ದಿನ ಭವಿಷ್ಯ
18-06-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 9
೧. ಮೇಷ:
ಪರಿಸ್ಥಿತಿಯಲ್ಲಿ ವಿಶೇಷ ವ್ಯತ್ಯಾಸ ಇಲ್ಲದ ದಿನ. ವ್ಯಾಪ್ತಿ ವಿಸ್ತರಣೆಗೆ ಸಮಯ ಅಪಕ್ವ. ದವಸ ಧಾನ್ಯ ವ್ಯಾಪಾರಿಗಳಿಗೆ ಹೇರಳ ಲಾಭ. ವಸ್ತ್ರ, ಆಭರಣ ಖರೀದಿಯ ಸಾಧ್ಯತೆ. ನಾಮಸ್ಮರಣೆ ಮಾಡಲು ಮಸ್ತೋತ್ರ, ಗಣೇಶ ದ್ವಾದಶನಾಮ ಸ್ತೋತ್ರ, ಶಿವಸಹಸ್ರನಾಮ, ಶನಿಮಹಾತ್ಮೆ ಓದಿ.
೨. ವೃಷಭ:
ಹೊಸ ಮೂಲಗಳಿಂದ ಆರ್ಥಿಕ ಸಹಾಯ. ಉದ್ಯೋಗ ಸ್ಥಾನದಲ್ಲಿ ಸಮಾಧಾನದ ವಾತಾವರಣ. ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ. ಪ್ರಾಪ್ತವಯಸ್ಕ ಪುತ್ರನ ವಿವಾಹಕ್ಕೆ ಸಿದ್ಧತೆ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಂತೋಷ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ
೩.ಮಿಥುನ:
ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ. ವಸ್ತ್ರ, ಉಡುಪು, ವಾಹನ ಉದ್ಯಮಿಗಳಿಗೆ ಶುಭದಿನ. ಗೃಹೋತ್ಪನ್ನ ತಿನಿಸುಗಳಿಗೆ ಗ್ರಾಹಕರ ಹೆಚ್ಚಳ. ಸರಕಾರಿ ನೌಕರರಿಗೆ ಆತಂಕ.ಗಣಪತಿ ಅಥರ್ವಶೀರ್ಷ , ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೪.ಕರ್ಕಾಟಕ:
ಉದ್ಯೋಗ ಸ್ಥಾನಕ್ಕೆ ಪ್ರಮುಖರ ಭೇಟಿ. ಹಿರಿಯರ ಅನಾರೋಗ್ಯ ಪೀಡೆಯಿಂದ ಮುಕ್ತಿ. ಆಪ್ತರಿಂದ ನಿರೀಕ್ಷಿತ ಸಹಾಯ ಲಭ್ಯ. ವಿದ್ಯಾರ್ಥಿಗಳ ಅಧ್ಯಯನದಲ್ಲಿ ಹೆಚ್ಚು ಪರಿಶ್ರಮಕ್ಕೆ ಒತ್ತು. ದಿನವಿಡೀ ಮಿಶ್ರ ಫಲಗಳ ಅನುಭವ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕವಚ, ದೇವೀಸ್ತೋತ್ರ ಓದಿ.
೫.ಸಿಂಹ:
ರಕ್ಷಣಾತ್ಮಕ ನಡೆಗಳಿಂದ ಕಾರ್ಯಜಯ. ಉದ್ಯೋಗದಲ್ಲಿ ಉತ್ತಮ ಪ್ರಗತಿ. ಗುರು ದೇವತಾನುಗ್ರಹಕ್ಕಾಗಿ ತೀವ್ರ ಪ್ರಾರ್ಥನೆ ಅವಶ್ಯ. ರಾಜಕಾರಣಿಗಳ ಹಸ್ತಕ್ಷೇಪದಿಂದ ಕಾರ್ಯಕ್ಕೆ ವಿಘ್ನ. ವಿದ್ಯಾರ್ಥಿಗಳ ಲೋಕಜ್ಞಾನ ವೃದ್ಧಿಗೆ ಅನುಕೂಲ ವಾತಾವರಣ. ಗಣೇಶ ಕವಚ, ನರಸಿಂಹ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೬. ಕನ್ಯಾ:
ಕೆಲವರಿಗೆ ಮಾತ್ರ ಉನ್ನತರ ಪ್ರೋತ್ಸಾಹ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಲಾಭ. ಕುಶಲ ಕರ್ಮಿಗಳಿಗೆ ಉದ್ಯೋಗಾವಕಾಶ. ಗೃಹಿಣಿಯರ ಸ್ವೋದ್ಯೋಗ ಯೋಜನೆ ಪ್ರಗತಿ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಗುರುಸ್ತೋತ್ರ ಓದಿ.
