ದಿನ ಭವಿಷ್ಯ
31-08-2025

ಜ್ಯೋತಿರ್ಮಯ.
ಅದೃಷ್ಟ ಸಂಖ್ಯೆ 4
೧.ಮೇಷ:
ನಿಗದಿತ ಕೆಲಸಗಳು ಮುಗಿದ ಕಾರಣ ರಜೆಯ ಆನಂದವನ್ನು ಅನುಭವಿಸಿರಿ. ಮಿತ್ರರೊಂದಿಗೆ ಸಂತೋಷ ಕೂಟ. ಹಿರಿಯರ ಆರೋಗ್ಯದ ಕಡೆಗೆ ಗಮನ ಇರಲಿ. ವಿವಾಹ ಮಾತುಕತೆಗಾಗಿ ದೂರ ಪ್ರಯಾಣ. ಗಣೇಶ ಕವಚ, ಶಿವಸಹಸ್ರನಾಮ, ಶನಿಮಹಾತ್ಮೆ ಓದಿ.
೨.ವೃಷಭ:
ಉದ್ಯೋಗಸ್ಥರಿಗೆ ಆರಾಮದ ಅನುಭವ. ಉತ್ಪಾದನೆ ಹೆಚ್ಚಳದ ಕುರಿತು ಚಿಂತನೆ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ಹಿರಿಯರು, ಗೃಹಿಣಿಯರು ಮತ್ತು ಮಕ್ಕಳಿಗೆ ಉಲ್ಲಾಸದ ವಾತಾವರಣ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
೩. ಮಿಥುನ:
ಗುರುಸಮಾನ ವ್ಯಕ್ತಿಯ ಶುಭಾಗಮನ. ದಿನವಿಡೀ ರಜೆಯ ಆನಂದ. ಸ್ವಂತ ಉದ್ಯಮದ ಪ್ರಗತಿ ತೃಪ್ತಿಕರ. ಕೃಷ್ಯುತ್ಪನ್ನಗಳ ಮಾರಾಟದಿಂದ ಲಾಭ. ಮಕ್ಕಳಿಗೆ ಪರೀಕ್ಷೆಗೆ ಸಿದ್ಧರಾಗಲು ಮಾರ್ಗದರ್ಶನ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೪.ಕರ್ಕಾಟಕ:
ಕಾರ್ಯಾಲಯಕ್ಕೆ ವಿರಾಮ, ಅನ್ಯ ಕಾರ್ಯಗಳಿಗೆ ಗಮನ. ಉದ್ಯಮದ ಉತ್ಪಾದನೆಗಳಿಗೆ ಅಧಿಕ ಬೇಡಿಕೆ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ಹೆಚ್ಚಳ. ಹಳೆಯ ಸಾಲ ವಸೂಲಿಯಾಗಿ ನೆಮ್ಮದಿ. ಸಂಸಾರ ಸಹಿತ ದೇವಿಯ ಆಲಯಕ್ಕೆ ಭೇಟಿ. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೫_ಸಿಂಹ:
ಉದ್ಯೋಗಸ್ಥರಿಗೆ ಮತ್ತು ವ್ಯವಹಾರಸ್ಥರಿಗೆ ನೆಮ್ಮದಿ. ಗ್ರಾಹಕರ ಪ್ರಚಾರದಿಂದ ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಂಟ್ರಾಕ್ಟರರಿಗೆ ಕಾರ್ಮಿಕರ ಸಮಸ್ಯೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಧಾರ್ಮಿಕ ಕಾರ್ಯದಲ್ಲಿ ಭಾಗಿ. ಗಣೇಶ ಪಂಚರತ್ನ, ಶಿವಪಂಚಾಕ್ಷರ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.
