ದಿನ ಭವಿಷ್ಯ
30-07-2025

ಅದೃಷ್ಟ ಸಂಖ್ಯೆ 3
ಜ್ಯೋತಿರ್ಮಯ
೧.ಮೇಷ:
ಪ್ರಾರ್ಥನೆಗೆ ಸರಿಯಾದ ಫಲಗಳು ಲಭಿಸುವ ಸಾಧ್ಯತೆ. ಉದ್ಯೋಗ ಕ್ಷೇತ್ರದಲ್ಲಿ ಅನುಕೂಲದ ವಾತಾವರಣ. ಹೊಸ ಹೂಡಿಕೆಗಳ ವಿಷಯದಲ್ಲಿ ಎಚ್ಚರ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ಗೃಹೋದ್ಯಮಗಳ ಜನಪ್ರಿಯತೆ ವೃದ್ಧಿ. ಗಣೇಶ ಕವಚ, ಶಿವಸಹಸ್ರನಾಮ, ಶನಿಮಹಾತ್ಮೆ ಓದಿ.
೨. ವೃಷಭ:
ನಿರಾಶೆ ಇಲ್ಲದ ಹೊಸ ವ್ಯವಹಾರ. ಉದ್ಯೋಗಸ್ಥರಿಗೆ ಶುಭದಾಯಕ ದಿನ. ಕೃಷ್ಯುತ್ಪಾದನೆ ಮಾರಾಟದಿಂದ ತೃಪ್ತಿಕರ ಲಾಭ. ಸರಕಾರಿ ಅಧಿಕಾರಿಗಳಿಗೆ ದೂರದೂರಿಗೆ ವರ್ಗಾವಣೆಯ ಶಂಕೆ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ನೆಮ್ಮದಿಯ ದಿನ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.
೩. ಮಿಥುನ:
ಯಾವುದೇ ಆಕಸ್ಮಿಕಕ್ಕೂ ಅಂಜಬೇಕಾಗಿಲ್ಲ. ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳ ಕಾಟ. ಧ್ಯಾನ, ಸ್ವಾಧ್ಯಾಯಗಳಲ್ಲಿ ಮನಸ್ಸು. ಉದ್ಯಮ ಅಭಿವೃದ್ಧಿಯ ಹೊಸ ಪರ್ವ ಆರಂಭ. ಸಂಗಾತಿಯಿಂದ ಉತ್ತಮ ಸಹಕಾರ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ ಓದಿ.
೪.ಕರ್ಕಾಟಕ:
ಅಂತರ್ಮುಖತೆ ಸಾಧನೆಗೆ ಪ್ರಯತ್ನ. ಉದ್ಯೋಗ ಸ್ಥಾನದಲ್ಲಿ ಸಹಕಾರ. ಉದ್ಯಮ ವಿಸ್ತರಣೆಯ ಮೊದಲ ಹಂತ ಆರಂಭ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಕುದುರುವ ಸಾಧ್ಯತೆ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಲಭ್ಯ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.
೫. ಸಿಂಹ:
ಆತಂಕದ ಹಂತ ದಾಟಿದ್ದೀರಿ. ನಯವಂಚಕರ ಪಿತೂರಿಗೆ ಸೋಲು. ಉದ್ಯಮದಲ್ಲಿ ಲಾಭದಾಯಕ ಪ್ರಗತಿ. ಕೃಷ್ಯುತ್ಪನ್ನಗಳ ಮಾರಾಟದಿಂದ ಉತ್ತಮ ಲಾಭ. ವ್ಯವಹಾರಕ್ಕಾಗಿ ಸಣ್ಣ ಪ್ರಯಾಣ ಸಂಭವ. ಗೃಹಿಣಿಯರಿಗೆ ಸಂತೃಪ್ತಿಯ ಮನೋಭಾವ. ಗಣೇಶ ದ್ವಾದಶನಾಮ ಸ್ತೋತ್ರ, ರಾಮ ಭುಜಂಗಪ್ರಯಾತ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೬.ಕನ್ಯಾ:
ಆಮಿಷಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ. ಸಣ್ಣ ಉದ್ಯಮಗಳಿಗೆ ಒಳ್ಳೆಯ ದಿನ. ಕೃಷಿಭೂಮಿ ಅಭಿವೃದ್ಧಿಗೆ ಕಾಲಮಿತಿಯ ಯೋಜನೆ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಸಣ್ಣ ವ್ಯಾಪಾರಿಗಳಿಗೂ ಶುಭದಿನ. ಗಣೇಶ ತ್ರಿಶತಿ ಸ್ತೋತ್ರ, ಕಾರ್ತಿಕೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೭. ತುಲಾ:
ಉದ್ಯೋಗದಲ್ಲಿ ಸ್ವಲ್ಪ ಸುಧಾರಣೆ. ಉದ್ಯಮಿಗಳ ಹಳೆಯ ಸಮಸ್ಯೆ ಪರಿಹಾರ. ವಿವಾದದಿಂದ ಹೊರಬರುವ ಪ್ರಯತ್ನ ಸಫಲ. ಮಹಿಳೆಯರ ಸ್ವಾವಲಂಬನೆ ಯೋಜನೆಗಳ ಪ್ರಗತಿ. ಎಲ್ಲರ ಆರೋಗ್ಯ ಉತ್ತಮ ಸ್ಥಿತಿಯಲ್ಲಿ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.
