ದಿನ ಭವಿಷ್ಯ

26-08-2025

Aug 26, 2025 - 16:43
Aug 25, 2025 - 12:14
ದಿನ ಭವಿಷ್ಯ

               ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 8

೧.ಮೇಷ: 

ಗೌರೀಹಬ್ಬ ಆಚರಣೆಯ ಸಂಭ್ರಮ. ಏಕಕಾಲದಲ್ಲಿ ಅನೇಕ ಕಾರ್ಯಗಳ ನಿರ್ವಹಣೆ ಸಂಭವ. ವ್ಯವಹಾರ ಕ್ಷೇತ್ರದಲ್ಲಿ ಲಾಭ, ಕೀರ್ತಿ ಎರಡಕ್ಕಾಗಿಯೂ ಮೇಲಾಟ. ಜಗಳದ ಸನ್ನಿವೇಶಕ್ಕೆ ಮೌನ ಪರಿಹಾರ. ಗಣೇಶ ಕವಚ, ಕಾರ್ತಿಕೇಯ ಸ್ತೋತ್ರ,ಶನಿಮಹಾತ್ಮೆ ಓದಿ.
 


೨. ವೃಷಭ:
  ಎಚ್ಚರಿಕೆಯಿಂದ ಮುಂದುವರಿದರೆ   ಯಶಸ್ಸು ಖಚಿತ. ಉದ್ಯೋಗಸ್ಥರಿಗೆ ಪ್ರಗತಿ ಸ್ಥಿರ. ಆಪ್ತರಿಂದ ನಿರೀಕ್ಷಿತ ಸಹಾಯ ಕೈಸೇರುವ ಸಾಧ್ಯತೆ. ಮನೆಯಲ್ಲಿ ಎಲ್ಲರ ಆರೋಗ್ಯ ಸಮಾಧಾನಕರ. ಗೃಹಿಣಿಯರಿಗೆ ಪುಟ್ಟ ಉದ್ಯಮ ಆರಂಭಿಸುವ ಉತ್ಸಾಹ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ ಓದಿ.


೩.ಮಿಥುನ:

 ನಿರ್ಧಾರ ಬದಲಾವಣೆ ಬೇಡ. ಪ್ರಾಮಾಣಿಕ ಅಧಿಕಾರಿಗಳ ಸತ್ವಪರೀಕ್ಷೆ. ಪೂರ್ವ ದಿಕ್ಕಿನಿಂದ ಶತ್ರುಬಾಧೆ. ವೃತ್ತಿಪರರಿಗೆ ಹೆಚ್ಚು ಜವಾಬ್ದಾರಿ. ಹಿರಿಯರು, ಮಹಿಳೆಯರು, ಮಕ್ಕಳಿಗೆ ನೆಮ್ಮದಿಯ ದಿನ. ಗಣಪತಿ ಅಥರ್ವಶೀರ್ಷ,  ಶಿವನಾಮಾವಲ್ಯಷ್ಟಕ, ದೇವೀಕವಚ ಓದಿ.

೪.ಕರ್ಕಾಟಕ:

  ಆರೋಗ್ಯದ ಕುರಿತು ಅತಿಯಾಗಿ ಚಿಂತಿಸದಿರಿ. ಮಿಶ್ರಫಲಗಳ ದಿನವಾಗಿದ್ದರೂ  ಶುಭಫಲಗಳೇ ಅಧಿಕ. ಉದ್ಯೋಗಸ್ಥರಿಗೆ ಉತ್ತೇಜನದ ವಾತಾವರಣ. ಸ್ವಂತ ಉದ್ಯಮಗಳವರಿಗೆ  ಪಂಥಾಹ್ವಾನಗಳು. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣೇಶ ದ್ವಾದಶನಾಮ ಸ್ತೋತ್ರ, ನರಸಿಂಹ ಕವಚ, ಮಹಾಲಕ್ಷ್ಮಿ ಅಷ್ಟಕ ಓದಿ.
 

೫.ಸಿಂಹ:

  ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಸರ್ವರ ಪ್ರಶಂಸೆಗೆ ಪಾತ್ರರಾಗುವ ಯೋಗವಿದೆ. ಸ್ವಂತ ವ್ಯವಹಾರದಲ್ಲಿ ಅಭೂತಪೂರ್ವ ಯಶಸ್ಸು. ಆಪ್ತಮಿತ್ರರಿಗೆ ಸಹಾಯ ಮಾಡುವ ಅವಕಾಶ. ಹೊಸ ಕ್ಷೇತ್ರ ಪ್ರವೇಶಿಸಲು ಕಾಲ ಪಕ್ವ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೬. ಕನ್ಯಾ:
 ನೆನೆದದ್ದು ನೆನೆದಂತೆ ಆದರೆ ಪರಮಾನಂದ. ಉದ್ಯೋಗ ರಂಗದಲ್ಲಿ ನಿರಾತಂಕದ ಮುನ್ನಡೆ. ವ್ಯವಹಾರಸ್ಥರಿಗೆ ನಿರೀಕ್ಷಿತ ವಲಯಗಳಿಂದ ಸಕಾಲಿಕ ನೆರವು. ಗೃಹಿಣಿಯರ ಮಹತ್ವಾಕಾಂಕ್ಷೆಗೆ ಪೂರಕ ವಾತಾವರಣ. ಮಕ್ಕಳ ವ್ಯಾಸಂಗದಲ್ಲಿ ಪ್ರಗತಿ. ಗಣಪತಿ ಅಥರ್ವಶೀರ್ಷ, ದುರ್ಗಾಸ್ತೋತ್ರ, ಅನ್ನಪೂರ್ಣಾಷ್ಟಕ ಓದಿ.

