ದಿನ ಭವಿಷ್ಯ
12-08-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 3
೧. ಮೇಷ:
ಉದ್ಯೋಗ, ವ್ಯವಹಾರಗಳಲ್ಲಿ ಮಾಮೂಲು ದಿನಚರಿ. ಉದ್ಯಮಿಗಳಿಗೆ ಕಡಿಮೆಯಾದ ಸಮಸ್ಯೆಗಳು. ವಸ್ತ್ರ, ಸಿದ್ಧ ಉಡುಪು, ಶೋಕಿಸಾಮಗ್ರಿ ವ್ಯಾಪಾರಿಗಳಿಗೆ ಅದೃಷ್ಟ. ಗೃಹೋತ್ಪನ್ನಗಳಿಗೆ ಅಧಿಕ ಬೇಡಿಕೆ. ಕೆಲವರಿಗೆ ಅತಿಥಿ ಸತ್ಕಾರ ಯೋಗ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ ಓದಿ.
೨.ವೃಷಭ:
ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವ ಪ್ರಯತ್ನ. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ವ್ಯಾಪಾರಿಗಳಿಗೆ ಹೇರಳ ಲಾಭ. ಶಿಕ್ಷಿತ ವೃತ್ತಿಪರಿಣತರಿಗೆ ಉದ್ಯೋಗಾವಕಾಶ. ಲೇವಾದೇವಿ ವ್ಯವಹಾರ ನಷ್ಟಕ್ಕೆ ದಾರಿ. ಯಂತ್ರೋಪಕರಣ ವ್ಯಾಪಾರಿಗಳಿಗೆ ಅನುಕೂಲ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ ಓದಿ.
೩.ಮಿಥುನ:
ಪತ್ರಕರ್ತರು, ಬರಹಗಾರರಿಗೆ ಆತಂಕ. ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ. ಅಪಾತ್ರರಿಗೆ ಸಲಹೆ ನೀಡಿ ಅವಮಾನ. ಕೆಲವು ವರ್ಗದ ವ್ಯಾಪಾರಿಗಳಿಗೆ ಹೇರಳ ಲಾಭ. ಹಳೆಯ ಒಡನಾಡಿಗಳ ಭೇಟಿಯ ಸಾಧ್ಯತೆ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೪. ಕರ್ಕಾಟಕ:
ಉದ್ಯೋಗಸ್ಥರಿಗೆ ಸೌಲಭ್ಯಗಳ ಹೆಚ್ಚಳ. ಉದ್ಯಮಿಗಳಲ್ಲಿ ಕೆಲವರಿಗೆ ಮಾರಾಟ ಜಾಲದ ಸಮಸ್ಯೆ. ಸರಕಾರಿ ಸೌಲಭ್ಯಗಳ ಸುಧಾರಣೆಗೆ ರಾಜಕಾರಣಿಗಳ ನಿರ್ಲಕ್ಷ್ಯ. ಮಹಿಳೆಯರ ಸ್ವೋದ್ಯೋಗ ಉತ್ಪನ್ನಗಳಿಗೆ ಕೀರ್ತಿ..ಆಂದೋಲನಗಳಿಂದ ದೂರವಿದ್ದರೆ ಕ್ಷೇಮ.
ಗಣೇಶ ತ್ರಿಶತಿ ಸ್ತೋತ್ರ, ದೇವೀ ಕವಚ, ಗುರುಸ್ತೋತ್ರ ಓದಿ.
೫.ಸಿಂಹ:
ಅಧಿಕಾರಿಗಳ ಸತ್ವಪರೀಕ್ಷೆಯ ಸಂದರ್ಭ. ಹೊಸ ರೂಪ ತಳೆದ ಉದ್ಯಮಕ್ಕೆ ಶುಭದಿನ. ಕುಟುಂಬದ ಮನೆಯಲ್ಲಿ ದೇವತಾ ಕಾರ್ಯ. ಹಿರಿಯರು, ಗೃಹಿಣಿಯರು, ಮಕ್ಕಳು ಎಲ್ಲರಿಗೂ ಉತ್ತಮ ಆರೋಗ್ಯ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣ. ಸಂಕಷ್ಟನಾಶನ ಗಣೇಶ ಸ್ತೋತ್ರ, ನರಸಿಂಹ ಕವಚ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೬ ಕನ್ಯಾ:
ಉದ್ಯೋಗ, ವ್ಯವಹಾರ ಎರಡಕ್ಕೂ ಶುಭದಿನ. ಕೃಷಿ ಬೆಳೆಗಳಿಗೆ ಕಾಡುಪ್ರಾಣಿಗಳ ಕಾಟ. ಪಾಲುದಾರಿಕೆ ಉದ್ಯಮ ಮುನ್ನಡೆ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ. ಅಧ್ಯಾಪಕರಿಗೆ, ಶಸ್ತ್ರವೈದ್ಯರಿಗೆ ಹರ್ಷದ ದಿನ. ಗಣೇಶ ಪಂಚರತ್ನ, ರಾಜರಾಜೇಶ್ವರೀ ಅಷ್ಟಕ, ಗುರುಸ್ತೋತ್ರ ಓದಿ.
