ದಿನ ಭವಿಷ್ಯ

23-09-2025

Sep 23, 2025 - 14:30
ದಿನ ಭವಿಷ್ಯ


ಅದೃಷ್ಟ ಸಂಖ್ಯೆ  5 

೧. ಮೇಷ:

ನವರಾತ್ರಿಯ ಎರಡನೆಯ ದಿನ ಎಲ್ಲ ಶುಭ. ಉದ್ಯೋಗ ವಲಯದ ಜವಾಬ್ದಾರಿಗಳೂ ವೈವಿಧ್ಯಮಯ.  ಮನೆಯಿಂದಲೇ ಕೆಲಸ‌ಮಾಡುವವರಿಗೆ ಹೊಸ ಅನುಭವಗಳು. ಸಿವಿಲ್ ಎಂಜಿನಿಯರರು,  ಕಟ್ಟಡ ನಿರ್ಮಾಣ ಕಂಟ್ರಾಕ್ಟರರು, ಮೇಸ್ತ್ರಿಗಳು ಮೊದಲಾದವರಿಗೆ ಮಧ್ಯಮ ಫಲ. ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ಗಣೇಶ ಕವಚ, ದೇವೀ ಕವಚ, ಶನಿಮಹಾತ್ಮೆ ಓದಿ.


೨.ವೃಷಭ:

ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಕೆಲವು ಬಗೆಯ ವ್ಯವಹಾರಗಳು ಮಂದಗತಿಯಲ್ಲಿ ಸಾಗಲಿವೆ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಹೊಸ ಬೆಳವಣಿಗೆಗಳು, ಸಮಸ್ಯೆಗಳು ಇರಲಾರವು. ಮಹಿಳೆಯರಿಗೆ ಆರ್ಥಿಕ‌ ಸುದೃಢತೆಯ ಲಕ್ಷಣ‌. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಆದಿತ್ಯ ಹೃದಯ ಓದಿ.

೩ಮಿಥುನ:

  ಉದ್ಯೋಗ ಕ್ಷೇತ್ರದಲ್ಲಿ ಅಯಾಚಿತವಾಗಿ ಬರುವ ಜವಾಬ್ದಾರಿಗಳು. ವ್ಯವಹಾರಸ್ಥರಿಂದ ಇನ್ನೊಂದು ಹೊಸ ರಂಗಕ್ಕೆ ಪ್ರವೇಶ ಸಂಭವ. ಹಿರಿಯರ ಯೋಗಕ್ಷೇಮದ ಕಡೆಗೆ ಗಮನವಿರಲಿ. ಮನೆಯಲ್ಲಿ ಮಂಗಲ ಕಾರ್ಯದ ಕುರಿತು ಮಾತುಕತೆ. ಗೃಹಿಣಿಯರಿಗೆ, ಮಕ್ಕಳಿಗೆ ನೆಮ್ಮದಿಯ ವಾತಾವರಣ. ಗಣೇಶಕವಚ, ದೇವೀ ದೂಕ್ತ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೪. ಕರ್ಕಾಟಕ:

 ಸಂಸಾರದಲ್ಲಿ ಹೊಸ ಬೆಳವಣಿಗೆಗಳ ನಿರೀಕ್ಷೆ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ  ಆದಾಯ‌ವೃದ್ಧಿ. ರಾಜಕಾರಣಿಗಳಿಗೆ ಮನಶ್ಶಾಂತಿ ಕದಡುವ ದಿನ. ಹಿರಿಯರು ಗೃಹಿಣಿಯರು, ಮಕ್ಕಳಿಗೆ ನೆಮ್ಮದಿಯ ದಿನ. ಗಣೇಶ ದ್ವಾದಶನಾಮ ಸ್ತೋತ್ರ, ನರಸಿಂಹ ಕವಚ, ಲಕ್ಷ್ಮೀಸ್ತೋತ್ರ ಓದಿ.

೫.ಸಿಂಹ:
 
 ಉದ್ಯೋಗಸ್ಥರ ಸಾಧನೆಗೆ ಸರ್ವತ್ರ ಮೆಚ್ಚುಗೆ.  ಎಲ್ಲ ಬಗೆಯ ಸ್ವಂತ ವ್ಯವಹಾರಸ್ಥರು ಯಶಸ್ಸಿನೆಡೆಗೆ‌ ದಾಪುಗಾಲು. ರಸ್ತೆ ಕಾಮಗಾರಿ ನಿರ್ವಾಹಕರಿಗೆ ಅಪವಾದ. ಸರಕಾರಿ ನೌಕರರಿಗೆ ಮೇಲಿನವರ ಕಿರುಕುಳ. ಕೃಷ್ಯುತ್ಪನ್ನ ಮಾರಾಟಗಾರರ ಆದಾಯ ವೃದ್ಧಿ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

೬.ಕನ್ಯಾ:

 ಆರೋಗ್ಯ ಪಾಲನೆಯತ್ತ ಗಮನ ಇರಲಿ. ವ್ಯವಹಾರ ಸಂಬಂಧ ಸಣ್ಣ  ಪ್ರವಾಸ ಸಂಭವ.ಉದ್ಯೋಗಸ್ಥರ ಸ್ಥಾನ ಬದಲಾವಣೆಯ ಸಾಧ್ಯತೆ.  ಎಲ್ಲ ಲೋಹಗಳ ವ್ಯಾಪಾರಸ್ಥರಿಗೂ ಆದಾಯ ವೃದ್ಧಿ.  ದೂರದಲ್ಲಿರುವ ಮಿತ್ರರ ಆಪ್ತ ಸಲಹೆಯಿಂದ ಪ್ರಯೋಜನ. ಗಣೇಶ ಅಷ್ಟಕ, ವೇದಸಾರ ಶಿವಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೭. ತುಲಾ:

 ಹಿರಿಯರಿಂದ ಸಂಸಾರದ ಕ್ಷೇಮಚಿಂತನೆಗೆ ಫಲ ಲಭಿಸುವ ಸಾಧ್ಯತೆ. ಸಾಹಿತ್ಯ ಚಿಂತಕರಿಗೆ, ಅನ್ವೇಷಣ ಶೀಲರಿಗೆ ಅನುಕೂಲದ ವಾತಾವರಣ. ಅಧ್ಯಾತ್ಮ ಸಾಧಕರಿಗೆ  ಉತ್ತೇಜನದ ಸನ್ನಿವೇಶಗಳು‌ ಸೃಷ್ಟಿಯಾಗಲಿವೆ. ಗೃಹಿಣಿಯರ‌ ಸಾಧನೆಗೆ ಗೌರವ. ದೇವಿಯ ಆಲಯಕ್ಕೆ ಭೇಟಿ. ಗಣೇಶ ಕವಚ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೮.ವೃಶ್ಚಿಕ:

  ದೂರದ‌ ನೆಂಟರಿಂದ ಯೋಗಕ್ಷೇಮ‌ ವಿಚಾರಣೆ. ಅನಿರೀಕ್ಷಿತ ಧನಾಗಮ ಸಂಭವ. ಉದ್ಯೋಗಸ್ಥರ‌ ಸಾಧನೆಗೆ ಸಹೋದ್ಯೋಗಿಗಳಿಂದ ಪ್ರಶಂಸೆ.  ವ್ಯವಹಾರಸ್ಥರಿಂದ ಹೊಸ ಕಾರ್ಯಗಳ ಯಶಸ್ವೀ ನಿರ್ವಹಣೆ. ದೇವೀ ಆಲಯ ಭೇಟಿಯಿಂದ ಮನಸ್ಸಿಗೆ ನೆಮ್ಮದಿ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಲಕ್ಷ್ಮೀಸ್ತೋತ್ರ ಓದಿ.

೯.ಧನು:
 ಕ್ರಿಯಾಶೀಲರಾಗುವ ಅನಿವಾರ್ಯತೆ. ಉದ್ಯೋಗ ರಂಗದಲ್ಲಿ ಸ್ಥಿರ ವಾತಾವರಣ. ಹತ್ತಿರದವರಿಂದ ನಿರೀಕ್ಷಿತ ಸಹಾಯ ವಿಳಂಬ. ನಿರ್ಮಾಣ ಸಾಮಗ್ರಿ ವ್ಯಾಪಾರಿಗಳಿಗೆ ಆದಾಯ ತೃಪ್ತಿಕರ. ಉದ್ಯೋಗಾಕಾಂಕ್ಷಿಗಳಿಗೆ ಆಶಾದಾಯಕ ವಾತಾವರಣ. ಗಣಪತಿ ಅಥರ್ವಶೀರ್ಷ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೦.ಮಕರ:
 ಭಗವಂತನ ಅನುಗ್ರಹದಿಂದ ಆಪತ್ತು ತೊಲಗಿದ ನೆಮ್ಮದಿ. ನಿಗದಿತ ಸಮಯದಲ್ಲಿ ಕಾರ್ಯ ಮುಗಿಸುವ ತರಾತುರಿ.  ಮನೆಯಲ್ಲಿ ಎಲ್ಲರಿಂದ ಉತ್ತಮ ಸಹಕಾರ. ಮಕ್ಕಳ ವ್ಯಾಸಂಗದಲ್ಲಿ ಮುನ್ನಡೆ. ಹತ್ತಿರದ ದೇವಿ ಆಲಯಕ್ಕೆ ಸಂದರ್ಶನ.
ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧. ಕುಂಭ:
 ಮೇಲಿಂದ ಮೇಲೆ ಬರುವ ಹೊಸ ಜವಾಬ್ದಾರಿಗಳು.  ಅಧ್ಯಾಪಕರು, ವಿದ್ಯಾರ್ಥಿ ಕ್ಷೇಮಪಾಲಕರು , ಶುಶ್ರೂಷಕಿಯರು ಮೊದಲಾದವರಿಗೆ  ಹೊಸ ಹೊಣೆಗಾರಿಕೆಗಳು. ವ್ಯವಹಾರ ರಂಗದಲ್ಲಿ ಲಾಭ ತೃಪ್ತಿಕರ. ಸಂಗಾತಿಯಿಂದ ಸಕಾಲದಲ್ಲಿ ಸಹಕಾರ,ಸಂಸಾರದಲ್ಲಿ ಶಾಂತಿ. ಅವಿವಾಹಿತರಿಗೆ ವಿವಾಹ ಯೋಗ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಮಹಿಮ್ನ ಸ್ತೋತ್ರ, ಶನಿಮಹಾತ್ಮೆ ಓದಿ.

೧೨. ಮೀನ:

ವ್ಯವಹಾರದಲ್ಲಿ ಪ್ರಗತಿ. ತಾಯಿ ಅಥವಾ ತಾಯಿಗೆ ಸಮಾನರಾದವರ ಭೇಟಿಯಿಂದ ಆನಂದ. ದೇವತಾ ಸಾನ್ನಿಧ್ಯಕ್ಕೆ ಭೇಟಿ ಸಂಭವ. ಸರಕಾರಿ ಇಲಾಖೆಗಳಲ್ಲಿ ಅನುಕೂಲಕರ ಸ್ಪಂದನ. ದಾಂಪತ್ಯ ಜೀವನದಲ್ಲಿ ಸಮಾಧಾನ.ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.