ದಿನ ಭವಿಷ್ಯ

28-09-2025

Sep 29, 2025 - 16:45
ದಿನ ಭವಿಷ್ಯ

ಅದೃಷ್ಟ ಸಂಖ್ಯೆ 1

                    ಜ್ಯೋತಿರ್ಮಯ

೧.ಮೇಷ:
 ವಿರಾಮದ ದಿನ ನವರಾತ್ರಿಯ ಸಂಭ್ರಮ. ಹೊಸ ಕಾರ್ಯಗಳನ್ನು ವಹಿಸಿಕೊಳ್ಳುವಾಗ ಎಚ್ಚರ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ಕುಟುಂಬದೊಳಗೆ ಸಾಮರಸ್ಯ ವೃದ್ಧಿಗಾಗಿ ಪೂಜೆ. ಗೃಹೋದ್ಯಮಗಳ ಜನಪ್ರಿಯತೆ ವೃದ್ಧಿ. ಗಣೇಶ ಸ್ತೋತ್ರ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ


೨. ವೃಷಭ:
  ಹಬ್ಬ ಆಚರಣೆಯೊಂದಿಗೆ  ನಾಳೆಯ ಕೆಲಸಗಳ ಚಿಂತೆ. ಹೊಸ ಕೃಷಿ ಭೂಮಿಯಲ್ಲಿ ಕೆಲಸ ಆರಂಭ‌.  ಸರಕಾರಿ ಅಧಿಕಾರಿಗಳಿಗೆ ನಿಲ್ಲದ ಒತ್ತಡ. ನೆಂಟಸ್ತಿಕೆ ಸಂಬಂಧ ಸಣ್ಣ ಪ್ರಯಾಣ ಸಂಭವ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂಭ್ರಮ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.

೩. ಮಿಥುನ:
ಅಚಲವಾದ ದೈವಭಕ್ತಿ, ಆತ್ಮವಿಶ್ವಾಸದಿಂದ ಯಶಸ್ಸು. ಸ್ವಂತ ವ್ಯವಹಾರಸ್ಥರಿಗೆ ನಿಶ್ಚಿಂತೆ. ಹಿತಶತ್ರುಗಳ  ಬಗೆಗೆ ಎಚ್ಚರ. ಧ್ಯಾನ, ಸ್ವಾಧ್ಯಾಯಗಳಲ್ಲಿ ಮನಸ್ಸು ಲೀನ. ಉದ್ಯಮ‌ ಅಭಿವೃದ್ಧಿ  ಪ್ರಗತಿಯಲ್ಲಿ ಮನೆಯಲ್ಲಿ ದೇವತಾ ಕಾರ್ಯ. ಗಣೇಶ ಕವಚ, ನರಸಿಂಹ ಸ್ತೋತ್ರ, ದೇವೀಸ್ತೋತ್ರ ಓದಿ.

೪.ಕರ್ಕಾಟಕ:

  ದೇವಿ ಉಪಾಸನೆಯ ಸಂಭ್ರಮದಲ್ಲಿ ಭಾಗಿ. ಸಹೋದ್ಯೋಗಿಗಳ ಜೊತೆಯಲ್ಲಿ ವಿರಾಮ ಆಚರಣೆ. ಕೆಲವರಿಗೆ ಅತಿಥಿ ಸತ್ಕಾರ ಯೋಗ.  ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಕುದುರುವ ಸಾಧ್ಯತೆ.  ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಲಭ್ಯ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಸಂಕಷ್ಟನಾಶನ ಗಣೇಶ ಸ್ತೋತ್ರ,ಶಿವಸಹಸ್ರನಾಮ, ಮಹಾಲಕ್ಷ್ಮಿ ಅಷ್ಟಕ ಓದಿ.

೫. ಸಿಂಹ:

ಅಪಾರ ತಾಳ್ಮೆ ಪರಿಶ್ರಮದ ಫಲ ಪ್ರಾಪ್ತಿ.   ಉದ್ಯಮಿಗಳಿಗೆ ತೃಪ್ತಿ ನೀಡುವ ಸಮಯ. ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಕೃಷ್ಯುತ್ಪನ್ನಗಳ ಮಾರಾಟದಿಂದ ಉತ್ತಮ ಲಾಭ. ವ್ಯವಹಾರಕ್ಕಾಗಿ ಸಣ್ಣ ಪ್ರಯಾಣ  ಸಂಭವ. ಗೃಹಿಣಿಯರಿಗೆ ಸಂತೃಪ್ತಿಯ ಮನೋಭಾವ, ಗಣೇಶ ಕವಚ, ವಿಷ್ಣು ಸಹಸ್ರನಾಮ,  ನವಗ್ರಹ ಸ್ತೋತ್ರ ಓದಿ.


