ದಿನ ಭವಿಷ್ಯ
22-07-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 4
೧. ಮೇಷ:
ಸದಾ ಕಾರ್ಯನಿರತರಾದವರಿಗೆ ಸೋಲಿಲ್ಲ. ಉದ್ಯೋಗ ಸ್ಥಾನದಲ್ಲಿ ನೆಮ್ಮದಿ. ಉದ್ಯಮದ ಉತ್ಪನ್ನಗಳಿಗೆ ಅಧಿಕ ಗ್ರಾಹಕರು. ಸಕಾಲದಲ್ಲಿ ಅಪೇಕ್ಷಿತ ನೆರವು ಲಭ್ಯ. ಗೃಹಿಣಿಯರ ಸ್ವಾವಲಂಬನೆ ಯೋಜನೆ ಮುನ್ನಡೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.
೨.ವೃಷಭ:
ಆತ್ಮವಿಶ್ವಾಸ ಕುಗ್ಗಲು ಬಿಡದಿರಿ. ಒಂದೇ ಲಕ್ಷ್ಯವನ್ನಿಟ್ಟುಕೊಂಡು ಮುಂದೆ ಸಾಗಿದರೆ ಜಯ. ಹೊಸ ಗ್ರಾಹಕರನ್ನು ಸೆಳೆಯಲು ಪ್ರಯತ್ನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ. ಲೇವಾದೇವಿ ವ್ಯವಹಾರ ಬೇಡ. ಮನೆಯಲ್ಲಿ ಎಲ್ಲರಿಗೂ ಆರೋಗ್ಯ ವೃದ್ಧಿ, ನೆಮ್ಮದಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ ಓದಿ.
೩ಮಿಥುನ:
ಧೈರ್ಯ, ವಿಶ್ವಾಸಗಳೇ ಯಶಸ್ಸಿನ ಸಾಧನಗಳು. ಉದ್ಯೋಗ ಸ್ಥಾನದಲ್ಲಿ ಸಕ್ರಿಯರಾಗಿರಲು ಹೇರಳ ಅವಕಾಶಗಳು. ಗೃಹೋದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಹಣ್ಣು, ತರಕಾರಿ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣೇಶ ಅಷ್ಟಕ, ಶಿವಪಂಚಾಕ್ಷರ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
೪. ಕರ್ಕಾಟಕ:
ದಿನಾರಂಭದಲ್ಲೇ ಚುರುಕಿನ ಓಡಾಟ. ಸಹೋದ್ಯೋಗಿಗಳ ಹರ್ಷಾಚರಣೆಯಲ್ಲಿ ಭಾಗಿ. ಸ್ವಂತ ಉದ್ಯಮ ವಿಸ್ತರಣೆ ಆರಂಭ ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿಗಳು, ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಸಂಭ್ರಮ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವನಾಮಾವಲ್ಯಷ್ಟಕ, ನವಗ್ರಹ ಸ್ತೋತ್ರ ಓದಿ.
೫.ಸಿಂಹ:
ಬಹುಪಾಲು ಶುಭಫಲಗಳನ್ನೇ ಅನುಭವಿಸುವಿರಿ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಸರಕಾರಿ ಅಧಿಕಾರಿಗಳಿಗೆ ಕರ್ತವ್ಯದ ಹೊರೆ. ಭೂ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ. ನ್ಯಾಯಾಲಯ ವ್ಯವಹಾರದಲ್ಲಿ ಜಯ. ವ್ಯವಹಾರದ ನಿಮಿತ್ತ ಸಣ್ಣ ಪ್ರಯಾಣ ಸಂಭವ. ಗಣೇಶ ಕವಚ, ನರಸಿಂಹ ಸ್ತೋತ್ರ, ನವಗ್ರಹ ಸ್ತೋತ್ರ ಓದಿ
೬.ಕನ್ಯಾ:
ಮೇಲಧಿಕಾರಿಗಳ ಸಹಾನುಭೂತಿ. ಸಾರ್ವಜನಿಕ ಸಂಪರ್ಕದಲ್ಲಿ ಅಪಾರ ಯಶಸ್ಸು. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆಗಿಂತ ಅಧಿಕ ಲಾಭ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಕೇಟರಿಂಗ್ ವ್ಯವಹಾರಸ್ಥರಿಗೆ ಗುಣಮಟ್ಟ ಕಾಯ್ದುಕೊಳ್ಳುವ ಸವಾಲು. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೭. ತುಲಾ:
ಪೂರ್ಣ ದೈವಾನುಗ್ರಹದ ನಿಮಗಿದೆ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆಗೆ ತಕ್ಕ ಗೌರವ. ಸರಕಾರಿ ನೌಕರರಿಗೆ ಅಧಿಕ ಕೆಲಸದ ಹೊರೆ. ಸಣ್ಣ ವ್ಯಾಪಾರಿಗಳಿಗೆ ನಿರೀಕ್ಷೆಗೆ ತಕ್ಕ ಲಾಭ. ಕೃಷ್ಯುತ್ಪನ್ನಗಳ ಖರೀದಿ- ಮಾರಾಟ ಲಾಭದಾಯಕ. ಗಣೇಶ ಕವಚ, ಶಿವ ಕವಚ, ಅನ್ನಪೂರ್ಣಾ ಸ್ತೋತ್ರ ಓದಿ.
