ದಿನ ಭವಿಷ್ಯ
11-10-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 2
೧. ಮೇಷ:
ಶನಿಯ ಪ್ರಭಾವವಿದ್ದರೂ ಬಹುಮಟ್ಟಿಗೆ ಸಂತೋಷದ ದಿನ. ವ್ಯವಹಾರಗಳು ಸುಗಮ. ಸರಕಾರಿ ಉದ್ಯೋಗಸ್ಥರಿಗೆ ನಿಲ್ಲದ ಪೀಡೆ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ. ವ್ಯವಹಾರದ ಸಂಬಂಧ ತಿರುಗಾಟ. ಗೃಹಿಣಿಯರಿಗೆ, ಮಕ್ಕಳಿಗೆ ಆನಂದ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೨.ವೃಷಭ:
ಯಾವುದಕ್ಕೂ ಅವಸರ ಸಲ್ಲದು. ಖಾಸಗಿ ರಂಗದವರಿಗೆ ಮಧ್ಯಮ ಅನುಭವ. ವ್ಯಾಪಾರಿಗಳು, ಸಿವಿಲ್ ಎಂಜಿನಿಯರ್, ಲೆಕ್ಕ ಪರಿಶೋಧಕರು ಮೊದಲಾದ ವೃತ್ತಿಪರರಿಗೆ ಕೆಲಸಗಳ ತರಾತುರಿ. ಗೃಹಿಣಿಯರ ಸ್ವಾವಲಂಬನೆ ಆದಾಯ ವೃದ್ಧಿ. ಬಹುತೇಕ ಶುಭಫಲಗಳ ದಿನ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೩ಮಿಥುನ:
ಬದುಕು ನಿರ್ವಹಣೆಯ ಚಿಂತೆ ಬೇಡ. ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ. ಆಪ್ತ ಮಿತ್ರರಿಂದ ಸಕಾಲದಲ್ಲಿ ಸಹಾಯ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ಸದ್ಗ್ರಂಥ ಅಧ್ಯಯನದಲ್ಲಿ ಆಸಕ್ತಿ. ಸಂಗೀತ ಶ್ರವಣ, ಸತ್ಸಂಗಗಳಲ್ಲಿ ಕಾಲಯಾಪನೆ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೪. ಕರ್ಕಾಟಕ:
ಸರಕಾರಿ ನೌಕರರಿಗೆ ನೆಮ್ಮದಿ ಇಲ್ಲ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಅವಿವಾಹಿತರಿಗೆ ತಕ್ಕ ಜೋಡಿ ಸಿಗುವ ಸಾಧ್ಯತೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಕುಟುಂಬದಲ್ಲಿ ಸಾಮರಸ್ಯದ ಸೂಚನೆ. ಗಣೇಶ ಸ್ತೋತ್ರ, ಶಿವ ಪಂಚಾಕ್ಷರ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೫.ಸಿಂಹ:
ಎಲ್ಲ ಕಾರ್ಯಕ್ಷೇತ್ರಗಳಲ್ಲೂ ಶುಭ. ಕೇಳದೆ ಕೈಸೇರಿದ ಹಳೆಯ ಸಾಲ. ಅಧಿಕಾರಿಗಳ ಸಕಾಲಿಕ ಕ್ರಮದಿಂದ ಕಾರ್ಯಗಳು ಮುಕ್ತಾಯ. ವ್ಯವಹಾರಾರ್ಥವಾಗಿ ಅನಿವಾರ್ಯ ತಿರುಗಾಟ. ದಾಂಪತ್ಯ ಸುಖ ಉತ್ತಮ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಕವಚ, ಮಹಿಷಮರ್ದಿನಿ ಸ್ತೋತ್ರ ಓದಿ.
೬.ಕನ್ಯಾ:
ಜನಪರ ಕಾರ್ಯಗಳಿಂದ ಗೌರವ ಪ್ರಾಪ್ತಿ. ಕಾರ್ಯಾರ್ಥವಾಗಿ ಬೇರೆಬೇರೆ ಸ್ಥಳಗಳಿಗೆ ಭೇಟಿ .ಸಂಸಾರ ಸುಖ ತೃಪ್ತಿಕರ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಕೃಷ್ಯುತ್ಪಾದನೆಗಳಿಂದ ತೃಪ್ತಿಕರ ಲಾಭ. ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಗುರುಸ್ತೋತ್ರ ಓದಿ.
