ದಿನ ಭವಿಷ್ಯ
03-11-2025
ಅದೃಷ್ಟ ಸಂಖ್ಯೆ 3
೧.ಮೇಷ:
ಸಪ್ತಾಹದ ಆರಂಭ ಇಷ್ಟಾರ್ಥಸಿದ್ಧಿಯ ದಿನ. ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚು ಅನುಕೂಲ. ಸ್ನೇಹ ಬೆಳೆಸಲು ಬರುವವರ ಬಗ್ಗೆ ಎಚ್ಚರ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ಕೌಟುಂಬಿಕ ವಲಯದಲ್ಲಿ ಶಾಂತಿ, ಸಮಾಧಾನ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.
೨. ವೃಷಭ:
ಲಾಭ- ನಷ್ಟಗಳ ಹೋಲಿಕೆ ಮಾಡದಿರಿ. ಉದ್ಯೋಗಸ್ಥರಿಗೆ ಸಮಸ್ಯೆಗಳಿಲ್ಲದ ದಿನ. ಕೃಷ್ಯುತ್ಪಾದನೆ ಮಾರಾಟದಿಂದ ತೃಪ್ತಿಕರ ಲಾಭ. ಸರಕಾರಿ ನೌಕರರಿಗೆ ವರ್ಗಾವಣೆಯಿಂದ ಒಳಿತು. ದೂರ ಪ್ರಯಾಣ ಸಮಂಜಸ ಅಲ್ಲ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಆಂಜನೇಯ ಸ್ತೋತ್ರ ಓದಿ.
೩. ಮಿಥುನ
ಗೋಮುಖ ವ್ಯಾಘ್ರಗಳ ಕುರಿತು ಎಚ್ಚರ. ಹಿತಶತ್ರುಗಳ ಕಾಟ ಶಮನ. ಧ್ಯಾನ, ಸ್ವಾಧ್ಯಾಯಗಳಲ್ಲಿ ಮನಸ್ಸು. ಉದ್ಯಮ ಅಭಿವೃದ್ಧಿಯ ಹೊಸ ಪರ್ವ ಆರಂಭ. ದಂಪತಿಗಳ ನಡುವೆ ಉತ್ತಮ ಹೊಂದಾಣಿಕೆ. ಸಂಕಷ್ಟನಾಶನ ಗಣೇಶ ಸ್ತೋತ್ರ, ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೪.ಕರ್ಕಾಟಕ:
ದುಡಿಮೆಯಲ್ಲಿ ನಿಯತ್ತು ಕಾಯ್ದುಕೊಂಡವರಿಗೆ ಶುಭಕಾಲ. ಉದ್ಯಮಿಗಳಿಂದ ಹೊಸ ಸಾಧ್ಯತೆಗಳ ಹುಡುಕಾಟ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಕುದುರುವ ಸಾಧ್ಯತೆ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಲಭ್ಯ. ಸ್ವಂತ ಆರೋಗ್ಯದ ಕಡೆಗೆ ವಿಶೇಷ ಗಮನ ಇರಲಿ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಓದಿ.
೫. ಸಿಂಹ:
ವಿಶ್ವಾಸ ದ್ರೋಹಿಗಳ ಪರಾಭವ. ಉದ್ಯಮದಲ್ಲಿ ಲಾಭದಾಯಕ ಪ್ರಗತಿ. ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಒಳ್ಳೆಯ ಲಾಭ. ಗೃಹಿಣಿಯರಿಗೆ ಸಾರ್ಥಕತೆಯ ಅನುಭವ. ಕುಟುಂಬದಲ್ಲಿ ಸಾಮರಸ್ಯ ಸ್ಥಾಪನೆ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೬.ಕನ್ಯಾ:
ಕುತಂತ್ರಿಗಳಿಗೆ ಸೋಲಿನ ಅನುಭವ. ಸಣ್ಣ ಉದ್ಯಮಗಳಿಗೆ ಒಳ್ಳೆಯ ದಿನ. ಕೃಷಿಭೂಮಿ ಅಭಿವೃದ್ಧಿಗೆ ಕಾಲಮಿತಿಯ ಯೋಜನೆ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಅಧ್ಯಯನಶೀಲ ವಿದ್ಯಾರ್ಥಿಗಳಿಗೆ ಅನುಕೂಲದ ದಿನ. ಗಣೇಶ ದ್ವಾದಶನಾಮ ಸ್ತೋತ್ರ, ನರಸಿಂಹ ಕವಚ, ಮಹಾಲಕ್ಷ್ಮಿ ಅಷ್ಟಕ ಓದಿ.
