ದಿನ ಭವಿಷ್ಯ
04-09-2025
ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 4
ಮೇಷ:
ಒಳಿತು, ಕೆಡುಕುಗಳ ವಿಮರ್ಶೆಯ ಬಳಿಕವಷ್ಟೇ ಕ್ರಿಯೆಗೆ ಇಳಿಯಿರಿ. ಆದಾಯ ವೃದ್ಧಿಗೆ ಇನ್ನಷ್ಡು ಉಪಾಯಗಳು ತೆರೆದುಕೊಳ್ಳಲಿವೆ. ವಸ್ತ್ರೋದ್ಯಮ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ. ಸಾಂಸಾರಿಕವಾಗಿ ನೆಮ್ಮದಿಯ ಅನುಭವ. ಗಣಪತಿ ಅಥರ್ವಶೀರ್ಷ, ವಿಷ್ಷು ಸಹಸ್ರನಾಮ, ಶನಿಮಹಾತ್ಮೆ ಓದಿ.
೨.ವೃಷಭ:
ಪಾಲಿಗೆ ಬಂದ ಅವಕಾಶದ ಸದುಪಯೋಗ. ಸಾಮಾಜಿಕ ಕಾರ್ಯಗಳಿಗೆ ಉದ್ಯಮಿಗಳ ಪ್ರೋತ್ಸಾಹ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ಉಳಿತಾಯ ಏಜೆಂಟರಿಗೆ ಸಾಮಾನ್ಯ ಲಾಭ. ಪಾರದರ್ಶಕ ವ್ಯವಹಾರದಿಂದ ಅನುಕೂಲ. ಗಣೇಶ ಕಬಚ, ದತ್ತಾತ್ರೇಯ ಸ್ತೋತ್ರ , ಆದಿತ್ಯ ಹೃದಯ ಓದಿ.
೩ಮಿಥುನ:
ವ್ಯಂಗ್ಯೋಕ್ತಿಗಳನ್ನು ತಲೆಗೆ ಹಚ್ಚಿಕೊಳ್ಳಬೇಡಿ. ಉದ್ಯೋಗ, ವ್ಯವಹಾರ ಎರಡರಲ್ಲೂ ಯಶಸ್ಸು. ಉದ್ಯಮಕ್ಕೆ ಎದುರಾದ ಸೌಲಭ್ಯಗಳ ಸಮಸ್ಯೆ ನಿವಾರಣೆ. ಹಿರಿಯರ ಮನೆಯಲ್ಲಿ ದೇವತಾ ಕಾರ್ಯ.ಸ್ವಾವಲಂಬಿ ಜೀವನದ ಕಡೆಗೆ ಒಲವು. ಗಣೇಶ ಅಷ್ಟಕ, ಕಾರ್ತಿಕೇಯ ಸ್ತೋತ್ರ, ಮವಗ್ರಹ ಸ್ತೋತ್ರ ಓದಿ.
೪. ಕರ್ಕಾಟಕ:
ಸಮಾಧಾನದ ನಡೆಯಿಂದ ಯಶಸ್ಸು. ಸಣ್ಣ ಉದ್ಯಮಿಗಳಿಗೆ ತುಂಡು ಪುಢಾರಿಗಳ ಕಾಟ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಸಣ್ಣ ಪ್ರಮಾಣದ ಕೃಷಿಕಾರ್ಯದಲ್ಲಿ ಸಂತೃಪ್ತಿ. ಅಪವಾದ ಬರದಂತೆ ಎಚ್ಚರ ವಹಿಸಿ. ಸಂಕಷ್ಟಹರ ಗಣೇಶ ಸ್ತೋತ್ರ, ನರಸಹ ಕವಚ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೫.ಸಿಂಹ:
ಜನಮನ ಸೆಳೆದ ಯಶಸ್ಸುಗಳ ಸರಮಾಲೆ! ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ. ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ. ಕೌಟುಂಬಿಕ ರಂಗದಲ್ಲಿ ನೆಮ್ಮದಿ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಗುರುಸ್ತೋತ್ರ ಓದಿ.
೬.ಕನ್ಯಾ:
ಆಹಾರ- ವಿಹಾರಗಳಲ್ಲಿ ಸಂಯಮ ಪಾಲಿಸಿ. ವಾಹನ ಉದ್ಯಮಿಗಳಿಗೆ ಆದಾಯ ವೃದ್ಧಿ. ಸಟ್ಟಾ ವ್ಯವಹಾರದಲ್ಲಿ ನಷ್ಟ. ಪಾಲುದಾರಿಕೆ ಉದ್ಯಮದಲ್ಲಿ ನಿಧಾನ ಪ್ರಗತಿ. ಹಿರಿಯರ ಆರೋಗ್ಯ ಸ್ಥಿರವಾಗಿ ಸುಧಾರಣೆ. ಗಣೇಶ ದ್ವಾದಶನಾಮ ಸ್ತೋತ್ರ, ರಾಮ ಭುಜಂಗಪ್ರಯಾತ ಸ್ತೋತ್ರ, ಹನುಮಾನ್ ಚಾಲೀಸಾ ಓದಿ. ಗಣೇಶ ಕವಚ, ವಿಷ್ಷು ಸಹಸ್ರನಾಮ, ಲಕ್ಷ್ಮೀ ಸ್ತೋತ್ರ ಓದಿ.