೬.ಕನ್ಯಾ:
ಗೃಹ ವಿಭಾಗದಲ್ಲಿ ಹಿತಕರ ವಾತಾವರಣ. ಸ್ವಂತ ಉದ್ಯಮದಲ್ಲಿ ಗಣನಾರ್ಹ ಪ್ರಗತಿ, ಉದ್ಯೋಗಾಸಕ್ತರಿಗೆ ಆಕರ್ಷಕ ಅವಕಾಶಗಳು ಲಭ್ಯ. ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ. ಪತ್ನಿಯ ಕಡೆಯಲ್ಲಿ ವಿವಾಹ ನಿಶ್ಚಯ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೭ತುಲಾ:
ಸಮಸ್ಯೆಗಳಿಂದ ಮುಕ್ತಿ. ಆವಶ್ಯಕತೆಗೆ ಸರಿಯಾಗಿ ಧನಪ್ರಾಪ್ತಿ. ಗೃಹೋಪಯೋಗಿ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಕುಲದೇವರ ದೇವಾಲಯಕ್ಕೆ ಭೇಟಿ. ಗಣೇಶ ಸ್ತೋತ್ರ, ವೇದಸಾರ ಶಿವಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೮.ವೃಶ್ಚಿಕ:
ಸಾಂಸಾರಿಕ ತಾಪತ್ರಯಗಳಿಗೆ ವಿದಾಯ. ಮಿತ್ರವರ್ಗದವರ ಭೇಟಿ. ಉದ್ಯಮ ಭರದಲ್ಲಿ ಮುನ್ನಡೆ. ಉತ್ಪನ್ನಗಳ ಗುಣಮಟ್ಟಕ್ಕೆ ಸಾಮಾಜಿಕರ ಶ್ಲಾಘನೆ. ಗೃಹೋದ್ಯಮ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೯. ಧನು:
ಸಾಮಾಜಿಕ ರಂಗದಲ್ಲಿ ವಿಶೇಷ ಗೌರವ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ. ಕೃಷಿ ಭೂಮಿ ಅಭಿವೃದ್ಧಿಗೆ ಪ್ರಯತ್ನ. ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಪ್ರಗತಿ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೧೦. ಮಕರ:
ಸಂಸಾರದ ಆವಶ್ಯಕತೆಗಳ ಕಡೆಗೆ ಗಮನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕೇಟರಿಂಗ್, ಶಾಮಿಯಾನಾ ವ್ಯವಹಾರದಲ್ಲಿ ಲಾಭ. ಹಣ್ಣು ತರಕಾರಿ ಬೆಳೆಗಾರರಿಗೆ ಅಧಿಕ ವ್ಯಾಪಾರ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವರ್ಧನೆ. ಗಣೇಶ ಕವಚ, ಶಿವಕವಚ, ಹನುಮಾನ್ ಚಾಲೀಸಾ ಓದಿ.
೧೧.ಕುಂಭ:
ಹೊಸ ಆದಾಯ ಮೂಲಗಳ ಅನ್ವೇಷಣೆ. ಸರಕಾರಿ ನೌಕರರಿಗೆ ವಿರಾಮದ ಆನಂದ. ಕೆಲವು ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶ ಗೋಚರ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ ಶನಿಮಹಾತ್ಮೆ ಓದಿ.
೧೨.ಮೀನ:
ಧರ್ಮ ಮಾರ್ಗದಲ್ಲಿ ನಡೆಯಲು ಸ್ಥಿರಬುದ್ಧಿ. ಸಂಸಾರದ ಆವಶ್ಯಕತೆಗಳ ಕಡೆಗೆ ಗಮನ. ಸರಕಾರಿ ಇಲಾಖೆ ನೌಕರರಿಂದ ಸಹಕಾರ. ಹೊಸ ಪಾಲುದಾರಿಕೆ ವ್ಯವಹಾರ ಮುನ್ನಡೆ. ಹಿರಿಯ ಬಂಧುವಿಗೆ ಆಪತ್ಕಾಲದಲ್ಲಿ ಸಹಾಯ. ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.