ದಿನ ಭವಿಷ್ಯ
30-09-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 3
೧.ಮೇಷ:
ನವರಾತ್ರಿಯ ಸಂಭ್ರಮದ ನಡುವೆ ಬಗೆಬಗೆಯ ಚಟುವಟಿಕೆಗಳು. ನಾನಾ ರೀತಿಯ ವ್ಯವಹಾರಗಳ ಒತ್ತಡ. ಮನೆಯಲ್ಲಿ ಆರಾಮದ ವಾತಾವರಣ. ಹತ್ತಿರದ ದೇವಾಲಯ, ವೃದ್ಧಾಶ್ರಮಕ್ಕೆ ಭೇಟಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಮಾಧಾನದ ದಿನ. ಗಣೇಶ ದ್ವಾದಶನಾಮ ಸ್ತೋತ್ತ, ದೇವೀ ಕವಚ, ಶನಿ ಮಹಾತ್ಮೆ ಓದಿ.
೨. ವೃಷಭ:
ಧಾರ್ಮಿಕ ಚಟುವಟಿಕೆಗಳಲ್ಲಿ ವ್ಯಸ್ತರಾಗಿರುವಿರಿ. ವ್ಯವಹಾರ ಕ್ಷೇತ್ರದಲ್ಲಿ ಹೊಸ ಅನುಭವ. ಉದ್ಯೋಗ, ವ್ಯವಹಾರಗಳಲ್ಲಿ ಮುನ್ನಡೆ. ಬಂಧುಗಳ ಮನೆಯಲ್ಲಿ ವಿವಾಹದ ಸಂಭ್ರಮ. ಮಕ್ಕಳು, ಹಿರಿಯರು, ಗೃಹಿಣಿಯರಿಗೆ ನೆಮ್ಮದಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೩.ಮಿಥುನ:
ಉದ್ಯೋಗ ಸ್ಥಾನದಲ್ಲಿ ತೀವ್ರ ಚಟುವಟಿಕೆಗಳು. ಬಾಕಿಯುಳಿದಿರುವ ಕೆಲಸಗಳನ್ನು ಶೀಘ್ರ ಮುಗಿಸುವ ಚಿಂತೆ. ವ್ಯವಹಾರಸ್ಥರಿಗೆ ನಿರಾಳ ಭಾವ. ಕರಕುಶಲ ಸಾಮಗ್ರಿಗಳಿಗೆ ಅಧಿಕ ಬೇಡಿಕೆ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಮಾಧಾನ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ಸುಬ್ರಹ್ಮಣ್ಯ ಕರಾಬಲಂಬನ ಸ್ತೋತ್ರ, ಗುರುಸ್ತೋತ್ರ ಓದಿ.
೪.ಕರ್ಕಾಟಕ:
ದೇವಿಯ ಆಲಯಕ್ಕೆ ಸಂದರ್ಶನ. ಸಹೋದ್ಯೋಗಿಗಳ ಸೌಹಾರ್ದ ಭೇಟಿ. ವ್ಯವಹಾರ ಕ್ಷೇತ್ರದ ಮಿತ್ರರ ಸಂದರ್ಶನ. ಉದ್ಯೋಗ ಅರಸುತ್ತಿರುವ ಶಿಕ್ಷಿತರಿಗೆ ಅವಕಾಶಗಳು ಗೋಚರ. ಸೋದರಿಯ ಮಗಳಿಗೆ ವಿವಾಹ ನಿಶ್ಚಯ. ಸಂಕಷ್ಟನಾಶನ ಗಣೇಶ ಸ್ತೋತ್ರ, ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೫.ಸಿಂಹ:
ನೂತನ ಗೃಹ ನಿರ್ಮಾಣ ಪ್ರಗತಿಯಲ್ಲಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಮೊತ್ತದ ಲಾಭ. ಸ್ವೋದ್ಯೋಗಿ ಗೃಹಿಣಿಯರ ಆದಾಯ ಹೆಚ್ಚಳ. ಸಾಮಾಜಿಕ ನಾಯಕರ ಹೆಸರು ಕೆಡಿಸುವ ವ್ಯೂಹದ ಬಗ್ಗೆ ಎಚ್ಚರ. ಕೆಲವರಿಗೆ ಅನಿರೀಕ್ಷಿತ ಲಾಭ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೬. ಕನ್ಯಾ:
ಧಾರ್ಮಿಕ ಸ್ಥಾನದಲ್ಲಿ ಸೇವೆಯ ಅವಕಾಶ. ವ್ಯಾಪಾರ ಕ್ಷೇತ್ರದಲ್ಲಿ ಸ್ಥಿರವಾದ ಪ್ರಗತಿ. ವಧೂವರಾನ್ವೇಷಿಗಳಿಗೆ ಶುಭ ಸಮಾಚಾರ. ಹೊಸ ರೀತಿಯ ಉದ್ಯಮದ ಕಲ್ಪನೆಗೆ ಮೂರ್ತರೂಪ. ಗೃಹಿಣಿಯರು ಮತ್ತು ಮಕ್ಕಳಿಗೆ ಸಂಭ್ರಮದ ದಿನ. ಗಣೇಶ ಕವಚ, ಶಿವ ಕವಚ, ಖಡ್ಗಮಾಲಾ ಸ್ತೋತ್ರ ಓದಿ.
