ದಿನ ಭವಿಷ್ಯ
16-08-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 7
೧.ಮೇಷ:
ಹಬ್ಬ ಮುಗಿದರೂ ಮುಗಿಯದ ಸಂಭ್ರಮ. ಹಿರಿಯರಿಗೆ ನೆಮ್ಮದಿಯ ವಾತಾವರಣ. ಉದ್ಯೋಗಸ್ಥರಿಂದ ಸಮಯದ ಸದುಪಯೋಗ. ಧಾರ್ಮಿಕ ಕಾರ್ಯಗಳಲ್ಲಿ ವಿಶೇಷ ಆಸಕ್ತಿ. ದಾಂಪತ್ಯ ಸುಖ ಉತ್ತಮ. ಮಕ್ಕಳಿಗೆ ಸೌಖ್ಯವೃದ್ಧಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೨. ವೃಷಭ:
ಜೀವನ ಯಾತ್ರೆಯಲ್ಲಿಹೊಸ ಸಾಧನೆಗೆ ಸಜ್ಜು. ವ್ಯವಹಾರ ಕ್ಷೇತ್ರದಲ್ಲಿ ತೀವ್ರ ಪೈಪೋಟಿ. ಹಳೆಯ ಗೆಳೆಯರೊಂದಿಗೆ ಅಕಸ್ಮಾತ್ ಮಿಲನ. ನಿರೀಕ್ಷಿತ ಲಾಭ ಕೈಸೇರಿ ಹರ್ಷ. ಹಿರಿಯರ ಸಲಹೆಯಂತೆ ನಡೆದುಕೊಂಡರೆ ಶುಭ. ಗಣೇಶ ಅಷ್ಟಕ, ಶಿವಾಪರಾಧ ಕ್ಷಮಾಪಣ ಸ್ತೋತ್ರ, ಗುರುಸ್ತೋತ್ರ ಓದಿ.
೩.ಮಿಥುನ:
ಆರೋಗ್ಯದಲ್ಲಿ ಕೊಂಚ ಹಿನ್ನಡೆ, ಆದರೆ ಕುಗ್ಗದ ಉತ್ಸಾಹ. ಉದ್ಯೋಗಸ್ಥರು ಹಿತಶತ್ರುಗಳ ಬಗ್ಗೆ ಜಾಗ್ರತೆ ವಹಿಸಿರಿ. ನಿರೀಕ್ಷಿತ ಆರ್ಥಿಕ ನೆರವು ಕೈಸೇರಿ ಸಮಾಧಾನ. ಗೃಹಿಣಿಯರು, ಹಿರಿಯರು, ಮಕ್ಕಳಿಗೆ ಸಂಭ್ರಮ. ದೇವತಾಪೂಜೆಯಿಂದ ಹರ್ಷಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ದೇವೀಸ್ತೋತ್ರ ಓದಿ.
೪.ಕರ್ಕಾಟಕ:
ವ್ಯವಹಾರ ರಂಗದಲ್ಲಿ ದಾಪುಗಾಲಿನಿಂದ ಸಾಗಲು ಯತ್ನ. ಉದ್ಯೋಗಸ್ಥರಿಗೆ ಸಹೋದ್ಯೋಗಿಗಳಿಂದ ಸಕಾಲಿಕ ಸಹಾಯ. ಗೃಹಿಣಿಯರ ಆರ್ಥಿಕ ಸ್ವಾವಲಂಬನೆ ಪ್ರಯತ್ನದಲ್ಲಿ ಮುನ್ನಡೆ. ಹಿರಿಯರಿಗೆ ಸ್ಥಾನ ಗೌರವದಿಂದ ಸಮಾಧಾನ. ಮಕ್ಕಳ ವ್ಯಾಸಂಗಕ್ಕೆ ವಿಶೇಷ ಉತ್ತೇಜನ ಅವಶ್ಯ. ಗಣೇಶ ತ್ರಿಶತಿ ಸ್ತೋತ್ರ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೫.ಸಿಂಹ:
ಕಾರ್ಯಸಾಧನೆಯ ಪ್ರಯತ್ನದಲ್ಲಿ ಅನೂಹ್ಯ ಮುನ್ನಡೆ. ಕಾರ್ಯರಂಗದ ವಿಸ್ತರಣೆಗೆ ಆಹ್ವಾನ. ಪಶ್ಚಿಮ ದಿಕ್ಕಿನಿಂದ ಶುಭ ಸಮಾಚಾರ. ಹಿರಿಯರ ಯೋಗಕ್ಷೇಮ ವಿಚಾರಿಸಿ. ಗೃಹಿಣಿಯರಿಗೆ ಹೆಚ್ಚು ಜೀವನೋತ್ಸಾಹ. ಮಕ್ಕಳಿಂದ ಸಂತಸ. ಸಂಕಷ್ಟನಾಶನ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೬. ಕನ್ಯಾ:
ಕುಲದೇವರ ದರ್ಶನದಿಂದ ಸಂಕಷ್ಟ ನಿವಾರಣೆ.ವ್ಯವಹಾರಾರ್ಥ ಸಣ್ಣ ಪ್ರವಾಸ. ಗುರು ಸಮಾನ ಧಾರ್ಮಿಕ ಮಾರ್ಗದರ್ಶನ. ನೈಸರ್ಗಿಕ ಕೃಷಿಯಲ್ಲಿ ಆಸಕ್ತರಿಗೆ ಸಂತೋಷದ ಸುದ್ದಿ. ಮಾನಸಿಕ ಸಮಸ್ಯೆ ಸಂತ್ರಸ್ತರ ಪಾಲಕರಿಗೆ ಶುಭ ಸಮಾಚಾರ. ಗಣೇಶ ಪಂಚರತ್ನ, ದಕ್ಷಿಣಾಮೂರ್ತಿ ಸ್ತೋತ್ರ, ಗುರುಸ್ತೋತ್ರ ಓದಿ.
