಟೆಸ್ಲಾದ ಬ್ಯುಸಿನೆಸ್ ಗುರಿಯನ್ನು ಈಡೇರಿಸಿದರೆ ಈ ಸ್ಟಾಕ್ ಆಪ್ಷನ್​ಗಳು ಷೇರುಗಳಾಗಿ ಪರಿವರ್ತನೆ ಆಗುತ್ತವೆ. ಆಗ ಮಸ್ಕ್ ಅವರ ಶ್ರೀಮಂತಿಕೆಯ ಮೌಲ್ಯ 1 ಟ್ರಿಲಿಯನ್ ಡಾಲರ್ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತವೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.