ದಿನ ಭವಿಷ್ಯ
20-08-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 2
೧. ಮೇಷ:
ಬೌದ್ಧಿಕ ಸವಾಲುಗಳ ಪರೀಕ್ಷೆಯಲ್ಲಿ ವಿಜಯ. ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಬದಲಾವಣೆ. ಹೋಟೆಲ್ ಉದ್ಯಮಿಗಳು ನೌಕರರ ಸಮಸ್ಯೆಗಳಿಂದ ಪಾರು. ದೂರ ದೇಶದಲ್ಲಿರುವ ಮಕ್ಕಳಿಂದ ಸಂತೋಷದ ಸಮಾಚಾರ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಗಣೇಶ ಕವಚ, ಶಿವಸಹಸ್ರನಾಮ, ಶನಿಮಹಾತ್ಮೆ ಓದಿ.
೨.ವೃಷಭ:
ನೂತನ ಯೋಜನೆಗಳ ಅನುಷ್ಠಾನದಲ್ಲಿ ಮುನ್ನಡೆ.ಉದ್ಯೋಗಸ್ಥರಿಂದ ಹೊಸ ಅವಕಾಶಗಳ ಸದುಪಯೋಗ. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ವ್ಯಾಪಾರಿಗಳಿಗೆ ಹೇರಳ ಲಾಭ. ನರ್ಸಿಂಗ್ ಶಿಕ್ಷಣ ಪಡೆದವರಿಗೆ ಉದ್ಯೋಗಾವಕಾಶ. ದಾಯಾದಿಗಳ ದೀರ್ಘಕಾಲದ ವಿವಾದ ಮುಕ್ತಾಯ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೩.ಮಿಥುನ:
ಯೋಜನೆಗಳ ಅನುಷ್ಠಾನದ ವೇಗವರ್ಧನೆ ಪ್ರಕ್ರಿಯೆ ಆರಂಭ. ತಾತ್ಕಾಲಿಕ ಉದ್ಯೋಗಸ್ಥರ ಅತಂತ್ರ ಸ್ಥಿತಿಗೆ ಪರಿಹಾರ ಶೋಧನೆ. ಯಾರಿಗೂ ಅಯಾಚಿತವಾಗಿ ಸಲಹೆ ನೀಡದಿರಿ. ಯುವಜನರಿಗೆ ಧಾರ್ಮಿಕ ಮಾರ್ಗದರ್ಶನದ ವ್ಯವಸ್ಥೆಯ ನೇತೃತ್ವ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.
೪. ಕರ್ಕಾಟಕ:
ಸುಲಭವಾಗಿ ಕಾರ್ಯ ಸಾಧಿಸಲು ಮಾರ್ಗ ಅನ್ವೇಷಣೆ. ಉದ್ಯೋಗಸ್ಥರ ಆರ್ಥಿಕ ತೊಂದರೆಗೆ ತಾತ್ಕಾಲಿಕ ಪರಿಹಾರ. ಸರಕಾರಿ ವ್ಯವಸ್ಥೆಗಳ ಸುಧಾರಣೆಗೆ ರಾಜಕಾರಣಿಗಳ ನಿರಾಸಕ್ತಿ. ಪ್ರಾಮಾಣಿಕ ನಾಯಕರ ಹೆಸರು ಕೆಡಿಸುವ ಹುನ್ನಾರ. ಮಹಿಳೆಯರ ಸ್ವೋದ್ಯೋಗ ಯೋಜನೆ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಕವಚ, ಆದಿತ್ಯ ಹೃದಯ ಓದಿ.
೫.ಸಿಂಹ:
ಶೀಘ್ರಗತಿಯ ಕ್ರಮಗಳಿಂದ ಇನ್ನಷ್ಟು ಜವಾಬ್ದಾರಿಗಳ ಹೊರೆ. ಒಂದಕ್ಕಿಂತ ಹೆಚ್ಚು ವ್ಯವಹಾರಗಳ ಕಡೆಗೆ ಗಮನ ಕೊಡಲು ಒತ್ತಡ. ಉದ್ಯೋಗಸ್ಥರಿಗೆ ಘಟಕದ ನೇತೃತ್ವ ಲಭ್ಯ. ಉದ್ಯಮದ ಸ್ವರೂಪ ಬದಲಾವಣೆಯ ಪ್ರಕ್ರಿಯೆಗೆ ಚಾಲನೆ. ಕುಟುಂಬದ ಮನೆಯಲ್ಲಿ ದೇವತಾರ್ಚನೆ. ಗಣಪತಿ ಅಥರ್ವಶೀರ್ಷ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೬.ಕನ್ಯಾ:
ಹೊಸ ಕಾರ್ಯಕ್ಷೇತ್ರದಲ್ಲಿ ಎಲ್ಲರ ಸಹಕಾರ. ಪ್ರತಿಭೆ ಹಾಗೂ. ಕಾರ್ಯನಿಷ್ಠೆಗೆ ಮಾಲಿಕರಿಂದ ಶ್ಲಾಘನೆ. ಹಿರಿಯರ ಆಸ್ತಿಗೆ ಶಾಶ್ವತ ನೀರಾವರಿ ಒದಗಿಸುವ ಪ್ರಯತ್ನ ಸಫಲ. ಉದ್ಯೋಗ ಅರಸುವವರಿಗೆ ಯೋಗ್ಯ ಹುದ್ದೆ ಸಿಗುವ ಭರವಸೆ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ದ್ವಾದಶನಾಮ ಸ್ತೋತ್ರ, ನರಸಿಂಹ ಕವಚ, ಲಕ್ಷ್ಮೀಸ್ತೋತ್ರ ಓದಿ.
