ದಿನ ಭವಿಷ್ಯ
05-08-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 5
೧. ಮೇಷ:
ಆರೋಗ್ಯದ ಮೇಲೆ ಹವಾಮಾನ ಏರಿಳಿತದ ಪರಿಣಾಮ. ಉದ್ಯೋಗಸ್ಥರಿಗೆ ಸಹವರ್ತಿಗಳಿಂದ ಸಕಾಲಿಕ ನೆರವು. ಮನಃಪೂರ್ವಕ ಪ್ರಾರ್ಥನೆಗೆ ಕ್ಷಿಪ್ರಾನುಗ್ರಹ. ವಾಹನ ಚಾಲನೆಯಲ್ಲಿ ಎಚ್ಚರ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಆನಂದದ ಸಂದರ್ಭ. ಗಣೇಶ ಕವಚ, ಶಿವ ಸಹಸ್ರನಾಮ, ಶನಿಮಹಾತ್ಮೆ ಓದಿ.
೨. ವೃಷಭ:
ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ. ವಿವಿಧ ಜನೋಪಯೋಗಿ ಕಾರ್ಯಗಳಲ್ಲಿ ಭಾಗಿ. ಉಳಿತಾಯ ಯೋಜನೆಗಳ ಏಜೆಂಟರಿಗೆ ಒಳ್ಳೆಯ ದಿನ. ಮಕ್ಕಳ ಕಣ್ಣಿನ ಅರೋಗ್ಯ ರಕ್ಷಣೆಗೆ ಗಮನ. ಕೆಲವು ವರ್ಗದ ವ್ಯಾಪಾರಿಗಳಿಗೆ ಅದೃಷ್ಟ.
ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
೩ಮಿಥುನ:
ಉದ್ಯೋಗ ರಂಗದಲ್ಲಿ ಹೆಚ್ಚಿನ ಜವಾಬ್ದಾರಿ. ಕರಕುಶಲ ಸಾಮಗ್ರಿ ನಿರ್ಮಾಪಕರಿಗೆ ಆದಾಯ ವೃದ್ಧಿ. ಹಿರಿಯರಿಗೆ ನಿಶ್ಚಿಂತೆಯ ಬದುಕು. ಗೃಹಿಣಿಯರ ಪ್ರಯತ್ನದ ಫಲವಾಗಿ ಗೃಹೋದ್ಯಮ ಯಶಸ್ವಿ. ಆಸ್ತಿ ಸಂಬಂಧ ವ್ಯಾಜ್ಯ ಮಾತುಕತೆಯಲ್ಲಿ ಪರಿಹಾರ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೪.ಕರ್ಕಾಟಕ:
ಭವಿಷ್ಯವನ್ನು ಭದ್ರಗೊಳಿಸುವ ಸಿದ್ಧತೆಗಳು. ಕಟ್ಟಡ ನಿರ್ಮಾಣ, ಆಸ್ತಿ ಖರೀದಿ- ಮಾರಾಟ ನಿಧಾನ. ಕನ್ಯಾನ್ವೇಷಿಗಳಿಗೆ ಶುಭ ಸೂಚನೆ. ವ್ಯವಹಾರಾರ್ಥ ಉತ್ತರ ದಿಕ್ಕಿಗೆ ಪ್ರಯಾಣ.ಮಕ್ಕಳ. ಅಧ್ಯಯನಾಸಕ್ತಿ ವೃದ್ಧಿ. ಗಣೇಶ ಪಂಚರತ್ನ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೫.ಸಿಂಹ:
ಉದ್ಯೋಗ, ವ್ಯವಹಾರಕ್ಕೆ ಬಂದ ವಿಘ್ನ ನಿವಾರಣೆ. ಪಾಲುದಾರರ ವಿಶ್ವಾಸ ಉಳಿಸಿಕೊಳ್ಳುವ ಪ್ರಯತ್ನ. ದೂರದ ಬಂಧುಗಳ ಆಗಮನ. ಕ್ಷೇತ್ರ ವಿಸ್ತರಣೆಯ ಕುರಿತು ವಿಮರ್ಶೆ. ಮಕ್ಕಳಿಗೆ ವ್ಯಾಸಂಗ, ಮನೋರಂಜನೆ ಎರಡರಲ್ಲೂ ಆಸಕ್ತಿ. ಸಂಕಷ್ಟನಾಶನ ಗಣೇಶ ಸ್ತೋತ್ರ, ಸುಬ್ರಹ್ಮಣ್ಯ ಕವಚ, ಹನುಮಾನ್ ಚಾಲೀಸಾ ಓದಿ.
೬. ಕನ್ಯಾ:
ಲೌಕಿಕ ದುಃಖ ಉಪಶಮನಕ್ಕೆ ಸಣ್ಣ ಯಾತ್ರೆ. ಮನೋರಂಜನೆ ಕೇಂದ್ರಿತ ಉದ್ಯಮಗಳ ಪ್ರಗತಿ. ಕ್ರೀಡಾ ಸಾಮಗ್ರಿ ಉತ್ಪಾದಕರಿಗೆ ಉತ್ತಮ ಅವಕಾಶ. ಗೃಹೋಪಕರಣಗಳ ಖರೀದಿಗೆ ಧನವ್ಯಯ. ಹತ್ತಿರದ ದೇವತಾ ಸನ್ನಿಧಿಗೆ ಸಂದರ್ಶನ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ರೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.
