ದಿನ ಭವಿಷ್ಯ

24-09-2025

Sep 24, 2025 - 16:11
ದಿನ ಭವಿಷ್ಯ

       ‌      ಜ್ಯೋತಿರ್ಮಯ.

ಅದೃಷ್ಟ ಸಂಖ್ಯೆ 6 


೧.ಮೇಷ:

ಶರನ್ನವರಾತ್ರಿಯ ಮೂರನೆಯ ದಿನ ವಿಶೇಷ ಸಂಭ್ರಮ.  ಲಾಭ ತಂದ ಉದ್ಯಮ ವೈವಿಧ್ಯೀಕರಣ. ಒಂದೇ ಲಕ್ಷ್ಯವನ್ನು ಸಾಧಿಸುವ ಪ್ರಯತ್ನದಲ್ಲಿ ಜಯ. ಎಚ್ಚರಿಕೆಯಿಂದ ಹೂಡಿಕೆಗೆ ಮುಂದಾಗಿ.  ಎಲ್ಲರಿಗೂ ಆರೋಗ್ಯ ಮತ್ತು ಆನಂದದ ಅನುಭವ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

೨.ವೃಷಭ:

  ದ್ರೋಹ ಬಗೆದವರಿಗೆ ಯೋಗ್ಯ ಪಾಠ. ಉದ್ಯೋಗ ಸ್ಥಾನದಲ್ಲಿ ಗೌರವದ ಸ್ಥಾನ. ಉದ್ಯಮಿಗಳ ಗೌರವ, ಲಾಭ ವೃದ್ಧಿ. ಉತ್ಪನ್ನಗಳ ಸುಧಾರಣೆಗೆ ನೌಕರರ ಸಹಕಾರ. ಮನೆಯಲ್ಲಿ  ಶಾಂತಿ, ಸದ್ಭಾವನೆಯ ವಾತಾವರಣ.
ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ  ಓದಿ.

೩. ಮಿಥುನ:
 
 ಸಕಾಲಿಕ ಸ್ಪಂದನದಿಂದ ಸಂಬಂಧ ಪಾಲನೆ.  ಉದ್ಯೋಗ ಸ್ಥಾನದಲ್ಲಿ ಅನುಕೂಲ. ಆರ್ಥಿಕ ವ್ಯವಹಾರ ಸುಧಾರಣೆ. ಪಾಲುದಾರಿಕೆ ಉದ್ಯಮ ಅನುಕೂಲಕರ. ಸಾಮೂಹಿಕ ಉಪಾಸನೆಯಲ್ಲಿ ಭಾಗಿ. ಗಣೇಶ ದ್ವಾದಶನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಲಕ್ಷ್ಮೀ ಸ್ತೋತ್ರ ಓದಿ.

೪.ಕರ್ಕಾಟಕ:

 ಉದ್ಯೋಗ ಸ್ಥಾನದಲ್ಲಿ ಸಮಾಧಾನದ ವಾತಾವರಣ. ಹೊಸ ಉದ್ಯಮ ಆರಂಭಕ್ಕೆ ಚಿಂತನೆ. ಸಂಸಾರದಲ್ಲಿ ಸಾಮರಸ್ಯ. ದೇವತಾ ಕಾರ್ಯದಲ್ಲಿ ಭಾಗಿ. ರಾತ್ರಿ ಪ್ರಯಾಣದಲ್ಲಿ ಎಚ್ಚರ ಅವಶ್ಯ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಚಾಕ್ಷರ ಸ್ತೋತ್ರ, ದೇವೀ ಕವಚ ಓದಿ.

೫ ಸಿಂಹ:

 ಎದುರಾಳಿಯ ತಂತ್ರಕ್ಕೆ ಪ್ರತಿತಂತ್ರ ಪ್ರಯೋಗ‌ ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಸ್ವಂತ ಉದ್ಯಮದ ನೌಕರ ವೃಂದಕ್ಕೆ ಸಂತೃಪ್ತಿ. ಹೊಸ ವಿದ್ಯೆಯನ್ನು ಕಲಿಯುವ ಆಸಕ್ತಿ. ಮನೆಯಲ್ಲಿ ದೈವಿಕ. ವಾತಾವರಣ. ಗಣೇಶ ಪಂಚರತ್ನ,  ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


೬.ಕನ್ಯಾ:
  ಕೆಲಸದ ನಡುವೆ ದೇವಾಲಯಗಳಿಗೆ ಓಡಾಟ. ಹೊಸ ವ್ಯಕ್ತಿಗಳ ಪರಿಚಯ. ಉದ್ಯೋಗ ಸ್ಥಳದಲ್ಲಿ ಸ್ಥಿರ ಪರಿಸ್ಥಿತಿ. ಉದ್ಯಮ ಅಭಿವೃದ್ಧಿಗೆ ವಿತ್ತ ಸಂಸ್ಥೆಗಳ ನೆರವು.   ಹಿತಶತ್ರುಗಳ ಪ್ರಯತ್ನಕ್ಕೆ ಹೀನಾಯ ಸೋಲು. ಗಣಪತಿ ಅಥರ್ವಶೀರ್ಷ, ಕಾರ್ತಿಕೇಯ ಸ್ತೋತ್ರ, ರಾಜರಾಜೇಶ್ವರೀ ಸ್ತೋತ್ರ ಓದಿ.

