ದಿನ ಭವಿಷ್ಯ

29-08-2025

Aug 29, 2025 - 11:52
ದಿನ ಭವಿಷ್ಯ

            ‌ ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 2

೧.,ಮೇಷ:

 ಶನಿ ಮಹಾತ್ಮನ  ಬಗೆಬಗೆಯ   ಮಹಿಮೆಗಳು. ಕಾರ್ಯವೈಖರಿಯಲ್ಲಿ ಎದ್ದುಕಾಣುವ ಸುಧಾರಣೆ. ಉದ್ಯಮಿಗಳಿಗೆ ಕೆಲವು ವಿಭಾಗಗಳಲ್ಲಿ  ಉತ್ತಮ ಲಾಭ‌ ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟದ ಸಾಧ್ಯತೆ. ಶಿಕ್ಷಕ ವೃತ್ತಿಯವರಿಗೆ ಹೊಸ ಜವಾಬ್ದಾರಿ.
ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ  ಓದಿ.


೨. ವೃಷಭ:


 ಸಮಯದೊಂದಿಗೆ ಸೆಣಸಾಟ ಅನಿವಾರ್ಯ. ವಸ್ತ್ರ, ಸಿದ್ಧ ಉಡುಪುಗಳು, ಪಾದರಕ್ಷೆ ವ್ಯಾಪಾರಿಗಳಿಗೆ  ನಿರೀಕ್ಷಿತ  ಲಾಭ. ಎಲ್ಲ ಕಾರ್ಯಗಳಲ್ಲೂ  ತಡೆಯಿಲ್ಲದ ಪ್ರಗತಿ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ, ಸಾಮರಸ್ಯವೃದ್ಧಿ. ಊರಿನ ದೇವಾಲಯ ಸಂದರ್ಶನ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ದೇವೀಸ್ತೋತ್ರ ಓದಿ.


೩. ಮಿಥುನ:

ವಿಘ್ನಗಳು ಬಂದರೂ ವಿಚಲಿತರಾಗದಿರಿ. ತೋಟಗಾರಿಕೆ,ಜೇನು ವ್ಯವಸಾಯ ಆಸಕ್ತರಿಗೆ ಅನುಕೂಲ.   ನೌಕರರ ಕ್ಷೇಮಾಭ್ಯುದಯಕ್ಕೆ ವ್ಯವಸ್ಥೆ. ಧಾರ್ಮಿಕ‌ ಸಾಹಿತ್ಯ ಅಧ್ಯಯನ.  ಮಕ್ಕಳಿಗೆ ಕಲಿಕೆಯಲ್ಲಿ ಮಾರ್ಗದರ್ಶನ.  ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕವಚ, ಶನಿಸ್ತೋತ್ರ ಓದಿ.

೪. ಕರ್ಕಾಟಕ:


  ದಿನಕ್ಕೊಂದು ಬಗೆಯ ಹೊಣೆಗಾರಿಕೆ. ಉದ್ಯಮಗಳಿಗೆ ಅನುಕೂಲ ಪರಿಸ್ಥಿತಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಪ್ರಮಾಣದಲ್ಲಿ ಲಾಭ.  ಗೃಹೋತ್ಪನ್ನಗಳಿಂದ  ಅಧಿಕ ಆದಾಯ. ಉದ್ಯೋಗಾನ್ವೇಷಿಗಳಿಗೆ ಅವಕಾಶ ಗೋಚರ. ಗಣೇಶ ದ್ವಾದಶನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.


೫. ಸಿಂಹ:
 ಪಾಲುದಾರಿಕೆ ವ್ಯವಹಾರ ಪ್ರಗತಿ ಪಥದಲ್ಲಿ.  ಸ್ವೋದ್ಯೋಗಿ ಮಹಿಳೆಯರಿಗೆ  ಸರ್ವತ್ರ ಯಶಸ್ಸು. ಸಹಕಾರಿ ರಂಗದವರ ನಡೆಯಲ್ಲಿ ಎಚ್ಚರ. ಸ್ಥಿರಾಸ್ತಿ ಖರೀದಿಗೆ ಕಿರಿಯರ ಪ್ರಯತ್ನ. ಹಿರಿಯರ ಮನೆಯಲ್ಲಿ ದೇವತಾ ಕಾರ್ಯ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ ಓದಿ.


೬. ಕನ್ಯಾ:

  ಬೌದ್ಧಿಕ ಕೆಲಸಗಾರರಿಗೆ   ಅಧಿಕ ಕೆಲಸ. ಬಂಧುಗಳ ಮನೆಯಲ್ಲಿ ವಿಶೇಷ ದೇವತಾ ಕಾರ್ಯ. ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ. ಟೈಲರಿಂಗ್ ವೃತ್ತಿ ಬಲ್ಲವರಿಗೆ ಉದ್ಯೋಗಾವಕಾಶ. ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ನರಸಿಂಹ ಸ್ತೋತ್ರ, ದೇವೀಸ್ತೋತ್ರ ಓದಿ.