೭. ತುಲಾ:
ದೈಹಿಕ, ಮಾನಸಿಕ ಆರೋಗ್ಯ ಸುಧಾರಣೆ. ಉದ್ಯೋಗ ಸ್ಥಾನದಲ್ಲಿ ಅನುಕೂಲದ ವಾತಾವರಣ. ಉದ್ಯಮಿಗಳ ಆರ್ಥಿಕ ಸಮಸ್ಯೆ ನಿವಾರಣೆ. ಶೋಕಿ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ. ಮಹಿಳೆಯರ ಸ್ವಾವಲಂಬನೆ ಯೋಜನೆಗಳ ಪ್ರಗತಿ. ಗಣೇಶ ಪಂಚರತ್ನ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
೮. ವೃಶ್ಚಿಕ:
ಉದರದ ಆರೋಗ್ಯದ ಕಡೆಗೆ ನಿಗಾ ಇರಲಿ. ಉದ್ಯೋಗದಲ್ಲಿ ಹಿತಾನುಭವ. ಮರದ ಕೆಲಸ ಬಲ್ಲವರಿಗೆ ಉದ್ಯೋಗಾವಕಾಶ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂಭ್ರಮ. ವಸ್ತ್ರಾಭರಣ ಖರೀದಿಗೆ ಧನವ್ಯಯ. ಗಣಪತಿ ಅಥರ್ವಶೀರ್ಷ, ವೆಂಕಟೇಶ್ವರ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೯.ಧನು:
ವೃತ್ತಿಪರರಿಗೆ ಬಿಡುವಿಲ್ಲದ ದುಡಿಮೆ.ಹೋಟೆಲ್ ಉದ್ಯಮಿಗಳಿಗೆ ಗುಣಮಟ್ಟ ನಿರ್ವಹಣೆಯ ಸವಾಲು. ದೀರ್ಘಾವಧಿ ಯೋಜನೆಗಳಲ್ಲಿ ಹಣ ಹೂಡಿಕೆಯಿಂದ ಲಾಭ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಮಹಿಳಾ ಗೃಹೋದ್ಯಮಿಗಳಿಗೆ ಸಂತೋಷದ ದಿನ. ಗಣೇಶ ಸ್ತೋತ್ರ,ಮಹಿಷಮರ್ದಿನಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೧೦.ಮಕರ:
ಮನಸ್ಸಿಗೆ ಸಮಾಧಾನ ನೀಡಿದ ಕಾರ್ಯ ನಿರ್ವಹಣೆ. ರಾತ್ರಿ ಸಂಚಾರದಲ್ಲಿ ಎಚ್ಚರ. ವಸ್ತ್ರ, ಉಡುಪು , ಅಲಂಕಾರ ಸಾಮಗ್ರಿ ವ್ಯಾಪಾರಿಗಳಿಗೆ ಅಧಿಕ ಲಾಭ. ಹಿರಿಯರು, ಮಹಿಳೆಯರು, ಮಕ್ಕಳಿಗೆ ನೆಮ್ಮದಿಯ ದಿನ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ. ಗಣಪತಿ ಅಥರ್ವಶೀರ್ಷ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೧೧.ಕುಂಭ:
ನಿಗದಿತ ಅವಧಿಗೆ ಮೊದಲೇ ಕಾರ್ಯ ಮುಕ್ತಾಯ. ಉದ್ಯೋಗ, ವ್ಯವಹಾರಗಳ ಆತಂಕ ದೂರ. ತರುಣ ಉದ್ಯಮಿಗಳ ಪಾಲಿಗೆ ಶುಭದಿನ. ನೊಂದವರ ಸೇವೆ ಮಾಡುವ ಅವಕಾಶ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ. ಗಣೇಶ ಕವಚ, ಶಿವಕವಚ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೧೨. ಮೀನ:
ವ್ಯವಹಾರದಲ್ಲಿ ಯಶಸ್ಸು. ಇಲಾಖೆಯವರ ಪೂರ್ಣ ಮನಸ್ಸಿನ ಸಹಕಾರ. ಸೋದರ ವರ್ಗದಲ್ಲಿ ಶುಭಕಾರ್ಯ. ಸಾಮಾಜಿಕ ಕಾರ್ಯಕ್ಕೆ ಮನೆಮಂದಿಯ ಉತ್ತೇಜನ. ಖರೀದಿ- ಮಾರಾಟ ವ್ಯವಹಾರ ಪ್ರಗತಿಯಲ್ಲಿ. ಗಣೇಶ ಅಷ್ಟಕ, ಶಿವಸಹಸ್ರನಾಮ, ಶನಿಮಹಾತ್ಮೆ ಓದಿ.