೭.ತುಲಾ:

  ಗ್ರಹ ಸ್ಥಿತಿಯಿಂದ ತೊಂದರೆಯಾಗಲಾದು. ದೇವತಾರ್ಚನೆ ,ಧಾರ್ಮಿಕ ಗ್ರಂಥಗಳ ಅಧ್ಯಯನದಲ್ಲಿ ಆಸಕ್ತಿ. ಹತ್ತಿರದ ದೇವತಾ ಸಾನ್ನಿಧ್ಯ ಸಂದರ್ಶನ. ಉದ್ಯೋಗ, ವ್ಯವಹಾರಗಳಲ್ಲಿ ಸುಧಾರಣೆ. ಆಪ್ತವಲಯದಲ್ಲಿ ಶುಭಕಾರ್ಯಕ್ಕೆ ಸಿದ್ಧತೆ. ಗಣೇಶ ತ್ರಿಶತಿ ಸ್ತೋತ್ರ, ದತ್ರಾತ್ರೇಯ ಸ್ತೋತ್ರ, ಲಕ್ಷ್ಮೀಸ್ತೋತ್ರ  ಓದಿ.


೮.ವೃಶ್ಚಿಕ:
 ಬಯಸಿದ್ದು ಬಯಸಿದಂತೆ ಆಗದಿದ್ದರೂ ಒಟ್ಟಿನಲ್ಲಿ ಆನಂದ. ಉದ್ಯೋಗ ರಂಗದಲ್ಲಿ ಪ್ರತಿಭೆ ತೋರಿಸಲು  ಅವಕಾಶ. ವ್ಯವಹಾರ ಕ್ಷೇತ್ರದಲ್ಲಿ ಪೈಪೋಟಿ. ಆಪ್ತವಲಯದಿಂದ ಶುಭವಾರ್ತೆ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಕ್ಷೇಮ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.

೯. ಧನು:

ಎಣಿಸಿದ ಸಮಯಕ್ಕೆ ಸರಿಯಾಗಿ ಕಾರ್ಯ ಮುಕ್ತಾಯ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಹಿರಿಯರ ಮತ್ತು ಗೃಹಿಣಿಯರಿಗೆ ಸ್ವಾವಲಂಬನೆಯ ತೃಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯಸಾಮರ್ಥ್ಯ ವೃದ್ಧಿಗೆ ಪ್ರಯತ್ನ. ಅಲ್ಪಕಾಲೀನ ಹೂಡಿಕೆಗಳಿಂದ ಲಾಭ. ಗಣೇಶ ಕವಚ, ಶಿವ ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

೧೦.ಮಕರ:

ಆತಂಕರಹಿತ ವಾತಾವರಣದಲ್ಲಿ ದುಡಿಮೆ. ಮನೆಯಲ್ಲಿ ಹೆಚ್ಚುಕಡಿಮೆ ಎಲ್ಲರ ಆರೋಗ್ಯ ಉತ್ತಮ. ಖಾಸಗಿ ರಂಗದ ಉದ್ಯೋಗಸ್ಥರಿಗೆ ಕೆಲಸದ ಒತ್ತಡ. ಉದ್ಯೋಗಾನ್ವೇಷಣೆಯಲ್ಲಿ ಯಶಸ್ಸು. ಕೇಡು ಬಗೆದವರಿಗೆ ಕೇಡುಗಾಲ ಸನ್ನಿಹಿತ.
ಗಣಪತಿ ಅಥರ್ವಶೀರ್ಷ, ದೇವೀಸ್ತೋತ್ರ, ಹನುಮಾನ್ ಚಾಲೀಸಾ ಓದಿ.


೧೧. ಕುಂಭ:

ನಿತ್ಯದ ವ್ಯವಹಾರಗಳು ಅಬಾಧಿತ. ಉದ್ಯೋಗ, ವ್ಯವಹಾರಗಳಲ್ಲಿ ನಾವೀನ್ಯ. ಸಮಾಜದಲ್ಲಿ ವಿಶೇಷ ಗೌರವ ಪ್ರಾಪ್ತಿ. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ ಸಹಕಾರ. ಹಿರಿಯರು, ಗೃಹಿಣಿಯರಿಗೆ ಉಲ್ಲಾಸ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ, ಶನಿಮಹಾತ್ಮೆ ಓದಿ.

೧೨.ಮೀನ:

ಏಳೂವರೆ ಶನಿಯ ಪ್ರಭಾವವಿದ್ದರೂ ಶುಭಫಲಗಳೇ ಅಧಿಕ. ವಾಹನ ಸಂಬಂಧಿ ವ್ಯವಹಾರಸ್ಥರಿಗೆ ಸ್ಥಿರ ಆದಾಯ. ಸಂಗಾತಿಯಿಂದ ಎಲ್ಲ ವ್ಯವಹಾರಗಳಿಗೆ ಪ್ರೋತ್ಸಾಹ. ತಾಯಿಯ, ಮಾತೃಸಮಾನರ ಆರೋಗ್ಯ ಉತ್ತಮ. ಹತ್ತಿರದ ಕ್ಷೇತ್ರ ದರ್ಶನ ಸಂಭವ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.