೭. ತುಲಾ:
ಸರಳ ಚಿಕಿತ್ಸೆಯಿಂದ ಅನಾರೋಗ್ಯ ನಿವಾರಣೆ. ಉದ್ಯೋಗಸ್ಥರಿಗೆ ಕೆಲಸಗಳ ಒತ್ತಡ. ತಾಯಂದಿರಿಗೆ ಮಕ್ಕಳ ಆರೋಗ್ಯದ ಚಿಂತೆ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಅಧಿಕ ಲಾಭ. ಬಂಧುಗಳ ಮನೆಗೆ ಭೇಟಿ ಸಂಭವ. ಗಣೇಶ ತ್ರಿಶತಿ ಸ್ತೋತ್ರ, ಕಾರ್ತಿಕೇಯ ಸ್ತೋತ್ರ, ಆದಿತ್ಯ ಹೃದಯ ಓದಿ.
೮.ವೃಶ್ಚಿಕ:
ಸಂಸಾರ ಸುಖ ಉತ್ತಮ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಂದರ್ಭ. ಲೇವಾದೇವಿ ವ್ಯವಹಾರಸ್ಥರಿಗೆ ವಸೂಲಿಯ ಚಿಂತೆ. ಅವಿವಾಹಿತ ಪುತ್ರನಿಗೆ ಯೋಗ್ಯ ಕನ್ಯೆ ಸಿಗುವ ಸೂಚನೆ. ಆಪ್ತ ವಲಯದ ಸಂತೋಷ ಕೂಟದಲ್ಲಿ ಭಾಗಿ. ಗಣಪತಿ ಅಥರ್ವಶೀರ್ಷ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೯.ಧನು:
ಬಿತ್ತಿದ ಬೀಜ ಹೆಮ್ಮರವಾಗಿರುವುದನ್ನು ನೋಡಿ ಆನಂದ ವೇದಾಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ. ಉದ್ಯೋಗಸ್ಥರಿಗೆ ಸಾಮಾನ್ಯ ನೆಮ್ಮದಿ. ವಸ್ತ್ರ, ಆಭರಣ, ಸಿದ್ಧ ಉಡುಪು ವ್ಯಾಪಾರಿಗಳಿಗೆ ವ್ಯಾಪಾರದ ಭರಾಟೆ. ಗೃಹಿಣಿಯರ ಆರೋಗ್ಯ ಕುರಿತು ಎಚ್ಚರ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಲಕ್ಷ್ಮೀಸ್ತೋತ್ರ ಓದಿ.
೧೦.ಮಕರ:
ಹೊಸ ಸ್ಥಾನದಲ್ಲಿ ಕಾರ್ಯಕ್ಕೆ ನಿಯೋಜನೆ. ವಾಹನ ಚಾಲನೆಯಲ್ಲಿ ಎಚ್ಚರ. ಸೌಂದರ್ಯ ವರ್ಧಕಗಳ ಮಾರಾಟಗಾರರಿಗೆ ಸದವಕಾಶ. ಕನ್ಯಾನ್ವೇಷಣೆಗಾಗಿ ದೂರ ಪ್ರಯಾಣ. ವಸ್ತ್ರ, ಆಭರಣ, ಶೋಕಿ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಳ. ಗಣೇಶ ಅಷ್ಟಕ, ಶಿವಕವಚ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:
ಏಳೂವರೆ ಶನಿಯ ಮಹಿಮೆಯಿಂದ ನೆಮ್ಮದಿ ಭಂಗ. ಬಂಧುಗಳೊಡನೆ ಮನಸ್ತಾಪವಾಗದಂತೆ ಎಚ್ಚರ. ಸಮಾಜಸೇವಾ ಅವಕಾಶಗಳಿಗಾಗಿ ಹುಡುಕಾಟ. ಮುದ್ರಣ ಸಾಮಗ್ರಿ ವಿತರಕರಿಗೆ ವ್ಯಾಪಾರ ವೃದ್ಧಿ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ. ಗಣಪತಿ ಅಥರ್ವಶೀರ್ಷ, ಶಿವನಾಮಾವಲ್ಯಷ್ಟಕ, ಶನಿಮಹಾತ್ಮೆ ಓದಿ.
೧೨. ಮೀನ:
ಒಂದಾದ ಮೇಲೊಂದರಂತೆ ಬರುವ ಹೊಣೆಗಾರಿಕೆಗಳು. ಬಂಧುಗಳ ಸಾಂಸಾರಿಕ ಸಮಸ್ಯೆ ನಿವಾರಿಸಲು ಸಹಾಯ. ಸರಕಾರಿ ಇಲಾಖೆಗಳಿಂದ ಅನುಕೂಲದ ಸ್ಪಂದನ. ಗುರುದರ್ಶನದಿಂದ ಆತ್ಮಸ್ಥೈರ್ಯ ವೃದ್ಧಿ. ಕಿರಿಯ ಬಂಧುವಿಗೆ ಅವಶ್ಯ ಮಾರ್ಗದರ್ಶನ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.