ದಿನ ಭವಿಷ್ಯ    

26-10-2025

Oct 27, 2025 - 13:56
ದಿನ ಭವಿಷ್ಯ    


    
                 ಜ್ಯೋತಿರ್ಮಯ               

ಅದೃಷ್ಟ ಸಂಖ್ಯೆ 8

೧.ಮೇಷ:

  ವಿರಾಮದ ಪೂರ್ಣ ಆನಂದ ಅನುಭವಿಸಿ. ನಿಯೋಜಿತ ಕಾರ್ಯಗಳು ಅವಧಿಗೆ ಮೊದಲೇ ಮುಕ್ತಾಯ .ಉದ್ಯಮದ  ನೌಕರರಿಗೆ ಸುಖಾನುಭವ.   ಮಹಿಳೆಯರ  ಸ್ವಾವಲಂಬನೆ ಯೋಜನೆ ಮುನ್ನಡೆ. ಪಾಲುದಾರಿಕೆ ವ್ಯವಹಾರದಲ್ಲಿ ಆದಾಯ  ಹೆಚ್ಚಳ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಶನಿಮಹಾತ್ಮೆ ಓದಿ.

  
 

        ೨.ವೃಷಭ:
 ಉದ್ಯೋಗಸ್ಥರಿಗೆ ನಿಜವಾದ ನೆಮ್ಮದಿಯ ಅನುಭವ. ಕೃಷಿ ಕ್ಷೇತ್ರದ ಪ್ರಯೋಗಗಳು ಯಶಸ್ವಿ.   ಸರಕಾರಿ ಯೋಜನೆಗಳ‌ ಸೌಲಭ್ಯ ಪಡೆಯುವ ಪ್ರಯತ್ನ ವಿಫಲ. ಹಿತಮಿತವಾದ ನುಡಿಯಿಂದ ಕ್ಷೇಮ. ಸಂಸಾರದಲ್ಲಿ  ಸಂತೃಪ್ತಿಯ ವಾತಾವರಣ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ಅಷ್ಟಲಕ್ಷ್ಮಿ ಸ್ತೋತ್ರ ಓದಿ.
 


೩ಮಿಥುನ:

  ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು. ವಸ್ತ್ರ ,  ಸಿದ್ಧ ಉಡುಪು ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ವ್ಯಾಪಾರಿಗಳ. ಮನೆಯಲ್ಲಿ  ಸಂತೋಷದ ವಾತಾವರಣ. ನಿಯೋಜಿತ ಪ್ರಯಾಣ ಮುಂದೂಡಿಕೆ. ಸಾಹಿತ್ಯ ಅಭ್ಯಾಸಿಗಳಿಗೆ ಸ್ವಲ್ಪ ಅನುಕೂಲ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

೪.ಕರ್ಕಾಟಕ:
 ಪ್ರಯತ್ನದ ಫಲ ಕೈಗೆ ಬರಲು ತಾಳ್ಮೆ ಇರಲಿ. ಉದ್ಯೋಗದಲ್ಲಿ  ಉನ್ನತಿಯ ಸೂಚನೆ. ಅಕಸ್ಮಾತ್ ಧನಾಗಮ ಯೋಗ.  ತರಕಾರಿ, ಹಣ್ಣು ವ್ಯಾಪಾರಿಗಳಿಗೆ  ಉತ್ತಮ ಲಾಭ. ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ದ್ವಾದಶನಾಮ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ದೇವೀಸ್ತೋತ್ರ ಓದಿ.

 ೫.ಸಿಂಹ:
ದಿಟ್ಟ, ಯೋಜನಾಬದ್ಧ ಕ್ರಮಗಳಿಂದ  ಯಶಸ್ಸು. ಉದ್ಯೋಗಸ್ಥರ ಮನೆಗಳಲ್ಲಿ ನೆಮ್ಮದಿ. ಉದ್ಯಮಕ್ಕೆ ಸರ್ವತೋಮುಖ  ಪ್ರಗತಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಕೃಷಿ  ಕಾರ್ಮಿಕರಿಗೆ ಅನುಕೂಲದ ವಾತಾವರಣ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ ಓದಿ.
 
೬.ಕನ್ಯಾ:

ಪಿತ್ರಾರ್ಜಿತ ಆಸ್ತಿಗೆ ಸಕುಟುಂಬ ಭೇಟಿ. ಸಣ್ಣ ಉದ್ಯಮಿಗಳಿಗೆ ಅನುಕೂಲದ ದಿನ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ಆಭರಣ ತಯಾರಿ ಕೆಲಸ ಬಲ್ಲವರಿಗೆ ಸದವಕಾಶ. ಕುಲದೇವರ ದರ್ಶನ ಸಂಭವ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಗುರುಸ್ತೋತ್ರ ಓದಿ.

