ದಿನ ಭವಿಷ್ಯ

11-09-2025

Sep 11, 2025 - 16:43
ದಿನ ಭವಿಷ್ಯ

               - ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 11


೧.ಮೇಷ:

  ಪರಿಪೂರ್ಣತೆ ಸಾಧಿಸುವ ಪ್ರಯತ್ನಕ್ಕೆ ವಿಘ್ನ. ಉದ್ಯೋಗ ಸ್ಥಾನದಲ್ಲಿ ಸಾಮಾನ್ಯ ತೃಪ್ತಿ. ಪೂರಕ ಆದಾಯದ ಮಾರ್ಗ ಹುಡುಕಾಟ. ವಸ್ತ್ರೋದ್ಯಮ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು. ಪಿತ್ರಾರ್ಜಿತ ಆಸ್ತಿ ಅಭಿವೃದ್ಧಿ  ಹಾಗೂ ವಿಸ್ತರಣೆ  ಮುನ್ನಡೆ. ಬಂಧುಗಳ ಮನೆಯಲ್ಲಿ ಪಿತೃಕಾರ್ಯ. ಗಣೇಶ ಕವಚ, ಆದಿತ್ಯ ಹೃದಯ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.


 

೨.ವೃಷಭ:

 ಎಲ್ಲ ಕಾರ್ಯಗಳಲ್ಲಿ  ಶೀಘ್ರ ಯಶಸ್ಸು. ಉದ್ಯೋಗ ಸ್ಥಾನದಲ್ಲಿ ಕೆಲಸಕ್ಕೆ ಉತ್ತೇಜನ. ಬಂಧುಗಳ ಕಡೆಯಿಂದ  ಶುಭ ವಾರ್ತೆ. ಸಮಾಜ ಸೇವಾ  ಸಂಸ್ಥೆಗೆ  ಉದ್ಯಮಿಗಳ ಪ್ರೋತ್ಸಾಹ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ಕೇಟರಿಂಗ್ ವ್ಯವಹಾರಸ್ಥರಿಗೆ ಉತ್ತಮ ಲಾಭ‌. ದೈವಾನುಗ್ರಹ ಪ್ರಾಪ್ತಿ. ಗಣೇಶ ಅಷ್ಟಕ, ನವಗ್ರಹ ಸ್ತೋತ್ರ,  ದತ್ತಾತ್ರೇಯ ಕವಚ ಪಾರಾಯಣ ಮಾಡಿ.

೩ಮಿಥುನ:

 ಧಾರ್ಮಿಕ ಸಾಹಿತ್ಯ ಅಧ್ಯಯನ. ಉದ್ಯೋಗಸ್ಥರಿಗೆ  ಸಂತೃಪ್ತಿ, ಸಮಾಧಾನದ ಅನುಭವ. ಸ್ವಂತ ಉದ್ಯಮಕ್ಕೆ ಮೂಲ ಸೌಲಭ್ಯಗಳ ಸಮಸ್ಯೆ.  ಪ್ರಾಚೀನ ವಿದ್ಯೆಗಳನ್ನು ಕಲಿಯುವ ಆಸಕ್ತಿ.  ಕೃಷಿಭೂಮಿಯಲ್ಲಿ ಹೊಸ ಪ್ರಯೋಗ. ಪರಿಸರ ರಕ್ಷಣೆಯಲ್ಲಿ ಆಸಕ್ತಿ. ಎಲ್ಲರ  ಆರೋಗ್ಯ ಉತ್ತಮ. ಗಣೇಶ ಪಂಚರತ್ನ,  ನವಗ್ರಹ ಸ್ತೋತ್ರ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

೪. ಕರ್ಕಾಟಕ:
ಸಂತೃಪ್ತ ಮನಸ್ಸಿನಿಂದ ಆರೋಗ್ಯ ವೃದ್ಧಿ. ಉದ್ಯೋಗ ಸ್ಥಾನದಲ್ಲಿ  ಸುಧಾರಣೆ. ಸ್ವಂತ ಉದ್ಯಮ ಕೊಂಚ ಪ್ರಗತಿ. ವ್ಯಾಪಾರಿಗಳಿಗೆ ಅಸೂಯಾಪರ ಶತ್ರುಗಳ ಬಾಧೆ. ಸ್ವಪ್ರಯತ್ನದಿಂದ ವ್ಯವಹಾರ ವೃದ್ಧಿ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ.  ಮನೆಯಲ್ಲಿ ದೇವತಾ ಕಾರ್ಯ, ಆರೋಗ್ಯ ವೃದ್ಧಿ. ಗಣಪತಿ ಅಥರ್ವಶೀರ್ಷ, ನವಗ್ರಹ ಸ್ರೋತ್ರ,  ಶಿವ ಸಹಸ್ರನಾಮ ಓದಿ.