೮.ವೃಶ್ಚಿಕ:
ಕರ್ಮದ ಫಲವನ್ನು ಸಂತೋಷದಿಂದ ಸ್ವೀಕರಿಸಿ. ಪ್ರಾಪಂಚಿಕ ಸುಖದಲ್ಲಿ ಕೊರತೆ ಇಲ್ಲ. ಉದ್ಯೋಗದಲ್ಲಿ ಆನಂದ. ಉದ್ಯಮದ ನೌಕರರ ಪೂರ್ಣ ಸಹಕಾರ. ನ್ಯಾಯಾಲಯದಲ್ಲಿ ಜಯ. ಮನೆಯಲ್ಲಿ ಸಮಾಧಾನದ ವಾತಾವರಣ.
ಗಣೇಶ ಅಷ್ಟಕ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೯.ಧನು:
ಅಲ್ಪಾವಧಿಯಲ್ಲಿ ದೊಡ್ಡ ಲಾಭ ಅಸಾಧ್ಯ. ಸಣ್ಣ ಉಳಿತಾಯ ಯೋಜನೆಯಲ್ಲಿ ಲಾಭ. ಉದ್ಯಮ ಕ್ಷೇತ್ರದಲ್ಲಿ ಪೈಪೋಟಿ. ಸರಕಾರಿ ಕಚೇರಿಗಳಲ್ಲಿ ಸಕಾರಾತ್ಮಕ ಸ್ಪಂದನ. ಕೃಷ್ಯುತ್ಪಾದನೆ ಮಾರಾಟದಲ್ಲಿ ಲಾಭ. ಸಂಸಾರದಲ್ಲಿ ಸಾಮರಸ್ಯ.
ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೧೦.ಮಕರ:
ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶ. ಹೊಸ ವಿಭಾಗದಲ್ಲಿ ಅನುಭವ ವೃದ್ಧಿ. ಹಿರಿಯರ ಆವಶ್ಯಕತೆಗಳನ್ನು ಗಮನಿಸಿ. ದೇವತಾರ್ಚನೆಯಲ್ಲಿ ಆಸಕ್ತಿ. ಸಂಗೀತ ಶ್ರವಣದಿಂದ ಮನಸ್ಸಿಗೆ ನೆಮ್ಮದಿ. ಮಹಿಳೆಯರ ಸ್ವೋದ್ಯೋಗ ಯೋಜನೆ ಮುನ್ನಡೆ.
ಗಣೇಶ ಅಷ್ಟಕ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಸ್ತೋತ್ರ ಓದಿ.
೧೧. ಕುಂಭ:
ಸಂತೃಪ್ತ ಮನೋಭಾವದಲ್ಲಿ ದಿನಾರಂಭ. ಉದ್ಯಮದಲ್ಲಿ ಪ್ರಚಂಡ ಮುನ್ನಡೆ. ಉದ್ಯೋಗ ಕ್ಷೇತ್ರದಲ್ಲಿ ಗುರುಸ್ಥಾನ ಭದ್ರ. ಮುದ್ರಣ ಸಾಮಗ್ರಿ, ಸ್ಟೇಶನರಿ, ವಸ್ತ್ರ, ಆಭರಣ, ಯಂತ್ರೋಪಕರಣಗಳು, ವಿದ್ಯುತ್ ಉಪಕರಣಗಳು, ಇಲೆಕ್ಟ್ರಾನಿಕ್ಸ್ ಸಾಧನಗಳು ಇತ್ಯಾದಿಗಳಿಗೆ ಅಧಿಕ ಬೇಡಿಕೆ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ ಓದಿ.
೧೨. ಮೀನ:
ವ್ಯವಹಾರಗಳಲ್ಲಿ ಸ್ಥಿರವಾದ ಪ್ರಗತಿ. ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಆಪ್ತರಿಂದ ಸಕಾಲದಲ್ಲಿ ಸ್ಪಂದನ. ಸರಕಾರಿ ಅಧಿಕಾರಿಗಳು ಮತ್ತು ನೌಕರರಿಂದ ಸಹಕಾರ. ಸೇವಾ ಮಾದರಿಯ ಉದ್ಯೋಗಿಗಳಿಗೆ ಅಧಿಕ ಯಶಸ್ಸು. ಮನೆಯಲ್ಲಿ ಸಂಪೂರ್ಣ ನೆಮ್ಮದಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.