ದಿನ ಭವಿಷ್ಯ

19-07--2025

Jul 19, 2025 - 03:00
ದಿನ ಭವಿಷ್ಯ

                 ಜ್ಯೋತಿರ್ಮಯ.
ಅದೃಷ್ಟ ಸಂಖ್ಯೆ 1


         

೧. ಮೇಷ:

 ಕ್ಷಣಕ್ಷಣಕ್ಕೆ ಬದಲಾದಂತೆ ಕಾಣುವ  ಪರಿಸ್ಥಿತಿ. ಉದ್ಯಮಿಗಳಿಗೆ  ಸಮಸ್ಯೆಗಳಿಂದ ಮುಕ್ತಿ.  ವಸ್ತ್ರ, ಸಿದ್ಧ ಉಡುಪು, ಶೋಕಿಸಾಮಗ್ರಿ ವ್ಯಾಪಾರಿಗಳಿಗೆ ಅದೃಷ್ಟ. ಮಹಿಳಾ ಉದ್ಯಮಿಗಳಿಗೆ ಸಾಮಾನ್ಯ ಯಶಸ್ಸು. ಗೃಹೋತ್ಪನ್ನಗಳಿಗೆ ಅಧಿಕ ಬೇಡಿಕೆ. ಗಣೇಶ ಕವಚ, ದೇವೀಸ್ತೋತ್ರ, ಶನಿಮಹಾತ್ಮೆ ಓದಿ.


೨.ವೃಷಭ:
 ಯಾವುದೂ ಎಣಿಸಿದಷ್ಟು ಸುಲಭವಾಗದು. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ವ್ಯಾಪಾರಿಗಳಿಗೆ ಹೇರಳ ಲಾಭ.  ತಾಂತ್ರಿಕ ಪರಿಣತರಿಗೆ  ಉದ್ಯೋಗಾವಕಾಶ.  ಯಂತ್ರೋಪಕರಣ ವ್ಯಾಪಾರಿಗಳಿಗೆ ಅನುಕೂಲ. ವಾಹನ ಚಾಲನೆಯಲ್ಲಿ ಎಚ್ಚರ.ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

೩.ಮಿಥುನ:
 ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಕೆಲವು ಅಡ್ಡಿಗಳು. ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ. ಅಪಾತ್ರರಿಗೆ ಸಹಾಯ ಮಾಡಬೇಡಿ.  ಕೆಲವು ವರ್ಗದ ವ್ಯಾಪಾರಿಗಳಿಗೆ ಹೇರಳ ಲಾಭ. ಬಂಧುಗಳ ಭೇಟಿಯ ಸಾಧ್ಯತೆ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಆದಿತ್ಯ ಹೃದಯ ಓದಿ.

೪. ಕರ್ಕಾಟಕ:

ಉದ್ಯೋಗಸ್ಥರಿಗೆ ಸೌಲಭ್ಯಗಳ ಹೆಚ್ಚಳ. ಉದ್ಯಮ ನೌಕರರಿಗೆ ಸಿಹಿಸುದ್ದಿ. ಪುಕ್ಕಟೆ ಸೌಲಭ್ಯಗಳ ಆಮಿಷಕ್ಕೆ ಬಲಿಯಾಗದಿರಿ. ಮಹಿಳೆಯರ ಸ್ವೋದ್ಯೋಗ  ಉತ್ಪನ್ನಗಳಿಗೆ ಕೀರ್ತಿ. ಕುತಂತ್ರಿಗಳ ಪಿತೂರಿಗೆ ಸೋಲು. ಗಣೇಶ ದ್ವಾದಶನಾಮ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ. 


೫.ಸಿಂಹ:

  ಉದ್ಯೋಗದಲ್ಲಿ ಪರಿಪೂರ್ಣತೆ ಸಾಧಿಸಲು ಪ್ರಯತ್ನ. ಉದ್ಯಮದ ಪರಿಸರಕ್ಕೆ ಹೊಸ ರೂಪ. ಕುಟುಂಬದ ಮನೆಯಲ್ಲಿ ದೇವತಾರಾಧನೆ. ಹಿರಿಯರು, ಗೃಹಿಣಿಯರು, ಮಕ್ಕಳು ಎಲ್ಲರಿಗೂ ಉತ್ತಮ ಆರೋಗ್ಯ. ರಾತ್ರಿ ಪ್ರಯಾಣ ಮಾಡದಿರಿ. ಗಣೇಶ ಕವಚ, ಸುಬ್ರಹ್ಮಣ್ಯ ಕರಾನಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.  


