ದಿನ ಭವಿಷ್ಯ

27-10-2025

Oct 27, 2025 - 13:56
ದಿನ ಭವಿಷ್ಯ


               ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 9

೧. ಮೇಷ:


 ಉದ್ಯೋಗ ಸ್ಥಾನದಲ್ಲಿ ನಿರಾಳ ಪರಿಸ್ಥಿತಿ. ವ್ಯವಹಾರದಲ್ಲಿ ವಿಶೇಷ ಯಶಸ್ಸು. ಸರಕಾರಿ ಉದ್ಯೋಗಸ್ಥರಿಗೆ ಯಥಾಪ್ರಕಾರದ ಕಿರಿಕಿರಿಗಳು. ಭವಿಷ್ಯದ ಹೂಡಿಕೆಗಳ ಕುರಿತು ಚಿಂತನೆ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಸಣ್ಣ ಪ್ರಯಾಣ ಸಂಭವ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.


೨.ವೃಷಭ:

   ಕ್ಷಿಪ್ರ ಫಲನೀಡುವ  ಕ್ಷೇತ್ರಗಳಲ್ಲಿ ಮಾತ್ರ ಹೂಡಿಕೆ ಒಳ್ಳೆಯದು. ಅನ್ವೇಷಕರೆದುರು ವಿಶಿಷ್ಟ ಅವಕಾಶಗಳು. ಖಾದಿಯ ಸಿದ್ಧ ಉಡುಪು ಉದ್ಯಮಕ್ಕೆ ಲಾಭ. ಪ್ರಮುಖರೊಂದಿಗೆ ಪಾಲುದಾರಿಕೆಯ ಅವಕಾಶ. ಕುಟುಂಬದ ಸದಸ್ಯರಲ್ಲಿ ಹೊಂದಾಣಿಕೆ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.  .

೩.ಮಿಥುನ:
  ಮಿತ್ರನ ಯೋಜನೆ ಅನುಷ್ಠಾನಕ್ಕೆ ಸಹಾಯ. ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ. ವ್ಯರ್ಥ ವಾದವಿವಾದಕ್ಕೆ ಅವಕಾಶ ಕೊಡಬೇಡಿ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ. ವ್ಯವಹಾರ  ಸಂಬಂಧ ಸಣ್ಣ ಪ್ರವಾಸ. ಗಣೇಶ ತ್ರಿಶತಿ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.


೪. ಕರ್ಕಾಟಕ:

 ಕಡಿಮೆಯಾಗದ ಕೆಲಸದ ಹೊರೆಗಳು.  ಕಿರಿಯ ಉದ್ಯಮಿಗಳ ಸ್ನೇಹಕೂಟ ಆಯೋಜನೆ. ಸಹಾಯ ಮಾಡಿ ಅಪವಾದ ಬಾರದಂತೆ ಎಚ್ಚರ. ಮಹಿಳೆಯರ ಸ್ವೋದ್ಯೋಗಗಳಿಗೆ ಶುಭಕಾಲ ಆರಂಭ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.


೫.ಸಿಂಹ:

 
ಪರಿಣತರ ಸಲಹೆಯಂತೆ ಹೊಸ ಕ್ರಮಗಳು. ಶಿಕ್ಷಿತ  ಕುಶಲಕರ್ಮಿಗಳಿಗೆ  ಶೀಘ್ರ ಉದ್ಯೋಗ. ಕುಟುಂಬದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ, ನೆಮ್ಮದಿಯ ಅನುಭವ. ಸಮಾಜದ ಹಿರಿಯರ ಕ್ಷೇಮಕ್ಕೆ ಯೋಜನೆ. ದೂರ ಪ್ರಯಾಣದಲ್ಲಿ ಎಚ್ಚರ.
ಗಣೇಶ ದ್ವಾದಶನಾಮ ಸ್ತೋತ್ರ, ನರಸಿಂಹ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

೬. ಕನ್ಯಾ:
  ಉದ್ಯಮದ ಹೊಸ ವಿಭಾಗದಲ್ಲಿ ಸಮಸ್ಯೆ. ಹಿರಿಯರ ಆಸ್ತಿ ನಿರ್ವಹಣೆಗೆ ಯೋಗ್ಯ ವ್ಯವಸ್ಥೆ‌. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ  ಭರವಸೆ. ಪತ್ರಕರ್ತರು,ಸಾಹಿತ್ಯ ವ್ಯವಸಾಯಿಗಳಿಗೆ ಅನುಕೂಲ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ದೇವೀಸ್ತೋತ್ರ ಓದಿ.


