ದಿನ ಭವಿಷ್ಯ
17-06-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 8
೧. ಮೇಷ:
ವಿಪತ್ತುಗಳು ಕ್ಷಣಾರ್ಧದಲ್ಲಿ ಮಂಗಮಾಯ. ಉದ್ಯೋಗ, ವ್ಯವಹಾರ ರಂಗಗಳಲ್ಲಿ ಅಭೂತಪೂರ್ವ ಯಶಸ್ಸು. ಕಿರಿಯ ಸಹೋದ್ಯೋಗಿಗಳಿಂದ ಮಾರ್ಗದರ್ಶನ ಯಾಚನೆ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಒಟ್ಟಿನಲ್ಲಿ ಆನಂದದ ದಿನ. ಗಣೇಶ ಕವಚ, ಶಿವನಾಮಾವಲ್ಯಷ್ಟಕ, ಶನಿಮಹಾತ್ಮೆ ಓದಿ.
೨. ವೃಷಭ:
ವ್ಯವಹಾರಸ್ಥರಿಗೆ ಅಪೇಕ್ಷಿತ ನೆರವು ಕೈಸೇರಿ ನೆಮ್ಮದಿ.ಹಣಕಾಸು ವ್ಯವಹಾರ ಸುಗಮ. ಪ್ರಭಾವಿ ವ್ಯಕ್ತಿಗಳೊಂದಿಗೆ ಹೊಸದಾಗಿ ಸಂಪರ್ಕ ಸಾಧ್ಯತೆ. ಸರಕಾರಿ ನೌಕರರಿಗೆ ವರ್ಗಾವಣೆಯ ಸೂಚನೆ. ಮನೆಯಲ್ಲಿ ಒಟ್ಟಿನಲ್ಲಿ ನೆಮ್ಮದಿಯ ವಾತಾವರಣ. ಗಣಪತಿ ಅಥರ್ವಶೀರ್ಷ,ಸುಬ್ರಹ್ಮಣ್ಯ ಕವಚ, ಗುರುಸ್ತೋತ್ರ ಓದಿ.
೩ಮಿಥುನ:
ಗುರುದೇವತಾನುಗ್ರಹದಿಂದ. ಎಲ್ಲ ವಿಘ್ನಗಳ ನಿವಾರಣೆ. ಉದ್ಯೋಗಸ್ಥರಿಗೆ ನಿರಾತಂಕದ ಪರಿಸ್ಥಿತಿ. ವ್ಯವಹಾರಸ್ಥರಿಗೆ ತಾತ್ಕಾಲಿಕ ಆತಂಕ ಸಂಭವ. ಆತ್ಮವಿಶ್ವಾಸ, ಭಗವತ್ಪ್ರೇಮದಿಂದ ನಿಶ್ವಿಂತೆಯ ಪರಿಸ್ಥಿತಿ ನಿರ್ಮಾಣ. ಹಿರಿಯರ ಆರೋಗ್ಯ ವಿಚಾರಿಸಿ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೪. ಕರ್ಕಾಟಕ:
ಕನಿಷ್ಠ ಪ್ರಯತ್ನದಿಂದ ಗರಿಷ್ಠ ಲಾಭ ಹೊಂದುವಿರಿ. ಉದ್ಯೋಗಸ್ಥರಿಗೆ ತಕ್ಕಮಟ್ಟಿಗೆ ನೆಮ್ಮದಿಯ ವಾತಾವರಣ. ಪಾಲುದಾರಿಕೆ ವ್ಯವಹಾರ ಕುಂಠಿತ. ಕೃಷಿಕರಿಗೆ ಸಾಮಾನ್ಯ ತೃಪ್ತಿಯ ಸನ್ನಿವೇಶ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ನೆಮ್ಮದಿ. ಸಂಕಷ್ಟನಾಶನ ಗಣೇಶ ಸ್ತೋತ್ರ, ರಾಮರಕ್ಷಾ ಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.
೫.ಸಿಂಹ:
ತಾತ್ಕಾಲಿಕ ವಿಘ್ನಗಳನ್ನು ಬದಿಗೆ ಸರಿಸಿ ಯಶಸ್ಸಿನತ್ತ ದಾಪುಗಾಲು. ಸ್ವಯಂ ಉದ್ಯೋಗಸ್ಥರಿಗೆ ವಿಶೇಷ ಶುಭದಿನ. ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಹಿರಿಯರ ಯೋಗಕ್ಷೇಮ ವಿಚಾರಿಸಿ. ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ ಯಶಸ್ಸು. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಲಕ್ಷ್ಮೀಸ್ತೋತ್ರ ಓದಿ.
೬. ಕನ್ಯಾ:
ಅನಿರೀಕ್ಷಿತ ಧನಲಾಭ ಯೋಗವಿದೆ. ಗುರು ಹಿರಿಯರ ಸೂಕ್ತ ಮಾರ್ಗದರ್ಶನದ ಲಾಭ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಪ್ರೋತ್ಸಾಹ. ವ್ಯವಹಾರಸ್ಥರಿಗೆ ಹೊಸ ಅವಕಾಶಗಳು ಲಭ್ಯ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಕೂಡಿಬರುವ ಸಾಧ್ಯತೆ ಇದೆ. ಗಣಪತಿ ಅಥರ್ವಶೀರ್ಷ, ನರಸಿಂಹ ಸ್ತೋತ್ರ, ಶನಿಸ್ತೋತ್ರ ಓದಿ.