೭.ತುಲಾ:
ಚಿತ್ತ ಚಾಂಚಲ್ಯದಿಂದ ತೀವ್ರವಾದ ಸಮಸ್ಯೆಗಳು...ಪ್ರಾಮಾಣಿಕ ಉದ್ಯಮಿಯ ಹೆಸರು ಕೆಡಿಸುವ ಸಂಚು ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಶುಭಸೂಚನೆ..ಲೇವಾದೇವಿ ವ್ಯವಹಾರದಿಂದ ದೂರವಿರಿ. ಕೃಷಿ ಕಾರ್ಯಗಳಿಗೆ ಕಾಡುಪ್ರಾಣಿಗಳ ಬಾಧೆ.ಗಣೇಶ ಕವಚ, ವಿಶ್ವನಾಥಾಷ್ಡಕ, ಋಣಮೋಚನ ಮಂಗಳ ಸ್ತೋತ್ರ ಓದಿ.
೮. ವೃಶ್ಚಿಕ:
ಸರ್ವವಿಧಗಳಲ್ಲೂ ಶುಭವಾಗಿರುವ ಸಪ್ತಾಹಾರಂಭದ ದಿನ.. ಉದ್ಯೋಗಸ್ಥರ ಸ್ಥಾನ ಗೌರವಕ್ಕೆ ಹಾನಿಯಿಲ್ಲ.... ಸರಕಾರಿ ಅಧಿಕಾರಿಗಳಿಗೆ ಕೆಲಸದ ಹೊರೆಯ ಚಿಂತೆ.. ರಾಜಕಾರಣಿಗಳಿಗೆ ಕೊಂಚ ಇಕ್ಕಟ್ಟಿನ ಪರಿಸ್ಥಿತಿ..ಯಂತ್ರೋಪಕರಣ ವ್ಯಾಪಾರಿಗಳಿಗೆ ಧನಲಾಭ.ಗಣೇಶ ದ್ವಾದಶನಾಮ ಸ್ತೋತ್ರ, ದಾರಿದ್ರ್ಯ ದಹನ ಶಿವಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೯. ಧನು:
ಉದ್ಯೋಗ ಘಟಕದ ಕಾರ್ಯ ಸುಧಾರಣೆಯ ಹೊಣೆಗಾರಿಕೆ..ಉದ್ಯಮದ ವೈವಿಧ್ಯೀಕರಣ ಕ್ರಮ ಮುನ್ನಡೆ..ಸರಕಾರಿ ಕಾರ್ಯಾಲಯಗಳಲ್ಲಿ ಮಧ್ಯವರ್ತಿಗಳಿಂದ ತೊಂದರೆ. ..ಮಕ್ಕಳ ಅಧ್ಯಯನಾಸಕ್ತಿ ಬೆಳೆಸಲು ಪ್ರಯತ್ನ..ದ್ವಿಚಕ್ರವಾಹನ ಚಾಲನೆಯಲ್ಲಿ ಎಚ್ಚರ.ಗಣೇಶ ಪಂಚರತ್ನ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.
೧೦. ಮಕರ:
ಕಾರ್ಯಕ್ಷಮತೆ ವೃದ್ಧಿಗೆ ಪರಿಶ್ರಮ. ಉದ್ಯಮಿಗಳಿಗೆ ಹಠಾತ್ ನಷ್ಟವಾಗುವ ಸಾಧ್ಯತೆ. ಕೇಟರಿಂಗ್ ವೃತ್ತಿಯವರಿಗೆ ದೊಡ್ಡ ಕೆಲಸ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ಉಳಿತಾಯ ಯೋಜನೆ ಏಜೆಂಟರಿಗೆ ಶುಭಕಾಲ. ಗಣೇಶ ಕವಚ, ದೇವೀಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೧೧.ಕುಂಭ:
ಕೆಲಸ, ಕಾರ್ಯಗಳು ಸುಗಮ. ಉದ್ಯೋಗಸ್ಥರಿಗೆ ಯಥಾರೀತಿಯ ಅನುಭವ. ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಯಿಂದ ಲಾಭ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತಸ. ವ್ಯವಹಾರದ ನಿಮಿತ್ತ ಸಣ್ಣ ಪ್ರಯಾಣ ಸಂಭವ. ಗಣೇಶ ಕವಚ, ದಕ್ಷಿಣಾಮೂರ್ತಿ ಸ್ತೋತ್ರ, ಶನಿಮಹಾತ್ಮೆ ಓದಿ.
೧೨. ಮೀನ:
ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಕಾರ್ಯಗಳು ಇಲಾಖೆಯವರ ಸಹಕಾರದಿಂದ ಯಶಸ್ವಿ. ಕಟ್ಟಡ ನಿರ್ಮಾಣ ಕಂಟ್ರಾಕ್ಟರರಿಗೆ ಸತ್ವಪರೀಕ್ಷೆ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ಹಿರಿಯರ ಆಶಯ ನೆರವೇರಿಸಲು ಸಿದ್ಧತೆ.
ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.