ದಿನ ಭವಿಷ್ಯ

05-10-2025

Oct 6, 2025 - 15:58
ದಿನ ಭವಿಷ್ಯ


                 ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ    5

೧. ಮೇಷ:
  ವಿಶ್ರಾಂತಿಯ ದಿನವಾದರೂ ಅನ್ಯ ವ್ಯವಹಾರಗಳ ಒತ್ತಡ.ಆಪ್ತವರ್ಗದ ಸಂತೋಷ ಕೂಟದಲ್ಲಿ ಭಾಗಿ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ತೃಪ್ತಿಯ ಭಾವ. ಮನೆಯಲ್ಲಿ‌ ಎಲ್ಲರ ಆರೋಗ್ಯ ಉತ್ತಮ. ಸಣ್ಣ ವ್ಯಾಪಾರಸ್ಥರಿಗೆ ಶುಭದಿನ. ಗಣೇಶ ಅಷ್ಡಕ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.


೨. ವೃಷಭ:
ಗುರು, ದೇವತಾನಗ್ರಹದಿಂದ ಜೀವನ ಸುಲಭ.  ಅನೇಕ ಮಂದಿ  ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ. ಸರಕಾರಿ  ನೌಕರರಿಗೆ  ಅನಿವಾರ್ಯ ಒತ್ತಡ. ಮನೆಯಲ್ಲಿ  ನೆಮ್ಮದಿಯ ವಾತಾವರಣ. ವ್ಯಾಪಾರಿ ವರ್ಗಕ್ಕೆ ಅನುಕೂಲದ ದಿನ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.


೩ಮಿಥುನ:

ಶುಭ  ರವಿವಾರ ಉತ್ತಮ ಫಲಗಳ ಯೋಗ. ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ. ಉದ್ಯೋಗಸ್ಥರಿಗೆ  ಕಾರ್ಯಗಳು ಮುಗಿದು ತೃಪ್ತಿ.  ದೃಢವಾದ  ಆತ್ಮವಿಶ್ವಾಸದಿಂದ  ಕಾರ್ಯಜಯ. ಗೃಹಿಣಿಯರು,ಮಕ್ಕಳಿಗೆ ನೆಮ್ಮದಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಆದಿತ್ಯ ಹೃದಯ ಓದಿ.


೪. ಕರ್ಕಾಟಕ:


 ಸವಾಲುಗಳು ಬಗೆಹರಿದು ಸುಖಾನುಭವ. ಪಾಲುದಾರಿಕೆ ವ್ಯವಹಾರ ಸುಧಾರಣೆ. ಕಟ್ಟಡ ನಿರ್ಮಾಣ-ಮಾರಾಟ  ವ್ಯವಹಾರಸ್ಥರಿಗೆ   ಉತ್ತಮ ಲಾಭ. ವ್ಯವಹಾರ ಸಂಬಂಧ ಪ್ರಯಾಣ ಸಂಭವ. ಗೆಳೆಯನಿಂದ  ಹೊಸ ಪಾಲುದಾರಿಕೆ ಪ್ರಸ್ತಾವ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಭುಜಂಗಸ್ತೋತ್ರ, ನವಗ್ರಹ ಸ್ತೋತ್ರ ಓದಿ.
 


೫.ಸಿಂಹ:

  ಕಡಿಮೆ ಉತ್ಸಾಹದಲ್ಲಿ ದಿನಾರಂಭವಾದರೂ ಹೊತ್ತೇರಿದಂತೆ ತೀವ್ರಗತಿಯ ವ್ಯವಹಾರ. ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಹಿರಿಯರ ಯೋಗಕ್ಷೇಮ ವಿಚಾರಿಸಿ. ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ  ಯಶಸ್ಸು. ಲೇವಾದೇವಿ ವ್ಯವಹಾರದವರ ಸಂಯಮ ಪರೀಕ್ಷೆ. ಗಣೇಶ ದ್ವಾದಶನಾಮ ಸ್ತೋತ್ರ, ನರಸಿಂಹ ಕವಚ, ಮಹಿಷಮರ್ದಿನಿ ಸ್ತೋತ್ರ ಓದಿ., 

೬. ಕನ್ಯಾ:

 ಅಪರೂಪದಲ್ಲಿ ಆದ ವಿರಾಮದ ಸುಖಾನುಭವ. ವ್ಯವಹಾರಸ್ಥರಿಗೆ  ಹೊಸ ಅವಕಾಶಗಳು ಲಭ್ಯ. ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಗೋಚರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಔಷಧರಹಿತ ಚಿಕಿತ್ಸಕರಿಂದ ಸಹಾಯ. ಗಣೇಶ ಪಂಚರತ್ನ, ರಾಮ ಭುಜಂಗಪ್ರಯಾತ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೭. ತುಲಾ:,

