ದಿನ ಭವಿಷ್ಯ

09-11-2025

Nov 11, 2025 - 13:20
ದಿನ ಭವಿಷ್ಯ


              ಜ್ಯೋತಿರ್ಮಯ            

ಅದೃಷ್ಟ ಸಂಖ್ಯೆ 9.

೧.ಮೇಷ:

ಸಮಸ್ಯೆಗಳ ಕುರಿತು ಚಿಂತಿಸುವುದನ್ನು ಬಿಟ್ಟುಬಿಡಿ. ವಿರಾಮವನ್ನು ಪೂರ್ಣ ಅನುಭವಿಸಿ  ಮಹಿಳೆಯರ  ಗೃಹೋದ್ಯಮ ಉತ್ಪನ್ನಗಳ  ಜನಪ್ರಿಯತೆ  ವೃದ್ಧಿ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ಗಣ್ಯ ವ್ಯಕ್ತಿಯೊದಿಗೆ ವ್ಯವಹಾರ ಮಾತುಕತೆ. ಗಣೇಶಗಣೇಶ  ಕವಚ, ವಿಷ್ಣು ಸಹಸ್ರನಾಮ,  ಶನಿಮಹಾತ್ಮೆ  ಓದಿ.

  
 

೨.ವೃಷಭ:

 ಕಾರ್ಯಕ್ಕೆ ನಿರ್ದಿಷ್ಟ ಗೊತ್ತುಗುರಿ ಇರಲಿ.  ಯುವಜನರಿಗೆ ಕೃಷಿಕ್ಷೇತ್ರದ ಆಕರ್ಷಣೆ. ಖಾದಿ, ಗ್ರಾಮೋದ್ಯೋಗ ಯೋಜನೆಗಳಿಗೆ ಶುಭಕಾಲ.  ರಂಗೋಲಿ, ಕಸೂತಿ ಪರಿಣತರಿಗೆ ಅನುಕೂಲ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
 


೩ಮಿಥುನ:

ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆ ಬಿಡದಿರಿ. ವಸ್ತ್ರ ,  ಸಿದ್ಧ ಉಡುಪು , ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಬಾಲ್ಯದ ಒಡನಾಡಿಗಳೊಡನೆ ಅನಿರೀಕ್ಷಿತ ಭೇಟಿ. ಮನೆಯಲ್ಲಿ ಆನಂದದ ವಾತಾವರಣ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಸಹಸ್ರನಾಮ, ಗುರುಸ್ತೋತ್ರ ಓದಿ.


೪. ಕರ್ಕಾಟಕ:

 ಉನ್ನತ ಹೊಣೆಗಾರಿಕೆ ಬಂದಾಗ ಹಿಂಜರಿಯದಿರಿ. ಸಣ್ಣ ಉದ್ಯಮ ಉತ್ಪನ್ನಗಳ ಜನಪ್ರಿಯತೆ ವರ್ಧನೆ.  ಗೃಹೋಪಯೋಗಿ ಸಾಧನಗಳ ಖರೀದಿಗೆ ಧನವ್ಯಯ. ಮಕ್ಕಳ ಜ್ಞಾನವೃದ್ಧಿಯ ಕಾರ್ಯಕ್ರಮಗಳಲ್ಲಿ ಭಾಗಿ. ಹಿರಿಯರಿಗೆ, ಮಹಿಳೆಯರಿಗೆ  ಉತ್ತಮ‌ ಆರೋಗ್ಯ. ಗಣೇಶ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


೫.ಸಿಂಹ:.

  ಸಹಚರರೊಂದಿಗೆ ವಿಚಾರ ವಿನಿಮಯ.‌ ಪಾಲುದಾರರೊಡನೆ ಸೌಹಾರ್ದ ಸಮ್ಮಿಲನ. ಸಮಾಜದಲ್ಲಿ ಗೌರವ ವೃದ್ಧಿ. ಮಕ್ಕಳ ಸುಪ್ತ ಪ್ರತಿಭೆಗಳ ವಿಕಾಸಕ್ಕೆ ಕ್ರಮ. ಸಾಂಸಾರಿಕ ಜೀವನದಲ್ಲಿ ಆನಂದ. ಗಣೇಶ ಪಂಚರತ್ನ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ

೬.ಕನ್ಯಾ:

  ಬದುಕುವ ಮಾರ್ಗದ ಕುರಿತು ಚಿಂತೆ ಬೇಡ.   ಹೊಸಬಗೆಯ ಕೃಷಿ ಪ್ರಯೋಗಗಳಲ್ಲಿ ಯಶಸ್ಸು. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಉತ್ಸಾಹದ ದಿನ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಗುರು ಸ್ತೋತ್ರ ಓದಿ.