೭. ತುಲಾ:
ಮನೆಯಲ್ಲಿ ಅತಿಥಿ ಸತ್ಕಾರ. ಜೇನು ವ್ಯವಸಾಯ, ತೋಟಗಾರಿಕೆಯಲ್ಲಿ ಆಸಕ್ತರಿಗೆ ಉತ್ಸಾಹ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಲಾಭ. ಸಂಸಾರದಲ್ಲಿ ಸಾಮರಸ್ಯ. ಉತ್ತಮ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಉಲ್ಲಾಸದ ದಿನ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೮.ವೃಶ್ಚಿಕ:
ಗೃಹಾಲಂಕಾರದಲ್ಲಿ ಆಸಕ್ತಿ. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಧ್ಯಮ ಲಾಭ. ಸರಕಾರಿ ನೌಕರರಿಗೆ ದೂರವಾದ ನೆಮ್ಮದಿ. ಶಸ್ತ್ರವೈದ್ಯರಿಗೆ ಕೀರ್ತಿಯ ಲಾಭ. ಗೃಹಿಣಿಯರಿಗೆ ಹರ್ಷ, ಉಲ್ಲಾಸಗಳ ವಾತಾವರಣ. ಗಣೇಶ ಕವಚ, ದಕ್ಷಿಣಾಮೂರ್ತಿ ಸ್ತೋತ್ರ, ಗುರುಸ್ತೋತ್ರ ಓದಿ
೯.ಧನು:
ಸರಕಾರಿ ಉದ್ಯೋಗಸ್ಥರಿಗೆ ಗೊಂದಲ. ಉಳಿತಾಯ ಯೋಜನೆಗಳ ಏಜೆಂಟರಿಗೆ ಆದಾಯ ವೃದ್ಧಿ ಯೋಗ. ಕುಟುಂಬದ ಹಿರಿಯ ಹಿತೈಷಿಯ ಆಗಮನ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳ ಕ್ಷಿಪ್ರಗತಿಯ ಮುನ್ನಡೆ. ಹೆಚ್ಚುವರಿ ಆದಾಯದ ಮಾರ್ಗ ಅನ್ವೇಷಣೆ. ಗಣೇಶ ಪಂಚರತ್ನ, ದಕ್ಷಿಣಾಮೂರ್ತಿ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
೧೦.ಮಕರ:
ವಿವಿಧ ಮೂಲಗಳಿಂದ ಆದಾಯ ವೃದ್ಧಿ. ಮಕ್ಕಳ ಭವಿಷ್ಯ ಚಿಂತನೆ.ಸಂಗೀತ ಶ್ರವಣ, ಸತ್ಸಂಗದಿಂದ ಮನಸ್ಸಿಗೆ ನೆಮ್ಮದಿ. ಔಷಧ ವ್ಯಾಪಾರಿಗಳಿಗೆ ಉತ್ತಮ ಲಾಭ. ಮನೆಯಲ್ಲಿ ಹರ್ಷದ ವಾತಾವರಣ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:
ಸೇವಾಕಾರ್ಯಗಳಿಂದ ಜನಪ್ರಿಯತೆ ವೃದ್ಧಿ ಉದ್ಯೋಗದಲ್ಲಿ ಪದೋನ್ನತಿ ಅಥವಾ ವೇತನ ಏರಿಕೆಯ ಸಾಧ್ಯತೆ. ಸಾಮಾಜಿಕರ ಅಭಿಮಾನಕ್ಕೆ ಪಾತ್ರರಾಗುವಿರಿ. ವಾಹನ ವ್ಯಾಪಾರಿಗಳಿಗೆ ಅನುಕೂಲ. ಸಣ್ಣ ಕೃಷಿಕರಿಗೆ ಹಿತಾನುಭವ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ ಓದಿ.
೧೨. ಮೀನ:
ವಾರಾಂತ್ಯದಲ್ಲಿ ಕಾರ್ಯ ಮುಕ್ತಾಯದ ತೃಪ್ತಿ. ಇಲಾಖೆಗಳವರಿಂದ ಉತ್ತಮ ಸ್ಪಂದನ. ಸಂಸಾರದಲ್ಲಿ ಸಹಕಾರ, ಸೌಜನ್ಯ ವೃದ್ಧಿ. ಎಲ್ಲರ ಆರೋಗ್ಯ ಉತ್ತಮ. ಅಸಹಾಯಕರಿಗೆ ನೆರವಾಗುವ ಸಂದರ್ಭ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.