ದಿನ ಭವಿಷ್ಯ
18-07-2025

ಅದೃಷ್ಟ ಸಂಖ್ಯೆ 9
ಜ್ಯೋತಿರ್ಮಯ
೧ಮೇಷ:
ವಾರದ ಮಧ್ಯದ ದಿನ ಹೆಚ್ಚು ಕಡಿಮೆ ಮಧ್ಯಮ ಫಲಗಳೇ ಗೋಚರ. ಉದ್ಯೋಗ ಸ್ಥಾನದಲ್ಲಿ ಬಹುಮಟ್ಟಿಗೆ ಯಥಾಸ್ಥಿತಿ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಉದ್ಯಮದ ಪ್ರಗತಿ ಎಲ್ಲ ವಿಭಾಗಗಳಲ್ಲಿ ಆಗುವುದಾದರೂ ಸಾಮಾನ್ಯ ಮಟ್ಟದಲ್ಲಿ ಮಾತ್ರ. ಗೃಹೋದ್ಯಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ಎಲ್ಲರ ಆರೋಗ್ಯ ಉತ್ತಮ.ಗಣೇಶ ಕವಚ, ಆದಿತ್ಯ ಹೃದಯ, ಶನಿಮಹಾತ್ಮೆ ಓದಿ.
೨.ವೃಷಭ:
ಉದ್ಯೋಗದಲ್ಲಿ ಸ್ಥಾನ ಗೌರವ ಭದ್ರ. ಸರಕಾರಿ ನೌಕರರಿಗೆ ಅಧಿಕ ಜವಾಬ್ದಾರಿಗಳು. ವಸ್ತ್ರ , ಯಂತ್ರೋಪಕರಣ ಹಾಗೂ ಗೃಹಸಾಮಗ್ರಿ ಉದ್ಯಮಗಳ ಆದಾಯ ವೃದ್ಧಿ. ಪಿತ್ರಾರ್ಜಿತ ಕೃಷಿಭೂಮಿಯಲ್ಲಿ ವ್ಯವಸಾಯ ಆರಂಭ. ಲೇವಾದೇವಿ ವ್ಯವಹಾರ ಪ್ರತಿಕೂಲ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂತೃಪ್ತಿಯ ದಿನ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೩. ಮಿಥುನ:
ಕಾರ್ಯನಿರ್ವಹಣೆಯಲ್ಲಿ ಕುಗ್ಗದ ಉತ್ಸಾಹ. ವಿವಿಧ ವಿಭಾಗಗಳಿಂದ ಕೆಲಸದ ಒತ್ತಡ. ಉದ್ಯೋಗದಲ್ಲಿ ಮೇಲಿನವರಿಂದ ಶ್ಲಾಘನೆ. ಪಾಲುದಾರಿಕೆಯ ಉದ್ಯಮ ಸುಧಾರಣೆಗೆ ಯತ್ನ. ಅಧ್ಯಾತ್ಮಚಿಂತನೆ, ದೇವಾಲಯಕ್ಕೆ ಭೇಟಿ, ಮಹಿಳೆಯರ ಸ್ವೋದ್ಯೋಗ ಘಟಕಕ್ಕೆ ಯಶಸ್ಸು. ಮಕ್ಕಳ ವ್ಯಾಸಂಗಕ್ಕೆ ಉತ್ತೇಜನ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಪಾರಾಯಣ ಮಾಡಿ.
