ದಿನ ಭವಿಷ್ಯ
03-08-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 3
ಮೇಷ:
ರಜಾದಿನವಾದರೂ ಶನಿಯ ಮಹಿಮೆಯಿಂದ ಏನೋ ಕಿರಿಕಿರಿ. ಹೆಚ್ಚುವರಿ ಆದಾಯದ ಮಾರ್ಗ ಹುಡುಕಾಟ. ವಸ್ತ್ರೋದ್ಯಮ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ. ಸಾಂಸಾರಿಕವಾಗಿ ನೆಮ್ಮದಿಯ ಅನುಭವ. ಗಣೇಶ ಕವಚ,ವಿಷ್ಣು ಸಹಸ್ರನಾಮ, ಶನಿ ಮಹಾತ್ಮೆ ಓದಿ.
೨.ವೃಷಭ:
ಮೇಲೆ ಬಿದ್ದು ಸಹಾಯ ಮಾಡಲು ಹೋಗಬೇಡಿ. ಸಾಮಾಜಿಕ ಕಾರ್ಯಗಳಿಗೆ ಉದ್ಯಮಿಗಳ ಪ್ರೋತ್ಸಾಹ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ಉಳಿತಾಯ ಏಜೆಂಟರಿಗೆ ಸಾಮಾನ್ಯ ಲಾಭ. ದೂರದ ಊರಿನಿಂದ ಬಂದ ವ್ಯವಹಾರ ಪ್ರಸ್ತಾವದಿಂದ ಅನುಕೂಲ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಅಷ್ಟೋತ್ತರ, ಗುರುಸ್ತೋತ್ರ ಓದಿ.
೩ಮಿಥುನ:
ಇಂದಿನ ದಿನ ಉದ್ಯೋಗ, ವ್ಯವಹಾರ ಎರಡು ಕ್ಷೇತ್ರಗಳಲ್ಲೂ ವಿರಾಮ. ಉದ್ಯಮಕ್ಕೆ ಎದುರಾದ ಸೌಲಭ್ಯಗಳ ಸಮಸ್ಯೆ ನಿವಾರಣೆ. ಹಿರಿಯರ ಮನೆಯಲ್ಲಿ ದೇವತಾ ಕಾರ್ಯ. ಸ್ವಾವಲಂಬಿ ಜೀವನದ ಕಡೆಗೆ ಒಲವು. ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ. ಗಣೇಶ ಪಂಚರತ್ನ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೪. ಕರ್ಕಾಟಕ:
ವಿನಾಕಾರಣ ಜಗಳಾಡುವವರನ್ನು ಉಪೇಕ್ಷಿಸುವುದೇ ಮೇಲು. ಸಣ್ಣ ಉದ್ಯಮಿಗಳಿಗೆ ತುಂಡು ಪುಢಾರಿಗಳ ಕಾಟ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕನ್ಯಾನ್ವೇಷಕರಿಗೆ ಶುಭ ಸಮಾಚಾರ. ಸಣ್ಣ ಪ್ರಮಾಣದ ಕೃಷಿಕಾರ್ಯದಲ್ಲಿ ಸಂತೃಪ್ತಿ. ಗಣೇಶ ಕವಚ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೫.ಸಿಂಹ:
ನಿಮ್ಮ ಕಾರ್ಯವೈಖರಿಯಿಂದಾಗಿ ಸರ್ವಜನಮಾನ್ಯತೆ. ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ. ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ. ಸಂಸಾರದತ್ತ ಗಮನ ನೀಡಿ ಮನೆಯವರಿಗೆ ಹರ್ಷ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೬.ಕನ್ಯಾ:
ನಿಯಮಬದ್ಧ ಜೀವನಕ್ಕೆ ಪ್ರಯತ್ನ. ವಾಹನ ಉದ್ಯಮಿಗಳಿಗೆ ಆದಾಯ ವೃದ್ಧಿ. ಸಟ್ಟಾ ವ್ಯವಹಾರದಲ್ಲಿ ನಷ್ಟ. ಪಾಲುದಾರಿಕೆ ಉದ್ಯಮದಲ್ಲಿ ನಿಧಾನ ಪ್ರಗತಿ. ಹಿರಿಯರ ಆರೋಗ್ಯ ಸ್ಥಿರವಾಗಿ ಸುಧಾರಣೆ.ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