೬ ಕನ್ಯಾ:

  ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ಹಿರಿಯರ ಆಸ್ತಿಯಲ್ಲಿ ಕೃಷಿಯ ಕಡೆಗೆ ಗಮನ. ಸ್ವಂತದ ಸಣ್ಣ ಉದ್ಯಮ  ಪ್ರಗತಿಯಲ್ಲಿ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ  ಭರವಸೆ. ಇಷ್ಟ ದೇವತೋಪಾಸನೆಯಿಂದ ಅನುಕೂಲ. ಗಣೇಶ ಪಂಚರತ್ನ, ಶಿವಮಹಿಮ್ನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೭.ತುಲಾ:

   ಮನಸ್ಸಮಾಧಾನವೊಂದೇ ಪರೋಪಕಾರದ ಫಲ. ಪೈಪೋಟಿ ಎದುರಿಸಲು ಉದ್ಯಮಿಗಳ ಸಿದ್ಧತೆ. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ  ಮಾರ್ಗದರ್ಶನ ಮಾಡುವ ಅವಕಾಶ. ಆಮಿಷದ ಯೋಜನೆಗಳಿಂದ ದೂರವಿರಿ. ಗಣೇಶ ಅಷ್ಟಕ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.

೮. ವೃಶ್ಚಿಕ:

 ಪರಿಸ್ಥಿತಿಯ ಸದುಪಯೋಗ ಪಡೆಯುವ ಪ್ರಯತ್ನ. ಉದ್ಯೋಗಸ್ಥರ ಸ್ಥಾನ ಗೌರವ ಅಬಾಧಿತ. ಸರಕಾರಿ ಅಧಿಕಾರಿಗಳಿಗೆ ಕೆಲಸದ ಹೊರೆಯ ಚಿಂತೆ. ರಾಜಕಾರಣಿಗಳಿಗೆ ಕೊಂಚ ಇಕ್ಕಟ್ಟಿನ ಪರಿಸ್ಥಿತಿ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ.  ಗಣೇಶ ಕವಚ, ಕಾರ್ತಿಕೇಯ ಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.

೯. ಧನು:

  ಉದ್ಯಮದ ವೈವಿಧ್ಯೀಕರಣ ಕ್ರಮ ಮುನ್ನಡೆ. ಉದ್ಯೋಗಸ್ಥರಿಗೆ ಸಾಮಾನ್ಯ ತೃಪ್ತಿ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ಸಿಗದಂತೆ ಅಡ್ಡಗಾಲು. ಮಕ್ಕಳ ಅಧ್ಯಯನಾಸಕ್ತಿ ಬೆಳೆಸಲು ಪ್ರಯತ್ನ. ರಾತ್ರಿ ಪ್ರಯಾಣ ಮಾಡದಿರುವುದು ಒಳ್ಳೆಯದು. ಗಣೇಶ ದ್ವಾದಶನಾಮ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೧೦. ಮಕರ:
  ಕೊಂಚ ಸಡಿಲಾದ ಉದ್ಯೋಗದ ಒತ್ತಡ. ಉದ್ಯಮಿಗಳಿಗೆ ಹಠಾತ್ ನಷ್ಟವಾಗುವ ಸಾಧ್ಯತೆ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ದೀರ್ಘಾವಧಿ ಹೂಡಿಕೆಯಲ್ಲಿ ಲಾಭ. ಅಧ್ಯಾಪಕರ ಜವಾಬ್ದಾರಿಗಳ ಹೆಚ್ಚಳ.ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ತ್ರಿಶತಿ ಸ್ತೋತ್ರ,ಹನುಮಾನ್ ಚಾಲೀಸಾ ಓದಿ.

೧೧.ಕುಂಭ:

 ಉದ್ಯೋಗಸ್ಥರಿಗೆ ಯಥಾರೀತಿಯ ಅನುಭವ. ಕೆಲವರಿಗೆ ದಿಢೀರ್ ವರ್ಗಾವಣೆಯ ಸಾಧ್ಯತೆ.ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಗೆ ಸಕಾಲ. ಸಾಹಿತ್ಯ ಅಭ್ಯಾಸಿಗಳಿಗೆ ಅನುಕೂಲ ವ್ಯವಹಾರದ ನಿಮಿತ್ತ ಸಣ್ಣ ಪ್ರಯಾಣ ಸಂಭವ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.


೧೨. ಮೀನ:

ಕಾರ್ಯ ಯಶಸ್ಸಿಗೆ ಕೆಲವರ ತಡೆ.  ಸೇವಾರೂಪದ ಕಾರ್ಯಗಳಿಗೆ ಪ್ರಾಧಾನ್ಯ ಇರಲಿ. ಸಣ್ಣ ಪ್ರಮಾಣದ ಕೃಷಿಯಿಂದ ಅನುಕೂಲ. ಗುರುದರ್ಶನಕ್ಕಾಗಿ ಅವಕಾಶ ನಿರೀಕ್ಷೆ. ಹಳೆಯ ಒಡನಾಡಿಯಿಂದ ಹೊಸ ವ್ಯವಹಾರದ ಪ್ರಸ್ತಾವ. ಗಣೇಶ ಕವಚ ದತ್ತಾತ್ರೇಯ ಸ್ರೋತ್ರ, ಶನಿಮಹಾತ್ಮೆ ಓದಿ.