೬.ಕನ್ಯಾ:

ದೇವಿ ಉಪಾಸನೆಯ ಸಡಗರ. ಅನ್ನದಾನ, ಪರೋಪಕಾರಗಳ ಅವಕಾಶ. ಸಣ್ಣ ಉದ್ಯಮಗಳಿಗೆ ಒಳ್ಳೆಯ ದಿನ. ಕೃಷಿಭೂಮಿ ಅಭಿವೃದ್ಧಿಗೆ ಕಾಲಮಿತಿಯ ಯೋಜನೆ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಪಂಚರತ್ನ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೭. ತುಲಾ:
ತಪ್ಪುಗಳ ಪುನರಾವರ್ತನೆ ಆಗದಂತೆ ಎಚ್ಚರ. ದೈವಾನುಗ್ರಹ ಉತ್ತಮ. ನಾಳೆಯ ಕೆಲಸಗಳ ತಯಾರಿ. ಉದ್ಯಮಿಗಳ ಸಮಸ್ಯೆ ಪರಿಹಾರ. ಉದ್ಯೋಗಾರ್ಥಿಗಳಿಗೆ ಶೀಘ್ರ ವ್ಯವಸ್ಥೆ‌. ಮಹಿಳೆಯರ ಸ್ವಾವಲಂಬನೆ ಯೋಜನೆಗಳ ಪ್ರಗತಿ.ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಆಂಜನೇಯ ಸ್ತೋತ್ರ ಓದಿ.

೮. ವೃಶ್ಚಿಕ:
    ವಿರಾಮದ ಸದುಪಯೋಗ. ಮಕ್ಕಳ ಉದ್ಯಮ ಅಭಿವೃದ್ಧಿಯ ಪಥದಲ್ಲಿ ವಸ್ತ್ರಾಭರಣ  ಖರೀದಿ. ದೂರದಲ್ಲಿರುವ ಬಂಧುಗಳ ಆಗಮನ. ಮನೆಮಂದಿಗೆ ಹಬ್ಬದ ಸಂಭ್ರಮ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ದೇವೀಸ್ತೋತ್ರ ಓದಿ.

೯.ಧನು:

  ವೈಯಕ್ತಿಕ, ಸಾಮೂಹಿಕ ಉಪಾಸನೆಯಿಂದ ಹರ್ಷ. ಸ್ವಂತ ಉದ್ಯಮದ ಕ್ರಮಾಗತ ಪ್ರಗತಿ. ದೀರ್ಘಾವಧಿ ಯೋಜನೆಗಳ ಚಿಂತನೆ. ನಿತ್ಯದ ಚಟುವಟಿಕೆಗಳಿಂದ ಕಾರ್ಯಸಾಮರ್ಥ್ಯ ವೃದ್ಧಿ. ಗೃಹೋದ್ಯಮಗಳಿಂದ ತೃಪ್ತಿಕರ ಲಾಭ. ಗಣೇಶ ಅಷ್ಟಕ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

೧೦.ಮಕರ:

  ಕ್ಲಪ್ತ ಸಮಯದಲ್ಲಿ ಕಾರ್ಯ ಮುಗಿಸಿದ ತೃಪ್ತಿ. ಅಧ್ಯಾತ್ಮ ಸಾಧನೆಯಲ್ಲಿ ಆಸಕ್ತಿ. ವಸ್ತ್ರ, ಉಡುಪು , ಅಲಂಕಾರ ಸಾಮಗ್ರಿ ವ್ಯಾಪಾರಿಗಳಿಗೆ ಅಧಿಕ  ಲಾಭ. ಹತ್ತಿರದ  ದೇವಾಲಯಕ್ಕೆ ಸಂದರ್ಶನ. ಸಣ್ಣ ಪ್ರಯಾಣ ಸಂಭವ. ಮಹಿಳೆಯರು , ಮಕ್ಕಳಿಗೆ ನೆಮ್ಮದಿಯ ದಿನ. ಗಣೇಶ ‌ಕವಚ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.


೧೧.ಕುಂಭ:

ಶೀಘ್ರ ಕಾರ್ಯಸಾಧನೆಯ ತೃಪ್ತಿ. ಉದ್ಯೋಗ, ವ್ಯವಹಾರಗಳ ಕುರಿತು ಆತಂಕ. ಮರುದಿನದ ಕಾರ್ಯಗಳಿಗೆ  ಸಿದ್ಧತೆ. ಹಿರಿಯರ ಮನೆಯಲ್ಲಿ ದೇವತಾಕಾರ್ಯ. ಬಂಧು, ಮಿತ್ರರೊಂದಿಗೆ ಸಮಾಗಮ.  ಸೇವಾ ಚಟುವಟಿಕೆಗಳಲ್ಲಿ ಪಾಲುಗೊಳ್ಳುವಿರಿ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.


೧೨. ಮೀನ:

 ಸ್ವಂತ ವ್ಯವಹಾರಕ್ಕೆ ಅನುಕೂಲದ ದಿನ. ಹಳೆಯ ಒಡನಾಡಿಗಳೊಂದಿಗೆ ಪುನರ್ಮಿಲನ.  ಬಂಧುವರ್ಗದಲ್ಲಿ ಶುಭಕಾರ್ಯ. ಸಾಮಾಜಿಕ ಕಾರ್ಯಕ್ಕೆ ಮನೆಮಂದಿಯ ಉತ್ತೇಜನ. ಎಲ್ಲರ ಆರೋಗ್ಯ ಉತ್ತಮ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.