ಮೊಹಮ್ಮದ್‌ ಸೈಫಾನ್‌ ಕೊಲೆ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಕೋರ್ಟ್‌

ಮೊಹಮ್ಮದ್ ಸಲೀಂ, ನಿಜಾಮುದ್ದೀನ್ ಮತ್ತು ಮೃತ ಮೊಹಮ್ಮದ್ ಸೈಪ್ವಾನ್ ಕ್ಯಾಟರಿಂಗ್ ಕೆಲಸ ಮುಗಿಸಿಕೊಂಡು ಒಂದೇ ಬೈಕ್ ನಲ್ಲಿ ತೊಕ್ಕೊಟ್ಟು ಒಳ ಪೇಟೆಯಿಂದ ಪಿಲಾರ್ ಗೆ ಹೋ ಗಲು ತೊಕ್ಕೊಟ್ಟು ರೈಲ್ವೆ ಓವರ್ ಬ್ರಿಡ್ಜ್‌ ಬಳಿ ಹೋಗುತ್ತಿದ್ದಾಗ ಆರೋಪಿಗಳು ಮಾರಕಾಸ್ತ್ರಗಳಿಂದ ಮೂರು ಜನರಿಗೂ ಯದ್ವಾ-ತದ್ವಾ ಕಡಿದಾಗ ಮೊಹಮ್ಮದ್ ಸಲೀಂ ಮತ್ತುನಿಜಾಮುದ್ದೀನ್ ಪ್ರಾಣಾಪಾಯದಿಂದ ಓಡಿ ಹೋಗಿದ್ದರು. ಆದರೆ, ಆರೋಪಿಗಳು ಮೊಹಮ್ಮದ್ ಸೈಪ್ವಾನ್ ನನ್ನು ಸ್ಥಳದಲ್ಲೇ ಕೊಲೆ ಮಾಡಿರುವುದಾಗಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

Oct 31, 2024 - 13:11
Oct 31, 2024 - 15:12
ಮೊಹಮ್ಮದ್‌ ಸೈಫಾನ್‌ ಕೊಲೆ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಕೋರ್ಟ್‌
mangalore district session court judgement

ಮಂಗಳೂರು: ಉಳ್ಳಾಲದ ತೊಕ್ಕೊಟ್ಟು ರೈಲ್ವೆ ಓವರ್ ಬ್ರಿಡ್ಜ್‌ ಬಳಿ ನಡೆದ ಮೊಹಮ್ಮದ್ ಸೈಪ್ವಾನ್ ಕೊಲೆ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

 2016ನೇ ಇಸವಿಯಲ್ಲಿ ಉಳ್ಳಾಲದಲ್ಲಿ ನಡೆದ ರಾಜು ಕೋಟ್ಯಾನ್ ಕೊಲೆ ಪ್ರಕರಣಕ್ಕೆ ಪ್ರತಿಕಾರವಾಗಿ ಆರೋಪಿಗಳಾದ ರಾಹುಲ್ ಯಾನೆ ಬ್ಯಾಕ್ ರಾಹುಲ್, ಪವನ್ ರಾಜ್, ಕಾರ್ತಿಕ್, ಶಿವರಾಜ್, ಎಡ್ವಿನ್ ರಾಹುಲ್ ಡಿಸೋಜಾ, ರಾಹುಲ್ ಪೂಜಾರಿ, ಹೇಮಚಂದ್ರ ಸೇರಿಕೊಂಡು 2016ರ ಏ.26ರಂದು ಮಧ್ಯರಾತ್ರಿ 12.30 ಗಂಟೆಗೆ ಮೊಹಮ್ಮದ್ ಸಲೀಂ, ನಿಜಾಮುದ್ದೀನ್ ಮತ್ತು ಮೃತ ಮೊಹಮ್ಮದ್ ಸೈಪ್ವಾನ್ ಕ್ಯಾಟರಿಂಗ್ ಕೆಲಸ ಮುಗಿಸಿಕೊಂಡು ಒಂದೇ ಬೈಕ್ ನಲ್ಲಿ ತೊಕ್ಕೊಟ್ಟು ಒಳ ಪೇಟೆಯಿಂದ ಪಿಲಾರ್ ಗೆ ಹೋ ಗಲು ತೊಕ್ಕೊಟ್ಟು ರೈಲ್ವೆ ಓವರ್ ಬ್ರಿಡ್ಜ್‌ ಬಳಿ ಹೋಗುತ್ತಿದ್ದಾಗ ಆರೋಪಿಗಳು ಮಾರಕಾಸ್ತ್ರಗಳಿಂದ ಮೂರು ಜನರಿಗೂ ಯದ್ವಾ-ತದ್ವಾ ಕಡಿದಾಗ ಮೊಹಮ್ಮದ್ ಸಲೀಂ ಮತ್ತುನಿಜಾಮುದ್ದೀನ್ ಪ್ರಾಣಾಪಾಯದಿಂದ ಓಡಿ ಹೋಗಿದ್ದರು. ಆದರೆ, ಆರೋಪಿಗಳು ಮೊಹಮ್ಮದ್ ಸೈಪ್ವಾನ್ ನನ್ನು ಸ್ಥಳದಲ್ಲೇ ಕೊಲೆ ಮಾಡಿರುವುದಾಗಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಕೊಲೆ ನಡೆದಾಗ ಉಳ್ಳಾಲ ದರ್ಗಾದಲ್ಲಿ ರಾತ್ರಿ ಪ್ರಾರ್ಥನೆ ಮಾಡಿ ಬರುತ್ತಿರುವವರು ಆರೋಪಿಗಳು ಕೊಲೆ ಮಾಡುವುದನ್ನು ಕಣ್ಣಾರೆ ನೋಡಿರುವುದಾಗಿ ಸಾಕ್ಷಾಧಾರರನ್ನು ಮತ್ತು ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಬಟ್ಟೆಗಳ ಮತ್ತು ಮಾರಕಾಯುದಗಳ ಮೇಲೆ ಮೃತನ ರಕ್ತ ಬಿದ್ದಿದ್ದು, ಸದ್ರಿ ರಕ್ತ ಮೃತನ ಡಿಎನ್ಎಗೆ ತಾಳೆಯಾಗಿರುತ್ತದೆ ಎಂದು ಸಾಕ್ಷಿ ವಿಚಾರಣೆ ನಡೆಸಲಾಗಿತ್ತು. ಪ್ರಾಥಮಿಕ ತನಿಖೆ ಯನ್ನು ಪಿಎಸ್ಐ ಭಾರತಿ ನಡೆಸಿ ಪೊಲೀಸ್ ನಿರೀಕ್ಷರಾದ ಅಶೋಕ್ ಅವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ .ಕ. ಜಿಲ್ಲಾಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕಾಂತರಾಜು ಎಸ್.ವಿ ಅವರು ಆರೋಪಿಗಳು ನಿರ್ದೋಷಿಗಳೆಂದು ತೀರ್ಪು ನೀಡಿ ಆದೇಶಿಸಿದ್ದಾರೆ. ಆರೋಪಿಗಳ ಪರವಾಗಿ ವಕೀಲರಾದ ಬೆಳುವಾಯಿ ಅರುಣ್ ಬಂಗೇರ, ರಾಜೇಶ್ ಕುಮಾರ್ ಅಮ್ಟಾಡಿ ಹಾಗೂ ಆಶಾ ನಾಯಕ್ ಅವರು ವಾದಿಸಿದ್ದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.