೭.ತುಲಾ:

   ಹಿತಶತ್ರುಗಳಿಂದ ಹೊಸಬಗೆಯ ಸಂಚು. ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಶಮನ. ಉದ್ಯೋಗ ಅರಸುವವರಿಗೆ  ಆಶಾದಾಯಕ ವಾತಾವರಣ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ವಿದೇಶವಾಸಿ ಮಿತ್ರನಿಂದ ಮುಖ್ಯ ಸಂದೇಶ. ಗಣಪತಿ ಅಥರ್ವಶೀರ್ಷ, ಮಹಾಲಕ್ಷ್ಮಿ ಅಷ್ಟಕ , ಮಹಿಷಮರ್ದಿನಿ ಸ್ತೋತ್ರ ಓದಿ.

೮. ವೃಶ್ಚಿಕ:

ನಿಕಟ ಭವಿಷ್ಯದಲ್ಲಿ ಅಪಾಯದ ಸೂಚನೆ ಇಲ್ಲ. ಉದ್ಯೋಗಸ್ಥರ ಸ್ಥಾನ ಗೌರವ ಭದ್ರ. ಹಿರಿಯ ಅಧಿಕಾರಿಗಳಿಗೆ ನೆಮ್ಮದಿ ಕಡಿಮೆ.  ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಸಾಂಸಾರಿಕ ನೆಮ್ಮದಿ ಕೆಡಿಸುವವರಿಗೆ ಮುಖಭಂಗ.
ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ಹನುಮಾನ್ ಚಾಲೀಸಾ  ಓದಿ.


೯. ಧನು:

  ಪಟ್ಟು ಬಿಡದ ಪ್ರಯತ್ನದಿಂದ ಕಾರ್ಯ ಸುಧಾರಣೆ. ಉದ್ಯಮದ ವೈವಿಧ್ಯೀಕರಣ ಯೋಜನೆ ಮುಂದುವರಿಕೆ. ಸರಕಾರಿ ನೆರವು ನಿರೀಕ್ಷಿಸಿ ನಿರಾಶೆ. ಮಕ್ಕಳ ಪ್ರತಿಭೆ ವಿಕಸನಕ್ಕೆ  ಪ್ರೋತ್ಸಾಹ. ಅಶಕ್ತರ ನೆರವಿನ ಯೋಜನೆಗಳಲ್ಲಿ ಭಾಗಿ. ಗಣೇಶ ಅಷ್ಟಕ, ಕಾರ್ತಿಕೇಯ ಸ್ತೋತ್ರ,ನವಗ್ರಹ ಮಂಗಲಾಷ್ಡಕ ಓದಿ.


೧೦. ಮಕರ:

 ಕಾಲಮಿತಿಯ ಕೆಲಸಗಳ ಸರಮಾಲೆ.  ಉದ್ಯಮಿಗಳಿಗೆ ನಷ್ಟವಾಗುವ ಭೀತಿ. ಯಂತ್ರೋಪಕರಣ ಉದ್ಯಮಿಗಳಿಗೆ ಸರ್ವತ್ರ ಲಾಭ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ಮನೆಮಂದಿಯೊಂದಿಗೆ ದೇವಾಲಯ ಸಂದರ್ಶನ. ಗಣೇಶ ಕವಚ, ದಾರಿದ್ರ್ಯದಹನ ಶಿವಸ್ತೋತ್ರ, ಹನುಮಾನ್ ಚಾಲೀಸಾ ಓದಿ

೧೧.ಕುಂಭ:

 ನಿಲ್ಲದೆ  ಸಾಗುವ  ಕೆಲಸ, ಕಾರ್ಯಗಳು. ಉದ್ಯೋಗಸ್ಥರಿಗೆ ಅನುಕೂಲ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆ   ಲಲಿತ ಕಲೆಗಳ ಅಭ್ಯಾಸಿಗಳಿಗೆ ಮುನ್ನಡೆ. ಕೃಷ್ಯುತ್ಪಾದನೆ ವೃದ್ಧಿಯಲ್ಲಿ ಯಶಸ್ಸು.ಟೈಲರಿಂಗ್, ವೈಂಡಿಂಗ್ ಬಲ್ಲವರಿಗೆ ಅಧಿಕ ಆದಾಯ. ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.


೧೨. ಮೀನ:

ಆಲಸ್ಯದಿಂದ ಬಿಡುಗಡೆಯಾಗಿ ಹೊಸ ಹುಮ್ಮಸ್ಸು. ಹೊಸ ಸವಾಲುಗಳು, ಜವಾಬ್ದಾರಿಗಳು.   ಸಾಮೂಹಿಕ ಕಾರ್ಯಗಳಲ್ಲಿ ಸಕ್ರಿಯ ಪಾತ್ರ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ. ಇಲಾಖೆಗಳಿಂದ ಅನುಕೂಲಕರ ಸ್ಪಂದನ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.