೭.ತುಲಾ:
ಸಾಂಸಾರಿಕ ಸುಖ ವೃದ್ಧಿ. ಭಗವತ್ ಕೈಂಕರ್ಯದಿಂದ ಎಡರು ತೊಡರುಗಳ ನಿವಾರಣೆ. ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ಬಂಧುವರ್ಗದಲ್ಲಿ ವಿವಾಹ ಮಾತುಕತೆ. ದೂರದಲ್ಲಿರುವ ಮಿತ್ರರಿಂದ ಅಮೂಲ್ಯ ಸಲಹೆ. ಗಣೇಶ ಕವಚ, ಶಿವಕವಚ, ಹನುಮಾನ್ ಚಾಲೀಸಾ ಓದಿ.
೮.ವೃಶ್ಚಿಕ:
ಕಷ್ಟಗಳನ್ನು ಮರೆಯಲು ಯತ್ನಿಸಿ. ಉದ್ಯೋಗ ಖಾಯಂ ಆಗುವ ಸೂಚನೆ. ಅಪರೂಪದ ಬಂಧುಗಳ ಆಗಮನ. ನೊಂದವರಿಗೆ ಸಾಂತ್ವನ ಹೇಳಿ ಸಮಾಧಾನ. ವ್ಯವಹಾರ ಸುಧಾರಣೆಗೆ ಮಾರ್ಗ ಗೋಚರ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ದತ್ತಪಂಜರ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
೯. ಧನು:
ಒಂದರ ಮೇಲೊಂದರಂತೆ ಕಾಡುವ ಸಮಸ್ಯೆಗಳು. ಸಂಸಾರದ ಹಿರಿಯ ವ್ಯಕ್ತಿ ಅನಾರೋಗ್ಯದಿಂದ ಚೇತರಿಕೆ. ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಸಾಮಾನ್ಯ ಲಾಭ. ಅಧ್ಯಾಪಕ ವೃಂದದವರಿಗೆ ತಾತ್ಕಾಲಿಕ ನೆಮ್ಮದಿ. ಹತ್ತಿರದ ದೇವಾಲಯಕ್ಕೆ ಭೇಟಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಅರ್ಗಲಾ ಸ್ತೋತ್ರ ಓದಿ.
೧೦ ಮಕರ:
ಮಕ್ಕಳ ಚಿಕಿತ್ಸೆಗೋಸ್ಕರ ಧನವ್ಯಯ.ಪ್ರಾಚೀನ ದೇವಾಲಯಕ್ಕೆ ಭೇಟಿ.ಅಪರಿತರೊಂದಿಗೆ ಸ್ನೇಹ ಬೇಡ.ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆ ಸಂಭವ.ಉದ್ಯೋಗ ಸ್ಥಾನದಲ್ಲಿ ಸಹಕಾರ .ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕವಚ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:
ಏಳೂವರೆ ಶನಿಯ ಪ್ರಭಾವದಿಂದ ನೆಮ್ಮದಿ ಭಂಗ.ಸಂಸಾರದಲ್ಲಿ ಅನವಶ್ಯ ವಿರಸಕ್ಕೆ ಕಾರಣರಾಗದಿರಿ.ವಸ್ತ್ರ, ಆಭರಣ ವ್ಯಾಪಾರಿಗಳ ಆದಾಯ ವೃದ್ಧಿ.ಸಮಾಜ ಸೇವಾಸಕ್ತರಿಗೆ ವಿಪುಲ ಅವಕಾಶಗಳು.ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ ಓದಿ.
೧೨.ಮೀನ:
ಸತ್ಕಾರ್ಯಗಳಿಗೆ ದೈವಪ್ರೇರಣೆ.ಕಾರ್ಯರಂಗದಲ್ಲಿ ಉತ್ತಮ ಸ್ಪಂದನ.ಅಪರೂಪದ ಹಿರಿಯ ವ್ಯಕ್ತಿಯ ಭೇಟಿ. ಯಂತ್ರೋಪಕರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಸಮಾಜದ ಹಿರಿಯ ವ್ಯಕ್ತಿಗೆ ಗೌರವ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.