ದಿನ ಭವಿಷ್ಯ

04-08-2025

Aug 4, 2025 - 03:00
ದಿನ ಭವಿಷ್ಯ


              ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 4

೧.ಮೇಷ: 
  ಶ್ರಾವಣ ಮಾಸದ  ಸೋಮವಾರ ತರಾತುರಿಯ ದಿನಚರಿ. ಬಹುವಿಧದ ವ್ಯವಹಾರಗಳ ಒತ್ತಡ. ಕೆಲವು ಬಗೆಯ ಉದ್ಯಮಿಗಳಿಗೆ ವ್ಯಾಪಾರಿಗಳಿಗೆ ಸುದಿನ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಮಾಧಾನದ ದಿನ. ಸಂಜೆ ದೇವಾಲಯ ದರ್ಶನ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.


 

೨. ವೃಷಭ:

   ಗಣ್ಯ ವ್ಯಕ್ತಿಗಳ  ಪರಿಚಯ‌. ಉದ್ಯೋಗಸ್ಥರಿಗೆ ಸಮಾಧಾನದ ದಿನ. ವಸ್ತ್ರ ವ್ಯಾಪಾರಿಗಳು ಮತ್ತು ಯಂತ್ರೋದ್ಯಮಿಗಳಿಗೆ ಸುದಿನ.  ಹತ್ತಿರದ ದೇವಿ ಆಲಯಕ್ಕೆ  ಭೇಟಿ. ಮಕ್ಕಳು,   ಹಿರಿಯರು, ಗೃಹಿಣಿಯರಿಗೆ ನೆಮ್ಮದಿಯ ದಿನ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

   

೩.ಮಿಥುನ:

  ಉದ್ಯೋಗಿಗಳಿಗೆ ಒಂದು ಬಗೆಯ ಸಮಾಧಾನ. ವ್ಯವಹಾರಸ್ಥರಿಗೆ ನಿರಾಳ‌ ಭಾವ. ಕುಟುಂಬದಿಂದ ದೂರವಿದ್ದ ವ್ಯಕ್ತಿ ಪುನರಾಗಮನ. ಉದ್ಯೋಗ ಹುಡುಕುವವರಿಗೆ ಶುಭಸೂಚನೆ. ಹಿರಿಯರ, ಗೃಹಿಣಿಯರ ಆರೋಗ್ಯ ಚೇತರಿಕೆ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.


೪.ಕರ್ಕಾಟಕ:
  ದೇವತಾರಾಧನೆಯಿಂದ  ಮನೆಯಲ್ಲಿ ಶಾಂತಿ. ಸಹೋದ್ಯೋಗಿಗಳಿಗೆ ನೆರವಾಗುವ ಅವಕಾಶ. ವ್ಯವಹಾರ ಕ್ಷೇತ್ರದ ಮಿತ್ರರ ಸಂದರ್ಶನ. ಉದ್ಯೋಗ  ಅರಸುತ್ತಿರುವ  ಶಿಕ್ಷಿತರಿಗೆ ಅವಕಾಶಗಳು ಗೋಚರ. ಕೆಲವರಿಗೆ ರಕ್ತದಾನ ಮಾಡುವ ವಚನ ಅವಕಾಶ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ , ಕನಕಧಾರಾ ಸ್ತೋತ್ರ ಓದಿ.


 

೫.ಸಿಂಹ:

  ವ್ಯವಹಾರ   ಸುಧಾರಣೆಯಲ್ಲಿ ಪ್ರಗತಿ. ಕೃಷ್ಯುತ್ಪನ್ನ ವ್ಯಾಪಾರದಲ್ಲಿ ಲಾಭ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿ. ವೈದ್ಯರು, ಎಂಜಿನಿಯರರು,  ಮೊದಲಾದವರಿಗೆ   ಕೆಲಸದ ಒತ್ತಡ. ಸ್ವೋದ್ಯೋಗಿ ಗೃಹಿಣಿಯರ ವರಮಾನ  ಹೆಚ್ಚಳ. ಸಂಕಷ್ಟನಾಶನ ಗಣೇಶ ಸ್ತೋತ್ರ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಗುರುಸ್ತೋತ್ರ ಓದಿ.

೬. ಕನ್ಯಾ:

  ಉದ್ಯೋಗ ಸ್ಥಾನದಲ್ಲಿ ಎಲ್ಲರಿಂದ ಶ್ಲಾಘನೆ‌. ವ್ಯಾಪಾರ ಕ್ಷೇತ್ರದಲ್ಲಿ ಮಂದಗತಿಯ, ಆದರೆ ಸ್ಥಿರವಾದ ಪ್ರಗತಿ. ವಧೂವರಾನ್ವೇಷಿಗಳಿಗೆ ಶುಭ ಸಮಾಚಾರ.  ಹೊಸ ಆದಾಯಮೂಲ ಅನ್ವೇಷಣೆ. ಗೃಹಿಣಿಯರು ಮತ್ತು ಮಕ್ಕಳಿಗೆ  ಸಂಭ್ರಮ ಸಹಸ್ರಪಗಣೇಶ ಸ್ತೋತ್ರ,  ರಾಮ ಭುಜಂಗಪ್ರಯಾತ ಸ್ತೋತ್ರ, ಚಂದ್ರಶೇಖರಾಷ್ಡಕ ಓದಿ.

