ದಿನ ಭವಿಷ್ಯ
25-07-2025

ಅದೃಷ್ಟ ಸಂಖ್ಯೆ 7
ಜ್ಯೋತಿರ್ಮಯ
೧. ಮೇಷ:
ಸರಣಿ ಯಶಸ್ಸುಗಳ ದಿನ. ಉದ್ಯೋಗದಲ್ಲಿ ಅಯಾಚಿತವಾಗಿ ಆಯಕಟ್ಟಿನ ಸ್ಥಾನ ಲಭ್ಯ. ಉದ್ಯಮದ ಮುನ್ನಡೆಗೆದುರಾದ ವಿಘ್ನಗಳು ದೂರ. ಅಕಸ್ಮಾತ್ ಧನಾಗಮ ಯೋಗ. ಉತ್ತರದ ಕಡೆಯಿಂದ ಬಂಧುಗಳ ಆಗಮನ.ಸೋದರನ ವಿವಾಹ ಪ್ರಯತ್ನ ಸಫಲ. ಆರೋಗ್ಯ ಉತ್ತಮ. ಗಣೇಶ ಕವಚ, ಆದಿತ್ಯ ಹೃದಯ, ಶನಿಮಹಾತ್ಮೆ ಓದಿ.
೨.ವೃಷಭ:
ಯೋಜನಾಬದ್ಧ ನಡೆಯಿಂದ ಕೈಗೊಂಡ ಕಾರ್ಯದಲ್ಲಿ ಯಶಸ್ಸು ಖಚಿತ. ಸರಕಾರಿ ನೌಕರರಿಗೆ ವರ್ಗಾವಣೆ. ಪ್ರಕೃತಿಯಲ್ಲಿ ಏರುಪೇರಾಗಿ ಕೃಷಿಗೆ ತೊಂದರೆಯಾಗುವ ಭೀತಿ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹೂಡಿಕೆಗೆ ಸಿದ್ಧತೆ. ಗೃಹೋದ್ಯಮ ಉತ್ಪನ್ನಗಳಿಗೆ ಆದಾಯ ವೃದ್ಧಿ. ಹಿರಿಯರ ಆರೋಗ್ಯ ಉತ್ತಮ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
೩. ಮಿಥುನ:
ಸ್ವಪ್ರಯತ್ನದಿಂದ ಸಿದ್ಧಿ ಮಾಡಿಕೊಂಡ ವಿದ್ಯೆಯಿಂದ ಗೌರವದ ಸ್ಥಾನ. ಉದ್ಯಮಿಗಳಿಗೆ ಸಂತೋಷದ ಸಮಾಚಾರ. ಸರಕಾರಿ ಅಧಿಕಾರಿಗಳಿಗೆ ಬಯಸಿದ ಸ್ಥಳಕ್ಕೆ ವರ್ಗಾವಣೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ ಪ್ರಾಪ್ತಿ. ಸರಕಾರದ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಲು ಮನೆಯವರ ನಿರ್ಧಾರ. ಗಣಪತಿ ಅಥರ್ವಶೀರ್ಷ ದೇವೀಸ್ತೋತ್ರ, ನವಗ್ರಹ ಸ್ತೋತ್ರ ಓದಿ
೪. ಕರ್ಕಾಟಕ:
ಕುಟುಂಬದ ಹಿತ ಪಾಲನೆಯೊಂದಿಗೆ ಬಂಧುವರ್ಗದ ಕ್ಷೇಮಾಭಿವೃದ್ಧಿಗೆ ಸಹಾಯ. ಉದ್ಯೋಗದಲ್ಲಿ ವೇತನ ಏರಿಕೆ. ಉದ್ಯಮದ ನೌಕರ ವರ್ಗಕ್ಕೆ ಲಾಭಾಂಶ ಹಂಚಿಕೆಯಿಂದ ಹರ್ಷ. ಹೊಸ ನೌಕರರ ಸೇರ್ಪಡೆ. ಮಗನಿಂದ ದ್ವಿಚಕ್ರ ವಾಹನ ಖರೀದಿ. ಮನೆಯಲ್ಲಿ ದೇವತಾ ಕಾರ್ಯದ ಸಂಭ್ರಮ. ಆರೋಗ್ಯ ಉತ್ತಮ.ಗಣೇಶ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ, ಆದಿತ್ಯ ಹೃದಯ ಓದಿ.