೭ತುಲಾ:
 ಉದ್ಯೋಗದಲ್ಲಿ ಪ್ರತಿಭೆ, ಅನುಭವಕ್ಕೆ ಗೌರವ. ಹೊಸ ಸಹೋದ್ಯೋಗಿಗಳ ಸೇರ್ಪಡೆ. ಸರಕಾರಿ ನೌಕರರಿಗೆ ವರ್ಗಾವಣೆಯ ಚಿಂತೆ. ಗೃಹೋಪಯೋಗಿ ಸಾಧನಗಳ ಖರೀದಿ. ದೇವಿಯ ಆಲಯಕ್ಕೆ ಭೇಟಿ. ಗಣೇಶ‌ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೮.ವೃಶ್ಚಿಕ:

ಅನಿರೀಕ್ಷಿತವಾಗಿ ಬಂದ ದೇವರ ಪ್ರಸಾದ. ಉದ್ಯೋಗದಲ್ಲಿ ಸೌಲಭ್ಯ ವೃದ್ಧಿ. ವಸ್ತ್ರ, ಆಭರಣ,  ಶೋಕಿ ವಸ್ತುಗಳ ವಿತರಕರಿಗೆ ಲಾಭ. ಕೃಷಿ ಕ್ಷೇತ್ರದಲ್ಲಿ ಹೊಸಬರಿಗೆ ಮಾರ್ಗದರ್ಶನ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಆನಂದ.
ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಲಕ್ಷ್ಮೀ ಸ್ತೋತ್ರ ಓದಿ.

೯. ಧನು:

ಕಷ್ಟಗಳ ನಡುವೆ ಸುಖದ  ಅರಸುವಿಕೆ. ಉದ್ಯೋಗಿಗಳಿಗೆ  ಸಮಾಧಾನ.  ತರಕಾರಿ, ಹಣ್ಣು ವ್ಯಾಪಾರಿಗಳಿಗೆ ಲಾಭ ಮಧ್ಯಮ. ಬಂಧು ಕಲಹದ ಪರಿಹಾರಕ್ಕೆ  ಮಧ್ಯಸ್ಥಿಕೆ. ಗೃಹಿಣಿಯರ ಉದ್ಯಮಕ್ಕೆ ಅಭೂತಪೂರ್ವ ಕೀರ್ತಿ. ಗಣೇಶ ಕವಚ, ಶಿವ ಕವಚ  ಓದಿ.


೧೦. ಮಕರ:

  ಉದ್ಯೋಗ ಸ್ಥಾನದಲ್ಲಿ ಉನ್ನತರ ಮೆಚ್ಚುಗೆ. ಉದ್ಯಮ ವಿಸ್ತರಣೆಗೆ ಕಾನೂನಿನ ತೊಡಕು ನಿವಾರಣೆ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹಣ ಹೂಡಿಕೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಮನೆಯಲ್ಲಿ ಸಮಾಧಾನ, ಸಂಭ್ರಮ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.


೧೧.ಕುಂಭ:

 ಉದ್ಯೋಗದಲ್ಲಿ  ಹೊಸ ಜವಾಬ್ದಾರಿ. ಸ್ವಂತ ಉದ್ಯಮದ ಬೆಳವಣಿಗೆ  ಸುಗಮ. ಉತ್ಪನ್ನಗಳಿಗೆ ಹೊಸ ರೂಪ ಕೊಡಲು ಚಿಂತನೆ.  ಮುದ್ರಣ ಸಾಮಗ್ರಿ, ಸ್ಟೇಶನರಿ ರಖಂ ವ್ಯವಹಾರಸ್ಥರಿಗೆ ಆದಾಯ ವೃದ್ಧಿ. ಮಕ್ಕಳಿಗೆ ಜವಾಬ್ದಾರಿ ಪಾಲನೆಗೆ ಮಾರ್ಗದರ್ಶನ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿ ಮಹಾತ್ಮೆ ಓದಿ.

೧೨.ಮೀನ:

 ಉದ್ಯೋಗ ಸ್ಥಾನದಲ್ಲಿ ಜಯ ಹಾಗೂ ಕೀರ್ತಿ ಎರಡೂ ಲಭ್ಯ. ಸರಕಾರಿ ಕಾರ್ಯಾಲಯಗಳಲ್ಲಿ ಕೊಂಚ ವಿಳಂಬ. ಆಸ್ತಿ ವಿಸ್ತರಣೆ ಪ್ರಯತ್ನದಲ್ಲಿ ಮುನ್ನಡೆ.  ಕಟ್ಟಡ ನಿರ್ಮಾಣ ವ್ಯವಹಾರಸ್ಥರಿಗೆ  ಮಧ್ಯಮ ಲಾಭ. ಪಾರಾಯಣ, ಕೀರ್ತನೆಯಲ್ಲಿ ಭಾಗಿ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಶನಿ ಮಹಾತ್ಮೆ ಓದಿ.