೫.ಸಿಂಹ:
 ಕರ್ತವ್ಯ ಪ್ರಜ್ಞೆಯಿಂದ  ಶ್ರಮಿಸುವುದರಿಂದ  ಯಶಸ್ಸು. ಉದ್ಯೋಗ ಸ್ಥಾನದಲ್ಲಿ ವಿಶೇಷ ಮನ್ನಣೆ. ಉದ್ಯಮದ ಪ್ರಗತಿಯ ಮುಂದಿನ ಭಾಗ ಆರಂಭ. ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಉದ್ಯೋಗಾಸಕ್ತರಿಗೆ  ಹೊಸ ಅವಕಾಶಗಳು ಗೋಚರ. ವಿವಾಹ ಸಮಸ್ಯೆ ನಿವಾರಣೆಗೆ ಸಾಮಾಜಿಕರ ಚಿಂತನೆ. ಎಲ್ಲರ ಆರೋಗ್ಯ ಉತ್ತಮ. ಗಣೇಶ ಕವಚ, ವಿಷ್ಣು ಸಹಸ್ರನಾಮ, ದೇವೀ ಕವಚ ‌ಪಾರಾಯಣ ಮಾಡಿ.

೬.ಕನ್ಯಾ:

 ಪಿತೃಕಾರ್ಯದಿಂದ ಸಂಸಾರದಲ್ಲಿ ಕ್ಷೇಮ. ಉದ್ಯೋಗ ಸ್ಥಾನದಲ್ಲಿ  ಹಿತಕರ ವಾತಾವರಣ. ವಾಹನ ಉದ್ಯಮಿಗಳಿಗೆ ಆದಾಯ ವೃದ್ಧಿ. ಸಟ್ಟಾ ವ್ಯವಹಾರಕ್ಕೆ ವಿದಾಯ ಕೋರುವುದು ಲೇಸು. ತೋಟಗಾರಿಕೆಗೆ ಸಮಯ ಮೀಸಲು. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಗಣೇಶ ಪಂಚರತ್ನ, ನವಗ್ರಹ ಸ್ತೋತ್ರ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ ಓದಿ.

೭. ತುಲಾ:

 ಕುಟುಂಬದೊಳಗೆ ಬಾಂಧವ್ಯ ವೃದ್ಧಿ.  ಉದ್ಯೋಗದಲ್ಲಿ ಜ್ಞಾನ ಮತ್ತು  ಪ್ರತಿಭೆಗೆ ಮನ್ನಣೆ. ಎಲ್ಲ ಬಗೆಯ ಉದ್ಯಮಿಗಳಿಗೆ ಅನುಕೂಲ. ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ಮಕ್ಕಳ ಭವಿಷ್ಯ ಚಿಂತನೆ. ಬಂಗಾರದ ಅಂಗಡಿಗೆ ಭೇಟಿ. ಮಹಿಳಾ ಉದ್ಯಮಿಗಳಿಗೆ ಉತ್ತಮ ಲಾಭ. ಉತ್ಪನ್ನಗಳಿಗೆ ಅಧಿಕ ಬೇಡಿಕೆ. ಗಣೇಶ  ಅಷ್ಟಕ, ವಿಷ್ಣು ಸಹಸ್ರನಾಮ, ಆಂಜನೇಯ ಸ್ತೋತ್ರ ಪಾರಾಯಣ ಮಾಡಿ.


೮.ವೃಶ್ಚಿಕ:

  ಹಿನ್ನಡೆಯಾದ ಆರೋಗ್ಯ ಸುಧಾರಣೆ. ಉದ್ಯೋಗ ನಿರ್ವಹಣೆ ಮಂದಗತಿಯಲ್ಲಿ. ಸರಕಾರಿ ಉದ್ಯೋಗಿಗಳಿಗೆ ಶುಭ ಸಮಾಚಾರ. ವಾಹನ ಬಿಡಿಭಾಗ ವ್ಯಾಪಾರಿಗಳಿಗೆ  ಸುಯೋಗ. ಅವಿವಾಹಿತರಿಗೆ ವಿವಾಹ ಯೋಗ. ಮಕ್ಕಳ ಕಲಿಕೆ ಆಸಕ್ತಿ ಹೆಚ್ಚಿಸಲು ಪ್ರಯತ್ನ. ಹಿರಿಯರ ಆರೋಗ್ಯ ಸುಧಾರಣೆ. ಗಣೇಶ ಕವಚ, ವೆಂಕಟೇಶ್ವರ ಸ್ತೋತ್ರ, ನರಸಿಂಹ ಸ್ತೋತ್ರ ಓದಿ.