೫. ಸಿಂಹ:
ನಿಂತುಹೋದ ಕಾರ್ಯಗಳ ಪುನರಾರಂಭದ ಹೊಣೆಗಾರಿಕೆ. ಸ್ವಂತ ಉದ್ಯಮದ ಉತ್ಪನ್ನಗಳ ಮಾರಾಟ ಜಾಲ ವಿಸ್ತರಣೆ ಆರಂಭ. ಯಂತ್ರಗಳ ಬಿಡಿಭಾಗ ಮಾರಾಟಗಾರರಿಗೆ ನಿರೀಕ್ಷೆ ಮೀರಿದ ವ್ಯಾಪಾರ. ಉದ್ಯಮದ ಕಟ್ಟಡ ವಿಸ್ತರಣೆಗೆ ನಿರ್ಧಾರ. ಸಿವಿಲ್ ಎಂಜಿನಿಯರರಿಗೆ ಕೆಲಸ ಮುಗಿಸುವ ಆತುರ. ಗಣೇಶ ಸ್ತೋತ್ರ, ನರಸಿಂಹ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೬. ಕನ್ಯಾ:
ಪ್ರಾಪಂಚಿಕ ಚಿಂತೆಗಳು ಕ್ರಿಯಾಶೀಲತೆಗೆ ಅಡ್ಡಿಯಾಗಬಾರದು. ಉದ್ಯೋಗದಲ್ಲಿ ಹೆಚ್ಚುವರಿ ಹೊಣೆಗಾರಿಕೆಗಳು. ಸ್ವಂತ ವ್ಯವಹಾರದ ವ್ಯಾಪ್ತಿ ವಿಸ್ತರಣೆಯ ಪ್ರಯತ್ನ ಸಫಲ. ವ್ಯವಹಾರದ ಸಂಬಂಧ ಸಣ್ಣ ಪ್ರವಾಸದ ಸಾಧ್ಯತೆ. ಹಿರಿಯರ ಯೋಗಕ್ಷೇಮದ ಹೊಣೆಗಾರಿಕೆಗೆ ಹಿಂದೇಟು ಹೊಡೆಯದಿರಿ. ಮಗನ ವಿವಾಹದ ಚಿಂತೆ. ಗಣಪತಿ ಅಥ್ರವಶೀರ್ಷ, ಆಂಜನೇಯ ಸ್ತೋತ್ರ, ಶನಿಸ್ತೋತ್ರ ಓದಿ
೭. ತುಲಾ:
ದೈವಾನುಗ್ರಹ, ಮನೋಬಲದಿಂದ ಎಲ್ಲವೂ ಸಾಧ್ಯ. ಉದ್ಯೋಗ ಸ್ಥಾನದಲ್ಲಿ ಕೊಂಚ ಏರುಪೇರಿನಿಂದ ವಿಚಲಿತರಾಗದಿರಿ. ಸಂಗಾತಿಯ ಮನೋಧರ್ಮಕ್ಕೆ ಹೊಂದಿಕೊಳ್ಳುವ ಪ್ರಯತ್ನ ಸಫಲ. ಹಿರಿಯರ ಭವಿಷ್ಯದ ಕುರಿತು ಚಿಂತೆ ಬೇಡ. ಬಾಲ್ಯದ ಒಡನಾಡಿಯ ಅನಿರೀಕ್ಷಿತ ಭೇಟಿ. ಹತ್ತಿರದ ದೇವಮಂದಿರ ಸಂದರ್ಶನದಿಂದ ನೆಮ್ಮದಿ. ಗಣೇಶಕವಚ, ವಿಷ್ಣು ಸಹಸ್ರನಾಮ, ಮಹಾಲಕ್ಷ್ಮಿ ಅಷ್ಟಕ ಓದಿ.
೮. ವೃಶ್ಚಿಕ:
ಅನಿರೀಕ್ಷಿತವಾಗಿ ಒದಗಿ ಬಂದ ಭಾಗ್ಯಕ್ಕಾಗಿ ಸಂತೋಷ ಪಡಿ. ಸಂಸ್ಥೆಯ ಮುಖ್ಯಸ್ಥರಿಂದ ಪ್ರಶಂಸೆಗೆ. ಗೃಹೋದ್ಯಮದ ಉತ್ಪನ್ನಗಳಿಗೆ ಗ್ರಾಹಕರ ಸೆಳೆತ. ಮಕ್ಕಳ ಉದ್ಯಮಕ್ಕೆ ಅಭೂತಪೂರ್ವ ಯಶಸ್ಸು. ಕೃಷಿಕ್ಷೇತ್ರಕ್ಕೆ ಕಾಲಿಡಲು ಕಿರಿಯರ ನಿರ್ಧಾರ. ಸಾಮಾಜಿಕ ಕಾರ್ಯಗಳಲ್ಲಿ ಪಾಲುಗೊಳ್ಳುವ ಆಸಕ್ತಿ. ಆರೋಗ್ಯ ಉತ್ತಮ. ಗಣೇಶ ಕವಚ, ಶಿವಕವಚ,ನವಗ್ರಹ ಸ್ತೋತ್ರ ಓದಿ.