೪.ಕರ್ಕಾಟಕ:
ಪದೋನ್ನತಿಗೆ ತಕ್ಕಂತೆ ಕಾರ್ಯ ಮಾಡುವ ಕಳಕಳಿ. ಸ್ವಂತ ಉದ್ಯಮಕ್ಕೆ ಎದುರಾದ ಪೈಪೋಟಿಗಳ ಯಶಸ್ವೀ ನಿವಾರಣೆ. ಉತ್ಪನ್ನಗಳ ಮತ್ತು ಸೇವೆಗಳ ಗುಣಮಟ್ಟ ಏರಿಕೆ ಪ್ರಯತ್ನ. ಹೈನುಗಾರಿಕೆ ಉದ್ಯಮಕ್ಕೆ ಪ್ರೋತ್ಸಾಹ. ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು. ಹಿರಿಯರ, ಮಕ್ಕಳ ಆರೋಗ್ಯ ಉತ್ತಮ. ಸಂಕಷ್ಟನಾಶಕ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೫. ಸಿಂಹ:
ಉದ್ಯೋಗದಲ್ಲಿ ನಾಯಕನ ಪಟ್ಟ ಲಭ್ಯ. ಉದ್ಯಮದ ಅಭಿವೃದ್ಧಿ ಕ್ರಮಗಳಿಗೆ. ಸರಕಾರಿ ಇಲಾಖೆಗಳ ಅನುಕೂಲಕರ ಸ್ಪಂದನ. ಖಾದಿ, ಸ್ವದೇಶಿ ಉದ್ಯಮ ಕ್ಷೇತ್ರದಲ್ಲಿ ಮುನ್ನಡೆ. ಲೋಹ ಆಧಾರಿತ ಉದ್ಯಮಗಳಿಗೆ ಅಭಿವೃದ್ಧಿಯ ಕಾಲ. ಅವಿವಾಹಿತರಿಗೆ ವಿವಾಹ ಯೋಗ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೬.ಕನ್ಯಾ:
ಅಧಿಕ ಕಾರ್ಯೋತ್ಸಾಹಕ್ಕೆ ಸರಿಯಾದ ಅವಕಾಶ. ಹೆಚ್ಚುವರಿ ಜವಾಬ್ದಾರಿಗಳು ಬರಲಿವೆ. ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಲು ಒತ್ತಾಯ. ಹಳೆಯ ಒಡನಾಡಿಗಳ ಅನಿರೀಕ್ಷಿತ ಭೇಟಿ. ತೋಟಗಾರಿಕೆ ಬೆಳೆಸಲು ಕ್ರಮ. ಹಿರಿಯರ ಆರೋಗ್ಯ ಸುಧಾರಣೆ. ಸಂಗಾತಿ ಮತ್ತು ಮಕ್ಕಳಿಗೆ ನೆಮ್ಮದಿಯ ದಿನ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಪಾರಾಯಣ ಮಾಡಿ.
೭. ತುಲಾ:
ಕೆಲವು ದಿನಗಳಿಂದ ಕಾಡುತ್ತಿದ್ದ ಕಿರಿಕಿರಿ ಇಲ್ಲದೆ ದಿನಚರಿ ಆರಂಭ. ಉದ್ಯೋಗ ಸ್ಥಾನದಲ್ಲಿ ಸಹೋದ್ಯೋಗಿಗಳಿಂದ ಗೌರವ. ಕುಶಲಕರ್ಮಿಗಳ ಕೃತಿಗಳಿಗೆ ಅಧಿಕ ಬೇಡಿಕೆ. ಮನೆಯಲ್ಲಿ ದೇವತಾಕಾರ್ಯದಿಂದ ಸಕಾರಾತ್ಮಕ ಸ್ಪಂದನ. ಸತ್ಸಂಗ, ಭಜನೆ, ಸಂಕೀರ್ತನೆಗಳಲ್ಲಿ ಪಾಲುಗೊಳ್ಳುವ ಹುಮ್ಮಸ್ಸು. ಗುರುವಿನ ದರ್ಶನಕ್ಕೆ ಮನಸ್ಸು ಕಾತರ. ಗಣೇಶ ಕವಚ, ಶಿವಕವಚ, ಆಂಜನೇಯ ಸ್ತೋತ್ರ ಓದಿ.
೮. ವೃಶ್ಚಿಕ:
ಶುಭಫಲಗಳ ಮತ್ತು ಶುಭವೆನ್ನಲು ಸಾಧ್ಯವಿಲ್ಲದ ಫಲಗಳ ಅನುಭವ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಸರಕಾರಿ ಅಧಿಕಾರಿಗಳಿಗೆ ಅನಪೇಕ್ಷಿತ ಸ್ಥಳಕ್ಕೆ ವರ್ಗಾವಣೆಯ ಸಾಧ್ಯತೆ. ಧಾರ್ಮಿಕ ಮೂಲದ ಸೇವಾ ಸಂಸ್ಥೆಗಳಿಂದ ಗೌರವ. ವಸ್ತ್ರ, ಆಭರಣ ಖರೀದಿಗೆ ಧನವ್ಯಯ. ಹಿತಶತ್ರುಗಳ ಬಾಧೆ. ಎಲ್ಲರ ಆರೋಗ್ಯ ಉತ್ತಮ. ಗಣೇಶ ಅಷ್ಟಕ, ವೆಂಕಟಢಶ ಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.