೯.ಧನು:
ಆರೋಗ್ಯ ಸುಧಾರಣೆ ಆರಂಭ. ಸಹೋದ್ಯೋಗಿಗಳಿಂದ ಪ್ರೀತಿ,ಗೌರವದ  ವರ್ತನೆ. ಸ್ವಂತದ ಚಿಕ್ಕ  ಉದ್ಯಮದ ಬೆಳವಣಿಗೆ ಮುಂದುವರಿಕೆ.  ಕಿರಿಯರಿಗೆ ಉದ್ಯೋಗ ಅರಸಲು  ಮಾರ್ಗದರ್ಶನ . ಗೃಹಿಣಿಯರ ಸ್ವೋದ್ಯೋಗ ಯೋಜನೆಗಳ ಪ್ರಗತಿ. ವ್ಯವಹಾರದ ಸಂಬಂಧ ಅವಸರದ ಪ್ರಯಾಣ . ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೧೦.ಮಕರ:

 ಅಹಿತಕರ  ಅನುಭವಗಳಿಂದ ವಿಚಲಿತರಾಗದಿರಿ. ಉದ್ಯೋಗ ಸ್ಥಾನದಲ್ಲಿ ಹೊಸ ಜವಾಬ್ದಾರಿ ನಿಯೋಜನೆ. ವಸ್ತ್ರ, ಸಿದ್ಧ ಉಡುಪು, ಆಭರಣ, ಪಾದರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಹೇರಳ ಲಾಭ.  ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಲಭ್ಯ. ಆಪ್ತರ ಸಲಹೆ ಪಾಲನೆಯಿಂದ  ಸಂತೋಷ.  ಆರೋಗ್ಯ ಉತ್ತಮ ಸ್ಥಿತಿಯಲ್ಲಿ. ಗಣೇಶ ಕವಚ, ಆಂಜನೇಯ ಸ್ತೋತ್ರ, ದತ್ತಾತ್ರೇಯ ಕವಚ ಓದಿ.

 
೧೧. ಕುಂಭ:.

ಹೆಚ್ಚುಕಡಿಮೆ ಮಿಶ್ರಫಲಗಳ ದಿನ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳು. ಸಂಸಾರದ ಜವಾಬ್ದಾರಿ ನಿರ್ವಹಣೆ ಸುಗಮ‌. ಕೃಷಿ ಭೂಮಿಯಲ್ಲಿ ಹೊಸ ಪ್ರಯೋಗ. ಗ್ರಾಹಕರ ಬೇಡಿಕೆಗೆ ಶೀಘ್ರ ಸ್ಪಂದನ‌. ಸಮಾಜ ಸೇವೆಗೆ ಮತ್ತಷ್ಟು ಅವಕಾಶಗಳು. ಬಂಧುಗಳ ಕಡೆಯಿಂದ ಶುಭ ಸಮಾಚಾರ. ಸಂಸಾರದಲ್ಲಿ ಸಂತೃಪ್ತಿಯ ವಾತಾವರಣ. ಗಣೇಶ ಪಂಚರತ್ನ, ದಕ್ಷಿಣಾಮೂರ್ತಿ ಸ್ತೋತ್ರ , ಶನಿಮಹಾತ್ಮೆ ಓದಿ.


೧೨. ಮೀನ:

 ವಿಶೇಷ ದೇವತಾನುಗ್ರಹದ ಅನುಭವ. ಉದ್ಯೋಗದಲ್ಲಿ ಸಂತೃಪ್ತಿ. ಪರಿಚಿತ  ವ್ಯಕ್ತಿಗಳಿಂದ. ಸಕಾಲದಲ್ಲಿ ಸಹಾಯ. ಉಪಕೃತರಿಂದ ಹರ್ಷ ಪ್ರಕಟನೆ‌.   ಭವಿಷ್ಯದ ಯೋಜನೆಗಳ ಅನುಷ್ಠಾನಕ್ಕೆ ಸಿದ್ಧತೆ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆ ಸಂಭವ. ದೇವತಾ ದರ್ಶನ. ವ್ಯವಹಾರ ಸಂಬಂಧ ಪ್ರಯಾಣ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.