ದಿನ ಭವಿಷ್ಯ

21-08-2025

Aug 21, 2025 - 15:56
ದಿನ ಭವಿಷ್ಯ

               ಜ್ಯೋತಿರ್ಮಯ.

ಅದೃಷ್ಟ ಸಂಖ್ಯೆ 3

೧.ಮೇಷ: 
 
ನಿರಂತರವಾಗಿ  ಬೆಳೆಯುವ ಚಟುವಟಿಕೆಗಳು.  ಅನೇಕ  ವ್ಯವಹಾರಗಳ ಒತ್ತಡ. ಕೆಲವು ಬಗೆಯ ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ ಒಲಿಯುವ ಅದೃಷ್ಟ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಮಾಧಾನದ ದಿನ. ಹಳೆಯ ಸಾಲ ವಸೂಲಿಯ ಸಾಧ್ಯತೆ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.


 

೨. ವೃಷಭ:

   ವ್ಯವಹಾರ ಕ್ಷೇತ್ರಕ್ಕೆ  ಹೊಸಬರ ಆಗಮನ. ಉದ್ಯೋಗಸ್ಥರಿಗೆ ಸಮಾಧಾನದ ದಿನ.  ಸಂಸ್ಥೆಯ  ಕಾರ್ಯವ್ಯಾಪ್ತಿ ವಿಸ್ತರಣೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಶುಭದಿನ. ಮಕ್ಕಳು,  ಹಿರಿಯರು, ಗೃಹಿಣಿಯರಿಗೆ ನೆಮ್ಮದಿಯ ದಿನ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.

   

೩.ಮಿಥುನ:

  ಉದ್ಯೋಗಿಗಳಿಗೆ ಒಂದು ಬಗೆಯ ಸಮಾಧಾನ. ವ್ಯವಹಾರಸ್ಥರಿಗೆ ನಿರಾಳ‌ ಭಾವ. ಕುಟುಂಬದ ಸದಸ್ಯರೊಳಗೆ ಸಾಮರಸ್ಯ. ಉದ್ಯೋಗ ಹುಡುಕುವವರಿಗೆ ಶುಭಸೂಚನೆ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಮಾಧಾನ. ಗಣೇಶ ದ್ವಾದಶನಾಮ ಸ್ತೋತ್ರ, ಮಹಿಷಾಸುರಮರ್ದಿನಿ ಸ್ತೋತ್ರ, ಆದಿತ್ಯ ಹೃದಯ ಓದಿ.


೪.ಕರ್ಕಾಟಕ:
  ಸಹೋದ್ಯೋಗಿಗಳಿಗೆ ನೆರವಾಗುವ ಅವಕಾಶ. ವ್ಯವಹಾರ ಕ್ಷೇತ್ರದ ಪಾಲುದಾರರ  ಸಂದರ್ಶನ. ಉದ್ಯೋಗ  ಅರಸುತ್ತಿರುವ  ಶಿಕ್ಷಿತರಿಗೆ ಅವಕಾಶಗಳು ಗೋಚರ. ಬಂಧುವರ್ಗದ ಮನೆಯಲ್ಲಿ ಶಿಶುಜನನ. ಸುತ್ತಲಿನ ವಾತಾವರಣದ ಮಾಲಿನ್ಯ ನಿವಾರಣೆಗೆ ಯತ್ನ. ಗಣೇಶ ಕವಚ, ರಾಜರಾಜೇಶ್ವರೀ ಅಷ್ಟಕ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


 

೫.ಸಿಂಹ:

  ವ್ಯವಹಾರ   ಸುಧಾರಣೆಯಲ್ಲಿ ಪ್ರಗತಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಮೊತ್ತದ ಲಾಭ. ವೈದ್ಯರು, ಎಂಜಿನಿಯರರು,  ಮೊದಲಾದವರಿಗೆ   ಕೆಲಸದ ಒತ್ತಡ. ಸ್ವೋದ್ಯೋಗಿ ಗೃಹಿಣಿಯರ ವರಮಾನ  ಹೆಚ್ಚಳ. ಮಕ್ಕಳ ಅಧ್ಯಯನಾಸಕ್ತಿ ಹೆಚ್ಚಿಸಲು ಪ್ರಯತ್ನ. ಗಣೇಶ ಕವಚ, ನರಸಿಂಹ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೬. ಕನ್ಯಾ:

 ಉದ್ಯೋಗ ಸ್ಥಾನದಲ್ಲಿ ಕೆಲವರಿಗೆ ಅಸೂಯೆ. ವ್ಯಾಪಾರ ಕ್ಷೇತ್ರದಲ್ಲಿ ಮಂದಗತಿಯ, ಆದರೆ ಸ್ಥಿರವಾದ ಪ್ರಗತಿ. ವಧೂವರಾನ್ವೇಷಿಗಳಿಗೆ ಶುಭ ಸಮಾಚಾರ.  ಹೊಸ ಆದಾಯಮೂಲ ಗೋಚರ. ಗೃಹಿಣಿಯರು ಮತ್ತು ಮಕ್ಕಳಿಗೆ  ಸಂಭ್ರಮದ ದಿನ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.