೭. ತುಲಾ:

ಜ್ಞಾನ ವೃದ್ಧಿಗೆ ವಿರಾಮದ ಸದುಪಯೋಗ.   ಕುಟುಂಬದ ಹಿತೈಷಿ ಹಿರಿಯರ ಆಗಮನ. ದೇವತಾ ಸಾನ್ನಿಧ್ಯ ದರ್ಶನ. ಸಂಸಾರದಲ್ಲಿ . ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಪಂಚರತ್ನ, ಶಿವಕವಚ, ನವಗ್ರಹ ಮಂಗಲಾಷ್ಟಕ ಓದಿ.

೮.ವೃಶ್ಚಿಕ:
 ಸಾಂಸಾರಿಕ ಆವಶ್ಯಕತೆಗಳ ಕಡೆಗೆ ಗಮನ.  ಸರಕಾರಿ ನೌಕರರಿಗೆ ವಿರಾಮದದಂದೂ ಕಿರಿಕಿರಿ. ಅಲ್ಪಬುದ್ಧಿಯ ರಾಜಕಾರಣಿಗಳ ಕಾಟ. ಗೃಹಿಣಿಯರ ಸ್ವಾವಲಂಬನೆ ಯೋಜನೆಗಳು ಯಶಸ್ಸಿನ ಪಥದಲ್ಲಿ. ಮಕ್ಕಳ ಹೊಸ ಉದ್ಯಮ ಪ್ರಗತಿಯಲ್ಲಿ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕವಚ, ನವಗ್ರಹ ಸ್ತೋತ್ರ ಓದಿ.


೯.ಧನು:

ಪರಿಶ್ರಮವಿಲ್ಲದೆ ಬದುಕಿಲ್ಲ. ಸಣ್ಣ ಉದ್ಯಮ ಘಟಕದಲ್ಲಿ ಹರ್ಷಾಚರಣೆ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಖಾದ್ಯಪದಾರ್ಥ ಉದ್ಯಮಕ್ಕೆ ದೊಡ್ಡ ಪ್ರಮಾಣದಲ್ಲಿ ಲಾಭ. ಸಾಂಸಾರಿಕ ಆವಶ್ಯಕತಗಳ  ಈಡೇರಿಕೆ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೦.ಮಕರ:
 ಮುಂದಿನ ವಾರದ ಕೆಲಸಗಳ ಆಯೋಜನೆ. ಉದ್ಯಮ ಉತ್ಪನ್ನಗಳ  ಮಾರಾಟ ವೃದ್ಧಿ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ವರಮಾನ ವೃದ್ಧಿ.  ಪ್ರಾಪ್ತ ವಯಸ್ಕ ಹುಡುಗರಿಗೆ ವಿವಾಹ ಯೋಗ. ಹಿತಶತ್ರುಗಳ ಒಳಸಂಚಿಗೆ ಸೋಲು. ಗಣಪತಿ ಅಥರ್ವಶೀರ್ಷ, ರಾಮ ಭುಜಂಗಪ್ರಯಾತ ಸ್ತೋತ್ರ, ಹನುಮಾನ್ ಚಾಲೀಸಾ  ಓದಿ.

 
೧೧. ಕುಂಭ:.

  ನಿಗದಿತ ಕಾರ್ಯಗಳು ಬಹುಪಾಲು ಮುಕ್ತಾಯ. ಉದ್ಯಮದ ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು. ಮುದ್ರಣ‌ಸಾಮಗ್ರಿ,  ಸ್ಟೇಶನರಿ ವಿತರಕರಿಗೆ ಹೊಸಬರ ಸಂಪರ್ಕ. ಸಮಾಜಸೇವಾ ಕಾರ್ಯಗಳ ನಾಯಕತ್ವ. ಹಳೆಯ ಊರಿನ ಗೆಳೆಯರ ಆಗಮನ. ಗಣೇಶ ಕವಚ, ನರಸಿಂಹ ಸ್ತೋತ್ರ, ಶನಿಮಹಾತ್ಮೆ ಓದಿ.


೧೨. ಮೀನ:
ಬರುವ  ಸಪ್ತಾಹದ  ಒತ್ತಡಗಳಿಗೆ ಇಂದಿನಿಂದಲೇ ತಯಾರಿ. ಏಕಕಾಲಕ್ಕೆ ಹಲವು ವಿಭಾಗಗಳಿಂದ ಕೆಲಸಕ್ಕೆ ಬೇಡಿಕೆ.  ಸರಕಾರಿ ಇಲಾಖೆಗಳವರಿಂದ ಸಹಕಾರ. ಉಪಕೃತ  ಸಾರ್ವಜನಿಕರಿಂದ ಪ್ರಶಂಸೆ. ಕೃಷಿಕರ ಅನುಕೂಲಕ್ಕೆ ಹೊಸ ಕ್ರಮಗಳು. ಗಣಪತಿ ಅಥರ್ವಶೀರ್ಷ, ವಿಷ್ಷು ಸಹಸ್ರನಾಮ, ಶನಿಮಹಾತ್ಮೆ ಓದಿ.