೭.ತುಲಾ:
ಸಾಂದರ್ಭಿಕವಾದ ಎಲ್ಲ ಬಗೆಯ ಪರೀಕ್ಷೆಗಳಲ್ಲೂ ವಿಜಯ. ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ. ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಸ್ವಲ್ಪ ಸಡಿಲು. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಸಕಾಲಿಕ ಮಾರ್ಗದರ್ಶನ. ಲೇವಾದೇವಿ ವ್ಯವಹಾರದಿಂದ ದೂರವಿರಿ. ಗಣಪತಿ ಅಥರ್ವಶೀರ್ಷ, ಶಿವ ಕವಚ, ಮಹಾಲಕ್ಷ್ಮಿ ಅಷ್ಟಕ ಓದಿ.
೮. ವೃಶ್ಚಿಕ:
ಎಲ್ಲ ಬಗೆಯ ಪರಿಸ್ಥಿತಿಗಳಲ್ಲೂ ಅನುಕೂಲದ ಪರಿಣಾಮ. ಉದ್ಯೋಗಸ್ಥರ ಸ್ಥಾನ ಗೌರವಕ್ಕೆ ಹಾನಿ ಇಲ್ಲ. ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಆತಂಕ ಕೊಂಚ ದೂರ. ರಾಜಕಾರಣಿಗಳಿಗೆ ಬಿಗಿಯಾದ ಇಕ್ಕಟ್ಟಿನ ಪರಿಸ್ಥಿತಿ. ವಸ್ತ್ರ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಗಣೇಶ ಪಂಚರತ್ನ, ದತ್ತಪಂಜರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ
೯. ಧನು:
ಜನ್ಮಜಾತ ಉದ್ಯಮಶೀಲತೆಗೆ ಸಹಚರರ ಮೆಚ್ಚುಗೆ. ಉದ್ಯೋಗ ಘಟಕದ ಕಾರ್ಯ ನಿರ್ವಹಣೆಗೆ ಹೊಸ ರೂಪ ನೀಡುವ ಹೊಣೆಗಾರಿಕೆ. ಪರಿಸರದ ಸ್ವರೂಪ ಬದಲಾವಣೆಗೆ ಆದ್ಯತೆ. ಬಂಧುಗಳ ಮನೆಯಲ್ಲಿ ದೇವತಾ ಕಾರ್ಯ. ಗಣಪತಿ ಅಥರ್ವಶೀರ್ಷ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೧೦. ಮಕರ:
ಸಂದಿಗ್ಧ ಪರಿಸ್ಥಿತಿಗಳಿಂದ ಸದ್ಯಕ್ಕೆ ಮುಕ್ತಿ. ಉದ್ಯೋಗಸ್ಥರ ಕಾರ್ಯಸಾಮರ್ಥ್ಯ ಪರೀಕ್ಷೆಗಳಲ್ಲಿ ವಿಜಯ. ಬಂಧುವರ್ಗದಲ್ಲಿ ವೈಷಮ್ಯ ನಿವಾರಣೆ. ಲೇವಾದೇವಿ ವ್ಯವಹಾರಸ್ತರಿಗೆ ನಷ್ಟ. ಗೃಹೋಪಯೋಗಿ ಸಾಮಗ್ರಿಗಳ ದುರಸ್ತಿಗೆ ಧನವ್ಯಯ. ಗಣೇಶ ಕವಚ, ಗಜೇಂದ್ರಮೋಕ್ಚ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೧೧.ಕುಂಭ:
ಮೇಲಿಂದ ಮೇಲೆ ಕಾಡುವ ಹಲವು ಬಗೆಯ ಜವಾಬ್ದಾರಿಗಳು. ಉದ್ಯೋಗಸ್ಥರಿಗೆ ಯಥಾರೀತಿಯ ಅನುಭವ. ಸರಕಾರಿ ನೌಕರರಿಗೆ ಹೆಚ್ಚುವರಿ ಜವಾಬ್ದಾರಿಗಳು. ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಯಲ್ಲಿ ಲಾಭ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತಸದ ಸಮಾಚಾರ.ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೧೨. ಮೀನ:
ಹಿತಾನುಭವಗಳ ಮುಂದುವರಿಕೆ. ಉದ್ಯೋಗ ಸ್ಥಾನದಲ್ಲಿ ಸಹಚರರಿಂದ ವಿಶೇಷ ಸಹಾಯ. ಸೇವಾ ರೂಪದ ಕಾರ್ಯಗಳು ಸಂಬಂಧಪಟ್ಟವರ ಸಹಕಾರದಿಂದ ಮುನ್ನಡೆ ದೇವತಾ ಸಾನ್ನಿಧ್ಯಕ್ಕೆ ಭೇಟಿ. ಹಿರಿಯರ ಆರೋಗ್ಯದತ್ತ ಗಮನವಿರಲಿ. ಗಣೇಶ ಅಷ್ಟಕ, ಧತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.