೭.ತುಲಾ:

  ಹಿರಿಯರ ಆರೋಗ್ಯ ಸುಧಾರಣೆ. ದೂರದ ಬಂಧುಗಳ ಕಡೆಯಿಂದ ಶುಭ ಸಮಾಚಾರ. ಪಾಲುದಾರಿಕೆ  ವ್ಯವಹಾರದಲ್ಲಿ ಎಚ್ಚರ‌ .ಬೌದ್ಧಿಕ ಕಾರ್ಯ ಮಾಡುವವರ ಆರೋಗ್ಯದತ್ತ ಗಮನ ಇರಲಿ. ಕಿರಿಯರು ವಾಹನ ಚಾಲನೆಯಲ್ಲಿ ಎಚ್ಚರ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಶನಿಸ್ತೋತ್ರ ಓದಿ.

೮.ವೃಶ್ಚಿಕ:

  ಎಲ್ಲ ರೀತಿಯಲ್ಲೂ ಸಂತೋಷದ ಅನುಭವ. ಮಹಿಳೆಯರಿಗೆ ವಸ್ತ್ರಾಭರಣ ಖರೀದಿಯಲ್ಲಿ ಆಸಕ್ತಿ.  ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ. ಆಧ್ಯಾತ್ಮಿಕ ಸಾಧನೆಯಿಂದ ನೆಮ್ಮದಿ. ವದಂತಿ  ಹರಡುವವರನ್ನು ದೂರವಿಡಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.



೯. ಧನು:

ಸಂಗಾತಿಯ ಆರೋಗ್ಯ ಸ್ವಲ್ಪ ಸುಧಾರಣೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಮಂದಗತಿ. ಅತಿಯಾದ ಸಂತೃಪ್ತ ಭಾವನೆಯಿಂದ ಆಲಸ್ಯ. ವಾಹನ ಚಾಲನೆಯಲ್ಲಿ ಎಚ್ಚರ. ಯಂತ್ರೋಪಕರಣ ವ್ಯಾಪಾರಿಗಳಿಗೆ ಉತ್ಸಾಹ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.


೧೦.ಮಕರ:

ಆತ್ಮಾವಲೋಕನದಿಂದ ವ್ಯಕ್ತಿತ್ವ ಬೆಳವಣಿಗೆ. ನಿಗದಿತ ಸಮಯದಲ್ಲಿ ಕಾರ್ಯ ಮುಗಿದು ಸಮಾಧಾನ. ಮಕ್ಕಳ ವ್ಯಾಸಂಗದಲ್ಲಿ ಮುನ್ನಡೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಲಾಭ. ಹಳೆಯ ಒಡನಾಡಿಗಳ ಆಗಮನ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧. ಕುಂಭ:

  ಉದ್ಯಮಶೀಲ ಪ್ರವೃತ್ತಿಗೆ ಚಾಲನೆ. ರಾಜಕೀಯ ನಾಯಕರ ವಂಚನೆ ಬಯಲು. ಸೇವಾಕಾರ್ಯಗಳಿಂದ ಗೌರವ ಪ್ರಾಪ್ತಿ ಕುಟುಂಬದಲ್ಲಿ ಮತ್ತೆ ಸಾಮರಸ್ಯ. ಗೃಹಿಣಿಯರಿಗೆ ಸ್ವೋದ್ಯೋಗದಲ್ಲಿ ‌ ಮುನ್ನಡೆ. ಗಣೇಶ ಅಷ್ಟಕ, ರಾಮ ಭುಜಂಗಪ್ರಯಾತ ಸ್ತೋತ್ರ, ಶನಿಮಹಾತ್ಮೆ ಓದಿ.

೧೨.ಮೀನ:

  ಗಳಿಕೆಯ ಹೊಸ ಮಾರ್ಗಗಳು  ಗೋಚರ. ಹೊಸ ಅಧಿಕಾರಿಗಳಿಂದ ವ್ಯವಹಾರ ಸುಲಭ. ಹೊಸ ಪಾಲುದಾರಿಕೆ ಪ್ರಸ್ತಾವ ಲಾಭದಾಯಕ ಅಲ್ಲ. ರಾತ್ರಿ ವಾಹನ ಚಾಲನೆಯಲ್ಲಿ ಎಚ್ಚರ ಇರಲಿ. ಉದರದ ಆರೋಗ್ಯದ ಕಡೆಗೆ ನಿಗಾ ಅವಶ್ಯ.
ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.