ದಿನ ಭವಿಷ್ಯ
20-06-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 2
೧.ಮೇಷ:
ಮನಸ್ಸಿನ ಮೇಲೆ ಪರಿಸರದ ಏರುಪೇರುಗಳ ಪರಿಣಾಮ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯ ಮಧ್ಯಮ. ಸರಕಾರಿ ನೌಕರರಿಗೆ ಕೆಲಸದ ಹೊರೆ.ಆತ್ಮೀಯ ಬಂಧುಗಳಿಂದ ಸಕಾಲಕ್ಕೆ ಸಹಾಯ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ.
ಗಣೇಶ ಕವಚ, ದೇವೀಸ್ತೋತ್ರ, ಶನಿಮಹಾತ್ಮೆ ಓದಿ.
೨.ವೃಷಭ:
ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸ್ವಂತ ವ್ಯವಹಾರ ನಡೆಸುವವರಿಗೆ ಸಮಯದ ಸವಾಲು. ಕಟ್ಟಡ ನಿರ್ಮಾಣ, ವಸ್ತ್ರೋದ್ಯಮ, ಸ್ವರ್ಣೋದ್ಯಮ ಮೊದಲಾದ ಉದ್ಯಮಗಳಿಗೆ ಲಾಭ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೩.ಮಿಥುನ:
ಕಡಿಮೆ ಆದಾಯ, ಅಧಿಕ ಖರ್ಚುಗಳು. ಮನೆಯಲ್ಲಿ ಅನುಕೂಲಕರ ವಾತಾವರಣ. ಉದ್ಯೋಗಸ್ಥರಿಗೆ ಹಿತವಾದ ಸನ್ನಿವೇಶ. ರಾಜಕಾರಣಿಗಳಿಂದ ನೆಮ್ಮದಿ ಭಂಗ. ದೇವತಾರ್ಚನೆಯಲ್ಲಿ ಪಾಲುಗೊಳ್ಳುವಿಕೆ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಆದಿತ್ಯಹೃದಯ ಓದಿ.
೪.ಕರ್ಕಾಟಕ:
ಉದ್ಯೋಗ ರಂಗದಲ್ಲಿ ಕಳಪೆ ಸಾಧನೆ. ಉದ್ಯಮಿಗಳ ಉತ್ಪನ್ನಗಳಿಗೆ ಮಧ್ಯಮ ಬೇಡಿಕೆ. ಕಲೋಪಾಸಕರಿಗೆ ಮನಸ್ಸಂತೋಷ, ವಿದ್ವಾಂಸರಿಗೆ ಜನಮನ್ನಣೆ. ಗೃಹಿಣಿಯರ ಸ್ವಾವಲಂಬನೆ ಯೋಜನೆಗಳ ಮುನ್ನಡೆ. ರಾತ್ರಿ ಸಂಚಾರವನ್ನು ಮಾಡಬೇಡಿ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಮಹಿಮ್ನ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
೫.ಸಿಂಹ:
ಹಿರಿಯರ ಆಶೀರ್ವಾದದಿಂದ ವಿಘ್ನಗಳು ದೂರ. ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು. ಅಧಿಕಾರಿಗಳಿಗೆ ಅವಧಿಗಿಂತ ಮೊದಲೇ ವರ್ಗಾವಣೆ ಸಂಭವ. ಲೇವಾದೇವಿ ವ್ಯವಹಾರಸ್ಥರಿಗೆ ಹಿನ್ನಡೆ. ರಾಜಕಾರಣಿಗಳಿಗೆ ಅಪವಾದ ಬರುವ ಸಾಧ್ಯತೆ. ಗಣೇಶ ಕವಚ, ಶಿವಸಹಸ್ರನಾಮ, ನರಸಿಂಹ ಕವಚ ಓದಿ.
೬. ಕನ್ಯಾ:
ಕಾರ್ಯದಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ ಪ್ರಾಪ್ತಿ. ಉದ್ಯೋಗಸ್ಥರ ಸಾಧನೆಗೆ ಮೇಲಧಿಕಾರಿಗಳ ಪ್ರಶಂಸೆ. ಉದ್ಯಮ ವಿಸ್ತರಿಸಿದ ವಸ್ತ್ರದ ವ್ಯಾಪಾರಿಗಳಿಗೆ ಉತ್ತಮ ಲಾಭ. ಉತ್ತರ ದಿಕ್ಕಿನಿಂದ ಶುಭವಾರ್ತೆ. ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ವೃದ್ಧಿ. ಗಣಪತಿ ಅಥರ್ವಶೀರ್ಷ,ಕನಕಧಾರಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ
೭.ತುಲಾ:
ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಸತ್ವ ಪರೀಕ್ಷೆ. ಸ್ವಂತ ಉದ್ಯಮದ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಕೃಷಿ ಉತ್ಪನ್ನಗಳು, ತರಕಾರಿ, ಹಣ್ಣು ವ್ಯಾಪಾರಿಗಳಿಗೆ ಮಧ್ಯಮ ಲಾಭ. ಹಿರಿಯರು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಉತ್ತಮ. ವಿದೇಶವಾಸಿ ಮಕ್ಕಳಿಂದ ಶುಭವಾರ್ತೆ. ಗಣೇಶ ಕವಚ, ಲಕ್ಷ್ಮೀನರಸಿಂಹ ಕರಾವಲಂಬನ ಸ್ತೋತ್ರ, ಗುರುಸ್ತೋತ್ರ ಓದಿ.