೭. ತುಲಾ:
ದೈಹಿಕ ಶ್ರಮದಷ್ಟೇ ಬೌದ್ಧಿಕ ಶ್ರಮಕ್ಕೂ ಗೌರವ. ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ಗೃಹ ನಿರ್ಮಾಣ ಯೋಜನೆ ಅಂತಿಮ. ಮಹಿಳೆಯರ ನೇತೃತ್ವದ ಉದ್ಯಮಗಳಿಗೆ ಪ್ರಚಾರ. ಕುಟುಂಬದೊಳಗೆ ಅನುರಾಗ, ಪ್ರೀತಿ ವೃದ್ಧಿ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೮.ವೃಶ್ಚಿಕ:
ಹಿರಿಯ ಅಧಿಕಾರಿಗಳಿಂದ ಕಿರಿಕಿರಿ. ಖಾಸಗಿ ರಂಗದವರಿಗೆ ಸಾಮಾನ್ಯ ಪರಿಸ್ಥಿತಿ. ಯಂತ್ರೋಪಕರಣ ವ್ಯಾಪಾರಿಗಳಿಗೆ ಅದೃಷ್ಟ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ. ಮಕ್ಕಳ ಆರೋಗ್ಯದ ಕುರಿತು ಎಚ್ಚರ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೯.ಧನು:
ಯೋಜನೆಗಳು ಕಾರ್ಯರೂಪಕ್ಕೆ ಬರುವ ಸಮಯ. ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಹಿನ್ನಡೆ. ಉದ್ಯೋಗಾಸಕ್ತ ಶಿಕ್ಷಿತರಿಗೆ ಸದವಕಾಶ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳಿಗೆ ಲಾಭ. ವ್ಯವಹಾರದ ಸಂಬಂಧ ಪ್ರಮುಖ ವ್ಯಕ್ತಿಯ ಭೇಟಿ. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಕವಚ, ಮಹಾಲಕ್ಷ್ಮಿ ಅಷ್ಟಕ ಓದಿ.
೧೦.ಮಕರ:
ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಹೇರಳ ಲಾಭ. ಕನ್ಯಾರ್ಥಿಗಳಿಗೆ ನಿರಾಶೆಯ ಸನ್ನಿವೇಶ. ಹಳೆಯ ಒಡನಾಡಿಗಳ ಸಂಪರ್ಕ. ಮಕ್ಕಳ ಕ್ಷೇಮ ಚಿಂತನೆ. ಪ್ರೀತಿಯ ವ್ಯವಹಾರಕ್ಕೆ ಗೆಲುವು. ಗಣಪತಿ ಅಥರ್ವಶೀರ್ಷ, ದತ್ತಪಂಜರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:
ಕಿರಿಯರಲ್ಲಿ ನವೋತ್ಸಾಹ ತುಂಬಲು ಪ್ರಯತ್ನ. ಗ್ರಾಹಕರ ಅಪೇಕ್ಷೆಗೆ ಸರಿಯಾಗಿ ಸ್ಪಂದನ. ಸಮಾಜ ಸೇವಾಕಾರ್ಯಗಳಿಗೆ ಮತ್ತಷ್ಟು ಅವಕಾಶಗಳು. ಕುಶಲಕರ್ಮಿಗಳಿಗೆ ಕೀರ್ತಿ ತರುವ ಸನ್ನಿವೇಶ.ಸಂಗೀತ ಶ್ರವಣಕ್ಕೆ ಸಮಯ ಮೀಸಲು. ಗಷೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.
೧೨. ಮೀನ:
ಉದ್ಯೋಗ ಸ್ಥಾನದಲ್ಲಿ ಕೊಂಚ ವ್ಯತ್ಯಾಸ. ಸರಕಾರಿ ಕಾರ್ಯಾಲಯಗಳಲ್ಲಿ ಸಾಮಾನ್ಯ ಅನುಭವ. ಭವಿಷ್ಯದ ಯೋಜನೆಗಳ ಅನುಷ್ಠಾನಕ್ಕೆ ಕಾಲ ಸನ್ನಿಹಿತ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆ. ಹೊಸ ವ್ಯವಹಾರ ಪ್ರಸ್ತಾವದಿಂದ ಅನುಕೂಲ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.