೭. ತುಲಾ:
ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚುವರಿ ಜವಾಬ್ದಾರಿ. ವ್ಯವಹಾರಸ್ಥರಿಗೆ ಶುಭ ಸನ್ನಿವೇಶ. ಕೃಷಿ ಉತ್ಪನ್ನ ಮಾರಾಟಗಾರರಿಗೆ ಲಾಭ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ಹಿರಿಯರಿಗೆ ಉಲ್ಲಾಸದವಾತಾವರಣ. ಗಣೇಶ ಪಂಚರತ್ನ, ಶಿವಪಂಚಾಕ್ಷರ ಸ್ತೋತ್ರ, ಗುರುಸ್ತೋತ್ರ ಓದಿ.
೮.ವೃಶ್ಚಿಕ:
ದಿನವಿಡೀ ಆನಂದದ ಅನುಭವ. ಅಪೇಕ್ಷಿತ ಕಾರ್ಯಗಳು ನಿಮ್ಮ ನಿರೀಕ್ಷೆಯ ಪ್ರಕಾರ ನೆರವೇರುವ ಸಾಧ್ಯತೆ. ಹತ್ತಿರದ ಬಂಧುಗಳ ಆಗಮನದಿಂದ ಸಡಗರ. ಆಸ್ತಿ ಖರೀದಿ, ಮಾರಾಟ ಮಾತುಕತೆಯಲ್ಲಿ ಪ್ರಗತಿ. ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೯.ಧನು:
ಕಾರ್ಯನಿಷ್ಠೆಯಿಂದ ಯಶಸ್ಸು. ಸಹೋದ್ಯೋಗಿಗಳ ಅಸೂಯೆಗೆ ಗುರಿಯಾಗದಂತೆ ಎಚ್ಚರ ವಹಿಸಿ. ದೇವತಾರ್ಚನೆಯಲ್ಲಿ ಆಸಕ್ತಿ. ಉತ್ತರ ದಿಕ್ಕಿನಲ್ಲಿ ಪ್ರಯಾಣ ಸಂಭವ. ಮಕ್ಕಳ ಆರೋಗ್ಯ ಗಮನಿಸಿ. ಗಣೇಶ ಪಂಚರತ್ನ, ವೆಂಕಟೇಶ್ವರ ಸ್ತೋತ್ರ, ಮಹಾಲಕ್ಷ್ಮಿ ಅಷ್ಡಕ ಓದಿ.
೧೦.ಮಕರ:
ತಾಪತ್ರಯಗಳ ಕುರಿತು ಚಿಂತಿಸಲು ಸಮಯವಿಲ್ಲದಷ್ಟು ಕೆಲಸಗಳ ಒತ್ತಡ. ಮನೆಮಂದಿಯ ಸಹಕಾರ, ಪ್ರೋತ್ಸಾಹ ಉತ್ತಮ. ಮಕ್ಕಳ ಭವಿಷ್ಯ ಚಿಂತನೆ, ಸಮಾಧಾನ ಗೋಚರ. ಪಾಲುದಾರಿಕೆ ವ್ಯವಹಾರಸ್ಥರಿಗೆ ಕೊಂಚ ಹಿನ್ನಡೆ. ಮಿಶ್ರಫಲ ಕೊಡುವ ದಿನ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ತ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:
ಸಾಮಾಜಿಕ ಚಟುವಟಿಕೆಗಳನ್ನು ನೀವಾಗಿ ಹೆಚ್ಚಿಸಿಕೊಳ್ಳುವಿರಿ. ಸಮಾಜದಲ್ಲಿ ಗೌರವದ ಸ್ಥಾನ ಲಭ್ಯ. ಉದ್ಯೋಗ ರಂಗದಲ್ಲಿ ಹೆಚ್ಚು ಯಶಸ್ಸಿಗೆ ಪಾತ್ರರಾಗುವಿರಿ. ನಿವೃತ್ತರಿಗೆ ವಿಶೇಷ ಮನೋರಂಜನೆಯ ಸನ್ನಿವೇಶ. ಗೃಹಿಣಿಯರಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ. ಗಣೇಶ ಪಂಚರತ್ನ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.
೧೨. ಮೀನ:
ಮೀನು ನೀರಿನಲ್ಲಿ ಓಡಾಡಿದಷ್ಚುಚುರುಕಿನಿಂದ ಚಟುವಟಿಕೆಗಳ ನಿರ್ವಹಣೆ. ನಿಮ್ಮ ಕಾರ್ಯತತ್ಪರತೆಗೆ ಸವಾಲು ಹಾಕುವ ಸನ್ನಿವೇಶ ಎದುರಾಗಲಿದೆ. ದೇವತಾ ಪ್ರಾರ್ಥನೆಯಿಂದ ಯಶಸ್ಸು ಲಭ್ಯ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಸಂಗಾತಿಯಿಂದ ಉತ್ತಮ ಸಹಕಾರ. .ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.