೭.ತುಲಾ:

  ನಕಾರಾತ್ಮಕ ಚಿಂತನೆಯನ್ನು ದೂರವಿಡಿ. ದೂರದ ಬಂಧುಗಳ ಕಡೆಯಿಂದ ಶುಭ ಸಮಾಚಾರ. ಪಾಲುದಾರಿಕೆ  ವ್ಯವಹಾರದಲ್ಲಿ ಎಚ್ಚರ‌. ಬೌದ್ಧಿಕ ಕಾರ್ಯ ಮಾಡುವವರ ಆರೋಗ್ಯದತ್ತ ಗಮನ ಇರಲಿ. ಮಕ್ಕಳಿಗೆ ಏಕಾಗ್ರತೆ ಸಾಧಿಸಲು ಮಾರ್ಗದರ್ಶನ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ಕಾರ್ತಿಕೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೮.ವೃಶ್ಚಿಕ:

  ಸುಖ, ಸಂತೋಷದ ಜೀವನ. ಮಹಿಳೆಯರಿಗೆ ವಸ್ತ್ರಾಭರಣ ಖರೀದಿಯಲ್ಲಿ ಆಸಕ್ತಿ.  ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ. ಆಧ್ಯಾತ್ಮಿಕ ಸಾಧನೆಯಿಂದ ನೆಮ್ಮದಿ. ಹಿತಶತ್ರುಗಳಿಂದ ಅಂತರ ಕಾಯ್ದುಕೊಳ್ಳಿ. ಗಣಪತಿ ಅಥರ್ವಶೀರ್ಷ, ದತ್ತಪಂಜರ ಸ್ತೋತ್ರ,ನವಗ್ರಹ ಸ್ತೋತ್ರ ಓದಿ.

೯. ಧನು:

ಹೊಸ ಕಾರ್ಯಗಳನ್ನು ಆರಂಭಿಸುವ ಉತ್ಸಾಹ. ಪಾಲುದಾರಿಕೆ ವ್ಯವಹಾರಗಳಲ್ಲಿ ಮಂದಗತಿ. ಉದ್ಯಮಿಗಳಿಗೆ ಸಂತೃಪ್ತಿಯಿಂದ ಆಲಸ್ಯ. ವಾಹನ ಚಾಲನೆಯಲ್ಲಿ ಎಚ್ಚರ.  ಚಟುವಟಿಕೆಗಳಲ್ಲಿ ಆಸಕ್ತಿ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.


೧೦.ಮಕರ:

 ಪರನಿಂದೆ ಮಾಡುವವರಿಂದ ಕೆಲಸ ಕೇಡು. ನಿಗದಿತ ಸಮಯದಲ್ಲಿ ಕಾರ್ಯ ಮುಗಿದು ಸಮಾಧಾನ. ಮಕ್ಕಳ ವ್ಯಾಸಂಗದಲ್ಲಿ ಮುನ್ನಡೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಲಾಭ. ಸಂಜೆ ಸಂಗೀತ, ಹರಿಕಥೆ ಶ್ರವಣಕ್ಕೆ ಸಮಯ. ಗಣೇಶ ಕವಚ, ದಾರಿದ್ರ್ಯದಹನ ಶಿವಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧. ಕುಂಭ:

  ಉದ್ಯಮಶೀಲ ಪ್ರವೃತ್ತಿಗೆ ಚಾಲನೆಯ ಸನ್ನಿವೇಶ. ರಾಜಕಾರಣಿಗಳ ಸಹವಾಸ ತ್ಯಜಿಸುವ ನಿರ್ಧಾರ. ಸೇವಾಕಾರ್ಯಗಳಿಂದ ಗೌರವ ಪ್ರಾಪ್ತಿ ಕುಟುಂಬದಲ್ಲಿ ಮತ್ತೆ ಸಾಮರಸ್ಯ. ಗೃಹಿಣಿಯರಿಗೆ ಸ್ವೋದ್ಯೋಗದಲ್ಲಿ ‌ ಮುನ್ನಡೆ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

೧೨.ಮೀನ:

  ಗಳಿಕೆಯ ಹೊಸ ಮಾರ್ಗಗಳು  ಗೋಚರ. ಇಷ್ಟದೇವತಾರ್ಚನೆಯಿಂದ ಸಮಸ್ಯೆಗಳು ದೂರ. ಸಂಗಾತಿಯಿಂದ ವ್ಯವಹಾರದಲ್ಲಿ ಸಕ್ರಿಯ ಸಹಕಾರ. ಮಕ್ಕಳ ಶೈಕ್ಷಣಿಕ  ಪ್ರಗತಿ ಉತ್ತಮ. ಗುರುದರ್ಶನಕ್ಕೆ ಸಣ್ಣ ಯಾತ್ರೆ ಸಂಭವ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.