ಅನಾರೋಗ್ಯದಿಂದ ಮುಕ್ತರಾದ ಸಂತೃಪ್ತಿ. ಸಾಂಸಾರಿಕ ಕ್ಷೇತ್ರದಲ್ಲಿ ಹೆಚ್ಚುವರಿ ಜವಾಬ್ದಾರಿ. ಆಹಾರಪದಾರ್ಥ ವ್ಯಾಪಾರ ಪ್ರಗತಿ. ಕೃಷಿ ಉತ್ಪನ್ನಗಳಿಂದ ಆದಾಯ ವೃದ್ಧಿ. ಸಾಮಾಜಿಕ ಸಮಾರಂಭದಲ್ಲಿ ಭಾಗಿ. ಗಣೇಶ ದ್ವಾದಶನಾಮ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ದೇವೀಸ್ತೋತ್ರ ಓದಿ.


೮.ವೃಶ್ಚಿಕ:

  ವ್ಯವಹಾರಗಳು ನಿರೀಕ್ಷೆಯಂತೆ ನಡೆದು ಸಮಾಧಾನ. ಮಾಲಿಕ- ನೌಕರರ ಬಾಂಧವ್ಯ ಸುಧಾರಣೆ. ಆಸ್ತಿ ಖರೀದಿ, ಮಾರಾಟ ಮಾತುಕತೆ ಮುಂದುವರಿಕೆ. ಲೇವಾದೇವಿ ವ್ಯವಹಾರಸ್ಥರಿಗೆ  ಸ್ವಲ್ಪಮಟ್ಟಿನ ಲಾಭ.  ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ  ಉತ್ತಮ ಲಾಭ. ಗಣಪತಿ ಅಥರ್ವಶೀರ್ಷ, ರಾಜರಾಜೇಶ್ವರೀ ಅಷ್ಟಕ, ನವಗ್ರಹ ಸ್ತೋತ್ರ ಓದಿ.

೯.ಧನು:

 ಪಟ್ಟುಬಿಡದ ಪ್ರಯತ್ನದಿಂದ ಕಾರ್ಯಸಾಧನೆ. ಬಂಧು ವರ್ಗದ ಅಸೂಯೆಗೆ ಗುರಿಯಾಗದಿರಿ.  ಕಾರ್ಯದಕ್ಷತೆ, ಪ್ರಮಾಣಿಕತೆಗೆ ಸರ್ವತ್ರ ಪ್ರಶಂಸೆ. ವ್ಯವಹಾರ ಸಂಬಂಧ ಪ್ರಯಾಣ ಸಂಭವ. ಮಕ್ಕಳ ಓದಿನತ್ತ ಗಮನವಿರಲಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


೧೦.ಮಕರ:


ಮನೆಮಂದಿಯ ಸಹಕಾರ,ಉತ್ತಮ. ಪಾಲುದಾರಿಕೆ ವ್ಯವಹಾರಸ್ಥರಿಗೆ ಸಾಮಾನ್ಯ ಲಾಭ. ಹೊಸ ವಿದ್ಯೆ ಕಲಿಕೆಯಲ್ಲಿ ಪ್ರಗತಿ.  ಕೆಲವು ವರ್ಗಗಳ ವ್ಯಾಪಾರಿಗಳಿಗೆ ಅಧಿಕ ಅನುಕೂಲ. ಗುರುವಿನ ಅನುಗ್ರಹದಿಂದ ಕಷ್ಟಗಳು ದೂರ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.


೧೧. ಕುಂಭ:

 ಸಾಮಾಜಿಕ ಚಟುವಟಿಕೆಗಳ ಒತ್ತಡ. ವ್ಯವಹಾರ ರಂಗದಲ್ಲಿ ಹೊಸ ಸವಾಲುಗಳು. ದಿನವಿಡೀ ಬಿಡುವಿಲ್ಲದ ಚಟುವಟಿಕೆಗಳು.   ಹೊಸ ವ್ಯವಹಾರ ಆರಂಭಕ್ಕೆ ಸಿದ್ಧತೆ. ಗೃಹಿಣಿಯರ ಉದ್ಯಮಗಳ ಜನಪ್ರಿಯತೆ ವೃದ್ಧಿ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.

೧೨. ಮೀನ:

 ಅಂಗೀಕೃತ ಕೆಲಸಗಳನ್ನು ಶೀಘ್ರ ಮುಗಿಸುವ ಆತುರ. ಕಾರ್ಯಕ್ಷೇತ್ರದಲ್ಲಿ ಅನುಕೂಲಕರ ಸ್ಪಂದನ. ಹಿರಿಯರ ಆರೋಗ್ಯದ ಕಯಿಒಡೆ ಗಮನವಿರಲಿ. ಸಮಾನ ಆಸಕ್ತಿಯುಳ್ಳವರಿಂದ ಸಹಕಾರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.