೯ಧನು:
ಹುಟ್ಟುಗುಣವಾದ ಕ್ರಿಯಾಶೀಲತೆ ಚಾಲನೆಯಲ್ಲಿ ಇರುವುದರಿಂದ ಹಿನ್ನಡೆಗಳು ಕಂಗೆಡಿಸವು. ಉದ್ಯೋಗದಲ್ಲಿ ಪಂಥಾಹ್ವಾನಗಳನ್ನು ಯಶಸ್ವಿಯಾಗಿ ಎದುರಿಸುವಿರಿ. ಉದ್ಯಮಿಗಳಿಗೆ ಆದಾಯ- ವೆಚ್ಚದ ಲೆಕ್ಕವನ್ನು ಸರಿದೂಗಿಸುವ ಸಮಸ್ಯೆ. ಕೃಷಿ ಸಂಬಂಧಿ ಉದ್ಯಮ ಪ್ರಗತಿ ಕರಕುಶಲ ವಸ್ತುಗಳಿಗೆ ಬೇಡಿಕೆ ಹೆಚ್ಚಳ. ರಾಮಸ್ತೋತ್ರ,ಹನುಮಾನ್ ಚಾಲೀಸಾ , ದೇವೀಕವಚ ಓದಿ.
೧೦. ಮಕರ:
ಸಂಪೂರ್ಣ ದೇವತಾನುಗ್ರಹ ಇರುವುದರಿಂದ ಯಾವುದೇ ಬಗೆಯ ಆತಂಕ ಬೇಡ. ಉದ್ಯೋಗ ಸ್ಥಾನದಲ್ಲಿ ಒತ್ತಡ ಹೆಚ್ಚಾಗಿದ್ದರೂ ಶಿಸ್ತುಬದ್ಧ ನಡೆ. ಲೆಕ್ಕಪರಿಶೋಧಕರಂತಹ ವೃತ್ತಿಪರರಿಗೆ ನಿಗದಿತ ಸಮಯಕ್ಕೆ ಕೆಲಸವನ್ನು ಮುಗಿಸುವ ಒತ್ತಡ. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಂದಗತಿಯ ಪ್ರಗತಿ.ಗಣೇಶ ಕವಚ, ಆದಿತ್ಯ ಹೃದಯ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:
ಕ್ರಿಯಾಶೀಲರಿಗೆ ಕ್ರಿಯೆಯಲ್ಲೇ ಮನೋರಂಜನೆ. ದಿನಕ್ಕೊಂದರಂತೆ ಹೊಸ ಹೊಣೆಗಾರಿಕೆಗಳು. ಸ್ವಂತ ವ್ಯವಹಾರದ ಸುಲಭ ನಿರ್ವಹಣೆಗೋಸ್ಕರ ಹೊಸ ವಿಭಾಗ ಆರಂಭ. ಊರಿನಲ್ಲಿರುವ ಬಂಧುಗಳ ಮನೆಯಲ್ಲಿ ಶುಭ ಸಮಾರಂಭ. ಗ್ರಾಹಕರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸಲು ಕ್ರಮ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳು ಯಶಸ್ವಿ. ಗಣೇಶ ಸ್ತವ, ನರಸಿಂಹ ಸ್ತೋತ್ರ, ಶನಿಮಹಾತ್ಮೆ ಓದಿ.
೧೨. ಮೀನ:
ನಿಧಾನ ನಡಿಗೆಯ ಅವಧಿ ಮುಗಿದು ಪ್ರಗತಿಯ ಓಟ ಆರಂಭ. ವೃತ್ತಿಬಾಂಧವರ ಸಕ್ರಿಯ ಸಹಕಾರ ಇಲಾಖೆಗಳಿಂದ ಸಕಾರಾತ್ಮಕ ಸ್ಪಂದನ. ಸರಕಾರಿ ನೌಕರರಿಗೆ ಸಾರ್ವಜನಿಕರಿಂದ ಪ್ರಶಂಸೆ. ಸಾಮಾಜಿಕ ಕ್ಷೇತ್ರದಲ್ಲಿ ಕೀರ್ತಿ ವರ್ಧನೆ. ಕುಟುಂಬದ ಹಿರಿಯರಿಂದ ಅಭಿಮಾನ ಪ್ರಕಟನೆ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ .ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.