೭. ತುಲಾ:
ಹರ್ಷ ತಂದ ಬಂಧುಗಳ ಭೇಟಿ. ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ಸ್ವೋದ್ಯೋಗ ಆರಂಭಿಸಲು ಸಹಚಿಂತನೆ. ಮಹಿಳೆಯರ ನೇತೃತ್ವದ ಉದ್ಯಮಗಳಿಗೆ ಯಶಸ್ಸು. ಸಂಸಾರದಲ್ಲಿ ಪ್ರೀತಿಗೆ ಕೊರತೆಯಿಲ್ಲ
ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೮.ವೃಶ್ಚಿಕ:
ಹಿರಿಯ ಅಧಿಕಾರಿಗಳಿಗೆ ಮನೆಯಲ್ಲಿ ಕಿರಿಕಿರಿ. ಖಾಸಗಿ ರಂಗದವರಿಗೆ ಸಾಮಾನ್ಯ ಪರಿಸ್ಥಿತಿ. ಯಂತ್ರೋಪಕರಣ ವ್ಯಾಪಾರಿಗಳಿಗೆ ಅದೃಷ್ಟ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ. ಮಕ್ಕಳ ಆರೋಗ್ಯದ ಕುರಿತು ಎಚ್ಚರ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಸಹಸ್ರನಾಮ, ಲಕ್ಷ್ಮೀಸ್ತೋತ್ರ ಓದಿ.
೯.ಧನು:
ಯೋಜನೆಗಳನ್ನು ಕಾರ್ಯಗತಗೊಳಿಸುವ ಪ್ರಯತ್ನ. ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಹಿನ್ನಡೆ. ಉದ್ಯೋಗಾಸಕ್ತ ಶಿಕ್ಷಿತರಿಗೆ ಸದವಕಾಶ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳಿಗೆ ಲಾಭ. ವ್ಯವಹಾರದ ಸಂಬಂಧ ಪ್ರಮುಖ ವ್ಯಕ್ತಿಯ ಭೇಟಿ. ಗಣೇಶ ಅಷ್ಟಕ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೧೦.ಮಕರ:
ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಹೇರಳ ಲಾಭ. ಕನ್ಯಾರ್ಥಿಗಳಿಗೆ ನಿರಾಶೆಯ ಸನ್ನಿವೇಶ. ಹಳೆಯ ಒಡನಾಡಿಗಳ ಸಂಪರ್ಕ. ವಿರಾಮದ ದಿನ ಮನೆಯಲ್ಲಿ ಕಾಲಯಾಪನೆ. ಅನ್ಯಾಯ ಮಾಡಿದವರ ವಿರುದ್ಧ ಸೇಡಿನ ಭಾವನೆ ಬೆಳೆಯದಿರಲಿ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೧೧. ಕುಂಭ:
ಸಹಚರರಿಂದ ಮಾರ್ಗದರ್ಶನಕ್ಕಾಗಿ ಯಾಚನೆ. ಗ್ರಾಹಕರ ಅಪೇಕ್ಷೆಗೆ ಸರಿಯಾಗಿ ಸ್ಪಂದನ. ಸಮಾಜ ಸೇವಾಕಾರ್ಯಗಳಿಗೆ ಮತ್ತಷ್ಟು ಅವಕಾಶಗಳು. ಕುಶಲಕರ್ಮಿಗಳಿಗೆ ಕೀರ್ತಿ ತರುವ ಸನ್ನಿವೇಶ. ದೇವತಾ ಕಾರ್ಯದಲ್ಲಿ ಭಾಗಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೧೨. ಮೀನ:
ಭವಿಷ್ಯದ ಯೋಜನೆಗಳ ಅನುಷ್ಠಾನಕ್ಕೆ ಕಾಲ ಸನ್ನಿಹಿತ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆ. ವಾಸಸ್ಥಾನ ನವೀಕರಣ ಆರಂಭ. ಮಾತೃಸಮಾನರ ದರ್ಶನ. ಪೂರ್ವದಿಕ್ಕಿನಿಂದ ಹೊಸ ವ್ಯವಹಾರ ಪ್ರಸ್ತಾವ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.