ದಿನ ಭವಿಷ್ಯ

29-10-2025

Oct 29, 2025 - 10:58
Oct 27, 2025 - 16:55
ದಿನ ಭವಿಷ್ಯ


                  ಜ್ಯೋತಿರ್ಮಯ


ಅದೃಷ್ಟ ಸಂಖ್ಯೆ  2

೧. ಮೇಷ:

 ಯಶಸ್ಸಿನ ಕಡೆಗೆ ಹೆಜ್ಜೆಯಿಡುತ್ತೀರಿ. ಉದ್ಯೋಗಸ್ಥರಿಗೆ ಸುಖಾನುಭೂತಿ. ಗೃಹಾಲಂಕಾರ ಸಾಮಗ್ರಿ ಮಾರಾಟಗಾರರಿಗೆ  ಅಧಿಕ ಲಾಭ. ಕೃಷಿಕರಿಗೆ, ಶ್ರಮಜೀವಿಗಳಿಗೆ ತಕ್ಕ ಪ್ರತಿಫಲ. ಪಾಲುದಾರಿಕೆ ವ್ಯವಹಾರಸ್ಥರಿಗೆ ಅನುಕೂಲದ ವಾತಾವರಣ. ಸಂಸಾರ ಸುಖದಲ್ಲಿ ತೃಪ್ತಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

೨. ವೃಷಭ:

  ಮನಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ. ಆತುರವಿಲ್ಲದೆ ಮುಂದುವರಿದರೆ ಯಶಸ್ಸು ಖಚಿತ. ವಸ್ತ್ರೋದ್ಯಮಿಗಳಿಗೆ  ಮಂದಗತಿಯ ಮುನ್ನಡೆ. ಹಿರಿಯರ‌  ಆವಶ್ಯಕತೆಗಳ ಕಡೆಗೆ ಗಮನ. ಹಿರಿಯ ಮಹಿಳೆಯರಿಗೆ ಸಮಾಧಾನದ ವಾತಾವರಣ. ಹೊಸ ವಾಹನ ಖರೀದಿಯ ಸಾಧ್ಯತೆ. ಮಕ್ಕಳ ಯೋಗಕ್ಷೇಮ ಗಮನಿಸಿ. ಗಣಪತಿ ಅಥರ್ವಶೀರ್ಷ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಗುರುಸ್ತೋತ್ರ ಓದಿ.

೩ಮಿಥುನ:

  ಧಾರ್ಮಿಕ ಚಿಂತನೆ, ದೇವತಾರ್ಚನೆಯಲ್ಲಿ  ಆಸಕ್ತಿ. ಉದ್ಯೋಗಸ್ಥರಿಗೆ  ಹಿರಿಯ  ಸಹೋದ್ಯೋಗಿಗಳ   ಮಾರ್ಗದರ್ಶನದಿಂದ  ವೃತ್ತಿ ಪ್ರಾವೀಣ್ಯ ಪ್ರಾಪ್ತಿ. ಖಾದಿ, ಗ್ರಾಮೋದ್ಯೋಗ ವ್ಯವಹಾರಸ್ಥರಿಗೆ  ಹೆಚ್ಚು ಬೇಡಿಕೆ. ವೈದ್ಯರ ಭೇಟಿ ಸಂಭವ‌. ಅಂಗಸಾಧನೆ ಮಾಡುವವರಿಗೆ ಎಚ್ಚರಿಕೆ. ಗೃಹಿಣಿಯರಿಂದ  ಆದಾಯ ಗಳಿಕೆ ಮಾರ್ಗ ಶೋಧನೆ. ಮಕ್ಕಳ ವ್ಯಾಸಂಗದಲ್ಲಿ ಪ್ರಗತಿ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ದೇವೀಸ್ತೋತ್ರ ಓದಿ.


೪. ಕರ್ಕಾಟಕ:
 ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಂದ ಪ್ರಗತಿ ಕುಂಠಿತ. ಅನಿರೀಕ್ಷಿತ ಧನಾಗಮ ಸಂಭವ.  ಗುರು ಹಿರಿಯರಿಂದ ಸಕಾಲಿಕ ಮಾರ್ಗದರ್ಶನ ಲಭ್ಯ. ಸಂಗಾತಿಯಿಂದ ಉತ್ತಮ ಸಹಕಾರ. ಹೂವು,ತರಕಾರಿ ಬೆಳೆಗಾರರಿಗೆ ಅಧಿಕ ಲಾಭ. ಉತ್ತರದ ಕಡೆಯಿಂದ ವ್ಯವಹಾರ ವಿಸ್ತರಣೆ ಪ್ರಸ್ತಾವ. ಗೃಹಿಣಿಯರು ಮತ್ತು ಮಕ್ಕಳಿಗೆ ಉಲ್ಲಾಸದ ವಾತಾವರಣ. ಗಣೇಶ ಪಂಚರತ್ನ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೫.ಸಿಂಹ:

 ಕಾಲಕ್ಕೆ ಸರಿಯಾಗಿ ಸ್ಪಂದಿಸುವುದರ ಮೂಲಕ ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು ಗಳಿಸುವಿರಿ.  ದೀರ್ಘಕಾಲೀನ ಹೂಡಿಕೆಗಳಲ್ಲಿ ಆಸಕ್ತಿ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ,  ಶುಭ ಕಾರ್ಯಕ್ಕಾಗಿ ಸಡಗರದ ವಾತಾವರಣ. ಅಪರೂಪದ ಬಂಧುಗಳ ಭೇಟಿ. ವ್ಯವಹಾರದ ನಿಮಿತ್ತ ಸಣ್ಣ ಪ್ರಯಾಣ ಸಂಭವ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೬. ಕನ್ಯಾ:
ಗುರುಹಿರಿಯರಿಂದ ಒಳ್ಳೆಯ ಮಾರ್ಗದರ್ಶನ. ದೈವಾನುಗ್ರಹಕ್ಕಾಗಿ ವಿಶೇಷ ಪ್ರಯತ್ನ. ಇಷ್ಟ ಮಿತ್ರರೊಡನೆ ಭೇಟಿ. ಉದ್ಯೋಗ ರಂಗದಲ್ಲಿ ಕಾರ್ಯ ನಿರ್ವಿಘ್ನ. ಆಪ್ತ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ನಿರ್ಮಾಣ ಸಾಮಗ್ರಿ ವಿತರಕರಿಗೆ ಅನುಕೂಲದ ವಾತಾವರಣ. ಮನೆಯಲ್ಲಿ ನೆಮ್ಮದಿ.ಗಣೇಶ ಪಂಚರತ್ನ, ಶಿವಕವಚ, ಲಕ್ಷ್ಮೀಸ್ತೋತ್ರ ಓದಿ.


೭. ತುಲಾ:

  ಆಯ್ಕೆಯ ಸಂದರ್ಭದಲ್ಲಿ ಮನಸ್ಸಿನ ಸಮತೋಲನ‌  ಕಾಯ್ದುಕೊಳ್ಳಿರಿ.  ಹತ್ತಿರದ ದೇವತಾ ಸನ್ನಿಧಿ ಸಂದರ್ಶನದಿಂದ ಮನಸ್ಸಿಗೆ ನೆಮ್ಮದಿ. ಉದ್ಯೋಗದಲ್ಲಿ ಅಭಿವೃದ್ಧಿ. ವ್ಯವಹಾರ ಕ್ಷೇತ್ರದಲ್ಲಿ ಮಂದಗತಿಯ  ಮುನ್ನಡೆ. ಹಿತಶತ್ರುಗಳ ಕುರಿತು ಎಚ್ಚರಿಕೆಯಲ್ಲಿರಿ. ಹಿರಿಯರ ಮನಸ್ಸನ್ನು ಅರಿತು ಮುನ್ನಡೆಯಿರಿ. ಸಂಗಾತಿಯ ಆರೋಗ್ಯ ಉತ್ತಮ. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೮.ವೃಶ್ಚಿಕ:
 ಸಮಾಧಾನದಿಂದ ಮುನ್ನಡೆಯಿರಿ. ಕೇಡು ಬಗೆದವರ ಮೇಲೆ ಸೇಡು ತೀರಿಸಿಕೊಳ್ಳುವ ಯೋಚನೆ ಬೇಡ. ಉತ್ತರದಿಂದ ಬರುವ ವ್ಯವಹಾರ ಪ್ರಸ್ತಾವದ ವಿಷಯದಲ್ಲಿ ಎಚ್ಚರದಿಂದ ಮುನ್ನಡೆಯಿರಿ. ಉದ್ಯೋಗ ಕ್ಷೇತ್ರದಲ್ಲಿ ಕೊಂಚ ಕಿರಿಕಿರಿಯಾದರೂ ಪ್ರತಿಫಲ ಪ್ರಾಪ್ತಿಗೆ ಅಡ್ಡಿಯಾಗದು. ಹಿರಿಯರ, ಗೃಹಿಣಿಯರ, ಮಕಗಕಳ ಆರೋಗ್ಯ ಉತ್ತಮ. ಗಣೇಶ ಪಂಚರತ್ನ, ರಾನ ಭುಜಂಗಪ್ರಯಾತ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೯.ಧನು:

 ಹೊಂದಾಣಿಕೆಯ ಮನೋಭಾವದಲ್ಲಿ ಮುಂದು ವರಿಯುವ ನಿಮಗೆ ಸವಾಲುಗಳನ್ನು ನಿಭಾಯಿಸಲು ಸುಲಭ. ದೀರ್ಘಕಾಲದಿಂದ ನಿರೀಕ್ಷಿಸಲಾಗಿದ್ದ  ಲಾಭ ಕೈಸೇರಿ  ಮನಸ್ಸು ನಿರಾಳ. ಸಹಾಯಕರಿಂದ  ಅಪೇಕ್ಷಿತ ಸಹಕಾರದ ವರ್ತನೆ. ಹಿರಿಯರ ಆರೋಗ್ಯ ಸಮಾಧಾನಕರ. ಸಂಗಾತಿಯಿಂದ ಸಹಕಾರ. ಸಂಸಾರ ಜೀವನ ಸುಗಮ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ಶಿವಕವಚ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೧೦.ಮಕರ:

  ಅಪೇಕ್ಷಿತ ಕಾರ್ಯಗಳೆಲ್ಲವೂ ಸುಗಮ. ಆಗಾಗ ಎದುರಾಗುವ ವಿಘ್ನಗಳು ದೂರ. ಸನ್ನಿಧಿಗೆ ಭೇಟಿಯಿತ್ತ  ಬಳಿಕ ನಿಶ್ಚಿಂತೆಯ ಮನೋಭಾವ. ಉದ್ಯೋಗ ಕ್ಷೇತ್ರದ ಕಿರಿಕಿರಿಗಳು ತೊಲಗಿ ಮನಸ್ಸಿಗೆ ಶಾಂತಿ. ಆರ್ಥಿಕ ವ್ಯವಹಾರ ಸಂಸ್ಥೆಗಳ  ನಿರ್ವಾಹಕರಿಗೆ ಹೊಸ ಜವಾಬ್ದಾರಿಗಳು. ಮನೆಯಲ್ಲಿ ಶಾಂತಿ, ನೆಮ್ಮದಿಯ ವಾತಾವರಣ. ಸಂಕಷ್ಟನಾಶನ ಗಣೇಶ ಸ್ತೋತ್ರ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧. ಕುಂಭ:

  ಸತ್ಕಾರ್ಯಗಳಿಗೆ ಸಕ್ರಿಯವಾಗಿ ನೆರವಾಗುವ ಅವಕಾಶ ನಿಮ್ಮದಾಗಲಿದೆ. ಬದುಕಿನಲ್ಲಿ  ಆಶಾಭಾವನೆಯಿಂದ  ಮುನ್ನಡೆಯುವ ನಿಮ್ಮ ಸಾಮಾಜಿಕ ಜವಾಬ್ದಾರಿಗಳ ನಿರ್ವಹಣೆ ಸುಲಭವಾಗಲಿದೆ. ಹತ್ತಿರದ ಬಂಧುವರ್ಗದಲ್ಲಿ ಶುಭಕಾರ್ಯ. ಪ್ರಕೃತಿ ಸೌಂದರ್ಯದ ತಾಣವೊಂದಕ್ಕೆ ಭೇಟಿ. ಆರೋಗ್ಯ ಉತ್ತಮ.ಗಣೇಶ ಕವಚ, ದಾರಿದ್ರ್ಯದಹನ ಶಿವಸ್ತೋತ್ರ, ಶನಿಮಹಾತ್ಮೆ ಓದಿ.

೧೨. ಮೀನ:

  ಗುರು ದೇವತಾನುಗ್ರಹದಿಂದ  ಕಾರ್ಯಗಳು ನಿರ್ವಿಘ್ನವಾಗಿ ಸಾಗಲಿವೆ. ಹೊಸ ವ್ಯವಹಾರ ಪ್ರಸ್ತಾವದ ವಿಷಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡಿರಿ. ವಾಹನಾದಿ ವ್ಯವಹಾರಗಳನ್ನು ನಡೆಸುವವರಿಗೆ ಸಂಧಿಕಾಲ. ಮುದ್ರಣ ವ್ಯವಹಾರಸ್ಥರಿಗೆ ಶುಭ. ಮನೆಯಲ್ಲಿ ನಿಶ್ಚಿಂತೆಯ ವಾತಾವರಣ. ಒಟ್ಟಿನಲ್ಲಿ ಶುಭ ಫಲಗಳ ದಿನ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಶನಿಸ್ತೋತ್ರ ಓದಿ.