೮. ವೃಶ್ಚಿಕ:
ಸುಖ- ದುಃಖ, ಲಾಭ- ನಷ್ಟದ ಚಿಂತೆ ಮಾಡದಿರಿ. ಉದ್ಯೋಗದಲ್ಲಿ ಹೇಳುವಂತಹ ಉನ್ನತಿಯಾಗದಿದ್ದರೂ ಕೊರತೆ ಇರಲಾರದು. ವಸ್ತ್ರಾಭರಣ ಖರೀದಿ. ದೂರದ ಊರಿನಿಂದ ಶುಭ ಸಮಾಚಾರ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂಭ್ರಮ. ಗಣಪತಿ ಅಥರ್ವಶೀರ್ಷ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೯.ಧನು:
ಉದ್ಯೋಗದಲ್ಲಿ ಮುನ್ನಡೆಯಲು ಅನುಕೂಲ ಪರಿಸರ. ಸ್ವಂತ ಉದ್ಯಮದ ಕ್ರಮಾಗತ ಪ್ರಗತಿ. ದೀರ್ಘಾವಧಿ ಯೋಜನೆಗಳಲ್ಲಿ ಹಣ ಹೂಡಿಕೆಯಿಂದ ಲಾಭ. ಲೇವಾದೇವಿ ವ್ಯವಹಾರದಲ್ಲಿ ಅತ್ಯಲ್ಪ ಲಾಭ. ಗೃಹೋದ್ಯಮಗಳಿಂದ ತೃಪ್ತಿಕರ ಲಾಭ. ಗಣೇಶಸ್ತೋತ್ರ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೧೦.ಮಕರ:
ಅವಕಾಶ ಸದುಪಯೋಗದ ಪ್ರಯತ್ನದಲ್ಲಿ ಜಯ. ಕ್ಲಪ್ತ ಸಮಯದಲ್ಲಿ ಕಾರ್ಯ ಮುಗಿಸಿದ ತೃಪ್ತಿ. ಅಧ್ಯಾತ್ಮ ಸಾಧನೆಯಲ್ಲಿ ಆಸಕ್ತಿ. ವಸ್ತ್ರ, ಉಡುಪು , ಅಲಂಕಾರ ಸಾಮಗ್ರಿ ವ್ಯಾಪಾರಿಗಳಿಗೆ ಅಧಿಕ ಲಾಭ. ಹಿರಿಯರು, ಮಹಿಳೆಯರು, ಮಕ್ಕಳಿಗೆ ನೆಮ್ಮದಿಯ ದಿನ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಕವಚ, ಹನುಮಾನ್ ಚಾಲೀಸಾ ಓದಿ.
೧೧.ಕುಂಭ:
ಶೀಘ್ರ ಕಾರ್ಯಸಾಧಿಸಿದ ತೃಪ್ತಿ. ಉದ್ಯೋಗ, ವ್ಯವಹಾರಗಳ ಆತಂಕ ದೂರ. ಸೇವಾ ಚಟುವಟಿಕೆಗಳಲ್ಲಿ ಪಾಲುಗೊಳ್ಳುವಿರಿ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣಪತಿ ಅಥರ್ವಶೀರ್ಷ, ಮಹಿಷಮರ್ದಿನಿ ಸ್ತೋತ್ರ,ಶನಿಮಹಾತ್ಮೆಓದಿ.
೧೨. ಮೀನ:
ಉದ್ಯೋಗದಲ್ಲಿ ಯಶಸ್ಸು. ಸರಕಾರಿ ನೌಕರರ ಪೂರ್ಣ ಸಹಕಾರ. ಸೋದರ ವರ್ಗದಲ್ಲಿ ಶುಭಕಾರ್ಯ. ಸಾಮಾಜಿಕ ಕಾರ್ಯಕ್ಕೆ ಮನೆಮಂದಿಯ ಉತ್ತೇಜನ. ನಾಳೆಯ ಮುಖ್ಯ ಜಾರ್ಯಗಳಿಗೆ ಸಿದ್ಧತೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.