೯.ಧನು:
ಮನಃಪೂರ್ವಕ ದುಡಿಮೆಗೆ ತಕ್ಕ ಪ್ರತಿಫಲ. ಉದ್ಯೋಗ ಸ್ಥಾನದಲ್ಲಿ ಹುದ್ದೆಗೆ ಸರಿಯಾದ ಮನ್ನಣೆ. ಅನಿರೀಕ್ಷಿತ ನೆರವುಗಳಿಂದ ಉದ್ಯಮ ಅಭಿವೃದ್ಧಿ. ವಸ್ತ್ರ, ಸಿದ್ಧವಸ್ತ್ರ, ಪಾದರಕ್ಷ್ಷೆ, ಶೋಕಿಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಕೃಷ್ಯುತ್ಪನ್ನಗಳಿಗೆ ಯೋಗ್ಯ ಬೆಲೆ ಲಭ್ಯ. ಪರಿಸರ ರಕ್ಷಣಾ ಕಾರ್ಯಗಳತ್ತ ಹೆಚ್ಚಿದ ಆಕರ್ಷಣೆ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಅನ್ನಪೂರ್ಣಾ ಸ್ತೋತ್ರ ಓದಿ.
೧೦.ಮಕರ:
ಉದ್ಯೋಗ ಸ್ಥಾನದಲ್ಲಿ ತಾತ್ಕಾಲಿಕ ಬದಲಾವಣೆ. ಸಿವಿಲ್ ಎಂಜಿನಿಯರರಿಗೆ ಉನ್ನತ ಹುದ್ದೆ ಸಂಭವ. ಸರಕಾರಿ ಉದ್ಯೋಗಸ್ಥರಿಗೆ ದೂರದ ಊರಿಗೆ ವರ್ಗಾವಣೆ. ಅಪರೂಪದ ಅತಿಥಿಗಳ ಆಗಮನ. ಗೃಹಾಲಂಕಾರ ಸಾಮಗ್ರಿ ಖರೀದಿಗೆ ಧನವ್ಯಯ. ಹೊಸ ವಿದ್ಯೆಯನ್ನು ಕಲಿಯುವ ಆಸಕ್ತಿ. ಎಲ್ಲರ ಆರೋಗ್ಯ ಉತ್ತಮ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೧೧.ಕುಂಭ:
ಉದ್ಯೋಗ ಸ್ಥಾನದಲ್ಲಿ ಅನಿವಾರ್ಯವಾದ ಹೆಚ್ಚುವರಿ ಜವಾಬ್ದಾರಿಗಳು. ಉದ್ಯಮ ಸ್ಥಿರವಾಗಿ ಅಭಿವೃದ್ಧಿ. ಕಟ್ಟಡ ನಿರ್ಮಾಣ ಕಾರ್ಯಗಳ ವೇಗ ವರ್ಧನೆ. ಸಿವಿಲ್ ಎಂಜಿನಿಯರಿಂಗ್ ವೃತ್ತಿಯವರಿಗೆ ಹೆಚ್ಚು ಅವಕಾಶಗಳು ಲಭ್ಯ. ಯಂತ್ರೋಪಕರಣ ಉದ್ಯಮಿಗಳಿಗೆ ಮತ್ತು ವ್ಯಾಪಾರಿಗಳಿಗೆ ಉತ್ತಮ ಲಾಭ. ಗಣೇಶ ಕವಚ, ನರಸಿಂಹ ಸ್ತೋತ್ರ , ಶನಿಮಹಾತ್ಮೆ ಪಾರಾಯಣ ಮಾಡಿ.
೧೨. ಮೀನ:
ಸಪ್ತಾಹದ ಮಧ್ಯದಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವವರ ಸಂಪರ್ಕ. ಉದ್ಯೋಗದಲ್ಲಿ ಹೊಸ ಬಗೆಯ ಸೇವೆಗಳಿಗೆ ಅವಕಾಶ. ಸಕಾಲಿಕ ಸೇವೆಯಿಂದ ವಿಶ್ವಾಸ ವೃದ್ಧಿ. ವಿಷ್ಣು ಕ್ಷೇತ್ರ ಭೇಟಿ ಸಂಭವ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ ಹಾಗೂ ಲವಲವಿಕೆ. ಪರಂಪರಾಗತ ವೃತ್ತಿಯತ್ತ ಆಕರ್ಷಣೆ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.