೭. ತುಲಾ:
ವಿವೇಕದ ಯೋಜನೆಯಿಂದ ಮಕ್ಕಳ ಭವಿಷ್ಯ ಭದ್ರ. ಉದ್ಯೋಗ ಸ್ಥಾನದಲ್ಲಿ ಸುಲಲಿತವಾಗಿ ಕಾರ್ಯ ನಿರ್ವಹಣೆ. ಕೇಟರಿಂಗ್ ವ್ಯವಹಾರಸ್ಥರಿಗೆ ಸತ್ವಪರೀಕ್ಷೆ. ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಪ್ರಗತಿ. ಮನೆಯಲ್ಲಿ ಎಲ್ಲರಿಗೂ ಆರೋಗ್ಯ ಭಾಗ್ಯ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
೮.ವೃಶ್ಚಿಕ:
ಹಿತಶತ್ರುಗಳ ಸಂಚು ವಿಫಲ. ತಾಳ್ಮೆಯ ವರ್ತನೆಯಿಂದ ಹಿರಿಯರ ಒಲವು ಲಭ್ಯ. ವ್ಯವಹಾರದ ಸಂಬಂಧ ಅನಿರೀಕ್ಷಿತ ಪಯಣ ಸಂಭವ. ದ್ವಿಚಕ್ರ ವಾಹನ ಚಾಲನೆಯಲ್ಲಿ ಎಚ್ಚರ. ನೆರೆಯವರೊಡನೆ ಬಾಂಧವ್ಯ ವೃದ್ಧಿ. ಗಣಪತಿ ಅಥರ್ವಶೀರ್ಷ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೯.ಧನು:
ಅನಿರೀಕ್ಷಿತ ಸಹಾಯ ಪ್ರಾಪ್ತಿ. ದಂಪತಿಗಳ ನಡುವೆ ಅನುರಾಗ ವೃದ್ಧಿ ಕಲಾವಿದರ ಪ್ರತಿಭೆ ಬೆಳಕಿಗೆ ಬರುವ ಸಂದರ್ಭ. ಸಣ್ಣ ಗೃಹೋದ್ಯಮ ಅಥವಾ ಹೈನುಗಾರಿಕೆ ಆರಂಭಿಸಲು ಒಲವು. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂತಸ. ಗಣೇಶ ದ್ವಾದಶನಾಮ ಸ್ತೋತ್ರ, ವೆಂಕಟೇಶ್ವರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೧೦.ಮಕರ:
ಹೊಸ ಅವಕಾಶಗಳಿಗಾಗಿ ಮುಂದುವರಿದ ಹುಡುಕಾಟ. ಸಹೋದ್ಯೋಗಿಗಳಿಂದ ಸಹಕಾರ. ಕುಟುಂಬದ ಸದಸ್ಯರೊಂದಿಗೆ ಪ್ರೀತಿ, ವಾತ್ಸಲ್ಯದ ಸಂಬಂಧ ವೃದ್ಧಿ. ತಂದೆಯ ಕಡೆಯ ಬಂಧುಗಳ ಆಗಮನ. ದೇವತಾರ್ಚನೆಯಿಂದ ಮನೆಯಲ್ಲಿ ಹರ್ಷ. ಗಣೇಶ ಸ್ತೋತ್ರ, ರಾಮ ಭುಜಂಗಪ್ರಯಾತ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:
ಸೇವಾಪರತೆಯಿಂದ ಗೌರವ ಮತ್ತು ಜನಪ್ರಿಯತೆ ವೃದ್ಧಿ. ವೃತ್ತಿಪರರಿಗೆ ಸರ್ವತ್ರ ಶ್ಲಾಘನೆ. ವೈದ್ಯರ ಭೇಟಿಯಿಂದ ಸಣ್ಣ ತೊಂದರೆ ಪರಿಹಾರ. ಅಪರೂಪದ ಬಂಧುಗಳು ಆಗಮಿಸಿ ಮನೆಮಂದಿಗೆ ಹರ್ಷ. ಗೃಹೋದ್ಯಮ ವಿಸ್ತರಣೆಗೆ ಕಾರ್ಯಯೋಜನೆ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.
೧೨. ಮೀನ:
ವ್ಯವಹಾರದಲ್ಲಿ ಅಪರಿಮಿತ ಮುನ್ನಡೆಯ ದಿನ. ಹಣಕಾಸು ವ್ಯವಹಾರ ಸುಧಾರಣೆ. ಸರಕಾರಿ ಇಲಾಖೆಗಳಲ್ಲಿ ಅಪೇಕ್ಷಿತ ಕಾರ್ಯಗಳ ಮುನ್ನಡೆ. ಮನೆಮಂದಿಯೊಂದಿಗೆ ಶಿವಾಲಯಕ್ಕೆ ಭೇಟಿ. ಮಕ್ಕಳಿಂದ ಹಿರಿಯರಿಗೆ ಆನಂದ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.