೭. ತುಲಾ:

 ಉದ್ಯೋಗ  ನಿರ್ವಹಣೆಯಲ್ಲಿ ಸಮಾಧಾನ. ಸಣ್ಣ ಉದ್ಯಮಿಗಳಿಗೆ ಉತ್ತಮ ಲಾಭ. ವಿವಾಹಾಸಕ್ತರಿಗೆ ಸಮರ್ಪಕ‌ ಜೋಡಿ ಲಭಿಸುವ ಸಾಧ್ಯತೆ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ.  ಹಿರಿಯರ ಆರೋಗ್ಯದಲ್ಲಿ ಸುಧಾರಣೆ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಲಕ್ಷ್ಮೀಸ್ತೋತ್ರ ಓದಿ.


೮. ವೃಶ್ಚಿಕ:
  ಉದ್ಯೋಗ, ವ್ಯವಹಾರಗಳಲ್ಲಿ ಸುಖಾನುಭವ.  ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ  ಲಾಭ. ಹಿರಿಯರ,  ಗೃಹಿಣಿಯರ,ಮಕ್ಕಳ‌ ಆರೋಗ್ಯ ಉತ್ತಮ.‌ ಕುಟುಂಬದ ಹಿರಿಯ ಮನೆಗೆ ಭ಼ೇಟಿ. ತೀರ್ಥಯಾತ್ರೆಯ ಸವಿನೆನಪುಗಳಲ್ಕಿ ಕಾಲಯಾಪನೆ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೯. ಧನು:
  ಕ್ಲಪ್ತ ಸಮಯದಲ್ಲಿ ಕಾರ್ಯ‌ ಮುಕ್ತಾಯ.  ಕೃಷಿ ಕ್ಷೇತ್ರದಲ್ಲಿ  ಪ್ರಯೋಗಗಳು ಯಶಸ್ವಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಹೇರಳ ಆದಾಯ ಹತ್ತಿರದ ಬಂಧುಗಳಿಂದ  ಶುಭ ಸಮಾಚಾರ‌. ಅನಾಥಾಶ್ರಮಕ್ಕೆ ಆರ್ಥಿಕ ನೆರವು ನೀಡಿಕೆ. ಗಣಪತಿ ಅಥರ್ವಶೀರ್ಷ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೧೦. ಮಕರ:

  ನಿತ್ಯದ ಕಾರ್ಯಗಳ ಕುರಿತು  ಸಲಹೆ ವಿನಿಮಯ. ಕಟ್ಟಡ ನಿರ್ಮಾಪಕರಿಗೆ ಸಾಮಗ್ರಿಗಳ  ಸಮಸ್ಯೆ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ  ಲಾಭ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಪ್ರಗತಿ. ದೂರದಲ್ಲಿರುವ..ಬಂಧುಗಳ ಆಗಮನ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಕವಚ, ಹನುಮಾನ್ ಚಾಲೀಸಾ ಓದಿ..


೧೧. ಕುಂಭ:

   ಹೊಸ ಕಾರ್ಯ ಕೈಗೊಳ್ಳಲು ಪೂರಕವಾದ ವಾತಾವರಣ. ಕೇಟರಿಂಗ್  ವ್ಯವಹಾರಸ್ಥರಿಗೆ ಅಧಿಕ ಜವಾಬ್ದಾರಿ. ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ. ಗೃಹೋತ್ಪನ್ನಗಳ  ಗುಣಮಟ್ಟಕ್ಕೆ ಆದ್ಯತೆ ಇರಲಿ.  ಸಮಾಜ ಸೇವಾ ಕಾರ್ಯಗಳು ಮುಂದುವರಿಕೆ. ಗಣೇಶ ಪಂಚರತ್ನ, ಶಿವಸಹಸ್ರನಾಮ, ಶನಿಮಹಾತ್ಮೆ  ಓದಿ.

೧೨. ಮೀನ:
 ನಿಯೋಜಿತ ಕಾರ್ಯಗಳು  ತೀವ್ರಗತಿಯಲ್ಲಿ ಮುಂದುವರಿಕೆ. ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತರಣೆ. ಸರಕಾರಿ ಕಾರ್ಯಾಲಯಗಳಲ್ಲಿ  ಹಿತಾನುಭವ. ಗುರುಸಮಾನ ವ್ಯಕ್ತಿಯಿಂದ ಮಾರ್ಗದರ್ಶನ. ಹಿರಿಯ ಬಂಧುವಿನ ಆರೋಗ್ಯ ಸುಧಾರಣೆ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ  ಓದಿ.