೮.ವೃಶ್ಚಿಕ:
ಸ್ವಂತದ ಆರೋಗ್ಯದ ಕಡೆಗೆ ಗಮನವಿರಲಿ. ಲೆಕ್ಕ ಪರಿಶೋಧಕರು, ಸಿವಿಲ್ ಎಂಜಿನಿಯರರಿಗೆ ಸಮಯದ ಒತ್ತಡ. ದೀರ್ಘಕಾಲದಿಂದ ಕಾಡುತ್ತಿದ್ದ ಸಮಸ್ಯೆಗೆ ಅನಿರೀಕ್ಷಿತ ಪರಿಹಾರ. ಕುಶಲ ಕರ್ಮಿಗಳಿಗೆ ನಿರೀಕ್ಷೆಗೆ ತಕ್ಕಂತೆ ಉತ್ತಮ ಆದಾಯ. ಗೃಹಿಣಿಯರ ಸ್ವೋದ್ಯೋಗಕ್ಕೆ ಮನೆಯವರ ಉತ್ತೇಜನ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೯. ಧನು:
ಸ್ವಂತ ಉದ್ಯಮದ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಗ್ರಾಹಕರಿಂದ ಪ್ರಶಂಸೆಯ ಸುರಿಮಳೆ. ವೈದ್ಯರಿಗೆ ವೃತ್ತಿಯಲ್ಲಿ ಯಶಸ್ಸಿನೊಂದಿಗೆ ಒಳ್ಳೆಯ ಹೆಸರು. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂತೋಷದ ವಾತಾವರಣ. ಅಪರಿಚಿತರೊಂದಿಗೆ ಅಧಿಕ ಸ್ನೇಹ ಬೇಡ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.
೧೦.ಮಕರ:
ಪ್ರಾಪಂಚಿಕ ಕರ್ತವ್ಯಗಳ ಸೆಳೆತ. ನಿಗದಿತ ಸಮಯದಲ್ಲಿ ಕೆಲಸವನ್ನು ಮುಗಿಸುವ ಒತ್ತಡ. ದೀರ್ಘಾವಧಿ ಯೋಜನೆಗಳಲ್ಲಿ ಹಣ ಹೂಡಿಕೆ. ಹಿತಶತ್ರುಗಳ ಕಾಟದಿಂದ ಅಭಿವೃದ್ಧಿ ಯೋಜನೆಗಳಿಗೆ ವಿಘ್ನ. ಮಕ್ಕಳ ಓದು ಸುಧಾರಣೆಗೆ ವ್ಯವಸ್ಥೆ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:
ಸಮಾಜದ ಋಣ ತೀರಿಕೆಯಲ್ಲಿ ಮುಂಚೂಣಿಯ ಸೇವೆ. ಉದ್ಯೋಗ ಕ್ಷೇತ್ರದ ಸಾಧನೆಗೆ ಮೇಲಿನವರಿಂದ ಶ್ಲಾಘನೆ. ಸ್ವಂತ ಉದ್ಯಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ಅಧ್ಯಾಪಕರು, ವೈದ್ಯರು ಮೊದಲಾದವರಿಗೆ ಗೌರವ ವೃದ್ಧಿ. ವಸ್ತ್ರದ ವ್ಯಾಪಾರದಲ್ಲಿ ಸಾಮಾನ್ಯ ಲಾಭ. ಗಣೇಶ ಅಷ್ಟಕ, ನರಸಿಂಹ ಕವಚ, ಶನಿಮಹಾತ್ಮೆ ಓದಿ.
೧೨.ಮೀನ:
ನಿಗದಿತ ಸಮಯದ ಮೊದಲೇ ಕಾರ್ಯ ಪೂರೈಸಿದ ತೃಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ಯಶಸ್ಸು. ಸರಕಾರಿ ಕಚೇರಿಗಳಲ್ಲಿ ನೌಕರ ವರ್ಗದವರಿಂದ ಉತ್ತಮ ಸ್ಪಂದನ. ಕಟ್ಟಡ ನಿರ್ಮಾಣ ಕಾರ್ಯ ಮಂದಗತಿಯಲ್ಲಿ .ವ್ಯಾಪಾರ ಸ್ಥಾನ ನವೀಕರಣ ಆರಂಭ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.