೭.ತುಲಾ:
ಹಿರಿಯ ಆತ್ಮೀಯರಿಂದ ಮಾರ್ಗದರ್ಶನ. ದೂರದ ಬಂಧುಗಳ ಕಡೆಯಿಂದ ಶುಭ ಸಮಾಚಾರ. ಪಾಲುದಾರಿಕೆ ವ್ಯವಹಾರದಲ್ಲಿ ಹಿನ್ನಡೆ. ಮಕ್ಕಳಿಗೆ ಅಧ್ಯಯನದಲ್ಲಿ ಆಸಕ್ತಿ ಮೂಡಿಸಲು ಪ್ರಯತ್ನ. ದೇವಾಲಯ ದರ್ಶನ,ಕೀರ್ತನೆಯಲ್ಲಿ ಕಾಲಯಾಪನೆ. ಗಣೇಶ ಅಷ್ಟಕ, ದತ್ತಪಂಜರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೮.ವೃಶ್ಚಿಕ:
ನವರಾತ್ರಿ ಪೂಜೆ, ಪಾರಾಯಣದಲ್ಲಿ ಭಾಗಿ. ಮಹಿಳೆಯರಿಗೆ ವಸ್ತ್ರಾಭರಣ ಖರೀದಿಯಲ್ಲಿ ಆಸಕ್ತಿ. ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ. ಆಧ್ಯಾತ್ಮಿಕ ಸಾಧನೆಯಿಂದ ನೆಮ್ಮದಿ. ಕುಶಲಕರ್ಮಿಗಳಿಗೆ, ಟೈಲರರಿಗೆ ಬೇಡಿಕೆ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಮಹಾಲಕ್ಷ್ಮಿ ಅಷ್ಟಕ ಓದಿ.
೯. ಧನು:
ಸಾಂಸಾರಿಕ ಆವಶ್ಯಕತೆಗಳ ಕಡೆಗೆ ಗಮನ. ಪಾಲುದಾರಿಕೆ ವ್ಯವಹಾರಗಳಲ್ಲಿ ಮಂದಗತಿ. ಕೆಲವು ಬಗೆಯ ಉದ್ಯಮಿಗಳಿಗೆ ಲಾಭ. ಸಣ್ಣ ಪ್ರವಾಸದ ಸಾಧ್ಯತೆ. ಬಂಧುಗಳ ಜೊತೆಯ ಮನಸ್ತಾಪ ನಿವಾರಣೆ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕವಚ, ನವಗ್ರಹ ಸ್ತೋತ್ರ ಓದಿ.
೧೦.ಮಕರ:
ಜಾಣತನದ ನಡೆಯಿಂದ ಕಾರ್ಯಸಿದ್ಧಿ. ನಿಗದಿತ ಸಮಯದಲ್ಲಿ ಕಾರ್ಯ ಪೂರ್ತಿಯಾಗಿ ಸಮಾಧಾನ. ಮಕ್ಕಳ ವ್ಯಾಸಂಗದಲ್ಲಿ ಮುನ್ನಡೆ. ಗೆಳೆಯರ ಸಂತೋಷ ಕೂಟದಲ್ಲಿ ಭಾಗಿ. ಕೇಟರಿಂಗ್ ವ್ಯವಹಾರಸ್ಥರಿಗೆ ಧನಲಾಭ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:
ಹೊಸ ಅವಕಾಶಗಳ ಅನ್ವೇಷಣೆ. ಪರಿಸರ ನೈರ್ಮಲ್ಯ ಯೋಜನೆಗಳ ಅನುಷ್ಠಾನದಲ್ಲಿ ವಿಶೇಷ ಆಸಕ್ತಿ. ಸೇವಾಕಾರ್ಯಗಳಿಂದ ಗೌರವ ಪ್ರಾಪ್ತಿ. ಗೃಹಿಣಿಯರಿಗೆ ಸ್ವೋದ್ಯೋಗದಲ್ಲಿ ಮುನ್ನಡೆ.ಸಂಸಾರ ಸಹಿತ ದೇವಾಲಯ ದರ್ಶನ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.
೧೨.ಮೀನ:
ಹೆಚ್ಚುಕಡಿಮೆ ದಿನವಿಡೀ ಧಾರ್ಮಿಕ ಕಾರ್ಯಗಳು. ಗಳಿಕೆಯ ಮಾರ್ಗಗಳು ಸುಲಭದಲ್ಲಿ ಗೋಚರ. ಸಂಗಾತಿಯಿಂದ ಎಲ್ಲೆಡೆ ಸಕ್ರಿಯ ಸಹಕಾರ. ಬಾಕಿ ಉಳಿದಿದ್ದ ಇಲಾಖಾ ಕಾರ್ಯಗಳಿಗೆ ಚಾಲನೆ. ಹೊಸ ವ್ಯವಹಾರದ ಕಲ್ಪನೆಗೆ ಸ್ಪಷ್ಟ ರೂಪ ಲಭ್ಯ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.