೭. ತುಲಾ:

ಆಪತ್ತನ್ನು ಕಲ್ಪಿಸಿಕೊಂಡು ಕೊರಗದಿರಿ.  ಬಂಧುವರ್ಗದಲ್ಲಿ ಸೂಕ್ತ ಗೌರವ ಪ್ರಾಪ್ತಿ.  ಗುರುದರ್ಶನದಿಂದ ಧೈರ್ಯವೃದ್ಧಿ. ಅಧ್ಯಾಪಕರಿಗೆ ಮಕ್ಕಳ ಏಳಿಗೆಯಿಂದ ಸಂತೋಷ. ಸಂಸಾರದಲ್ಲಿ  ಎಲ್ಲರಿಗೂ ಉತ್ತಮ ಆರೋಗ್ಯ. ಸಂಕಷ್ಟನಾಶನ ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೮.ವೃಶ್ಚಿಕ:

ದೇಹದಾರ್ಢ್ಯ, ಮನೋದಾರ್ಢ್ಯದಿಂದ ಸಮಸ್ಯೆಗಳು ದೂರ. ಉದ್ಯೋಗ ಸ್ಥಾನದ ಚಿಂತೆಗೆ ವಿದಾಯ. ಹಿರಿಯ ಅಧಿಕಾರಿಗಳಿಗೆ ಅವ್ಯಕ್ತ ಭಯ. ಸಹಕಾರಿ ಸಂಸ್ಥೆಗಳ ಆರ್ಥಿಕ ಚೇತರಿಕೆ. ತೋಟಗಾರಿಕೆ ಬೆಳೆಗಳಿಗೆ ಬೇಡಿಕೆ ವೃದ್ಧಿ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಪಂಚಾಕ್ಷರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೯.ಧನು:

 ಛಲ,ಪ್ರಯತ್ನಗಳಿಂದ ಕಾರ್ಯಸಿದ್ಧಿ. ಸಣ್ಣ ಉದ್ಯಮ ಘಟಕದ ಸ್ಥಾಪನೆಗೆ ಮುಂದುವರಿದ ಪ್ರಯತ್ನ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಲೇವಾದೇವಿ ವ್ಯವಹಾರದಲ್ಲಿ ಅಲ್ಪ ಲಾಭ. ಕುಟುಂಬದಲ್ಲಿ ಸಾಮರಸ್ಯ ಸ್ಥಾಪನೆ. ಗಣೇಶ ಕವಚ, ಶಿವಕವಚ, ನವಗ್ರಹ ಮಂಗಲಾಷ್ಟಕ ಓದಿ.

೧೦.ಮಕರ:

ಮನಸ್ಸಿನ ಸಮತೋಲನದಿಂದ ಕಾರ್ಯಸಿದ್ಧಿ.ಕೆಲವರಿಗೆ ಇಂದೂ ವಿರಾಮ ಇಲ್ಲ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ವರಮಾನ ವೃದ್ಧಿ. ಫ್ಯಾಶನ್ ಡಿಸೈನಿಂಗ್ ವೃತ್ತಿಯವರಿಗೆ ಬೇಡಿಕೆ. ಕೇಟರಿಂಗ್ ವೃತ್ತಿಯವರಿಗೆ ಅನುಕೂಲ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ  ಓದಿ.

 
೧೧. ಕುಂಭ:.

  ಏಕಕಾಲಕ್ಕೆ ಹಲವು  ಕ್ಷೇತ್ರಗಳಿಂದ ಕರ್ತವ್ಯದ ಕರೆ. ಸಾಮಾಜಿಕ‌ ವಲಯದ  ಆಪ್ತರಿಂದ ಸಹಾಯದ ಕೊಡುಗೆ. ವ್ಯವಹಾರದಲ್ಲಿ ಹೊಸ ಸವಾಲುಗಳು. ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು. ಮರುದಿನದ ಆಯೋಜಿತ ಸೇವಾ ಕಾರ್ಯಗಳಿಗೆ ಸಿದ್ಧತೆ. ಗಣಪತಿ ಅಥರ್ವಶೀರ್ಷ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಶನಿಮಹಾತ್ಮೆ  ಓದಿ.


೧೨. ಮೀನ:

 ಅನೇಕ  ವಿಭಾಗಗಳತ್ತ ಲಕ್ಷ್ಯ ಹರಿಸುವ ಅನಿವಾರ್ಯತೆ. ಕೃಷಿ ಆಧಾರಿತ ಉದ್ಯಮಗಳು ಪ್ರಗತಿಯಲ್ಲಿ. ವಿವಾಹ ಅಪೇಕ್ಷಿಗಳಿಗೆ  ಸಮರ್ಪಕ ಜೋಡಿ ಲಭ್ಯ. ಕುಲದೇವತಾ ದರ್ಶನ ಯೋಗ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ,ಶನಿಮಹಾತ್ಮೆ ಓದಿ.